` invest in credit risk mutual fund or not | ಹೆಚ್ಚಿನ ರಿಸ್ಕ್ ಇದ್ದಲ್ಲಿ ಹೆಚ್ಚಿನ ಲಾಭ... ಎಚ್ಚರಿಕೆಯೂ ಅಷ್ಟೇ ಅಗತ್ಯ! | Money9 Kannada

ಹೆಚ್ಚಿನ ರಿಸ್ಕ್ ಇದ್ದಲ್ಲಿ ಹೆಚ್ಚಿನ ಲಾಭ... ಎಚ್ಚರಿಕೆಯೂ ಅಷ್ಟೇ ಅಗತ್ಯ!

ಈಗ ಹೂಡಿಕೆದಾರರು ಏನು ಮಾಡಬೇಕು ಅನ್ನೋ ಪ್ರಶ್ನೆ ಉದ್ಭವಿಸತ್ತದೆ? ಡೆಟ್ ಫಂಡ್ ವಿಧಗಳಿಗೆ ಹೋಲಿಸಿದರೆ, ಕ್ರೆಡಿಟ್ ರಿಸ್ಕ್ ಫಂಡ್ ಗಳು ಹೆಚ್ಚು ರಿಸ್ಕಿ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಏಕೆಂದರೆ ಈ ಫಂಡ್ ಗಳು ತಮ್ಮ ಪೋರ್ಟ್ ಫೋಲಿಯೋದ ಬಹುಪಾಲನ್ನು ಲೋಯರ್ ರೇಟೆಡ್ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತವೆ..

ಮುಖೇಶ್ ಅವರು ಕ್ರೆಡಿಟ್ ರಿಸ್ಕ್ ಫಂಡ್ ನಲ್ಲಿ ಹೆಚ್ಚಿನ ರಿಟರ್ನ್ಸ್ ನಿರೀಕ್ಷೆ ಮಾಡಿದ್ದರು. ಆದರೆ ಅವರ ರಿಟರ್ನ್ಸ್ ನೆಗಟಿವ್ ಆಗಿತ್ತು. ಇವರ ಈ ಚಿಂತಾಜನಕ ಸ್ಥಿತಿಯನ್ನ ನೋಡಿದ ಜತಿನ್, ಅವರ ಹೂಡಿಕೆ ಬಗ್ಗೆ ವಿಚಾರಿಸುತ್ತಾರೆ. ಅದಕ್ಕೆ ಮುಖೇಶ್, ತಮ್ಮ ಸಲಹೆಗಾರರಾದ ಜೋಶಿ ಅವರು ಜಾಸ್ತಿ ರಿಸ್ಕ್ ಇರುವ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ರಿಸ್ಕ್ ಜಾಸ್ತಿ ಇದ್ದಷ್ಟೂ ರಿಟರ್ನ್ಸ್ ಜಾಸ್ತಿ ಎನ್ನುವ ಸಲಹೆ ಕೊಟ್ಟಿದ್ದರು ಎಂದು ಹೇಳುತ್ತಾರೆ. ಅವರ ಮಾತುಗಳೇ ರಿಸ್ಕ್ ಗೆ ಸಾಕಷ್ಟು ಸಾಕ್ಷ್ಯಾಧಾರ ಕೊಡುತ್ತವೆ ಎಂದು ಜತಿನ್ ಹೇಳುತ್ತಾರೆ. ಹಾಗಿದ್ದರೆ ಇದಕ್ಕೆ ಏನರ್ಥ ಎನ್ನುವುದು ಮುಖೇಶ್ ಅವರ ಪ್ರಶ್ನೆ. ಹೆಚ್ಚಿನ ರಿಸ್ಕ್ ಅಂದರೆ ಕೇವಲ ಹೆಚ್ಚಿನ ಗಳಿಕೆ ಅಲ್ಲ. ರಿಟರ್ನ್ಸ್ ಗಳು ನೆಗಟಿವ್ ಆಗುವ ಸಾಧ್ಯತೆ ಕೂಡ ಇರುತ್ತದೆ ಎನ್ನುವುದು ಜೋಶಿ ಅವರ ಮಾತಾಗಿತ್ತು ಅಂತಾ ಜತಿನ್ ವಿವರಿಸುತ್ತಾರೆ.

ಮುಖೇಶ್ ಅವರು ಸಿಲುಕಿದಂತಹ ಸನ್ನಿವೇಶದಲ್ಲಿ ನೀವು ಸಿಲುಕಬೇಡಿ. ಅದಕ್ಕೆ ಹೇಳೋದು, ಹೂಡಿಕೆಗೂ ಮೊದಲು ಆ ಸ್ಕೀಂ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು ಎನ್ನುವುದು. ಯಾರದ್ದೋ ಶಿಫಾರಸ್ಸಿನ ಮೇಲೆ ಕುರುಡಾಗಿ ಹೂಡಿಕೆ ಮಾಡಬೇಡಿ.‌ ಹಾಗಾದರೆ ಕ್ರೆಡಿಟ್ ರಿಸ್ಕ್ ಮ್ಯೂಚುಯಲ್‌ ಫಂಡ್‌ ಗಳು ಎಂದರೇನು? ಅವು ಯಾವ ಬಗೆಯ ಹೂಡಿಕೆದಾರರಿಗೆ ಸೂಕ್ತವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಲೋ ರೇಟೆಡ್ ಕಾರ್ಪೊರೇಟ್ ಬಾಂಡ್ ಅಂದರೆ ಹೂಡಿಕೆ ಮಾಡಿದ ಹಣ ವಾಪಸ್ ಬರದೇ ಇರುವ ಸಾಧ್ಯತೆ ಹೆಚ್ಚಿರುವ ಕಾರ್ಪೊರೇಟ್ ಬಾಂಡ್ ಗಳಲ್ಲಿ ಹೂಡಿಕೆ ಮಾಡೋ ಡೆಟ್ ಫಂಡ್ ಗಳೇ ಈ ಕ್ರೆಡಿಟ್ ರಿಸ್ಕ್ ಮ್ಯೂಚುಯಲ್‌ ಫಂಡ್ ಗಳು. ಸಾಮಾನ್ಯವಾಗಿ ಈ ಕಾರ್ಪೊರೇಟ್ ಬಾಂಡ್ ಗಳು ಹೆಚ್ಚಿನ ರಿಟರ್ನ್ಸ್ ಕೊಡೋ ಸಾಮರ್ಥ್ಯ ಹೊಂದಿರುತ್ತದೆ. ಯಾಕೆಂದರೆ ಈ ಫಂಡ್ ಗಳು ದುರ್ಬಲ, ಲೋ ರೇಟೆಡ್ ಕಂಪೆನಿಗಳಿಗೆ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಕೊಟ್ಟಿರುತ್ತದೆ. ಹೀಗಾಗಿ, ಈ ಹೂಡಿಕೆ ಮೇಲೆ ಹೆಚ್ಚಿನ ರಿಸ್ಕ್ ಇದೆ. ಇನ್ನು ಡೀಫಾಲ್ಟ್ ಆಗುವ ಅತಿ ದೊಡ್ಡ ರಿಸ್ಕ್ ಕೂಡ ಇದೆ. ಬಾಂಡ್ ಇಷ್ಯೂ ಮಾಡೋ ಕಂಪೆನಿಗಳು ಬಡ್ಡಿ ಅಥವಾ ಅಸಲನ್ನು ಪಾವತಿ ಮಾಡದೇ ಹೋದರೆ ಆಗ ಪಾವತಿ ಬಿಕ್ಕಟ್ಟು ಎದುರಾಗುತ್ತದೆ.

ಕ್ರೆಡಿಟ್ ರಿಸ್ಕ್ ಫಂಡ್ ಗಳ ಪೋರ್ಟ್ ಫೋಲಿಯೋ ಸಾಮಾನ್ಯವಾಗಿ ಲೋಯರ್ ರೇಟೆಡ್ ಸೆಕ್ಯುರಿಟೀಸ್ ಮೇಲೆ ಗಮನ ಹರಿಸುತ್ತದೆ. ಹೆಚ್ಚಿನ ರಿಸ್ಕ್ ಇರುವುದರಿಂದ ಈ ಫಂಡ್ ಗಳ ಲಿಕ್ವಿಡಿಟಿ ಕಡಿಮೆ ಇರುತ್ತದೆ. ಇದು ನೀವು ಹೂಡಿಕೆ ರಿಡೀಮ್ ಮಾಡಿದಾಗ ತೊಂದರೆ ತಂದೊಡ್ಡಬಹುದು. ಇಂತಹ ಸನ್ನಿವೇಶದಲ್ಲಿ, ಹೂಡಿಕೆದಾರರು ಬಿಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು. ಒಂದು ವೇಳೆ ಬಾಂಡ್ ಇಷ್ಯೂ ಮಾಡಿದ ಕಂಪೆನಿ ಡೀಫಾಲ್ಟ್ ಆದ್ರೆ ಅಥವಾ ಡೌನ್ ಗ್ರೇಡ್ ಆದರೆ ಅಥವಾ ಮುಚ್ಚದೆ ಹೋದರೆ ಆಗ ಫಂಡ್ ನ‌ನೆಟ್ ಅಸೆಟ್ ವ್ಯಾಲ್ಯೂ – ಎನ್ ಎ ವಿ ಕಡಿಮೆ ಆಗಬಹುದು..‌ಇದು ಹೂಡಿಕೆದಾರರ ರಿಟರ್ನ್ ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಕ್ರೆಡಿಟ್ ರಿಸ್ಕ್ ಫಂಡ್ ಗಳ ಗಳಿಕೆಯ ತೆರಿಗೆ ಲೆಕ್ಕಾಚಾರ ಡೆಟ್ ಮ್ಯೂಚುಯಲ್‌ ಫಂಡ್‌ ಗಳಂತೆ ಇರುತ್ತದೆ. 2023 ರ ಏಪ್ರಿಲ್ 1 ರಿಂದ ಡೆಟ್ ಫಂಡ್ ಗಳ ಟ್ಯಾಕ್ಸ್ ರಿಜೈಮ್ ನಲ್ಲಿ ಬದಲಾವಣೆ ಆಗಿದೆ.‌ ದೀರ್ಘಾವಧಿ ಕ್ಯಾಪಿಟಲ್ ಗೇನ್ ಅಥವಾ ಎಲ್ ಟಿ ಸಿ‌ ಜಿ ಇಂಡೆಕ್ಸೇಷನ್ ಸೌಲಭ್ಯವನ್ನ ಡೆಟ್ ಫಂಡ್ ಗಳಿಗೆ ತೆಗೆದು‌ ಹಾಕಲಾಗಿದೆ. ಇದಕ್ಕೂ ಮೊದಲು, ಮೂರು ವರ್ಷಗಳ ಕಾಲ ಬಾಂಡ್ ಹೊಂದಿದ್ದರೆ, ರಿಡಮ್ಷನ್ ಸಂದರ್ಭದಲ್ಲಿ ಇಂಡೆಕ್ಸೇಷನ್ ಸೌಲಭ್ಯ ಪಡೆಯೋ ಅವಕಾಶ ಇತ್ತು. ಆದರೆ 2023 ರ ಏಪ್ರಿಲ್ 1 ರಿಂದ ಡೆಟ್ ಫಂಡ್ ಗಳು ಅಲ್ಪಾವಧಿ ಕ್ಯಾಪಿಟಲ್ ಗೇನ್ ಕ್ಯಾಟಗರಿಯಡಿ ಸೇರತ್ತೆ. ಹೂಡಿಕೆ ಅವಧಿ ಎಷ್ಟೇ ಇರಲಿ, ಇದರಿಂದ ಸಿಗೋ ಲಾಭದ ಮೊತ್ತವನ್ನ ಹೂಡಿಕೆದಾರರ ವಾರ್ಷಿಕ ಆದಾಯಕ್ಕೆ ಸೇರಿಸಲಾಗತ್ತೆ, ಅವರಿಗೆ ಅನ್ವಯವಾಗೋ ಸ್ಲ್ಯಾಬ್ ರೀತಿ ತೆರಿಗೆ ವಿಧಿಸಲ್ಪಡತ್ತೆ. ಸರ್ಕಾರ ಈ ನಿಯಮ ಜಾರಿಗೆ ತಂದ ನಂತರ, ಕಳೆದ ವರ್ಷ ಕ್ರೆಡಿಟ್ ರಿಸ್ಕ್ ಮ್ಯೂಚುಯಲ್‌ ಫಂಡ್‌ ಗಳಿಂದ ನಿರಂತರವಾಗಿ ಹೂಡಿಕೆ ಹಿಂಪಡೆಯಲಾಗುತ್ತಿದೆ. ಫೆಬ್ರವರಿ 2024 ರಲ್ಲಿ, ಈ ಕ್ಯಾಟಗರಿಯಡಿ 365.9 ಕೋಟಿ ರೂಪಾಯಿಯಷ್ಟು ಔಟ್ ಫ್ಲೋ ವರದಿಯಾಗಿದೆ.

ಡೆಟ್ ಮ್ಯೂಚುಯಲ್‌ ಫಂಡ್ ಗಳ ಮೇಲಿನ ರಿಟರ್ನ್ ಗಳು ಆರ್ ಬಿ ಐ ನ ಪಾಲಿಸಿ ದರಗಳನ್ನಾಧರಿಸಿರತ್ತದೆ. ಈ ಕೇಂದ್ರ ಬ್ಯಾಂಕ್ ಬಡ್ಡಿ ದರದಲ್ಲಿ ವ್ಯತ್ಯಾಸ ಮಾಡಿದರೆ ಆಗ ಕ್ರೆಡಿಟ್ ರಿಸ್ಕ್ ಫಂಡ್ ನಂತಹ ಡೆಟ್ ಫಂಡ್ ಗಳ ರಿಟರ್ನ್ ಗಳಲ್ಲೂ ವ್ಯತ್ಯಾಸಗಳಾಗುತ್ತವೆ. ಏಕೆಂದರೆ ಯಾವಾಗ ನಿಮ್ಮ ಹಣವನ್ನು ಹೂಡಿಕೆ ಮಾಡಲಾಗಿರುತ್ತದೆಯೋ, ಆಗ ಆ ಕಂಪೆನಿಗಳು ಅಷ್ಟೇ ಅನುಪಾತದ ರಿಟರ್ನ್ಸ್ ಜೊತೆಗೆ ವಾಪಸ್ ಮಾಡಬೇಕಿರತ್ತದೆ. ಒಂದು ವೇಳೆ ಬಡ್ಡಿ ದರ ಹೆಚ್ಚಾಗಿದ್ದರೆ ರಿಸ್ಕ್ ಜೊತೆಗೆ ರಿಟರ್ನ್ಸ್ ಕೂಡ ಜಾಸ್ತಿ ಆಗಬಹುದಾಗಿದೆ.

ಈಗ ನಾವು, ಜನರಿಗೆ ಎಷ್ಟು ರಿಟರ್ನ್ಸ್ ಸಿಕ್ಕಿದೆ ಎನ್ನುವುದನ್ನು ನೋಡೋಣ. 2024ರ ಏಪ್ರಿಲ್ 3 ರ ಅಂಕಿಅಂಶಗಳ ಪ್ರಕಾರ, ಡಿ ಎಸ್ ಪಿ ಕ್ರೆಡಿಟ್ ರಿಸ್ಕ್ ಫಂಡ್ ಕಳೆದ ವರ್ಷದಲ್ಲಿ ಶೇಕಡ 15.5 ರಷ್ಟು ರಿಟರ್ನ್ಸ್ ಕೊಟ್ಟಿದೆ. ಮೂರು ವರ್ಷಗಳಲ್ಲಿ ಶೇಕಡ 9.45 ರಷ್ಟು ಹಾಗೂ ಐದು ವರ್ಷಗಳಲ್ಲಿ ಶೇಕಡ 7.14 ರಷ್ಟು ರಿಟರ್ನ್ಸ್ ಕೊಟ್ಟಿದೆ. ಈ ಅವಧಿಯಲ್ಲಿ ಎಸ್ ಬಿ ಐ ಕ್ರೆಡಿಟ್ ರಿಸ್ಕ್ ಫಂಡ್ ಕ್ರಮವಾಗಿ ಶೇಕಡ 8.68, 6.31 ಮತ್ತು 6.59 ರಷ್ಟು ರಿಟರ್ನ್ಸ್ ಕೊಟ್ಟಿದೆ.. ಅದೇ ರೀತಿ ಇನ್ವೆಸ್ಕೋ ಇಂಡಿಯಾ ಕ್ರೆಡಿಟ್ ರಿಸ್ಕ್ ಫಂಡ್ ಕ್ರಮವಾಗಿ ಶೇಕಡ 8.12, 6.1 ಮತ್ತು 5.37 ರಷ್ಟು ರಿಟರ್ನ್ಸ್ ಕೊಟ್ಟಿದೆ. ಇನ್ನು ನಿಪ್ಪಾನ್ ಇಂಡಿಯಾ ಕ್ರೆಡಿಟ್ ರಿಸ್ಕ್ ಫಂಡ್ ಕಳೆದ ಒಂದು ವರ್ಷದಲ್ಲಿ ಶೇಕಡ 8.02, ಮೂರು ವರ್ಷದಲ್ಲಿ ಶೇಕಡ 8.45 ರಷ್ಟು ಹಾಗೂ ಐದು ವರ್ಷದಲ್ಲಿ ಶೇಕಡ 4.03 ರಷ್ಟು ರಿಟರ್ನ್ಸ್ ಕೊಟ್ಟಿದೆ.

ಈಗ ಹೂಡಿಕೆದಾರರು ಏನು ಮಾಡಬೇಕು ಅನ್ನೋ ಪ್ರಶ್ನೆ ಉದ್ಭವಿಸತ್ತದೆ? ಡೆಟ್ ಫಂಡ್ ವಿಧಗಳಿಗೆ ಹೋಲಿಸಿದರೆ, ಕ್ರೆಡಿಟ್ ರಿಸ್ಕ್ ಫಂಡ್ ಗಳು ಹೆಚ್ಚು ರಿಸ್ಕಿ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಏಕೆಂದರೆ ಈ ಫಂಡ್ ಗಳು ತಮ್ಮ ಪೋರ್ಟ್ ಫೋಲಿಯೋದ ಬಹುಪಾಲನ್ನು ಲೋಯರ್ ರೇಟೆಡ್ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತವೆ. ನೀವು ಹೆಚ್ಚಿನ ರಿಟರ್ನ್ಸ್ ಗಾಗಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರೆ ಅಂತಹ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಮುಖೇಶ್ ಅವರಂತೆ ಡೆಟ್ ಫಂಡ್ ಗಳಿಗಿಂತ ಕೇವಲ ಶೇಕಡ 2 ರಿಂದ 3 ರಷ್ಟು ಹೆಚ್ಚಿನ ರಿಟರ್ನ್ಸ್ ಗಾಗಿ ಕ್ರೆಡಿಟ್ ರಿಸ್ಕ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ.

ಮಾರುಕಟ್ಟೆ ತಜ್ಞರ ಪ್ರಕಾರ, ಡೈನಮಿಕ್ ಬಾಂಡ್ ಫಂಡ್ ಗಳು ಉತ್ತಮ ಆಯ್ಕೆಯಾಗಿ ಪರಿಣಮಿಸಲಿವೆ. ಬಡ್ಡಿ ದರ ಏರಿಕೆಯ ಮತ್ತು ಇಳಿಕೆಯ ಎರಡೂ ಸನ್ನಿವೇಶಗಳಲ್ಲಿ ಗರಿಷ್ಠ ರಿಟರ್ನ್ ಗಳನ್ನ ನೀಡುವುದೇ ಡೈನಮಿಕ್ ಬಾಂಡ್ ಫಂಡ್ ಗಳ ಪ್ರಮುಖ ಗುರಿಯಾಗಿದೆ. ಫಂಡ್ ಮ್ಯಾನೇಜರ್ ನಿರ್ಧಾರ ಮತ್ತು ನಿರ್ವಹಣೆಯು ಬಡ್ಡಿ ದರ ವ್ಯತ್ಯಾಸವನ್ನಾಧರಿಸಿರತ್ತದೆ. ಬಡ್ಡಿ ದರ ಏರಿಳಿತ ಆಧರಿಸಿ ಫಂಡ್ ಮ್ಯಾನೇಜರ್ ಪೋರ್ಟ್ ಫೋಲಿಯೋ ಅಡ್ಜಸ್ಟ್ ಮಾಡುವುದಿದೆ.

ಕ್ವಾಂಟಮ್ ಎಎಂಸಿಯ ಹಿರಿಯ ಫಂಡ್ ಮ್ಯಾನೇಜರ್ ಪಂಕಜ್ ಪಾಠಕ್ ಈ ಬಗ್ಗೆ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ನೋಡಬೇಕು. ನೀವು ನಿರೀಕ್ಷಿಸಿದಂತೆ ನಡೆಯದೇ ಹೋದರೆ ಫ್ಲೆಕ್ಸಿಬಲಿಟಿಯ ಸೌಲಭ್ಯ ಈ ಡೈನಮಿಕ್ ಬಾಂಡ್ ಫಂಡ್ ಗಳಲ್ಲಿ ಸಿಗುತ್ತದೆ. ಮಾರುಕಟ್ಟೆ ಏರಿಳಿತಗಳ ರಿಸ್ಕ್ ಸಾಧ್ಯವಾದಷ್ಟು ತಡೆಯಿರಿ. 2-3 ವರ್ಷಗಳ ಮುನ್ನೋಟದೊಂದಿಗೆ ಹೂಡಿಕೆ ಮಾಡಬೇಕು.. ಅಲ್ಪಾವಧಿ ಮತ್ತು ಕಡಿಮೆ ರಿಸ್ಕ್ ಆಯ್ಕೆಗಳಿಗಾಗಿ ಲಿಕ್ವಿಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.

ಕ್ರೆಡಿಟ್ ರಿಸ್ಕ್ ಫಂಡ್ ಗಳಲ್ಲಿ ಲಿಕ್ಚಿಡಿಟಿ ಎನ್ನುವುದು ದೊಡ್ಡ ಸಮಸ್ಯೆ. ಏಕೆಂದರೆ ದೇಶದಲ್ಲಿ ಲೋಯರ್ ರೇಟೆಡ್ ಡೆಟ್ ಸೆಕ್ಯುರಿಟೀಸ್ ಗಳಿಗಾಗಿ ದೇಶದಲ್ಲಿ ಯಾವುದೇ ಸೆಕಂಡರಿ ಮಾರ್ಕೆಟ್ ಇಲ್ಲ.. ಇದರಿಂದಾಗಿ ಪೋರ್ಟ್ ಫೋಲಿಯೋದಲ್ಲಿ ಬದಲಾವಣೆ ಮಾಡೋದು ಕಷ್ಟವಾಗುತ್ತದೆ. ಎಷ್ಟೋ ಸಲ ರಿಡಮ್ಷನ್ ಕೂಡ ಸವಾಲಾಗಿ ಪರಿಣಮಿಸುತ್ತದೆ. ಮಾರುಕಟ್ಟೆ ಸ್ಥಿತಿ ಗತಿ ಆಧರಿಸಿ, ಮುಖೇಶ್ ಅವರು ಡೈನಮಿಕ್ ಬಾಂಡ್ ಫಂಡ್ ಗಳಿಗೆ ಶಿಫ್ಟ್ ಆಗುವ ಯೋಚಿಸಬಹುದು.. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಫೈನ್ಯಾನ್ಷಿಯಲ್ ಪ್ಲಾನರ್ ಸಂಪರ್ಕಿಸಬಹುದು.

Published: May 7, 2024, 20:05 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ