` fy24 stock market recap and outlook for india in fy25 | ಮುಂದಿನ ವರ್ಷ ಸ್ಟಾಕ್ ಮಾರ್ಕೆಟ್ ಯಾವ ದಾರಿಯಲ್ಲಿ ಸಾಗಬಹುದು? | Money9 Kannada

ಮುಂದಿನ ವರ್ಷ ಸ್ಟಾಕ್ ಮಾರ್ಕೆಟ್ ಯಾವ ದಾರಿಯಲ್ಲಿ ಸಾಗಬಹುದು?

ಅಧಿಕ ವ್ಯಾಲ್ಯೂಯೇಶನ್‌ ಮತ್ತು ಬಡ್ಡಿ ದರ ಹೆಚ್ಚಳದಿಂದಾಗಿ, ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ದೇಶದಿಂದ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು ತಮ್ಮ ಹೂಡಿಕೆಗಳನ್ನು ವಿತ್‌ಡ್ರಾ ಮಾಡಿಕೊಂಡಿದ್ದರು.

ಅನೂಪ್ ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ಮಾಡುತ್ತಲೇ, ಫ್ರೆಂಡ್ ಸಂಜಯ್ ಜೊತೆಗೆ ಮಾತನಾಡುತ್ತಿದ್ದಾರೆ. ಸಂಜಯ್‌ಗೆ ಏನೋ ಟೆನ್ಷನ್ ಆಗಿದೆ ಎಂದು ಅನೂಪ್‌ಗೆ ಗೊತ್ತಾಗುತ್ತದೆ. ಏನು ವಿಷ್ಯ ಅಂತ ಸಂಜಯ್ ಕೇಳುತ್ತಾನೆ. ಮಾರ್ಕೆಟ್ ಬಗ್ಗೆ ನನಗೆ ಚಿಂತೆಯಾಗಿದೆ ಎಂದು ಸಂಜಯ್ ಹೇಳುತ್ತಾನೆ. ಮಾರ್ಕೆಟ್‌ ಚೆನ್ನಾಗಿಯೇ ಇದೆಯಲ್ಲ. ಚಿಂತೆ ಯಾಕೆ? ಎಂಬುದು ಅನೂಪ್‌ ಪ್ರಶ್ನೆ. ಮಾರ್ಕೆಟ್ ಏರುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರ್‍ಯಾಲಿ ಮಿಸ್ ಮಾಡಿಕೊಂಡೆ ಅಂತ ಸಂಜಯ್ ಹೇಳುತ್ತಾರೆ. ಅದಕ್ಕೆ ಸಮಾಧಾನ ಮಾಡಿದ ಅನೂಪ್, ಮಾರ್ಕೆಟ್‌ನ ಏರುಗತಿ ಇನ್ನೂ ಮುಗಿದಿಲ್ಲ. 2025 ರ ಫೈನಾನ್ಷಿಯಲ್ ಇಯರ್‌ನಲ್ಲಿ ಒಳ್ಳೆಯ ರಿಟರ್ನ್ಸ್‌ ಪಡೆಯೋಕೆ ಇನ್ನೂ ಅವಕಾಶ ಇದೆ ಅಂತ ಅನೂಪ್ ಹೇಳಿದರು. ಈಗ ಸಂಜಯ್‌ಗೆ ಔಟ್‌ಲುಕ್‌ ಬಗ್ಗೆ ಭಾರಿ ಉತ್ಸಾಹ ಮೂಡಿತು. ಔಟ್‌ಲುಕ್‌ ಹೇಗಿದೆ ಎಂದು ತಿಳಿಯೋಕೆ ಆಸಕ್ತಿ ಉಂಟಾಯಿತು.

ಸಂಜಯ್‌ ರೀತಿ ಫೈನಾನ್ಷಿಯಲ್ ಇಯರ್ 2023-24 ಮಾರ್ಕೆಟ್ ರ್‍ಯಾಲಿ ತಪ್ಪಿಸಿಕೊಂಡಿದ್ದು, ಈಗ ನೀವು 2025 ಕ್ಕೆ ಮತ್ತು ಈ ಫೈನಾನ್ಷಿಯಲ್ ಇಯರ್‌ಗೆ ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿ ಬಗ್ಗೆ ತಿಳಿದುಕೊಳ್ಳಬೇಕು ಅಂದುಕೊಂಡಿದ್ದರೆ ನಾವು ನಿಮಗೆ ಅದರ ಗುಟ್ಟು ಹೇಳಿಕೊಡಲಿದ್ದೇವೆ. ಮಾರ್ಕೆಟ್‌ನ ಪೂರ್ತಿ ಮಾಹಿತಿ ಇದರಲ್ಲಿ ನಿಮಗೆ ಸಿಗುತ್ತದೆ. ಈ ಹಿಂದಿನ ಫೈನಾನ್ಷಿಯಲ್ ಇಯರ್ ಅಂದರೆ 2024 ರ ವಿತ್ತ ವರ್ಷ ಭಾರತೀಯ ಮಾರ್ಕೆಟ್‌ಗೆ ಒಳ್ಳೆಯ ಸನ್ನಿವೇಶವಾಗಿತ್ತು. 2024 ರ ವಿತ್ತ ವರ್ಷದಲ್ಲಿ ನಿಫ್ಟಿ 50 ಇಂಡೆಕ್ಸ್‌ 28% ಗಿಂತ ಹೆಚ್ಚು ರಿಟರ್ನ್ ನೀಡಿದೆ. ಹೀಗಾಗಿ, ವಿಶ್ವದಲ್ಲೇ ಇದು ಅತಿ ಹೆಚ್ಚು ಫರ್ಮಾರ್ಮ್ ಮಾಡುವ ಮಾರ್ಕೆಟ್‌ಗಳಲ್ಲಿ ಒಂದಾಗಿತ್ತು. ಜಪಾನ್‌ನ ನಿಕ್ಕಿ ಇಂಡೆಕ್ಸ್‌ ಹೊರತುಪಡಿಸಿದರೆ ರಿಟರ್ನ್‌ ವಿಷಯದಲ್ಲಿ ಎಲ್ಲ ಪ್ರಮುಖ ಇಂಡೆಕ್ಸ್‌ಗಳಿಗಿಂತ ಹೆಚ್ಚು ಏರಿಕೆ ಕಂಡಿದೆ. ರಿಟರ್ನ್ಸ್ ವಿಷಯದಲ್ಲಿ ಒಳ್ಳೆಯ ಮಾರ್ಕೆಟ್ ಆಗಿರುವುದನ್ನು ಹೊರತುಪಡಿಸಿ, ಕಳೆದ 10 ವರ್ಷದಲ್ಲಿ ಎರಡನೇ ಬೆಸ್ಟ್‌ ಪರ್ಫಾರ್ಮೆನ್ಸ್ ಅನ್ನೂ ನಿಫ್ಟಿ ಕೊಟ್ಟಿದೆ. 2021 ರ ಫೈನಾನ್ಷಿಯಲ್ ಇಯರ್‌ನಲ್ಲಿ ನಿಫ್ಟಿ 71% ರಿಟರ್ನ್ ನೀಡಿರುವುದರ ಜೊತೆಗೆ, ಒಂದು ದಶಕದಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್‌ ಕೂಡಾ ಕೊಟ್ಟಿದೆ.

ಆದರೆ, ಒಂದು ಮುಖ್ಯ ಸಂಗತಿಯೇನೆಂದರೆ, ನಿಫ್ಟಿಗೆ ಹೋಲಿಸಿದರೆ ಮಿಡ್‌ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ ಇಂಡೆಕ್ಸ್‌ಗಳ ರಿಟರ್ನ್ಸ್‌ ಇನ್ನೂ ಅದ್ಭುತವಾಗಿದೆ. ಅಂದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಇಂಡೆಕ್ಸ್‌ನ ಪರ್ಫಾರ್ಮೆನ್ಸ್‌ ದೊಡ್ಡ ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ತುಂಬಾ ಉತ್ತಮವಾಗಿದೆ. 2024 ರ ಫೈನಾನ್ಷಿಯಲ್ ಇಯರ್‌ಗೆ ಹೋಲಿಸಿದರೆ ಪವರ್, ರೈಲ್ವೇಸ್‌, ಸರ್ಕಾರ ಮತ್ತು ಕ್ಯಾಪಿಟಲ್ ಗೂಡ್ಸ್‌ನಂತಹ ಥೀಮ್‌ಗಳು ಹೆಚ್ಚು ಸಕ್ರಿಯವಾಗಿದ್ದವು. ಇದರಲ್ಲಿ ಜನರು ತುಂಬಾ ಹಣ ಮಾಡಿದ್ದಾರೆ. ಇವು ಹಲವು ವರ್ಷಗಳಿಂದ ಅಷ್ಟೇನೂ ಆಕರ್ಷಕವಾಗಿ ಕಂಡುಬಂದಿರಲಿಲ್ಲ.

2024 ರ ಫೈನಾನ್ಷಿಯಲ್‌ ಇಯರ್‌ನಲ್ಲಿ ಉತ್ತಮ ಪರ್ಫಾರ್ಮೆನ್ಸ್‌ ಕಂಡಿರುವ ಸೆಕ್ಟರ್‌ಗಳ ಪಟ್ಟಿಯಲ್ಲಿ, ರಿಯಾಲ್ಟಿ ಇಂಡೆಕ್ಸ್‌ನ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತಿದೆ. ಹಿಂದಿನ ಫೈನಾನ್ಷಿಯಲ್ ಇಯರ್‌ನಲ್ಲಿ ಎಲ್ಲ ಇಂಡೆಕ್ಸ್‌ಗಳೂ ಪಾಸಿಟಿವ್ ರಿಟರ್ನ್ಸ್‌ ನೀಡಿದ್ದರೂ, ಬಿಎಸ್‌ಇ ರಿಯಲ್ ಎಸ್ಟೇಟ್ ಇಂಡೆಕ್ಸ್‌ 2 ಪಟ್ಟಿಗಿಂತ ಹೆಚ್ಚು ಏರಿಕೆ ಕಂಡಿದೆ. ಈ ಗುಡ್ ಪರ್ಫಾರ್ಮೆನ್ಸ್‌ನ ಹಿಂದಿನ ಕಾರಣ ಏನು ಅಂತ ತಿಳಿದುಕೊಳ್ಳೋಣ ಬನ್ನಿ. ಈ ಕ್ಷೇತ್ರದಲ್ಲಿ ಉತ್ತಮ ಪರ್ಫಾರ್ಮೆನ್ಸ್‌ಗೆ ಕಾರಣ ಎಂದರೆ, ಮೂರು ಕ್ಯಾಟಗರಿಗಳಲ್ಲೂ ಉತ್ತಮ ಹೂಡಿಕೆ ಹರಿದು ಬಂದಿದೆ. ಅಂದರೆ, ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು, ಡೊಮೆಸ್ಟಿಕ್ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ರಿಟೇಲ್‌ ಇನ್ವೆಸ್ಟರ್‌ಗಳಿಂದ ಹೂಡಿಕೆ ಬಂದಿದೆ. 2024 ರಲ್ಲಿ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಭಾರತೀಯ ಮಾರ್ಕೆಟ್‌ಗಳಲ್ಲಿ ಹಾಕಿದ್ದಾರೆ. ಇದು 2022 ಮತ್ತು 2023 ರ ಫೈನಾನ್ಷಿಯಲ್‌ ಇಯರ್‌ನಲ್ಲಿ ಬಂದ ಒಟ್ಟು ಮೊತ್ತಕ್ಕಿಂತ ಹೆಚ್ಚಿದೆ.

ಅಧಿಕ ವ್ಯಾಲ್ಯೂಯೇಶನ್‌ ಮತ್ತು ಬಡ್ಡಿ ದರ ಹೆಚ್ಚಳದಿಂದಾಗಿ, ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ದೇಶದಿಂದ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು ತಮ್ಮ ಹೂಡಿಕೆಗಳನ್ನು ವಿತ್‌ಡ್ರಾ ಮಾಡಿಕೊಂಡಿದ್ದರು. ಆದರೆ, ವಿಶ್ವಾದ್ಯಂತ ಇನ್‌ಫ್ಲೇಶನ್‌ ವಿಷಯದಲ್ಲಿ ಒಂದು ಸ್ಟೆಬಿಲಿಟಿ ಮತ್ತೆ ಬರುತ್ತಿದೆ. ಇದರಿಂದ ರೇಟ್ ಕಟ್ ಆಗುವ ನಿರೀಕ್ಷೆ ಹೆಚ್ಚಳವಾಗಿದೆ. ಇನ್ನೊಂದು ಕಡೆ, ಡೊಮೆಸ್ಟಿಕ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು ಕೂಡಾ ಕಳೆದ 3 ಫೈನಾನ್ಷಿಯಲ್ ಇಯರ್‌ನಿಂದ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ಹೆಚ್ಚು ಜಾಗೃತಿ ಮೂಡುತ್ತಿರುವುದು ಮತ್ತು ಮಾರ್ಕೆಟ್ ಪರ್ಫಾರ್ಮೆನ್ಸ್‌ನಿಂದಾಗಿ, ಎಸ್‌ಐಪಿ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ನಿಂದ ಆಗುತ್ತಿರುವ ಹೂಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ.

ಅಸೋಸಿಯೇಶನ್‌ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್‌ಐ) ಪ್ರಕಾರ, 2024 ಜನವರಿ ವೇಳೆಗೆ, ಅಂದಾಜು 8 ಕೋಟಿ ಆಕ್ಟಿವ್ ಎಸ್‌ಐಪಿ ಅಕೌಂಟ್‌ಗಳಿದ್ದವು. ಫೆಬ್ರವರಿ ತಿಂಗಳಲ್ಲಿ, ಎಸ್‌ಐಪಿ ಮೂಲಕ ಆದ ಹೂಡಿಕೆಯು ಮೊದಲ ಬಾರಿಗೆ 19.000 ಕೋಟಿ ರೂ. ಆಗಿದೆ. ಇದರಿಂದ ಮ್ಯೂಚುವಲ್ ಫಂಡ್ ಕಂಪನಿಗಳ ನಗದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದನ್ನು ಹೊರತುಪಡಿಸಿ ಹೂಡಿಕೆದಾರರಿಗೆ ಬೇರೆ ಆಯ್ಕೆಗಳು ತುಂಬಾ ಕಡಿಮೆ ಇವೆ. ಕೋವಿಡ್‌ ನಂತರದಿಂದಲೂ ಮಾರ್ಕೆಟ್‌ನಲ್ಲಿ ಉತ್ತಮ ಪರ್ಫಾರ್ಮೆನ್ಸ್‌ ಕಂಡುಬಂದಿರುವುದರಿಂದ ಹೂಡಿಕೆದಾರರಿಗೆ ಆತ್ಮವಿಶ್ವಾಸ ಮತ್ತು ಉತ್ಸಾಹವೂ ಹೆಚ್ಚಾಗಿದೆ. 2019 ರಿಂದ 2023 ರ ಅವಧಿಯಲ್ಲಿ 12 ಕೋಟಿ ಹೊಸ ಹೂಡಿಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎನ್‌ಎಸ್‌ಇ ಅಂಕಿ ಅಂಶಗಳು ಹೇಳುತ್ತವೆ. ಈ ಅವಧಿಯಲ್ಲಿ ನಿಫ್ಟಿ 104% ರಿಟರ್ನ್‌ ನೀಡಿದೆ. 54 ಲಕ್ಷಕ್ಕೂ ಹೆಚ್ಚು ಹೊಸ ಹೂಡಿಕೆದಾರರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ, 30 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ರಿಟೇಲ್ ಇನ್ವೆಸ್ಟರ್‌ಗಳು ಹೊಂದಿದ್ದು, ಮಾರ್ಕೆಟ್‌ನಲ್ಲಿನ ಲಿಸ್ಟೆಡ್ ಕಂಪನಿಗಳ ಒಟ್ಟು ಮೌಲ್ಯದಲ್ಲಿ 7.7% ಆಗಿದೆ.

ಈಗ ಇರುವ ಪ್ರಶ್ನೆಯೇನೆಂದರೆ, 2025 ರ ಔಟ್‌ಲುಕ್ ಹೇಗಿದೆ? 2024 ರಲ್ಲಿ ಹೇಗೆ ಪರ್ಫಾರ್ಮ್‌ ಮಾಡಿತ್ತೋ ಹಾಗೆಯೇ 2025 ರಲ್ಲೂ ಪರ್ಫಾರ್ಮ್‌ ಮಾಡಲಿದೆಯೇ? 2025 ರ ಫೈನಾನ್ಷಿಯಲ್‌ ಇಯರ್‌ನ ಔಟ್‌ಲುಕ್‌ ನೋಡುವುದಕ್ಕೂ ಮೊದಲು, ಪ್ರಸ್ತುತ ಫೈನಾನ್ಷಿಯಲ್ ಇಯರ್‌ನ ಅತಿದೊಡ್ಡ ಟ್ರಿಗರ್‌ಗಳು ಯಾವುದು ಎಂದು ತಿಳಿಯೋಣ. ಅಲ್ಪಾವಧಿಯಲ್ಲಿ, ಭಾರತದ ಮಾರ್ಕೆಟ್‌ಗೆ ಅತ್ಯಂತ ಮುಖ್ಯ ಟ್ರಿಗರ್‌ ಎಂದರೆ ಜೂನ್ 4 ಕ್ಕೆ ಪ್ರಕಟವಾಗಲಿರುವ ಜನರಲ್ ಎಲೆಕ್ಷನ್ಸ್‌ನ ರಿಸಲ್ಟ್‌. ಮುಂದಿನ ಅವಧಿಗೆ ಬಿಜೆಪಿಯೇ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ಮಾರ್ಕೆಟ್ ನಿರೀಕ್ಷಿಸುತ್ತಿದೆ. ಇದು ಎನ್‌ಡಿಎ ಸರ್ಕಾರ ಮತ್ತು ಜಿಡಿಪಿ ಗ್ರೋತ್‌ನ ಪಾಲಿಸಿ ಹೀಗೆಯೇ ಮುಂದುವರಿಯುತ್ತದೆ ಎಂದು ಕೂಡ ಮಾರ್ಕೆಟ್ ನಿರೀಕ್ಷೆ ಹೊಂದಿದೆ.

ಇದನ್ನು ಹೊರತುಪಡಿಸಿ, ಡೊಮೆಸ್ಟಿಕ್ ಮಾರ್ಕೆಟ್ ಜೊತೆಗೆ ಗ್ಲೋಬಲ್ ಮಾರ್ಕೆಟ್‌ಗಳ ಅತಿದೊಡ್ಡ ಟ್ರಿಗರ್‌ ಎಂದರೆ, ಫೆಡರಲ್‌ ರಿಸರ್ವ್ ಮತ್ತು ಇತರ ಸೆಂಟ್ರಲ್‌ ಬ್ಯಾಂಕ್‌ಗಳ ರೇಟ್ ಕಟ್‌ಗಳು ಇದರಿಂದಾಗಿ ಭಾರತದ ಬೆಳೆಯುತ್ತಿರುವ ದೇಶಗಳಲ್ಲಿ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜೊತೆಗೆ, ಹೂಡಿಕೆಯನ್ನೂ ಹೆಚ್ಚಳ ಮಾಡಿದೆ. ಆದರೆ, ಕಂಪನಿಗಳ ಕ್ವಾರ್ಟರ್ ರಿಸಲ್ಟ್‌ಗಳಲ್ಲಿ ಸುಧಾರಣೆ ಕೂಡಾ ಮುಖ್ಯವಾಗುತ್ತದೆ. ಯಾಕೆಂದರೆ, ಅಂತಿಮವಾಗಿ ಷೇರುಗಳ ಬೆಳವಣಿಗೆ ವೇಗ ಮತ್ತು ಮೌಲ್ಯಮಾಪನವು ಕಂಪನಿಗಳ ಕ್ವಾರ್ಟರ್ ರಿಸಲ್ಟ್‌ಗಳಲ್ಲಿ ಆಗುವ ಸುಧಾರಣೆಯನ್ನು ಅವಲಂಬಿಸಿರುತ್ತವೆ. ಈ ಎಲ್ಲವುಗಳಿಗೆ ಹೋಲಿಸಿದರೆ, ಇರುವ ಒಂದು ಬಹುಮುಖ್ಯ ಸವಾಲು ಎಂದರೆ ಅದು ರಾಜಕೀಯ ಅನಿಶ್ಚಿತತೆ. ಪ್ರಸ್ತುತ 2 ಪ್ರಮುಖ ಯುದ್ಧಗಳು ನಡೆಯುತ್ತಿವೆ. ರಷ್ಯಾ-ಉಕ್ರೇನ್‌ ಮತ್ತು ಇನ್ನೊಂದು ಹಮಾಸ್‌-ಇಸ್ರೇಲ್ ಯುದ್ಧ. ಈ ಯಾವುದಾದರೂ ಒಂದು ಯುದ್ದ ಇನ್ನಷ್ಟು ತೀವ್ರವಾದರೆ, ಆರ್ಥಿಕವಾಗಿಯೂ ಪರಿಣಾಮ ಬೀರಲಿದೆ ಹಾಗೂ ಹಲವು ದೇಶಗಳನ್ನು ಆರ್ಥಿಕವಾಗಿಯೂ ಹೈರಾಣಾಗಿಸಲಿವೆ.

ಹಾಗೆಂದ ಮಾತ್ರಕ್ಕೆ, ಬಹುತೇಕ ಬ್ರೋಕರ್‌ಗಳು ಭಾರತದ ಮಾರ್ಕೆಟ್‌ಗಳ ಬಗ್ಗೆ ಬುಲ್ಲಿಶ್ ಆಗಿದ್ದಾರೆ. 2024 ರ ಕೊನೆಯ ಹೊತ್ತಿಗೆ 23,000 ಮತ್ತು 30,000 ಮಧ್ಯೆ ನಿಫ್ಟಿ ಇರುತ್ತದೆ ಎಂದು ಟಾರ್ಗೆಟ್‌ ಮಾಡಿದ್ದಾರೆ. ಇದು ಪ್ರಸ್ತುತ 22,400 ರ ಲೆವೆಲ್‌ಗೆ ಹೋಲಿಸಿದರೆ 3 ರಿಂದ 33 ಪರ್ಸೆಂಟ್‌ ಹೆಚ್ಚಳವಾದಂತಾಗಿದೆ. ಹೀಗಾಗಿ, ಸಂಜಯ್‌ ರೀತಿಯಲ್ಲೇ 2025 ಕ್ಕೆ ಔಟ್‌ಲುಕ್ ಹೇಗಿರಬಹುದು, ಎಲ್ಲಿ ನೀವು ಇನ್ವೆಸ್ಟ್‌ ಮಾಡಬಹುದು ಎಂದು ನಿಮಗೂ ಅರ್ಥವಾಗಿರಬಹುದು. ಹೀಗಾಗಿ, ಇನ್ವೆಸ್ಟ್‌ಮೆಂಟ್ ಅಡ್ವೈಸರ್‌ಗಳ ಸಲಹೆ ಪಡೆದುಕೊಳ್ಳಿ, ಈ ಫೈನಾನ್ಷಿಯಲ್ ಇಯರ್‌ಗೆ ಮತ್ತು ಲಾಂಗ್‌ ಟರ್ಮ್‌ಗೆ ಸ್ಟ್ರಾಟಜಿ ಮಾಡಿಕೊಳ್ಳಿ. ಸ್ಟಾಕ್‌ನಲ್ಲಿ ನೇರವಾಗಿ ಇನ್ವೆಸ್ಟ್‌ ಮಾಡುವುದಕ್ಕೆ ನಿಮಗೆ ರಿಸ್ಕ್ ಇದೆ ಎನಿಸಿದರೆ, ಮ್ಯೂಚುವಲ್ ಫಂಡ್ ವಿಧಾನವನ್ನೂ ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ, ಪೋರ್ಟ್‌ಫೋಲಿಯೋ ಡೈವರ್ಸಿಫೈ ಮಾಡಲು, ರಿಸ್ಕ್ ಕಡಿಮೆ ಮಾಡಲು ಬೇರೆ ಬೇರೆ ಅಸೆಟ್ ಕ್ಲಾಸ್‌ನಲ್ಲೂ ಇನ್ವೆಸ್ಟ್‌ ಮಾಡಬಹುದು.

Published: April 26, 2024, 19:35 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ