` good credit score helps to get you with low interest rate | ಗುಡ್ ಕ್ರೆಡಿಟ್ ಸ್ಕೋರ್ ಇದ್ರೆ ಬ್ಯಾಂಕ್ ಬಳಿಯೇ ಬೇಡಿಕೆ ಇಡ್ಬಹುದು! | Money9 Kannada

ಗುಡ್ ಕ್ರೆಡಿಟ್ ಸ್ಕೋರ್ ಇದ್ರೆ ಬ್ಯಾಂಕ್ ಬಳಿಯೇ ಬೇಡಿಕೆ ಇಡ್ಬಹುದು!

ಕ್ರೆಡಿಟ್ ಸ್ಕೋರ್ 650 ಕ್ಕಿಂತ ಕಡಿಮೆ ಇದ್ದರೆ ವೈಯಕ್ತಿಕ ಸಾಲದ ಬಡ್ಡಿ ದರ ಶೇಕಡ 16.25 ರಷ್ಟಿರುತ್ತದೆ. ಅಂದರೆ ಬಡ್ಡಿ ದರದಲ್ಲಿ ಶೇಕಡ 2.5 ರಷ್ಟು ವ್ಯತ್ಯಾಸ ಇರುತ್ತದೆ.

ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ ಗಳು ಮೊದಲು ಕೇಳುವುದು ನಿಮ್ಮ ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಅಂತ. ಕ್ರೆಡಿಟ್‌ ಸ್ಕೋರ್‌ ಎನ್ನುವುದು ನೀವು ಸಾಲ ತೆಗೆದುಕೊಳ್ಳಲು ಎಷ್ಟು ಅರ್ಹರು ಅಥವಾ ನೀವು ಸಾಲ ಮರುಪಾವತಿ ಮಾಡುವುದಕ್ಕೆ ಎಷ್ಟು ಸಮರ್ಥರು ಎನ್ನುವುದನ್ನು ತೋರಿಸುತ್ತದೆ. ಇದು ನಿಮಗೆ ಸಾಲ ನೀಡಲು ಪ್ರಮುಖ ಅಂಶವಾಗುತ್ತದೆ. ಕ್ರೆಡಿಟ್‌ ಸ್ಕೋರ್‌ ಎನ್ನುವುದು ಮೂರು ಅಂಕಿಗಳ ಸಂಕ್ಯೆ. ಇದನ್ನು ಬೇರೆ ಬೇರೆ ಬ್ಯೂರೋಗಳು ಅಥವಾ ಕ್ರೆಡಿಟ್‌ ಮಾಹಿತಿ ಕಂಪೆನಿಗಳು ಬೇರೆ ಬೇರೆ ರೀತಿಯಾಗಿ ಕೊಡುತ್ತವೆ. ಈ ಪೈಕಿ, ಸಿಬಿಲ್‌ ಸ್ಕೋರ್‌ ಅನ್ನೋದು ಹೆಚ್ಚು ಜನಪ್ರಿಯ. ಕ್ರೆಡಿಟ್‌ ಸ್ಕೋರ್‌ 700 ರಿಂದ 750 ರಷ್ಟಿದ್ದರೆ ಅದು ಉತ್ತಮ ಕ್ರೆಡಿಟ್‌ ಸ್ಕೋರ್‌ ಎಂದು ಪರಿಗಣಿಸಲ್ಪಡುತ್ತದೆ. ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದರೆ, ಆಗ ನಿಮಗೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ, ಅದೂ ಕಡಿಮೆ ಬಡ್ಡಿ ದರದಲ್ಲಿ. ಸಾಲದ ಬಡ್ಡಿ ದರದ ಮೇಲೆ ಕ್ರೆಡಿಟ್‌ ಸ್ಕೋರ್‌ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ಬ್ಯಾಂಕ್‌ ವೆಬ್‌ ಸೈಟ್‌ ನಲ್ಲಿ ಕೊಟ್ಟಿರುವ ಮಾಹಿತಿ ತಿಳಿದುಕೊಳ್ಳಬೇಕು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನ ಜಾಲತಾಣದಲ್ಲಿರೋ ಮಾಹಿತಿ ಪ್ರಕಾರ, ಆಯ್ದ ಕಾರ್ಪೊರೇಟ್‌ ಮತ್ತು ಸರ್ಕಾರಿ ನೌಕರರಿಗೆ ಶೇಕಡ 12.75 ರಿಂದ ಶೇಕಡ 17.25 ರಷ್ಟು ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಕೊಡಲಾಗುತ್ತದೆ. ಕ್ರೆಡಿಟ್‌ ಸ್ಕೋರ್‌ 800 ಅಥವಾ ಹೆಚ್ಚಿರೋ ಉದ್ಯೋಗಿಗಳಿಗೆ, ಶೇಕಡ 12.75 ರ ಫ್ಲೋಟಿಂಗ್‌ ಇಂಟರೆಸ್ಟ್‌ ರೇಟ್‌ ನಲ್ಲಿ ಹಾಗೇ ಶೇಕಡ 13.75ರ ಫಿಕ್ಸೆಡ್‌ ಇಂಟರೆಸ್ಟ್‌ ರೇಟ್‌ ನಲ್ಲಿ ಸಾಲ ಸಿಗುತ್ತಿದೆ. ಕ್ರೆಡಿಟ್‌ ಸ್ಕೋರ್‌ 750 ಕ್ಕಿಂತ ಹೆಚ್ಚು ಹಾಗೂ 800 ಕ್ಕಿಂತ ಕಡಿಮೆ ಇದ್ದರೆ, ಬಡ್ಡಿ ದರಗಳು ಶೇಕಡ 13.75 ಮತ್ತು 14.75 ರಷ್ಟಿರತ್ತೆದೆ. ಅದೇ ರೀತಿ 650 ರಿಂದ 749 ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಶೇಕಡ 15.75ರ ಫ್ಲೋಟಿಂಗ್‌ ಇಂಟರೆಸ್ಟ್‌ ರೇಟ್‌ ನಲ್ಲಿ ಸಾಲ ಸಿಗುತ್ತದೆ. ಅದೇ ನಿಶ್ಚಿತ ಬಡ್ಡಿ ಆದ್ರೆ ಶೇಕಡ 16.75 ರಷ್ಟಿರುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಏನಾದರೂ 650 ಕ್ಕಿಂತ ಕಡಿಮೆ ಇದ್ದರೆ ಫ್ಲೋಟಿಂಗ್‌ ಇಂಟರೆಸ್ಟ್‌ ರೇಟ್‌ 16.25 ಅಥವಾ ಫಿಕ್ಸೆಡ್‌ ಬಡ್ಡಿ ದರ ಶೇಕಡ 17.25 ರಷ್ಟಕ್ಕೆ ವೈಯಕ್ತಿಕ ಸಾಲ ಸಿಗುತ್ತದೆ.

ನಿಶ್ಚಿತ ಬಡ್ಡಿ ದರದ ಸಾಲದಲ್ಲಿ, ಬಡ್ಡಿ ದರ ಸಾಲದ ಅವಧಿ ಪೂರ್ತಿ ಒಂದೇ ಇರುತ್ತದೆ. ಫ್ಲೋಟಿಂಗ್‌ ಇಂಟರೆಸ್ಟ್‌ ರೇಟ್‌ ಆದರೆ ಬಡ್ಡಿ ದರ ಏರಿಕೆ ಆಗಬಹುದು ಅಥವಾ ಇಳಿಕೆ ಕೂಡ ಆಗಬಹುದು, ಅದು ಬೇರೆ ಬೇರೆ ಅಂಶಗಳನ್ನ ಆಧರಿಸಿರುತ್ತದೆ. ಉದಾಹರಣೆಗೆ ರೆಪೋ ದರ ಇತ್ಯಾದಿ. ಪಿ ಎನ್‌ ಬಿ ನಿಗದಿ ಮಾಡಿರೋ ಬಡ್ಡಿ ದರ ನೋಡಿದರೆ, ನಿಮಗೆ ಉತ್ತಮ ಕ್ರೆಡಿಟ್‌ ಸ್ಕೋರ್‌ ಲಾಭ ಗೊತ್ತಾಗುತ್ತದೆ. ಕ್ರೆಡಿಟ್‌ ಸ್ಕೋರ್‌ 750 ರಿಂದ 800ರ ನಡುವೆ ಇದ್ದರೆ ಶೇಕಡ 13.75 ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಮತ್ತೊಂದೆಡೆ, ಕ್ರೆಡಿಟ್‌ ಸ್ಕೋರ್‌ 650 ಕ್ಕಿಂತ ಕಡಿಮೆ ಇದ್ದರೆ ವೈಯಕ್ತಿಕ ಸಾಲದ ಬಡ್ಡಿ ದರ ಶೇಕಡ 16.25 ರಷ್ಟಿರುತ್ತದೆ. ಅಂದರೆ ಬಡ್ಡಿ ದರದಲ್ಲಿ ಶೇಕಡ 2.5 ರಷ್ಟು ವ್ಯತ್ಯಾಸ ಇರುತ್ತದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ಮತ್ತು ಕೆಟ್ಟ ಕ್ರೆಡಿಟ್‌ ಸ್ಕೋರ್‌ ಇರೋರಿಗೆ ಸಿಗುವ ಸಾಲದ ಬಡ್ಡಿ ದರದಲ್ಲಿ ಶೇಕಡ 1 ರಷ್ಟು ವ್ಯತ್ಯಾಸ ಅಥವಾ 100 ಮೂಲಾಂಕಗಳಷ್ಟು ವ್ಯತ್ಯಾಸ ಇರುತ್ತದೆ ಎಂದು ಹೇಳಬಹುದು. ಸಾಲದ ಬಡ್ಡಿ ದರದಲ್ಲಿ ಅತ್ಯಲ್ಪ ವ್ಯತ್ಯಾಸ ಇದ್ದರೂ ನೀವು ಹೆಚ್ಚು ಬಡ್ಡಿ ದರ ಪಾವತಿಸಬೇಕಾಗತ್ತದೆ ಎನ್ನವುದು ಗೊತ್ತಿರಬೇಕು. ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದರೆ, ನೀವು ಬ್ಯಾಂಕ್‌ ನವರೊಂದಿಗೆ ಮಾತನಾಡಿ ಸೂಕ್ತ ಬಡ್ಡಿ ದರಕ್ಕೆ ಸಾಲ ಪಡೆದುಕೊಳ್ಳಬಹುದು.

ಈಗ ನಿಮ್ಮ ಸಾಲದ ಬಡ್ಡಿ ದರ ಇಳಿಕೆ ಮಾಡಿಕೊಳ್ಳುವ ಹಂತಗಳನ್ನು ತಿಳಿದುಕೊಳ್ಳೋಣ.
ಮೊದಲ ಹಂತ: ಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಮೊದಲು ಬ್ಯಾಂಕ್‌ ನೊಂದಿಗೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿಕೊಳ್ಳಿ. ಕ್ರೆಡಿಟ್‌ ಬ್ಯೂರೋ ಸಿಬಿಲ್‌ ನ ಜಾಲತಾಣ cibil.com ನಲ್ಲಿ ನೋಂದಾಯಿಸಿಕೊಂಡು ಒಂದು ಹಣಕಾಸು ವರ್ಷದಲ್ಲಿ ಒಮ್ಮೆ ಉಚಿತವಾಗಿ ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್‌ ಉತ್ತಮವಾಗಿದ್ದರೆ ನೀವು ಬ್ಯಾಂಕ್‌ ನವರೊಂದಿಗೆ ಬಡ್ಡಿ ದರ ಕಡಿಮೆ ಮಾಡುವ ಬಗ್ಗೆ ಮಾತನಾಡಬಹುದು.

ಎರಡನೇ ಹಂತ: ನೀವು ಯಾವ ಬಗೆಯ ಸಾಲ ತೆಗೆದುಕೊಳ್ಳುತ್ತೀರಾ ಎನ್ನುವುದರ ಮೇಲೆ, ಅಂದ್ರೆ ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ಕಾರ್‌ ಲೋನ್ , ಬೇರೆ ಬೇರೆ ಬ್ಯಾಂಕ್‌ ಗಳಲ್ಲಿ ಪ್ರಸ್ತುತ ಇರುವ ಬಡ್ಡಿ ದರಗಳ ಬಗ್ಗೆ ಮಾಹಿತಿ ಕಲೆ ಹಾಕಿ. ಯಾವ ಯಾವ ಬ್ಯಾಂಕ್‌ ಗಳು ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ ಬಿ ಎಫ್‌ ಸಿ) ಗಳು ಎಷ್ಟು ಬಡ್ಡಿ ವಿಧಿಸುತ್ತಿವೆ ಎನ್ನುವುದರ ಬಗ್ಗೆ, ಆಯಾ ಬ್ಯಾಂಕ್‌ ಅಥವಾ ಸಂಸ್ಥೆಗಳ ಜಾಲತಾಣದಲ್ಲಿ ಮಾಹಿತಿ ಇರುತ್ತದೆ. ಇದರಿಂದ ನೀವು ಬ್ಯಾಂಕ್‌ ನೊಂದಿಗೆ ಮಾತನಾಡುವುದಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ.

ಮೂರನೇ ಹಂತ: ಬ್ಯಾಂಕ್‌ ನವರೊಂದಿಗೆ ಸಾಲದ ಬಗ್ಗೆ ಮಾತನಾಡೋವಾಗ, ನಿಮ್ಮ ಸದೃಢ ಕ್ರೆಡಿಟ್‌ ಹಿಸ್ಟರಿ ಮತ್ತು ಕ್ರೆಡಿಟ್‌ ಸ್ಕೋರ್‌ ಬಗ್ಗೆ ಹೇಳಿ. ಉತ್ತಮ ಕ್ರೆಡಿಟ್‌ ಸ್ಕೋರ್‌ ಇದ್ದರೆ ಬ್ಯಾಂಕ್‌ ಗಳಿಂದ ಸಾಲ ಪಡೆಯುವುದು ಸುಲಭ. ಉತ್ತಮ ಕ್ರೆಡಿಟ್‌ ಸ್ಕೋರ್‌ ಮತ್ತು ಹಿಸ್ಟರಿ, ಸಾಲವನ್ನು ನೀವು ಎಷ್ಟು ಸಮರ್ಥವಾಗಿ ಮರುಪಾವತಿ ಮಾಡುತ್ತಾ ಬಂದಿದ್ದೀರಿ ಎನ್ನುವುದನ್ನು ತೋರಿಸುತ್ತದೆ.

ನಾಲ್ಕನೇ ಹಂತ: ಸಾಲಕ್ಕೆ ಅರ್ಜಿ ಸಲ್ಲಿಸುವಾಗ ತಾಳ್ಮೆಯಿಂದಿರಿ, ಹಾಗೇ ಮೊದಲ ಆಫರ್‌ ಸ್ವೀಕಾರ ಮಾಡುವುದು ಬೇಡ. ಬೇರೆ ಬೇರೆ ಬ್ಯಾಂಕ್‌ ಗಳೊಂದಿಗೆ ಮಾತನಾಡಿ, ಅವರ ಬಡ್ಡಿ ದರಗಳನ್ನ ಹೋಲಿಕೆ ಮಾಡಿ. ಒಂದು ವೇಳೆ ಬೇರೆ ಬ್ಯಾಂಕ್‌ ನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಆಫರ್‌ ಮಾಡಿದರೆ ಅದನ್ನು ಮೊದಲು ಆಫರ್‌ ಮಾಡಿದ ಬ್ಯಾಂಕ್‌ ನವರಿಗೆ ತಿಳಿಸಿ. ಆಗ ಆ ಬ್ಯಾಂಕ್‌ ನವರು ಈ ಬಡ್ಡಿ ದರಕ್ಕೆ ಮ್ಯಾಚ್‌ ಮಾಡಿ, ನಿಮಗೆ ಇನ್ನೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಸಾಧ್ಯತೆ ಇದೆ.

ಕೊನೆಯ ಹಂತ: ಎಷ್ಟೋ ಸಲ, ನೀವು ಎಷ್ಟೇ ಪ್ರಯತ್ನ ಪಟ್ಟರೂ ಬ್ಯಾಂಕ್‌ ಗಳು ಬಡ್ಡಿ ದರ ಕಡಿಮೆ ಮಾಡುವುದಕ್ಕೆ ಒಪ್ಪದೇ ಇರಬಹುದು. ಒತ್ತಡದಲ್ಲಿ ಅವರ ಆಫರ್‌ ಒಪ್ಪಿಕೊಳ್ಳಬೇಡಿ.. ನಿರಾಕರಿಸಿ ಮುಂದೆ ಸಾಗಿ.. ಪ್ರತಿ ಬ್ಯಾಂಕ್‌ ಗಳು ಸಾಲ ಕೊಡುವಾಗ ಅನೇಕ ಆಂತರಿಕ ಅಂಶಗಳನ್ನ ಪರಿಗಣಿಸುತ್ತದೆ. ಹೀಗಾಗಿ ಬೇರೆ ಬ್ಯಾಂಕ್‌ ನೊಂದಿಗೆ ವಿಚಾರಿಸಿ.. ಆದರೆ ಬ್ಯಾಂಕ್‌ ಗಳು ಕೇವಲ ಇದೊಂದೇ ಅಂಶವನ್ನ ಪರಿಗಣಿಸುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ.

ಕ್ರೆಡಿಟ್‌ ಸ್ಕೋರ್‌ ಮಾತ್ರ ಅಲ್ಲದೆ ನಿಮ್ಮ ಆದಾಯ, ನಿಮ್ಮ ಪ್ರಸ್ತುತ ಇರುವ ಆದಾಯದಲ್ಲಿ ಸಾಲದ ಭಾಗ, ವಯಸ್ಸು, ವೃತ್ತಿ ಭದ್ರತೆ ಮೊದಲಾದವುಗಳು ಕೂಡ, ನಿಮಗೆ ಸಾಲ ಸುಲಭವಾಗಿ ಸಿಗುತ್ತದೆಯೋ ಇಲ್ಲವೋ ಎನ್ನೋದನ್ನು ನಿರ್ಧರಿಸುವ ಇತರ ಪ್ರಮುಖ ಅಂಶಗಳಾಗಿವೆ.

Published: April 15, 2024, 15:32 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ