` before by a car know the car financial planning | ನಿಮ್ಮ ಕನಸಿನ ಕಾರಿಗೆ ಹಣ ಹೊಂದಿಸಲು ಇವತ್ತಿನಿಂದಲೇ ಪ್ಲಾನ್ ಮಾಡಿ! | Money9 Kannada

ನಿಮ್ಮ ಕನಸಿನ ಕಾರಿಗೆ ಹಣ ಹೊಂದಿಸಲು ಇವತ್ತಿನಿಂದಲೇ ಪ್ಲಾನ್ ಮಾಡಿ!

ಹಣದುಬ್ಬರ ಕ್ಯಾಲ್ಕುಲೇಟರ್ ಪ್ರಕಾರ, ನೀವು ಇವತ್ತು ಯಾವುದಾದರೂ ಒಂದು ಐಟಂ ಖರೀದಿ ಮಾಡೋಕೆ 7 ಲಕ್ಷ ರೂಪಾಯಿ ಖರ್ಚು ಮಾಡುತ್ತೀರಿ ಅಂತಾದರೆ, 5 ವರ್ಷಗಳ ನಂತರ ಸುಮಾರು 10 ಲಕ್ಷದ 30 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ, ವಾರ್ಷಿಕ ಹಣದುಬ್ಬರ 8% ಆಗಿದೆ ಎಂದುಕೊಳ್ಳೋಣ.

ರಾಜೇಶ್ ಕಾರು ಖರೀದಿ ಮಾಡೋದಕ್ಕೆ ಯೋಚನೆ ಮಾಡಿದ್ದಾರೆ. ತನ್ನ ಜೊತೆಗೆ ಶೋರೂಮ್‌ಗೆ ಬಾ ಅಂತ ಶಂತನು ಬಳಿ ರಾಜೇಶ್‌ ಕೇಳುತ್ತಾರೆ. ಲೋನ್ ಮಾಡಿದ್ದೀರಾ ಅಥವಾ ಕ್ಯಾಶ್ ಕೊಟ್ಟಿದ್ದೀರಾ? ಅಂತ ಶಂತನು ಕೇಳುತ್ತಾರೆ. ನನ್ನ ಹತ್ರ 7-8 ಲಕ್ಷ ರೂ. ಇಲ್ಲ. ಹೀಗಾಗಿ, ಸಾಲ ಮಾಡಬೇಕು ಎಂದು ರಾಜೇಶ್ ಹೇಳುತ್ತಾರೆ. ಅದಕ್ಕೆ ಶಂತನು ಹೇಳೋದು ಏನೆಂದರೆ, ಯಾಕೆ ಸ್ವಲ್ಪ ಸಮಯ ಕಾದು, ನಂತರ ಕಾರನ್ನು ಯಾಕೆ ಖರೀದಿಸಬಾರದು? ಅದಕ್ಕೆ ರಾಜೇಶ್‌ ಪ್ರತಿಕ್ರಿಯೆ…ಸ್ವಲ್ಪ ಸಮಯ ಕಾದರೆ ಕಾರಿನ ಬೆಲೆ ಕಡಿಮೆ ಆಗುತ್ತದೆಯೇ? ಅದಕ್ಕೆ ಶಂತನು ಹೇಳುತ್ತಾನೆ, ಇಲ್ಲ ಕಡಿಮೆ ಆಗೋದಿಲ್ಲ. ಆದರೆ, ನಿಮ್ಮ ಖರ್ಚು ಕಡಿಮೆಯಾಗುತ್ತದೆ. ಅಂತ. ಇದನ್ನು ಕೇಳಿ ರಾಜೇಶ್‌ಗೆ ಆಶ್ಚರ್ಯ ಆಗುತ್ತದೆ. ಖರ್ಚು ಕಡಿಮೆ ಆಗೋದು ಹೇಗೆ? ಎಂದು ಕೇಳುತ್ತಾರೆ.

ರಾಜೇಶ್ ಥರಾನೇ ಹೆಚ್ಚಿನ ಜನರಿಗೆ, ಕಾರು ಖರೀದಿಸಬೇಕು ಎನ್ನುವುದು ಎರಡನೇ ದೊಡ್ಡ ಆರ್ಥಿಕ ನಿರ್ಧಾರ. ಮೊದಲನೆಯ ದೊಡ್ಡ ನಿರ್ಧಾರ ಮನೆ ಖರೀದಿ ಮಾಡೋದು. ಹೀಗಾಗಿ, ಫೈನಾನ್ಷಿಯಲ್ ಪ್ಲಾನ್ ಸರಿಯಾಗಿ ಮಾಡೋದು ಅಗತ್ಯ. ಬಜೆಟ್ ಫಿಕ್ಸ್ ಮಾಡೋದು ಮೊದಲ ಹಂತ. ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ, ನೀವು ಕಾರಿಗೆ ಎಷ್ಟು ಖರ್ಚು ಮಾಡಬೇಕೆಂದು ನಿರ್ಧಾರ ಮಾಡಬೇಕು. ಸದ್ಯ, ಮಿಡ್ ರೇಂಜ್‌ ಕಾರಿನ ಬೆಲೆ ಸುಮಾರು 7 ರಿಂದ 10 ಲಕ್ಷ ರೂಪಾಯಿ. ನಿಮ್ಮ ಆದಾಯ, ವೈಯಕ್ತಿಕ ಆದ್ಯತೆಗಳು ಮತ್ತು ಇತರ ಅವಶ್ಯಕತೆಗಳನ್ನು ಆಧರಿಸಿ ನೀವು ಕಾರನ್ನು ಆಯ್ಕೆ ಮಾಡಬೇಕು. ಹಾಗಂತ, ನೀವು ಫಿಕ್ಸ್ ಮಾಡಿದ ನಂತರ ನಿಮ್ಮ ಬಜೆಟ್‌ಗೆ ಸ್ಟಿಕ್ ಆಗಬೇಕು. ಬಜೆಟ್ ಫಿಕ್ಸ್ ಮಾಡಿದ ನಂತರ, ಮುಂದಿನ ಕೆಲಸ ಹಣಕ್ಕೆ ವ್ಯವಸ್ಥೆ ಮಾಡುವುದು. ಇದನ್ನು ಮಾಡೋಕೆ ಎರಡು ಮಾರ್ಗಗಳಿವೆ: ಹಣ ಉಳಿಸಿ, ಕಾರು ಖರೀದಿಸೋದು ಅಥವಾ, ಆಟೋ ಲೋನ್ ತೆಗೆದುಕೊಳ್ಳೋದು. ಯಾವ ವಿಧಾನ ನಿಮಗೆ ಸೂಕ್ತ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಫೈನಾನ್ಷಿಯಲ್ ಪ್ಲಾನಿಂಗ್‌ ಅಥವಾ ಕಾರು ಖರೀದಿ ಮಾಡೋಕೆ ಹಣ ಉಳಿಸುವ ವಿಚಾರವನ್ನು ತಿಳಿದುಕೊಳ್ಳೋಣ. ಇದರಲ್ಲಿ ಎರಡು ಅನುಕೂಲಗಳಿವೆ. ವೆಚ್ಚ ಕಡಿಮೆಯಾಗುತ್ತದೆ. EMI ಬಗ್ಗೆ ಚಿಂತಿಸಬೇಕಾಗಿಲ್ಲ. ಕಾರಿಗೆ ನೀವು ಎಷ್ಟು ಸಮಯ ಕಾಯಬಹುದು ಎಂಬುದು ಕೂಡ ಮುಖ್ಯ. ಏಕೆಂದರೆ, ಇದು ಹೂಡಿಕೆಯ ಅವಧಿಯನ್ನು ನಿರ್ಧರಿಸುತ್ತದೆ. ಕಾರನ್ನು ಖರೀದಿಸಲು ನೀವು ಹೆಚ್ಚು ಸಮಯ ಕಾದಷ್ಟೂ ನಿಮ್ಮ ಹೂಡಿಕೆ ಬೆಳೆಯುತ್ತದೆ. ರಾಜೇಶ್ ಇಂದು 7 ಲಕ್ಷ ರೂಪಾಯಿ ಬೆಲೆಯ ಕಾರು ಖರೀದಿಸಬೇಕು ಅಂದುಕೊಂಡಿದ್ದಾರೆ. ಆದರೆ, ಈಗಲ್ಲ. ಬದಲಿಗೆ ಮುಂದಿನ 5 ವರ್ಷದಲ್ಲಿ ಅವರಿಗೆ ಖರೀದಿ ಮಾಡಬೇಕಿದೆ. ಕಾರಿನ ಬೆಲೆ 5 ವರ್ಷಗಳಲ್ಲಿ 7 ಲಕ್ಷ ರೂಪಾಯಿ ಆಗೇ ಇರೋದಿಲ್ಲ. ಆಟೋ ಕಂಪನಿಗಳು ವರ್ಷಕ್ಕೆ 2-3 ಬಾರಿ ಕಾರಿನ ಬೆಲೆಯನ್ನು 1 ರಿಂದ 3% ಹೆಚ್ಚಿಸುತ್ತವೆ. ಒಟ್ಟಾರೆಯಾಗಿ ಅಂದಾಜು ಮಾಡುವುದಾದರೆ, ವರ್ಷಕ್ಕೆ 7 ರಿಂದ 8% ರಷ್ಟು ಏರಿಕೆಯಾಗಬಹುದು. 5 ವರ್ಷಗಳಲ್ಲಿ 7 ಲಕ್ಷ ರೂಪಾಯಿಗಳ ಬೆಲೆಯ ಕಾರು ಯಾವುದಾಗಿರಬಹುದು ಅಂತ ನೋಡೋಕೆ ಹಣದುಬ್ಬರ ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ.

ಹಣದುಬ್ಬರ ಕ್ಯಾಲ್ಕುಲೇಟರ್ ಪ್ರಕಾರ, ನೀವು ಇವತ್ತು ಯಾವುದಾದರೂ ಒಂದು ಐಟಂ ಖರೀದಿ ಮಾಡೋಕೆ 7 ಲಕ್ಷ ರೂಪಾಯಿ ಖರ್ಚು ಮಾಡುತ್ತೀರಿ ಅಂತಾದರೆ, 5 ವರ್ಷಗಳ ನಂತರ ಸುಮಾರು 10 ಲಕ್ಷದ 30 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ, ವಾರ್ಷಿಕ ಹಣದುಬ್ಬರ 8% ಆಗಿದೆ ಎಂದುಕೊಳ್ಳೋಣ. ಅಂದರೆ, ಇಂದು 7 ಲಕ್ಷ ರೂಪಾಯಿ ಬೆಲೆಯ ಗಾಡಿ ಖರೀದಿ ಮಾಡೋಕೆ ನೀವು 10 ಲಕ್ಷದ 30 ಸಾವಿರ ರೂಪಾಯಿಗಳನ್ನು ಇಟ್ಟುಕೊಂಡಿರಬೇಕು.

ಈ 10 ಲಕ್ಷ ರೂಪಾಯಿ ಸಂಗ್ರಹಿಸುವುದಕ್ಕೆ ನಿಮ್ಮ ಇನ್ವೆಸ್ಟ್‌ಮೆಂಟ್ ಪ್ಲಾನ್ ಮಾಡಿಕೊಳ್ಳಬೇಕು. ಇನ್ವೆಸ್ಟ್‌ಮೆಂಟ್ ಗೋಲ್‌ 5 ವರ್ಷಗಳು. ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಏಕೆಂದರೆ ಮಧ್ಯಮ ಅವಧಿಯಲ್ಲಿ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ವೊಲಟೈಲ್ ಆಗಬಹುದು. ಹೀಗಾಗಿ, ಕಡಿಮೆ ವೊಲಟಿಲಿಟಿ ಇರುವ ಕಡೆ ನೀವು ಹೂಡಿಕೆ ಮಾಡಬೇಕಾಗುತ್ತದೆ. ಆಗ ಮಾತ್ರ ನೀವು ಹಣದುಬ್ಬರವನ್ನು ಎದುಸುವ ಲಾಭ ಪಡೆಯಬಹುದು. ನೀವು ಯಾವ ರೀತಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಹೂಡಿಕೆ ಮಾಡಲು ಸರಿಯಾದ ಮಾರ್ಗ ಯಾವುದು ಅನ್ನೋದು ನಿಮಗೆ ಈಗ ಗೊತ್ತಾಗಿದೆ. ನಿಮಗೆ ಬೇಕಿರುವ ಕಾಲಕ್ಕೆ 10.30 ಲಕ್ಷ ರೂಪಾಯಿ ಪಡೆಯೋಕೆ ಪ್ರತಿ ತಿಂಗಳು ಎಷ್ಟು ಹಣ ಹಾಕಬೇಕಾಗುತ್ತದೆ ಎಂಬುದು ಈಗ ಇರುವ ಪ್ರಶ್ನೆ. ಗೋಲ್ SIP ಕ್ಯಾಲ್ಕುಲೇಟರ್ ಪ್ರಕಾರ, ಅಂದಾಜು 8% ರಿಟರ್ನ್ ಇರುತ್ತದೆ ಎಂದುಕೊಂಡರೆ, ಮುಂದಿನ 5 ವರ್ಷಗಳವರೆಗೆ ನಿಮ್ಮ SIP 14,018 ರೂಪಾಯಿ ಆಗಿರಬೇಕು. ಆದರೆ 10% ನಷ್ಟು ರಿಟರ್ನ್ ಬರುತ್ತದೆ ಎಂದು ಊಹಿಸಿದರೆ, SIP ಮೊತ್ತ 13,301 ರೂ. ಆಗಿರಬೇಕು.

ಮ್ಯೂಚುವಲ್ ಫಂಡ್ ರಿಟರ್ನ್ಸ್ ಮಾರುಕಟ್ಟೆಯ ರಿಸ್ಕ್‌ಗಳಿಗೆ ಒಳಪಟ್ಟಿರುತ್ತದೆ. ಅಂದರೆ, ಮಾರುಕಟ್ಟೆಗೆ ಅನುಗುಣವಾಗಿ ರಿಟರ್ನ್‌ ಹೆಚ್ಚು ಕಡಿಮೆ ಆಗಬಹುದು. ಈ ಸಂದರ್ಭದಲ್ಲಿ, ನಿಮ್ಮ ಹೂಡಿಕೆಯ ಗುರಿಯನ್ನು ಗಮನದಲ್ಲಿರಿಸಿಕೊಳ್ಳಿ. ಇದರಿಂದ ನೀವು SIP ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕೊರತೆ ಬಿದ್ದರೆ ಫಂಡ್ ಬದಲಿಸಬಹುದು. 5 ವರ್ಷ ಅನ್ನೋದು ದೀರ್ಘ ಅವಧಿ. ನಿಮ್ಮ ಬಜೆಟ್ ಹೆಚ್ಚಳ ಮಾಡಬೇಕು ಎಂದು ನೀವು ಭಾವಿಸಬಹುದು. ಆಗ ನಿಮ್ಮ ಬಜೆಟ್ ಜೊತೆಗೆ, ನಿಮ್ಮ SIP ಅನ್ನೂ ಹೆಚ್ಚಿಸಬೇಕು. ಅನೇಕರು 2-3 ವರ್ಷಗಳಲ್ಲಿ ಕಾರು ಖರೀದಿ ಮಾಡೋಕೆ ಪ್ಲಾನ್ ಮಾಡಿದರೆ, ಕೆಲವರು 8-10 ವರ್ಷಗಳಲ್ಲಿ ಕಾರು ಖರೀದಿ ಮಾಡಬೇಕು ಅಂತ ಪ್ಲಾನ್ ಮಾಡುತ್ತಾರೆ. ಹಾಗಾದರೆ, ಅಂಥವರು ಎಲ್ಲಿ ಇನ್ವೆಸ್ಟ್‌ ಮಾಡಬೇಕು ಎನ್ನುವುದಕ್ಕೂ ಉತ್ತರ ಕಂಡುಕೊಳ್ಳೋಣ.

ಕಾರು ಖರೀದಿಗೆ ಎರಡನೆಯ ಮಾರ್ಗವೆಂದರೆ ವೆಹಿಕಲ್ ಲೋನ್ ಮಾಡೋದು. ಇದರ ಪ್ರಯೋಜನ ಅಂದರೆ, ನೀವು ವಾಹನ ಖರೀದಿ ಮಾಡೋಕೆ ಕಾಯಬೇಕಾಗಿಲ್ಲ. ಸಾಲಕ್ಕೆ ಅಪ್ರೂವಲ್ ಸಿಕ್ಕ ತಕ್ಷಣ, ಕಾರು ನಿಮ್ಮ ಮನೆ ಎದುರು ನಿಂತಿರುತ್ತದೆ. ಆದರೆ, ಕಂತುಗಳು ಕಾರಿನ ಬೆಲೆಗಿಂತ ಹೆಚ್ಚಾಗುತ್ತದೆ. ಹೆಚ್ಚಿನ ವಾಹನ ಸಾಲಗಳು ವಾಹನಕ್ಕೆ ಎಷ್ಟು ಬೆಲೆ ಇದೆಯೋ ಅದರ 80 ರಿಂದ 90% ರಷ್ಟು ಹಣವನ್ನು ಸಾಲವಾಗಿ ಕೊಡುತ್ತವೆ. ಕೆಲವು ಬ್ಯಾಂಕ್‌ಗಳು ಅಥವಾ NBFC ಗಳು 100% ಫೈನಾನ್ಸ್‌ ಒದಗಿಸುತ್ತವೆ. ಸಾಮಾನ್ಯವಾಗಿ, ಆಟೋ ಲೋನ್‌ನ ಬಡ್ಡಿ ದರಗಳು ಸುಮಾರು 9% ರಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ, ಎಸ್‌ಬಿಐ ಕಾರು ಸಾಲದ ಬಡ್ಡಿ ದರ 8.85% ರಿಂದ ಪ್ರಾರಂಭವಾಗುತ್ತದೆ. ಐಸಿಐಸಿಐ ಬ್ಯಾಂಕ್‌ನ ಇಂಟರೆಸ್ಟ್ ರೇಟ್‌ 9.10% ರಿಂದ ಶುರುವಾಗುತ್ತದೆ. ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲದ ಅವಧಿಯನ್ನೂ ಅವಲಂಬಿಸಿರುತ್ತದೆ.

ರಾಜೇಶ್ ಸಾಲ ಮಾಡಿ 7 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಿದ್ದಾರೆ ಎಂದುಕೊಳ್ಳೋಣ. ಮೊದಲು, ಅವರು 20% ಅಡ್ವಾನ್ಸ್‌ ಪೇ ಮಾಡಬೇಕಾಗುತ್ತದೆ. ಅಂದರೆ, 1 ಲಕ್ಷದ 40 ಸಾವಿರ ರೂ. ಕಟ್ಟಬೇಕು. ಉಳಿದ 5 ಲಕ್ಷದ 60 ಸಾವಿರ ರೂಪಾಯಿಗೆ ಸಾಲ ಸಿಗುತ್ತದೆ. ಅದರ ಮೇಲೆ ಅವರು ಇಎಂಐ ಕಟ್ಟಬೇಕಾಗುತ್ತದೆ. 9% ಬಡ್ಡಿದರ ಇದೆ ಎಂದುಕೊಂಡರೆ, 5 ವರ್ಷಗಳ ಸಾಲಕ್ಕೆ ಅವರ EMI 11,625 ರೂ. ಆಗುತ್ತದೆ. ಇಡೀ ಅವಧಿಯಲ್ಲಿ ಸುಮಾರು 7 ಲಕ್ಷ ರೂ. ಕಟ್ಟಬೇಕಾಗುತ್ತದೆ. ಇದರಲ್ಲಿ ಸುಮಾರು 1 ಲಕ್ಷದ 40 ಸಾವಿರ ರೂ. ಬಡ್ಡಿ ಆಗಿರುತ್ತೆ.

ಬಡ್ಡಿದರದ ಜೊತೆಗೆ, ಪ್ರೋಸೆಸಿಂಗ್ ಫೀ ಇರುತ್ತದೆ. EMI ಮಿಸ್ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ. ಸಾಲವನ್ನು ಮರುಪಾವತಿ ಮಾಡೋಕೆ ಆಗದಿದ್ದರೆ ಬ್ಯಾಂಕ್ ನಿಮ್ಮ ಕಾರನ್ನು ಜಪ್ತಿ ಮಾಡಬಹುದು. ಮತ್ತೊಂದೆಡೆ, ನೀವು ಸಾಲವನ್ನು ಮೊದಲೇ ರಿಪೇ ಮಾಡಿದರೆ, ಫೋರ್‌ಕ್ಲೋಶರ್ ಚಾರ್ಜ್ ಕಟ್ಟಬೇಕಾಗುತ್ತದೆ.

ರಾಜೇಶ್ ಕಾರು ಖರೀದಿಗೆ ಫೈನಾನ್ಷಿಯಲ್ ಪ್ಲಾನ್ ಮಾಡಿದರೆ, ಬಡ್ಡಿಯಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಉಳಿಸಬಹುದು. ಆದರೆ, ಇಲ್ಲಿ ಆಯ್ಕೆ ಮತ್ತು ಅವಶ್ಯಕತೆ ಬಹಳ ಮುಖ್ಯ. ಕಾರು ನಿಮ್ಮ ಮನೆ ಎದುರಿಗೆ ಬಂದು ನಿಲ್ಲೋದಕ್ಕೆ ನೀವು ಕಾಯಬಹುದು ಅಂತಾದರೆ, ಸೇವ್ ಮಾಡಿದ ನಂತರ ಪರ್ಚೇಸ್ ಮಾಡುವ ತಂತ್ರ ಬಳಸಬಹುದು. ನಿಮಗೆ ಕಾರ್ ತುರ್ತಾಗಿ ಅಗತ್ಯವಿದ್ದರೆ ಸಾಲ ತೆಗೆದುಕೊಳ್ಳುವುದು ಉತ್ತಮ. ಎರಡೂ ಅಂಶಗಳನ್ನು ಸರಿಯಾಗಿ ಚರ್ಚೆ ಮಾಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಿ.

Published: April 26, 2024, 19:34 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ