PF ಬಡ್ಡಿ ಯಾವಾಗ ಬರುತ್ತೆ? ಹಾರ್ಲಿಕ್ಸ್ , ಬೂಸ್ಟ್ ಕೂಡಾ ಹೆಲ್ದೀ ಡ್ರಿಂಕ್ ಅಲ್ವಾ?

ಆದಾಯ ತೆರಿಗೆ ಕಾಯಿದೆಯಡಿಯಲ್ಲಿ, ಚಾರಿಟಬಲ್ ಮತ್ತು ಧಾರ್ಮಿಕ ಟ್ರಸ್ಟ್‌ಗಳು ಅನೇಕ ರೀತಿಯ ತೆರಿಗೆ ವಿನಾಯಿತಿಗಳ ಪ್ರಯೋಜನವನ್ನು ಪಡೆಯುತ್ತವೆ. ಆದಾಯ ತೆರಿಗೆಯಲ್ಲಿನ ಈ ವಿನಾಯಿತಿಯ ಪ್ರಯೋಜನವನ್ನು ಪಡೆಯಲು, ಸಂಬಂಧಪಟ್ಟ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ಫಾರ್ಮ್ 10A ಸಲ್ಲಿಸಬೇಕು.

alternate

ಪಿಎಫ್ ಬಡ್ಡಿ ಯಾವಾಗ ಅಕೌಂಟಿಗೆ ಬರುತ್ತದೆ?
ಇಪಿಎಫ್‌ಒ 2023-24ರ ಫೈನಾನ್ಷಿಯಲ್ ಇಯರ್‍ನಲ್ಲಿ ಬಡ್ಡಿ ದರವನ್ನು ಶೇ 8.15 ರಿಂದ ಶೇ 8.25 ಕ್ಕೆ ಹೆಚ್ಚಿಸಿದೆ. ಹಾಗಾದರೆ ಹೆಚ್ಚಿದ ಬಡ್ಡಿ ತಮ್ಮ ಖಾತೆಗೆ ಯಾವಾಗ ಬರುತ್ತದೆ? ಇದು ಖಾತೆದಾರರ ಮನಸ್ಸಿನಲ್ಲಿ ಕೊರೆಯುತ್ತಿರುವ ಪ್ರಶ್ನೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಇಪಿಎಫ್‌ಒಗೆ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಪಿಎಫ್‌ಒ, ಪಿಎಫ್ ಬಡ್ಡಿ ಪೇ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದೆ. ಶೀಘ್ರದಲ್ಲೇ ಈ ಬಡ್ಡಿ ಹಣ ನಿಮ್ಮ ಖಾತೆಗೆ ಬರೋದಕ್ಕೆ ಶುರುವಾಗುತ್ತದೆ. ಒಂದೇ ಬಾರಿಗೆ ನಾವು ಅಷ್ಟೂ ಹಣ ಪೇ ಮಾಡುತ್ತೇವೆ. ಅರ್ದಂಬರ್ಧ ಪೇ ಮಾಡುವುದಿಲ್ಲ ಎಂದು ಇಪಿಎಫ್ಒ ಹೇಳಿದೆ. 2022-23ರ ಆರ್ಥಿಕ ವರ್ಷಕ್ಕೆ ಒಟ್ಟು 28.17 ಕೋಟಿ ಸದಸ್ಯರಿಗೆ ಬಡ್ಡಿ ಪಾವತಿ ಮಾಡಲಾಗಿದೆ ಎಂದು ಇಪಿಎಫ್‌ಒ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ. ಈ ಅಂಕಿಅಂಶಗಳು ಮಾರ್ಚ್ 2024 ರವರೆಗಿನದ್ದು.

ತೆರಿಗೆದಾರರಿಗೆ ಮಹತ್ವದ ಅನುಕೂಲ ಒದಗಿಸಿದ ಇನ್‌ಕಮ್‌ ಟ್ಯಾಕ್ಸ್ ಇಲಾಖೆ
ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಬಿಗ್ ರಿಲೀಫ್ ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಅಂದರೆ CBDT ಚಾರಿಟಬಲ್ ಟ್ರಸ್ಟ್‌ನ ನೋಂದಣಿಗೆ ಗಡುವನ್ನು ಈಗ ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈಗ ಚಾರಿಟಬಲ್ ಮತ್ತು ಧಾರ್ಮಿಕ ಟ್ರಸ್ಟ್ಗಳು ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ಜೂನ್ 30 ರೆ ವರೆಗೆ ನೋಂದಣಿ ಮಾಡಬಹುದಾಗಿದೆ ಎಂದು CBDT ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುಂಚೆಯೇ, ಆದಾಯ ತೆರಿಗೆ ಇಲಾಖೆಯು ಫಾರ್ಮ್ 10A ಮತ್ತು ಫಾರ್ಮ್ 10AB ಅನ್ನು ಸಲ್ಲಿಸಲು ಹಲವಾರು ಬಾರಿ ಟ್ರಸ್ಟ್‌ಗಳಿಗೆ ಅವಕಾಶ ನೀಡಿತ್ತು. ಎರಡೂ ಫಾರ್ಮ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ಎಂದು ನಿಗದಿ ಮಾಡಲಾಗಿತ್ತು. ಈಗ ಟ್ರಸ್ಟ್‌ಗಳಿಗೆ ಮತ್ತೊಮ್ಮೆ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದಾಯ ತೆರಿಗೆ ಕಾಯಿದೆಯಡಿಯಲ್ಲಿ, ಚಾರಿಟಬಲ್ ಮತ್ತು ಧಾರ್ಮಿಕ ಟ್ರಸ್ಟ್‌ಗಳು ಅನೇಕ ರೀತಿಯ ತೆರಿಗೆ ವಿನಾಯಿತಿಗಳ ಪ್ರಯೋಜನವನ್ನು ಪಡೆಯುತ್ತವೆ. ಆದಾಯ ತೆರಿಗೆಯಲ್ಲಿನ ಈ ವಿನಾಯಿತಿಯ ಪ್ರಯೋಜನವನ್ನು ಪಡೆಯಲು, ಸಂಬಂಧಪಟ್ಟ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ಫಾರ್ಮ್ 10A ಸಲ್ಲಿಸಬೇಕು. ನೋಂದಣಿಯನ್ನು ನವೀಕರಿಸಲು ಬಯಸುವ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಫಾರ್ಮ್ 10AB ಸಲ್ಲಿಸಬೇಕಾಗುತ್ತದೆ.

ICICI ಬ್ಯಾಂಕ್‌ನ iMobile ಆಪ್‌ನಲ್ಲಿ ಟೆಕ್ನಿಕಲ್ ಸಮಸ್ಯೆ
ಕಳೆದ ಕೆಲವು ದಿನಗಳಲ್ಲಿ ICICI ಬ್ಯಾಂಕ್ ವಿತರಣೆ ಮಾಡಿದ ಸುಮಾರು 17,000 ಕ್ರೆಡಿಟ್ ಕಾರ್ಡ್‌ಗಳನ್ನು ಡಿಜಿಟಲ್ ಚಾನೆಲ್‌ಗಳಲ್ಲಿ ಯಾವ್ಯಾವುದೋ ಬಳಕೆದಾರರಿಗೆ ತಪ್ಪು ತಪ್ಪಾಗಿ ಮ್ಯಾಪ್ ಮಾಡಲಾಗಿದೆ. ಅಂದರೆ, ಈ ತಾಂತ್ರಿಕ ದೋಷದಿಂದಾಗಿ, ICICI ಬ್ಯಾಂಕ್‌ನ ‘imoblie’ ಆಪ್‌ನ ಬಳಕೆದಾರರಿಗೆ ಬೇರೆ ಗ್ರಾಹಕರ ಕ್ರೆಡಿಟ್ ಕಾರ್ಡ್‌ ವಿವರ ಸಿಗುತ್ತಿದೆ. ಈ ಮಾಹಿತಿಯನ್ನು ಸ್ವತಃ ಬ್ಯಾಂಕ್ ಗುರುವಾರ ಅಂದರೆ ಏಪ್ರಿಲ್ 25 ರಂದು ನೀಡಿದೆ. ದೇಶದ ಎರಡನೇ ಅತಿದೊಡ್ಡ ಸಾಲದಾತ ಐಸಿಐಸಿಐ ಬ್ಯಾಂಕ್‌ನ ವಕ್ತಾರರು, ಈ ದೋಷದಿಂದ ಯಾವುದೇ ರೀತಿಯ ದುರ್ಬಳಕೆಯ ಘಟನೆ ಇದುವರೆಗೆ ಬೆಳಕಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಭವಿಷ್ಯದಲ್ಲಿ ಯಾವುದೇ ಬಳಕೆದಾರರಿಗೆ ಇದು ಸಂಭವಿಸಿದರೆ, ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ನೀಡುವುದಾಗಿ ಬ್ಯಾಂಕ್ ಭರವಸೆ ನೀಡಿದೆ.

ಇನ್ನು ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರಿಗೆ ಎಷ್ಟು ನೀರು ಸಿಗುತ್ತೆ ಗೊತ್ತಾ?
ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಮಹತ್ವ ಸುದ್ದಿ ಇಲ್ಲಿದೆ. ಇನ್ನು ಮುಂದೆ ಈ ರೈಲಿನಲ್ಲಿ ಪ್ರಯಾಣಿಸುವಾಗ ಒಂದು ಲೀಟರ್ ನೀರಿನ ಬಾಟಲ್ ಬದಲಿಗೆ ಅರ್ಧ ಲೀಟರ್ ರೈಲ್ ನೀರ್ ಬಾಟಲ್ ನೀಡಲಾಗುವುದು. ಈ ಸಂಬಂಧ ಉತ್ತರ ರೈಲ್ವೇ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಕುಡಿಯುವ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಹೇಳಿದೆ. ಕೆಲವು ಪ್ರಯಾಣಿಕರು ನೀರನ್ನು ಸಂಪೂರ್ಣವಾಗಿ ಬಳಸುತ್ತಿಲ್ಲ. ಇದರಿಂದ ನೀರು ವ್ಯರ್ಥವಾಗುತ್ತಿದೆ ಎಂದು ಗಮನಿಸಲಾಗಿದೆ. ಯಾವುದೇ ಪ್ರಯಾಣಿಕರಿಗೆ ಮತ್ತೊಂದು ಅರ್ಧ ಲೀಟರ್ ನೀರು ಬೇಕಾದರೆ, ಅವರು ಅದನ್ನು ಕೇಳಿ ಪಡೆದುಕೊಳ್ಳಬಹುದು. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ.

ಹಾರ್ಲಿಕ್ಸ್ ಮತ್ತು ಬೂಸ್ಟ್‌ ಮೇಲಿನ ‘ಹೆಲ್ತ್‌ ಡ್ರಿಂಕ್‌’ ಲೇಬಲ್ ಮಾಯ
ಎನರ್ಜಿ ಡ್ರಿಂಕ್ಸ್ ಹಾರ್ಲಿಕ್ಸ್ ಮತ್ತು ಬೂಸ್ಟ್‌ನ ಮೇಲೆ ಬರೆದಿದ್ದ ‘ಹೆಲ್ತ್ ಡ್ರಿಂಕ್’ ಎಂಬ ಟ್ಯಾಗ್ ಅನ್ನು ಈಗ ತೆಗೆದುಹಾಕಲಾಗಿದೆ. ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಈಗ ಈ ಪ್ರಾಡಕ್ಟ್‌ಗಳ ಕ್ಯಾಟಗರಿಯನ್ನು ‘health food drinks’ ಬದಲಿಗೆ ‘functional nutritional drinks’ ಎಂದು ಬದಲಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಅನೇಕ drink products ಅನ್ನು ‘healthy drinks’ ಕೆಟಗರಿಯಿಂದ ತೆಗೆದುಹಾಕಲು ಆದೇಶ ನೀಡಿದ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದೆ.

IRCTC ಇಂದ ಲೇಹ್-ಲಡಾಖ್‌ಗೆ ಅಗ್ಗದ ಪ್ರವಾಸ ಪ್ಯಾಕೇಜ್
IRCTC ಲೇಹ್-ಲಡಾಖ್‌ಗೆ ಪ್ರವಾಸದ ಪ್ಯಾಕೇಜ್‌ ಬಿಡುಗಡೆ ಮಾಡಿದೆ. ಈ ಪ್ಯಾಕೇಜ್‌ನಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ಮತ್ತು ದೆಹಲಿಯಿಂದ ಲೇಹ್‌ಗೆ ವಿಮಾನ ಟಿಕೆಟ್‌ ಸೇರಿರುತ್ತದೆ. 20 ಜೂನ್ ಮತ್ತು 28 ಜೂನ್ 2024 ರಂದು ಪ್ಯಾಕೇಜ್ ಪ್ರಯೋಜನ ಪಡೆಯಬಹುದು. ಈ ಇಡೀ ಪ್ಯಾಕೇಜ್ 6 ದಿನಗಳು ಮತ್ತು 7 ರಾತ್ರಿಗಳದ್ದು. ಉಳಿದುಕೊಳ್ಳಲು ಡಿಲಕ್ಸ್ ಹೋಟೆಲ್‌ನಲ್ಲಿ ಕೊಠಡಿ ಸಿಗುತ್ತದೆ.. ಇದರಲ್ಲಿ ಶಾಮ್ ವ್ಯಾಲಿ, ಲೇಹ್, ನುಬ್ರಾ, ತುರ್ತುಕ್ ವ್ಯಾಲಿ ಮತ್ತು ಪ್ಯಾಂಗೊಂಗ್ ತ್ಸೋಗೆ ಭೇಟಿ ನೀಡುವ ಅವಕಾಶವಿದೆ.. ನುಬ್ರಾ ಕಣಿವೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಲಭ್ಯವಿದೆ… ಈ ಪ್ಯಾಕೇಜ್‌ನಲ್ಲಿ ಪ್ರಯಾಣ ವಿಮೆ ಕೂಡ ಸೇರಿದೆ.

Published: April 26, 2024, 19:32 IST

PF ಬಡ್ಡಿ ಯಾವಾಗ ಬರುತ್ತೆ? ಹಾರ್ಲಿಕ್ಸ್ , ಬೂಸ್ಟ್ ಕೂಡಾ ಹೆಲ್ದೀ ಡ್ರಿಂಕ್ ಅಲ್ವಾ?