ಹಾಗಾಗಿ ಅ.7ರವರೆಗೆ ಬ್ಯಾಂಕ್ಗಳಿಗೆ ಹೋಗಿ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 7ರ ನಂತರವೂ ಗ್ರಾಹಕರು ಈ ನೋಟುಗಳನ್ನು ಆರ್ಬಿಐ ನಿಗದಿಪಡಿಸಿರುವ 19 ಕಚೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಬಳಿ ಇರುವ 2000 ರೂ. ನೋಟನ್ನು ಇನ್ನು ಬದಲಾಯಿಸಿಕೊಂಡಿಲ್ವಾ? ಇದೀಗ ಆರ್ ಬಿಐ ಇನ್ನೊಂದು ಅವಕಾಶ ಕೊಟ್ಟಿದೆ. ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಅಕ್ಟೋಬರ್ 7ವರೆಗೆ ವಿಸ್ತರಿಸಲಾಗಿದೆ.
ಹಾಗಾಗಿ ಅ.7ರವರೆಗೆ ಬ್ಯಾಂಕ್ಗಳಿಗೆ ಹೋಗಿ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 7ರ ನಂತರವೂ ಗ್ರಾಹಕರು ಈ ನೋಟುಗಳನ್ನು ಆರ್ಬಿಐ ನಿಗದಿಪಡಿಸಿರುವ 19 ಕಚೇರಿಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ 96%ದಷ್ಟು 2000 ರೂ. ನೋಟುಗಳು ವಾಪಸ್
ಆರ್ಬಿಐ ಮೇ 19ರಂದು 2000 ರೂ. ಮುಖ ಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ತಕ್ಷಣಕ್ಕೆ ಜಾರಿಗೆ ಬರುವಂತೆ 2000 ರೂ. ಚಲಾವಣೆ ಮಾಡದಂತೆ ಎಲ್ಲ ಬ್ಯಾಂಕ್ಗಳಿಗೆ ಹಾಗೂ ಸಾರ್ವಜನಿಕರಿಗೆ ಆದೇಶವನ್ನು ನೀಡಿತ್ತು. ಕ್ಲೀನ್ ನೋಟ್ ಪಾಲಿಸಿಯ ಮೂಲಕ 2000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ಅನುಗುಣವಾಗಿ 2000 ರೂ. ನೋಟುಗಳನ್ನು ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆ.30ರವರೆಗೆ ಅವಕಾಶವನ್ನು ನೀಡಿತ್ತು.
ಇತ್ತೀಚಿಗೆ ಆರ್ಬಿಐ ಬಿಡುಗಡೆ ಮಾಡಿದ ವರದಿ ಪ್ರಕಾರ ಮೇ 19ರ ಆದೇಶದಿಂದ ಇಲ್ಲಿಯವರೆಗೆ 2000 ರೂ. ಮುಖಬೆಲೆಯ ನೋಟುಗಳು 96 ಪ್ರತಿಶತದಷ್ಟು ಬ್ಯಾಂಕ್ಗಳಿಗೆ ಹಿಂತಿರುಗಿಸಲಾಗಿದೆ. ಇನ್ನು ಆರ್ಬಿಐ, ಬ್ಯಾಂಕ್ಗಳಿಂದ ಪಡೆದ ಅಂಕಿಅಂಶಗಳ ಪ್ರಕಾರ ಮೇ 19ರ ಮೊದಲು ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆ ನೋಟುಗಳು 3.56 ಲಕ್ಷ ಕೋಟಿ. ಆರ್ಬಿಐ ಮೇ 19ರಂದು 2000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶ ನೀಡಿದ ನಂತರ ಬ್ಯಾಂಕ್ಗೆ ಬಂದ ಹಣ 3.42 ಲಕ್ಷ ಕೋಟಿ. 0.14 ಲಕ್ಷ ಕೋಟಿ ಚಲಾವಣೆಯಲ್ಲಿ ಉಳಿದಿದೆ ಎನ್ನುವ ಲೆಕ್ಕಾಚಾರ ಇದೆ.
Published: September 30, 2023, 14:31 IST
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ