` how will you benefit from recent changes in this icici prudential mutual fund scheme | ICICI PRU ಮ್ಯೂಚುವಲ್ ಫಂಡ್​ನಲ್ಲಿ ಮಹತ್ವದ ಬದಲಾವಣೆ! | Money9 Kannada

ICICI PRU ಮ್ಯೂಚುವಲ್ ಫಂಡ್​ನಲ್ಲಿ ಮಹತ್ವದ ಬದಲಾವಣೆ!

ICICI ಪ್ರುಡೆನ್ಶಿಯಲ್ ಕಮಾಡಿಟೀಸ್ ಫಂಡ್ ಒಂದು ಥೀಮ್ ಆಧರಿಸಿದ ಫಂಡ್ ಆಗಿದೆ. ಈ ಯೋಜನೆಯಲ್ಲಿ, ಮಾರ್ಕೆಟ್ ಪರ್ಫಾರ್ಮೆನ್ಸ್ ಅನ್ನು ಪರಿಗಣಿಸಿ, ನಿರ್ದಿಷ್ಟ ಥೀಮ್‌ನ ಆಧಾರದ ಮೇಲೆ ಫಂಡ್ ಮ್ಯಾನೇಜರ್ ಅಸೆಟ್ ಅಲೊಕೇಶನ್ ಅನ್ನು ನಿರ್ಧರಿಸುತ್ತಾರೆ.

ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್ ತನ್ನ ಒಂದು ಪ್ಲಾನ್‌ನ ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ICICI ಪ್ರುಡೆನ್ಶಿಯಲ್ ಕಮಾಡಿಟೀಸ್ ಫಂಡ್ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈಗ, ಈ ಫಂಡ್‌ ಮೂಲಕ ಇಂಧನ ವಲಯದ ಷೇರುಗಳಲ್ಲಿಯೂ ಹೂಡಿಕೆ ಮಾಡಲಾಗುತ್ತದೆ. ಇಲ್ಲಿಯವರೆಗೆ, ಕಾಗದ, ಸಿಮೆಂಟ್, ಲೋಹ, ರಾಸಾಯನಿಕ, ಉತ್ಪಾದನೆ ಮತ್ತು ರಸಗೊಬ್ಬರ ವಲಯಗಳಲ್ಲಿ ತೊಡಗಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಈಗ, ಆಯಿಲ್ ಮತ್ತು ಗ್ಯಾಸ್‌, ಪೆಟ್ರೋಲಿಯಂ ಉತ್ಪನ್ನಗಳು, ಪವರ್ ಮತ್ತು ಆಯಿಲ್ ಎಕ್ಸ್‌ಪ್ಲೊರೇಶನ್‌ನಲ್ಲಿ ತೊಡಗಿರುವ ಕಂಪನಿಗಳ ಷೇರುಗಳು, ಅಂದರೆ ತೈಲ ಉತ್ಪಾದಿಸುವ ಕಂಪನಿಗಳು ಸಹ ಈ ಪ್ಲಾನ್‌ನಲ್ಲಿ ಭಾಗವಾಗಿರುತ್ತವೆ.

ICICI ಪ್ರುಡೆನ್ಶಿಯಲ್ ಕಮಾಡಿಟೀಸ್ ಫಂಡ್ ಪ್ಲಾನ್ ಪ್ರಸ್ತುತ 80 ರಿಂದ 100 ಪರ್ಸೆಂಟ್ ಈಕ್ವಿಟಿ ಮತ್ತು ಈಕ್ವಿಟಿಗಳಿಗೆ ಸಂಬಂಧಿಸಿದ ಪ್ಲಾನ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಉಳಿದ 20 ಪರ್ಸೆಂಟ್‌ ಅನ್ನು ಡೆಟ್, REIT ಗಳು, ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳು ಮತ್ತು ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈಗ, ಈ ಪ್ಲಾನ್ ಬೆಳ್ಳಿ ETF ನಲ್ಲಿಯೂ ಹೂಡಿಕೆ ಮಾಡುತ್ತದೆ. ಹೀಗಾಗಿ, ಕಮಾಡಿಟೀಸ್ ಫಂಡ್ ಸ್ಕೀಮ್‌ನ ಮೂಲ ಹೂಡಿಕೆಯಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ – ಒಂದು ಎನರ್ಜಿ ಸೆಕ್ಟರ್ ಸ್ಟಾಕ್‌ಗಳನ್ನು ಈಕ್ವಿಟಿ ಭಾಗದಲ್ಲಿ ಸೇರಿಸುವುದು ಮತ್ತು ಎರಡನೆಯದು, ಇದು ಸಿಲ್ವರ್ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು.

ICICI ಪ್ರುಡೆನ್ಶಿಯಲ್ ಕಮಾಡಿಟೀಸ್ ಫಂಡ್ ಒಂದು ಥೀಮ್ ಆಧರಿಸಿದ ಫಂಡ್ ಆಗಿದೆ. ಈ ಯೋಜನೆಯಲ್ಲಿ, ಮಾರ್ಕೆಟ್ ಪರ್ಫಾರ್ಮೆನ್ಸ್ ಅನ್ನು ಪರಿಗಣಿಸಿ, ನಿರ್ದಿಷ್ಟ ಥೀಮ್‌ನ ಆಧಾರದ ಮೇಲೆ ಫಂಡ್ ಮ್ಯಾನೇಜರ್ ಅಸೆಟ್ ಅಲೊಕೇಶನ್ ಅನ್ನು ನಿರ್ಧರಿಸುತ್ತಾರೆ. ಪ್ರಸ್ತುತ, ದೇಶದ ಇಂಧನ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತದೆ ಎಂಬ ಉತ್ತಮ ನಿರೀಕ್ಷೆಗಳಿವೆ. ಈ ಬೆಳವಣಿಗೆಯ ಅವಕಾಶವನ್ನು ಬಳಸಿಕೊಳ್ಳಲು, ಮ್ಯೂಚುವಲ್ ಫಂಡ್ ಕಂಪನಿಯು ಎನರ್ಜಿ ಷೇರುಗಳಲ್ಲಿ ಹೂಡಿಕೆ ಮಾಡಲು ನಿರ್ಧಾರ ಮಾಡಿದೆ. ಅದರೊಂದಿಗೆ ಸಿಲ್ವರ್ ಇಟಿಎಫ್ ಅನ್ನು ಸೇರಿಸೋದಕ್ಕೆ ಮುಖ್ಯ ಕಾರಣವೆಂದರೆ ಬೆಳ್ಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಹಣದುಬ್ಬರದಿಂದ ಇನ್ವೆಸ್ಟ್‌ಮೆಂಟ್ ರಕ್ಷಿಸುವ ನಿಟ್ಟಿನಲ್ಲಿ ಬೆಳ್ಳಿ ಕೂಡ ಒಳ್ಳೆಯ ಆಯ್ಕೆ.

ಹೀಗಾಗಿ, ಸಿಲ್ವರ್ ಇಟಿಎಫ್ ಅನ್ನು ಸೇರಿಸುವುದರಿಂದ ಪೋರ್ಟ್‌ಫೋಲಿ ಡೈವರ್ಸಿಫೈ ಆಗುವುದಕ್ಕೆ ಸಹಾಯವಾಗುತ್ತದೆ. ಡೈವರ್ಸಿಫಿಕೇಶನ್‌ ಎಂದರೆ ನಿಮ್ಮ ಹೂಡಿಕೆಯನ್ನು ವಿವಿಧ ಅಸೆಟ್‌ಗಳಲ್ಲಿ ಹೂಡಿಕೆ ಮಾಡಲಾಗಿರುತ್ತದೆ. ಈಗ ಉದ್ಘವಿಸುವ ಪ್ರಶ್ನೆಯೇನೆಂದರೆ, ಐಸಿಐಸಿಐ ಪ್ರು ಈ ಬದಲಾವಣೆ ಮಾಡಿದ್ದು ಏಕೆ? ನಿಫ್ಟಿ ಕಮೊಡಿಟೀಸ್ TRI ಅನ್ನೇ ICICI ಪ್ರು ಕಮೊಡಿಟೀಸ್ ಫಂಡ್ ಟ್ರ್ಯಾಕ್ ಮಾಡುತ್ತದೆ. ಈ ಸೂಚ್ಯಂಕವು ಆಯಿಲ್, ಪೆಟ್ರೋಲಿಯಂ ಉತ್ಪನ್ನಗಳು, ಪವರ್ ಸಿಮೆಂಟ್, ರಾಸಾಯನಿಕಗಳು ಮತ್ತು ಮೆಟಲ್‌ನಂತಹ ಸೆಕ್ಟರ್‌ಗಳನ್ನು ಒಳಗೊಂಡಿರುತ್ತವೆ. ಆದರೆ, ಈ ವಲಯದ ಷೇರುಗಳು ಸ್ಕೀಮ್‌ನಲ್ಲಿ ಇರಲಿಲ್ಲ. ಇದರಿಂದಾಗಿ, ICICI ಪ್ರು ಸ್ಕೀಮ್‌ನಲ್ಲಿ ಸೇರಿಸಲಾದ ಕಂಪನಿಗಳು ನಿಫ್ಟಿ ಇಂಡೆಕ್ಸ್‌ಗೆ ಹೊಂದಿಕೆಯಾಗಲಿಲ್ಲ. ಬೆಂಚ್‌ಮಾರ್ಕ್‌ಗೆ ಹೊಂದಿಕೆ ಮಾಡುವುದಕ್ಕೆ, ಕಂಪನಿ ತನ್ನ ಸ್ಕೀಮ್‌ನಲ್ಲಿ ಬದಲಾವಣೆ ಮಾಡಿ, ಎನರ್ಜಿಗೆ ಸಂಬಂಧಿಸಿದ ಕಂಪನಿಗಳನ್ನು ಸೇರಿಸಿದೆ.

SEBI ನೋಂದಾಯಿತ ಹೂಡಿಕೆ ಸಲಹೆಗಾರ ಜಿತೇಂದ್ರ ಸೋಲಂಕಿ ಹೇಳುತ್ತಾರೆ… ICICI ಪ್ರುಡೆನ್ಶಿಯಲ್ ಕಮಾಡಿಟೀಸ್ ಫಂಡ್ ದೇಶದ ಇಂಧನ ಕ್ಷೇತ್ರದ ಬೆಳವಣಿಗೆಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುವ ಥೀಮ್ ಆಧಾರಿತ ಫಂಡ್ ಆಗಿದೆ… ದೇಶದ ಇಂಧನ ವಲಯ ಮುಂಬರುವ ವರ್ಷಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಲಿದೆ ಎಂದು ಫಂಡ್ ಹೌಸ್ ಭಾವಿಸಿದೆ. ಆದರೆ, ಅದರಲ್ಲಿ ಹೂಡಿಕೆ ಮಾಡುವ ಮೊದಲು, ಥೀಮ್ ಆಧರಿತ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಹೂಡಿಕೆದಾರರು ಅರ್ಥಮಾಡಿಕೊಳ್ಳಬೇಕು… ಥೀಮ್ ಆಧಾರಿತ ಫಂಡ್‌ಗಳು ಉತ್ತಮ ಆದಾಯದ ಸಾಧ್ಯತೆಯನ್ನು ನೀಡುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಸೋಲಂಕಿ ಹೇಳುತ್ತಾರೆ… ಆದರೆ ಇವುಗಳಲ್ಲಿ ಹೆಚ್ಚು ರಿಸ್ಕ್ ಇರುತ್ತದೆ. ಹೀಗಾಗಿ, ಅಂತಹ ಫಂಡ್‌ಗಳು ನಿಮ್ಮ ಇನ್ವೆಸ್ಟ್‌ಮೆಂಟ್ ಪೋರ್ಟ್‌ಪೋಲಿಯೋದ ಶೇಕಡಾ 10 ಕ್ಕಿಂತ ಹೆಚ್ಚು ಇರಬಾರದು.

ತೆರಿಗೆಗಳ ವಿಷಯದ ಬಗ್ಗೆ ಮಾತನಾಡುವುದಾದರೆ, ಥೆಮ್ಯಾಟಿಕ್‌ ಫಂಡ್‌ಗಳು ಮ್ಯೂಚುವಲ್ ಫಂಡ್‌ಗಳ ಈಕ್ವಿಟಿ ವರ್ಗದ ಅಡಿಯಲ್ಲಿ ಬರುತ್ತವೆ. ಆದ್ದರಿಂದ, ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಮಾಡುವ ಹಾಗೆ ರಿಟರ್ನ್ಸ್‌ಗೂ ತೆರಿಗೆ ವಿಧಿಸಲಾಗುತ್ತದೆ.. ನೀವು ಒಂದು ವರ್ಷದೊಳಗೆ ಫಂಡ್‌ನ ಯುನಿಟ್‌ಗಳನ್ನು ರಿಡೀಮ್ ಮಾಡಿದರೆ, ನಿಮಗೆ 15% ತೆರಿಗೆ ವಿಧಿಸಲಾಗುತ್ತದೆ. ಒಂದು ವರ್ಷದ ನಂತರ, ನೀವು 10% ರಷ್ಟು ಲಾಂಗ್‌ಟರ್ಮ್‌ ಕ್ಯಾಪಿಟಲ್ ಗೇನ್ಸ್‌ ತೆರಿಗೆ ಕಟ್ಟಬೇಕಾಗುತ್ತದೆ. ಇದರಲ್ಲಿ ಒಂದು ಅನುಕೂಲವೆಂದರೆ, ಆರ್ಥಿಕ ವರ್ಷದಲ್ಲಿ ಒಂದು ಲಕ್ಷ ರೂಪಾಯಿಗಳವರೆಗಿನ ಲಾಂಗ್‌ ಟರ್ಮ್‌ ಕ್ಯಾಪಿಟಲ್ ಗೇನ್ಸ್‌ಗೆ ತೆರಿಗೆ ಇರೋದಿಲ್ಲ. ಈ ಹಣಕ್ಕೆ ನೀವು ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ.

ಇನ್ನೊಂದು ಪ್ರಶ್ನೆಯೆಂದರೆ, ಈಗಾಗಲೇ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಯಾವ ಆಯ್ಕೆಗಳು ಲಭ್ಯವಿವೆ? ICICI ಪ್ರು ಸ್ಕೀಮ್‌ನಲ್ಲಿ ಮಾಡಿದ ಬದಲಾವಣೆಗಳ ಕುರಿತು ಹೂಡಿಕೆದಾರರಿಗೆ ಮಾಹಿತಿ ನೀಡಿದೆ. ಮಾರ್ಚ್ 22, 2024 ರವರೆಗೆ ಸ್ಕೀಮ್‌ನಲ್ಲಿ ನೋಂದಾಯಿಸಿರುವ ಹೂಡಿಕೆದಾರರಿಗೆ ಹೊಸ ಥೀಮ್ ಇಷ್ಟ ಇಲ್ಲ ಎಂದಾದರೆ, ಎಕ್ಸಿಟ್ ಆಗಬಹುದು. ಅಂದರೆ ಅವರು ತಮ್ಮ ಯುನಿಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಯಾವುದೇ ಎಕ್ಸಿಟ್ ಲೋಡ್ ವಿಧಿಸಲಾಗುವುದಿಲ್ಲ.

ಇದರ ಜೊತೆಗೆ, ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಇದೇ ಫಂಡ್ ಹೌಸ್‌ನ ಯಾವುದೇ ಇತರ ಸ್ಕೀಮ್‌ಗೆ ಬದಲಾಯಿಸಬಹುದು. ಕಂಪನಿ ಇದಕ್ಕೆ ಏಪ್ರಿಲ್ 5 ರಿಂದ ಮೇ 6, 2024 ರವರೆಗೆ ಸಮಯವನ್ನು ಒದಗಿಸಿದೆ…ಥೀಮ್ ಆಧರಿತ ಈಕ್ವಿಟಿ ಫಂಡ್‌ಗಳಲ್ಲಿ ತುಂಬಾ ರಿಸ್ಕ್‌ ಇರುತ್ತದೆ. ಆದ್ದರಿಂದ, ಈ ಸೆಕ್ಟರ್ ಅನ್ನು ಅರ್ಥಮಾಡಿಕೊಂಡ ಅನುಭವಿ ಹೂಡಿಕೆದಾರರು ಮಾತ್ರ ಇಂತಹ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು.. ಈ ಫಂಡ್‌ಗಳು ಲಾಂಗ್‌ ಟರ್ಮ್ ಇನ್ವೆಸ್ಟರ್‌ಗಳಿಗೆ ಪ್ರಯೋಜನಕಾರಿ. ನೀವು ಥೀಮ್ ಆಧರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಹೂಡಿಕೆಯ ಅವಧಿ ಕನಿಷ್ಠ ಮೂರು ವರ್ಷಗಳಾಗಿರಬೇಕು.

Published: May 6, 2024, 19:43 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ