` health insurance keep these 5 things in mind your claim will not be rejected | ಆರೋಗ್ಯ ವಿಮೆಮ ಕ್ಲೈಮ್ ಮಾಡುವಾಗ ಇದೆಲ್ಲ ಗೊತ್ತಿರಬೇಕು! | Money9 Kannada

ಆರೋಗ್ಯ ವಿಮೆಮ ಕ್ಲೈಮ್ ಮಾಡುವಾಗ ಇದೆಲ್ಲ ಗೊತ್ತಿರಬೇಕು!

ಅದೇ ರೀತಿ, ಗಂಭೀರ ಮತ್ತು ನಿರ್ದಿಷ್ಟ ಕಾಯಿಲೆಗಳಿಗೂ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಅಲ್ಲದೇ, ನೀವು ಹೊಸ ಪಾಲಿಸಿ ಖರೀದಿಸಿದಾಗ, 30 ದಿನಗಳ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಈ ಅವಧಿಯಲ್ಲಿ ಅಪಘಾತ ಹೊರತುಪಡಿಸಿ ಇತರ ಕ್ಲೇಮುಗಳಿಗೆ ಅವಕಾಶ ಇರೋದಿಲ್ಲ. ಆರೋಗ್ಯ ವಿಮಾ ಪಾಲಿಸಿ ಖರೀದಿ ಮಾಡುವಾಗ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಅದರ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿ.

ವೈದ್ಯಕೀಯ ಚಿಕಿತ್ಸೆಯ ಹೆಚ್ಚಿನ ವೆಚ್ಚ ನೋಡಿದರೆ ಆರೋಗ್ಯ ವಿಮೆ ಅಗತ್ಯ ಎಷ್ಟಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಅದು ಆಸ್ಪತ್ರೆ ಖರ್ಚುಗಳಿಂದ ನಿಮ್ಮ ಜೇಬು ಬರಿದಾಗುವುದನ್ನು ತಪ್ಪಿಸುತ್ತದೆ. ಒಂದು ವೇಳೆ ಕುಟುಂಬದ ಇಬ್ಬರು ಅಥವಾ ಮೂವರು ಸಾಮಾನ್ಯ ವೈರಲ್‌ ಜ್ವರ ಅಥವಾ ಡೆಂಗ್ಯೂವಿನಿಂದ ಬಳಲುತ್ತಾ ಇದ್ದರೆ ಆಸ್ಪತ್ರೆ ಬಿಲ್‌ 2 ರಿಂದ 3 ಲಕ್ಷ ರೂಪಾಯಿ ಆಗುತ್ತದೆ. ಇನ್ನು ಹೃದಯ ಶಸ್ತ್ರಚಿಕಿತ್ಸೆ ಅಥವಾ ಮೂತ್ರಪಿಂಡದ ಕಸಿಯಾದರೆ ಆಸ್ಪತ್ರೆ ವೆಚ್ಚ 10 ರಿಂದ 15 ಲಕ್ಷ ರೂಪಾಯಿವರೆಗೆ ಇರುತ್ತದೆ. ಆರೋಗ್ಯ ವಿಮೆ ಇಲ್ಲದೆ ಇದ್ದರೆ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಳ್ಳುವುದು ಖಚಿತ. ಎಷ್ಟೋ ಸಲ, ನಿಮ್ಮ ಬಳಿ ಆರೋಗ್ಯ ವಿಮೆ ಇದ್ದರೂ ಕೂಡ, ನಿಮಗೆ ಅದರಿಂದ ಲಾಭ ಸಿಕ್ಕಿರಲ್ಲ. ವಿಮಾ ಕಂಪೆನಿ ಕ್ಲೇಮು ಪಾವತಿಸೋಕೆ ನಿರಾಕರಿಸುತ್ತದೆ. ಹಾಗಿದ್ದರೆ ಆರೋಗ್ಯ ವಿಮೆ ಕ್ಲೇಮ್ ರಿಜಕ್ಟ್ ಆಗುವುದು ಯಾಕೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಕ್ಲೇಮ್ ರಿಜಕ್ಟ್ ಆಗುವುದಕ್ಕೆ ಪ್ರಮುಖ ಕಾರಣ ಏನೆಂದರೆ ಪೇಪರ್‌ ವರ್ಕ್‌ ಮತ್ತು ಡಾಕ್ಯುಮೆಂಟೇಷನ್.‌ ಆರೋಗ್ಯ ವಿಮಾ ಕ್ಲೇಮು ಸಲ್ಲಿಸುವಾಗ ನಿರ್ದಿಷ್ಟ ಕಾಗದ ಪತ್ರಗಳು, ದಾಖಲೆಗಳು ಬೇಕಾಗುತ್ತದೆ. ಹಾಗೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ಕೂಡ ಪಾಲಿಸಬೇಕಾಗುತ್ತದೆ. ಕಾಗದಪತ್ರಗಳನ್ನು ಸಲ್ಲಿಸೋವಾಗ ಯಾವುದೇ ತಪ್ಪಿದ್ದರೆ ಅಥವಾ ದಾಖಲೆಗಳು ಸರಿಯಾಗಿ ಇಲ್ಲದೆ ಹೋದರೆ ನಿಮ್ಮ ಕ್ಲೇಮ್ ತಿರಸ್ಕೃತಗೊಳ್ಳಬಹುದು. ಹೀಗಾಗಿ, ಎಲ್ಲಾ ಅಗತ್ಯ ಫಾರಂಗಳನ್ನ ಸರಿಯಾಗಿ ತುಂಬಿ. ಜೊತೆಗೆ ವಿಮಾ ಕಂಪೆನಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ. ಈ ದಾಖಲೆಗಳನ್ನ ಸಲ್ಲಿಸುವುದಕ್ಕೆ ವಿಳಂಬ ಮಾಡಿದರೆ ಅಥವಾ ಯಾವುದಾದರೂ ದಾಖಲೆ ಸಲ್ಲಿಸದೆ ಹೋದ್ರೆ ಕ್ಲೇಮು ತಿರಸ್ಕೃತಗೊಳ್ಳುವ ಸಾಧ್ಯತೆ ಇದೆ.

ಕ್ಲೇಮ್ ಸಲ್ಲಿಸುವ ಕೊನೆ ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಿ. ಕ್ಲೇಮುಗಳನ್ನು ಲೇಟ್‌ ಆಗಿ ಸಲ್ಲಿಸಿರೂ ಕೂಡ, ವಿಮಾ ಕಂಪೆನಿಗಳು, ಕ್ಲೇಮುಗಳನ್ನ ಪರಿಗಣಿಸದೆ ಇರೋ ಸಾಧ್ಯತೆ ಇದೆ. ಪ್ರತಿ ವಿಮಾ ಪಾಲಿಸಿಗೂ, ಕ್ಲೇಮು ಸಲ್ಲಿಸುವುದಕ್ಕೆ ಗಡುವಿರುತ್ತದೆ. ಅದು ಸಾಮಾನ್ಯವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಮೇಲೆ 14 ರಿಂದ 30 ದಿನ ಇರುತ್ತದೆ. ಇದು ವಿಮಾ ಕಂಪೆನಿ ಮತ್ತು ಅದರ ಪಾಲಿಸಿಯ ನಿಯಮಗಳ ಮೇಲೆ ಅವಲಂಬಿತವಾಗಿರತ್ತದೆ.

ಮೊದಲೇ ಇರುವ ಕಾಯಿಲೆಗಳು ಅಥವಾ ಪ್ರಿ-ಎಕ್ಸಿಸ್ಟಿಂಗ್‌ ಡಿಸೀಸ್‌ ಅನ್ನೋದು ಆರೋಗ್ಯ ವಿಮೆಯಲ್ಲಿ ಪ್ರಮುಖ ಅಂಶ. ಬಹುತೇಕ ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳಲ್ಲೂ ಈ ಪ್ರಿ-ಎಕ್ಸಿಸ್ಟಿಂಗ್‌ ಡಿಸೀಸ್‌ ಗೆ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಅಂದರೆ ಪಾಲಿಸಿ ಖರೀದಿಗೂ ಮೊದಲೇ ಯಾವುದಾದಾದರೂ ಖಾಯಿಲೆಯಿಂದ ಬಳಲುತ್ತಿದ್ದರೆ ಆಗ, ವೇಟಿಂಗ್‌ ಪೀರಿಯಡ್‌ ಅನ್ವಯವಾಗುತ್ತದೆ. ಬಹುತೇಕ ಎಲ್ಲಾ ಪಾಲಿಸಿಗಳಲ್ಲೂ ಈ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಈ ವೇಟಿಂಗ್‌ ಪೀರಿಯಡ್‌ ನಲ್ಲಿ ಈ ಮೊದಲೇ ಇದ್ದ ಕಾಯಿಲೆಗಳಿಗೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಅದರ ಚಿಕಿತ್ಸಾ ವೆಚ್ಚ ಈ ವೇಟಿಂಗ್‌ ಪೀರಿಯಡ್‌ ನಲ್ಲಿ ಪಾಲಿಸಿಯಡಿ ಕವರ್‌ ಆಗುವುದಿಲ್ಲ. ಅಂದರೆ ಈ ವೇಟಿಂಗ್‌ ಪೀರಿಯಡ್‌ ನಲ್ಲಿ ಮೊದಲೇ ಇದ್ದ ಕಾಯಿಲೆಗಳ ಚಿಕಿತ್ಸೆಯ ಕ್ಲೇಮು ತಿರಸ್ಕೃತಗೊಳ್ಳತ್ತೆ. ಪ್ರಿ ಎಕ್ಸಿಸ್ಟಿಂಗ್‌ ಡಿಸೀಸ್‌ ಗಳ ವೇಟಿಂಗ್‌ ಪೀರಿಯಡ್‌, ಪಾಲಿಸಿಯ ನಿಯಮಗಳು ಮತ್ತು ವಿಮಾ ಕಂಪೆನಿಯನ್ನು ಅವಲಂಬಿಸಿರುತ್ತದೆ. ಇದು ಸಾಮಾನ್ಯವಾಗಿ 1 ರಿಂದ 4 ವರ್ಷ ಇರುತ್ತದೆ.

ಅದೇ ರೀತಿ, ಗಂಭೀರ ಮತ್ತು ನಿರ್ದಿಷ್ಟ ಕಾಯಿಲೆಗಳಿಗೂ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಅಲ್ಲದೇ, ನೀವು ಹೊಸ ಪಾಲಿಸಿ ಖರೀದಿಸಿದಾಗ, 30 ದಿನಗಳ ವೇಟಿಂಗ್‌ ಪೀರಿಯಡ್‌ ಇರುತ್ತದೆ. ಈ ಅವಧಿಯಲ್ಲಿ ಅಪಘಾತ ಹೊರತುಪಡಿಸಿ ಇತರ ಕ್ಲೇಮುಗಳಿಗೆ ಅವಕಾಶ ಇರೋದಿಲ್ಲ. ಆರೋಗ್ಯ ವಿಮಾ ಪಾಲಿಸಿ ಖರೀದಿ ಮಾಡುವಾಗ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಅದರ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿ.

ಪಾಲಿಸಿ ಎಕ್ಸ್‌ ಪೈರಿ: ಆರೋಗ್ಯ ವಿಮಾ ಪಾಲಿಸಿಗಳಿಗೆ ಸಾಮಾನ್ಯವಾಗಿ ಒಂದು ವರ್ಷದವರೆಗೆ ವಾಯಿದೆ ಇರುತ್ತದೆ. ಒಂದು ವೇಳೆ ಪಾಲಿಸಿ ಅವಧಿ ಮುಗಿದಿದ್ದರೆ, ಏನೂ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಅದು ಲ್ಯಾಪ್ಸ್‌ ಆಗಿರುತ್ತದೆ. ಪಾಲಿಸಿ ಅವಧಿ ಮುಗಿದ ಮೇಲೆ ನೀವು ಕ್ಲೇಮು ಸಲ್ಲಿಸಿದರೆ , ಅದು ತಿರಸ್ಕೃತಗೊಳ್ಳುತ್ತದೆ. ಪಾಲಿಸಿಯ ವಾಯಿದೆ ಮೇಲೆ ನಿಗಾ ಇಡುವುದು ಮುಖ್ಯ, ಹಾಗೇ ಸಮಯಕ್ಕೆ ಸರಿಯಾಗಿ ಅದರ ರಿನ್ಯೂ ಮಾಡಬೇಕು.

ಎಷ್ಟೋ ಪಾಲಿಸಿಗಳು, ನಿರ್ದಿಷ್ಟ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗಳಿಗೆ ಮರುಪಾವತಿ ಮಾಡುವುದಿಲ್ಲ. ಅಂದರೆ ಅಂದ್ರೆ ಪ್ಲಾಸ್ಟಿಕ್‌ ಸರ್ಜರಿ, ಕಾಸ್ಮೆಟಿಕ್‌ ಸರ್ಜರಿ, ಲಿಂಗ ಪರಿವರ್ತನೆ ಚಿಕಿತ್ಸೆ ಮೊದಲಾದವುಗಳಿಗೆ ಪಾಲಿಸಿ ಕವರೇಜ್‌ ಇರುವುದಿಲ್ಲ. ಹಾಗೇ ಪರ್ವತಾರೋಹಣ, ಮೋಟಾರ್‌ ರೇಸಿಂಗ್‌, ಹಾರ್ಸ್‌ ರೇಸಿಂಗ್‌, ಗ್ಲೈಡಿಂಗ್‌, ಸ್ಕೂಬಾ ಡೈವಿಂಗ್‌ ನಂತಹ ಸಾಹಸ ಚಟುವಟಿಕೆಗಳಿಂದಾದ ಚಿಕಿತ್ಸೆಗೂ ವಿಮಾ ಕವರೇಜ್‌ ಸಿಗುವುದಿಲ್ಲ. ಹಾಗೇ ಮದ್ಯಪಾನ, ಮಾದಕ ವ್ಯಸನ ಬಿಡಿಸುವ ಚಿಕಿತ್ಸೆ ಮತ್ತು ಬಂಜೆತನ ಚಿಕಿತ್ಸೆ ಸಂಬಂಧಿತ ವೆಚ್ಚಗಳಿಗೂ ವಿಮಾ ಕವರೇಜ್‌ ಇರುವುದಿಲ್ಲ. ಬಹುತೇಕ ಆರೋಗ್ಯ ವಿಮಾ ಪಾಲಿಸಿಗಳು ಇವುಗಳನ್ನು ಒಳಗೊಂಡಿರುವುದಿಲ್ಲ. ಈ ಚಿಕಿತ್ಸೆಗಳಿಗೆ ಕ್ಲೇಮ್ ಸಲ್ಲಿಸಿದರೆ, ಅವು ರಿಜೆಕ್ಟ್ ಆಗುತ್ತವೆ. ಯಾವ ಚಿಕಿತ್ಸೆಗೆ ಕವರೇಜ್‌ ಇದೆ, ಯಾವುದಕ್ಕೆ ಇಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಪಾಲಿಸಿ ದಾಖಲೆಯಲ್ಲಿರೋ ಎಕ್ಸ್‌ ಕ್ಲೂಷನ್‌ ಕ್ಲಾಸ್ ಓದಬೇಕು.

ಆರೋಗ್ಯ ವಿಮಾ ಪಾಲಿಸಿ ಖರೀದಿಸುವಾಗ ವಿಮಾ ಕಂಪೆನಿಯು ಕೆಲವು ಪ್ರಮುಖ ಮಾಹಿತಿಗಳನ್ನು ಕೇಳುತ್ತವೆ. ಅಂದರೆ ಮೆಡಿಕಲ್‌ ಹಿಸ್ಟರಿ, ಜೀವನ ಶೈಲಿ, ಕುಡಿತ ಮತ್ತು ಧೂಮಪಾನದಂತಹ ಕೆಟ್ಟ ಚಟಗಳು ಇತ್ಯಾದಿಗಳ ಬಗ್ಗೆ ಮಾಹಿತಿ ಕೇಳುತ್ತವೆ. ನೀವು ವಿಮಾ ಕಂಪೆನಿಗೆ ಸಂಪೂರ್ಣ ಮತ್ತು ನಿಖರ ಮಾಹಿತಿ ಕೊಡಬೇಕು. ನೀವು ವಿಮಾ ಕ್ಲೇಮು ಸಲ್ಲಿಸೋವಾಗ, ಉದ್ದೇಶಪೂರ್ವಕವಾಗಿ ಈ ಮಾಹಿತಿ ಕೊಟ್ಟಿಲ್ಲ ಎನ್ನುವುದು ವಿಮಾ ಕಂಪೆನಿಗೆ ಗೊತ್ತಾದರೆ, ಆಗ ಕೂಡ ನಿಮ್ಮ ಕ್ಲೇಮು ತಿರಸ್ಕೃತವಾಗುವ ಸಾ‍ಧ್ಯತೆ ಇದೆ.

ಆರೋಗ್ಯ ವಿಮೆಯಲ್ಲಿ ನಿಮ್ಮ ಬಗ್ಗೆ ನೀವು ವಿಮಾ ಕಂಪೆನಿಗೆ ಎಷ್ಟು ನಿಜ ಹೇಳುತ್ತೀರಾ ಎನ್ನುವುದು ಮುಖ್ಯವಾಗುತ್ತದೆ. ಹೆಲ್ತ್‌ ಪ್ಲಾನ್‌ ಕವರೇಜ್‌ ಎಷ್ಟಿರಬೇಕು ಅಂತಾ ಜನರಿಗೆ ಗೊಂದಲ ಇರೋದು ಸಹಜ. ಅಂದರೆ ಎಲ್ಲರಿಗೂ ಅನ್ವಯ ಆಗುವ ಯಾವುದೇ ಥಂ ರೂಲ್‌ ಇಲ್ ಎನ್ನುವುದು ವಾಸ್ತವದ ಸಂಗತಿ. ಆರೋಗ್ಯ ಕವರೇಜ್‌ ಎಷ್ಟಿರಬೇಕು ಎನ್ನುವುದು ನಿಮ್ಮ ವಯಸ್ಸು, ನಿಮ್ಮ ಮತ್ತು ನಿಮ್ಮ ಕುಟುಂಬದ ಮೆಡಿಕಲ್‌ ಹಿಸ್ಟರಿ, ಜೊತೆಗೆ ನೀವು ಯಾವ ಬಗೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತೀರಿ ಎಂಬ ಮೊದಲಾದ ಅಂಶಗಳನ್ನ ಆಧರಿಸಿರುತ್ತದೆ. ಹಣದುಬ್ಬರದ ಸಮಯದಲ್ಲಿ, ಕನಿಷ್ಠ 10 ಲಕ್ಷ ರೂಪಾಯಿಗಳ ಕವರೇಜ್‌ ಇರುವ ಪಾಲಿಸಿ ಒಳ್ಳೆಯದು. ಕಿರಿಯ ವಯಸ್ಸಿನಲ್ಲೇ ಪಾಲಿಸಿ ತೆಗೆದುಕೊಳ್ಳುತ್ತೀರಾ ಎಂದಾದರೆ ನೀವು ಪಾವತಿಸಬೇಕಿರುವ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಏಕೆಂದರೆ ಸಾಮಾನ್ಯವಾಗಿ ವಯಸ್ಸು ಕಡಿಮೆ ಇದ್ದರೆ ಅನಾರೋಗ್ಯ ಬಾಧಿಸುವ ಸಾಧ್ಯತೆ ಕಡಿಮೆ ಎನ್ನುವುದು ಸಾಮಾನ್ಯ ಲೆಕ್ಕಾಚಾರ.

Published: April 18, 2024, 14:57 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ