290 ಕೋಟಿ GST ನೋಟಿಸ್ಗೆ LIC ಕೊಟ್ಟ ಉತ್ತರವೇನು? php // echo get_authors();
?>
ಬಿಹಾರ ಸರಕು ಮತ್ತು ಸೇವಾ ತೆರಿಗೆ (BGST) ಮತ್ತು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಕಾಯಿದೆ 2017 ರ ಸೆಕ್ಷನ್-73(9) ರ ಅಡಿಯಲ್ಲಿ ಬಿಹಾರ ಹೆಚ್ಚುವರಿ ಕಮಿಷನರ್ ರಾಜ್ಯ ತೆರಿಗೆ (ಮೇಲ್ಮನವಿ), ಕೇಂದ್ರ LICಗೆ ನೋಟಿಸ್ ನೀಡಿತ್ತು.
ಬಿಹಾರ ಸರ್ಕಾರ ನೀಡಿರುವ 290 ಕೋಟಿ ರೂ. ಮೊತ್ತದ ಜಿಎಸ್ ಟಿ(GST) ನೋಟಿಸ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ
ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಹೇಳಿದೆ. ಸೆಪ್ಟೆಂಬರ್ 22 ರಂದು ಸಲ್ಲಿಸಿದ ಫೈಲಿಂಗ್ನಲ್ಲಿ, GST ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಪೀಲ್ ಹೋಗುವುದಾಗಿ ಎಲ್ಐಸಿ ತಿಳಿಸಿದೆ.ಬಿಹಾರ ಸರಕು ಮತ್ತು ಸೇವಾ ತೆರಿಗೆ (BGST) ಮತ್ತು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಕಾಯಿದೆ 2017 ರ ಸೆಕ್ಷನ್-73(9) ರ ಅಡಿಯಲ್ಲಿ ಬಿಹಾರ ಹೆಚ್ಚುವರಿ ಕಮಿಷನರ್ ರಾಜ್ಯ ತೆರಿಗೆ (ಮೇಲ್ಮನವಿ), ಕೇಂದ್ರ LICಗೆ ನೋಟಿಸ್ ನೀಡಿತ್ತು.
ನಿಗದಿತ ಸಮಯದೊಳಗೆ ಈ ಆದೇಶದ ವಿರುದ್ಧ ಜಿಎಸ್ಟಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎಲ್ ಐಸಿ ಹೇಳಿದೆ. ಪಾಲಿಸಿದಾರರಿಂದ ನಿಗಮವು ಪಡೆದ ಪ್ರೀಮಿಯಂನಲ್ಲಿ ಪಡೆದ ಇನ್ಪುಟ್ ತೆರಿಗೆ ಕ್ರೆಡಿಟ್ ಎಲ್ಐಸಿ ಹಿಂತಿರುಗಿಸಿಲ್ಲ ಇದೇ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಈ ಹಿಂದೆ ಟಾಟಾಗೂ ಸಹ ಜಿಎಸ್ಟಿ ನೋಟಿಸ್ ನೀಡಿತ್ತು. ಟಾಟಾ ಡೊಕೊಮೋಗೆ ಸಂಬಂಧಿಸಿದಂತೆ 1500 ಕೋಟಿ ರೂ. ದಂಡ ವಿಧಿಸಿತ್ತು. ಟಾಟಾ ಇದನ್ನು ಪ್ರಶ್ನೆ ಮಾಡಿ ಮುಂಬೈ ಹೈಕೋರ್ಟ್ ಮೊರೆ ಹೋಗಿತ್ತು. ಸರಕು ಮತ್ತು ಸೇವಾ ತೆರಿಗೆಯಲ್ಲಿನ ಕಳ್ಳತನ ತಡೆಯಲು ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮ ತೆಗೆದುಕೊಂಡಿದೆ. ಜಿಎಸ್ಟಿ ಬಿಲ್ ಅಪ್ ಲೋಡ್ ಮಾಡಿ ಲಾಟರಿ ಮೂಲಕ ಹಣ ಗೆಲ್ಲುವ ಅವಕಾಶವನ್ನು ಮಾಡಿ ಕೊಟ್ಟಿದೆ
Published: September 23, 2023, 12:31 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ