ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಭವಿಷ್ಯ ನಿಧಿ ಹೂಡಿಕೆ ಮೇಲೆ ಅನುಜ್ ಅವರಿಗೆ ವಿಶೇಷ ನಂಬಿಕೆ. ನಿರ್ದಿಷ್ಟ ಲಾಭ ಇಲ್ಲಿ ಸಿಗುತ್ತದೆ ಜತೆಗೆ ಟ್ಯಾಕ್ಸ್ ಉಳಿತಾಯಕ್ಕೂ ಕಾರಣವಾಗುತ್ತದೆ ಅನ್ನೋದು ಅವರ ನಂಬಿಕೆ. ಇದಕ್ಕಾಗಿ ಅವರು ಪ್ರತಿ ವರ್ಷ ಫೆಬ್ರವರಿ ಅಂತ್ಯಕ್ಕೂ ಮೊದಲು ₹1.5 ಲಕ್ಷವನ್ನು ಪಿಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಯಾವುದೇ ದಿನಾಂಕವನ್ನು ಪರಿಗಣಿಸದೆ ಹೂಡಿಕೆ ಮಾಡುವ ಮೂಲಕ ಅನುಜ್ ದೊಡ್ಡ ತಪ್ಪು ಮಾಡುತ್ತ ಬಂದಿದ್ದಾರೆ ಎಂದೇ ಹೇಳಬಹುದು. ಇದೇ ಕಾರಣಕ್ಕೆ ತಮ್ಮ ಹೂಡಿಕೆಯ ಮೇಲೆ ಕಡಿಮೆ ಬಡ್ಡಿ ಪಡೆಯುತ್ತಿದ್ದಾರೆ. PPF ನಲ್ಲಿ ಹೂಡಿಕೆ ಮಾಡುವವರಿಗೆ ಪ್ರತಿ ತಿಂಗಳ 5 ನೇ ತಾರೀಖು ಬಹಳ ಮುಖ್ಯವಾಗಿದೆ. ಅಂದರೆ 5 ನೇ ತಾರೀಕು ಮೀರಿದ ಮೇಲೆ ಹಣ ಡಿಪಾಸಿಟ್ ಮಾಡಿದರೆ ಬಡ್ಡಿ ಕಡಿಮೆ ಬರೋದ್ರಿಂದ ರಿಟರ್ನ್ಸ್ ಕಡಿಮೆಯಾಗುತ್ತದೆ.
ಖಚಿತವಾದ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ, PPF ಒಂದು ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಯಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ನೀವು ವಾರ್ಷಿಕವಾಗಿ ₹1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ನೀವು ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. PPF 15 ವರ್ಷಗಳ ಯೋಜನೆಯಾಗಿದೆ. ಮುಕ್ತಾಯದ ಸಮಯದಲ್ಲಿ ಸ್ವೀಕರಿಸಿದ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಸರ್ಕಾರವು ಅನೇಕ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ, ಆದರೆ 2020ರ ಏಪ್ರಿಲ್ನಿಂದ PPF ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರಸ್ತುತ, PPFಗೆ 7.1% ಬಡ್ಡಿ ದರ ಇದೆ.
ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಪಿಪಿಎಫ್ ಖಾತೆಯ ಬಡ್ಡಿ ನಿಯಮಗಳು ಯಾವವು? ಅನುಜ್ ಅಂಥವರು ನಷ್ಟ ಅನುಭವಿಸುವುದು ಯಾಕೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. PPF ಖಾತೆಯಲ್ಲಿ ಡಿಪಾಸಿಟ್ ಮಾಡಿದ ಮೊತ್ತಕ್ಕೆ ಮಾಸಿಕ ಅಂದರೆ ತಿಂಗಳ ಲೆಕ್ಕಾಚಾರದಲ್ಲಿ ಬಡ್ಡಿ ಹಾಕಲಾಗುತ್ತದೆ. ಒಟ್ಟು ಬಡ್ಡಿಯನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಜಮಾ ಮಾಡಲಾಗುತ್ತದೆ. ಹಿಂದಿನ ತಿಂಗಳ ಕೊನೆ ಮತ್ತು ಪ್ರಸಕ್ತ ತಿಂಗಳ 6ನೇ ತಾರೀಕಿನ ನಡುವೆ ಡಿಪಾಸಿಟ್ ಆದ ಕನಿಷ್ಠ ಮೊತ್ತಕ್ಕೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಅಂದರೆ ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ಡಿಪಾಸಿಟ್ ಮಾಡುವ ಹಣಕ್ಕೂ ಬಡ್ಡಿ ಸಿಗುತ್ತದೆ.
ಆದರೆ ಅನುಜ್ ತಿಂಗಳ 5ನೇ ತಾರೀಕಿನ ನಂತರ ಪಿಪಿಎಫ್ ಖಾತೆಯಲ್ಲಿ ಹಣ ಡಿಪಾಸೊಟ್ ಮಾಡುತ್ತಾರೆ. ಹಾಗಾಗಿ ಅವರಿಗೆ ಆ ತಿಂಗಳ ಬಡ್ಡಿ ಸಿಗೋದಿಲ್ಲ. ಉದಾಹರಣೆಗೆ, ಅನುಜ್ ಫೆಬ್ರವರಿ 1 ರಂದು PPF ಖಾತೆಯಲ್ಲಿ ₹20,000 ಠೇವಣಿ ಮಾಡಿದರೆ ಮತ್ತು ನಂತರ 8 ರಂದು ಮತ್ತೊಂದು ₹10,000 ಠೇವಣಿ ಮಾಡಿದರೆ, ಒಟ್ಟು ಠೇವಣಿ ₹30,000 ಆಗಿದ್ದರೂ, ಅವರು ಫೆಬ್ರವರಿ ತಿಂಗಳಿಗೆ ಸಂಬಂಧಿಸಿ ಮೊದಲು ಠೇವಣಿ ಮಾಡಿದ ₹20,000ಕ್ಕೆ ಮಾತ್ರ ಬಡ್ಡಿ ಗಳಿಸುತ್ತಾರೆ. ಆದರೆ, ಈ ಮೊತ್ತವನ್ನು ಫೆಬ್ರವರಿ 1 ಮತ್ತು 5 ರ ನಡುವೆ ಠೇವಣಿ ಮಾಡಿದ್ದರೆ, ಸಂಪೂರ್ಣ ಡಿಪಾಸಿಟ್ ಮೇಲೆ ಬಡ್ಡಿ ಪಡೆಯಲಾಗುತ್ತಿತ್ತು. ಹಾಗಾಗಿ ತಿಂಗಳ 5 ನೇ ತಾರೀಖಿನೊಳಗೆ ಹಣವನ್ನು ಠೇವಣಿ ಮಾಡುವುದು ಮುಖ್ಯಗುತ್ತದೆ.
ಹಾಗಿದ್ದರೆ ಅನುಜ್ ಎಷ್ಟು ಹಣ ನಷ್ಟಮಾಡಿಕೊಳ್ಳುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ಪ್ರಸ್ತುತ PPFಗೆ ಶೇ. 7.1 ರಷ್ಟು ಬಡ್ಡಿ ದರವಿದೆ. ಇದರ ಪ್ರಕಾರ ಒಂದು ವರ್ಷದಲ್ಲಿ ₹1.5 ಲಕ್ಷ ಹೂಡಿಕೆಯ ಮೇಲೆ ಒಟ್ಟು ₹10,650 ಬಡ್ಡಿ ಸಿಗುತ್ತದೆ. ತಿಂಗಳ 5 ನೇ ತಾರೀಕಿನ ನಂತರ ಹಣ ಠೇವಣಿ ಮಾಡಿದರೆ, 11 ತಿಂಗಳವರೆಗೆ ಬಡ್ಡಿ ಮೊತ್ತವು 9762 ರೂ. ಆಗುತ್ತದೆ. ಹೀಗಾಗಿ ಸ್ವಲ್ಪ ವಿಳಂಬವಾಗಿ ಹಣ ಡಿಪಾಸಿಟ್ ಮಾಡಿದ ಕಾರಣ 888 ರೂ. ನಷ್ಟವಾಗುತ್ತದೆ. ಈ ಮೊತ್ತವು ಈಗ ಚಿಕ್ಕದಾಗಿ ಕಾಣಿಸಬಹುದು, ಆದರೆ PPF 15 ವರ್ಷಗಳ ದೀರ್ಘಾವಧಿಯ ಯೋಜನೆಯಾಗಿದೆ. ಕಾಂಪವಂಡಿಂಗ್ ಬಡ್ಡಿ ನಿಮ್ಮ ರಿಟರ್ನ್ಸ್ ಗಳಲ್ಲಿ ಅದ್ಭುತ ಲಾಭ ತಂದುಕೊಡುತ್ತದೆ. PPF bಡ್ಡಿಯ ಮೇಲೆ ಸಹ ಮತ್ತೆ ಬಡ್ಡಿ ಸಿಗುತ್ತದೆ. ಒಂದು ಸಣ್ಣ ನಿರ್ಲಕ್ಷ್ಯ ಮಾಡಿಕೊಂಡರೆ ಅನುಜ್ ಅವರಂತಹ ಜನರು ದೀರ್ಘಾವಧಿಯಲ್ಲಿದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.
ನೀವು PPF ನಲ್ಲಿ ಒಂದು ದೊಡ್ಡ ಮೊತ್ತದ ಹೂಡಿಕೆ ಅಥವಾ ಮಾಸಿಕ ಹೂಡಿಕೆ ಮಾಡುತ್ತಾ ಇದ್ದೀರಾ? ಅನುಜ್ ಅಂತವರು ಮಾಡುತ್ತಿರುವ ತಪ್ಪು ಮಾಡಲು ಹೋಗಬೇಡಿ. ತಿಂಗಳ 5 ನೇ ತಾರೀಖಿನೊಳಗೆ ಹೂಡಿಕೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿ. ಕಂತುಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಪ್ರತಿ ಕಂತಿಗೆ ತಿಂಗಳ 5 ನೇ ತಾರೀಖಿನ ಮೊದಲು ಹಣವನ್ನು ಖಾತೆಗೆ ಜಮಾ ಮಾಡಿ. ಈ ರೀತಿಯಾಗಿ, ನೀವು PPF ನಲ್ಲಿ ಹೂಡಿಕೆ ಮಾಡುವುದರಿಂದ ಸಂಪೂರ್ಣ ಲಾಭ ನಿಮ್ಮದಾಗುತ್ತದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ