` what is the 50 30 20 rule in financial planning | ಈ ಸೂತ್ರ ಅಳವಡಿಸಿಕೊಂಡ್ರೆ ಹಣಕ್ಕೆ ಅಲೆಯಬೇಕಿಲ್ಲ! | Money9 Kannada

ಈ ಸೂತ್ರ ಅಳವಡಿಸಿಕೊಂಡ್ರೆ ಹಣಕ್ಕೆ ಅಲೆಯಬೇಕಿಲ್ಲ!

ಉಳಿತಾಯ ಮಾಡಿದರೆ ಅಥವಾ ಹೂಡಿಕೆ ಮಾಡುತ್ತಾ ಇದ್ದರೆ ನಿಮಗೆ ಹಣದ ಕೊರೆತೆ ಎದುರಾಗಲ್ಲ. ನಿಮಗೆ ಅಗತ್ಯ ಇದ್ದರೆ, ನಿಮ್ಮ ಮಾಸಿಕ ಉಳಿತಾಯವನ್ನ ಸಂಪೂರ್ಣವಾಗಿ ಎಮರ್ಜೆನ್ಸಿ ಫಂಡ್‌ ಗೆ ಮೀಸಲಿಡಬಹದು. ನಿಮ್ಮ ಎಮರ್ಜೆನ್ಸಿ ಫಂಡ್‌ ನ ಟಾರ್ಗೆಟ್‌ ಪೂರ್ಣಗೊಂಡ ಮೇಲೆ ಅಂದರೆ ನಿಮಗೆ ಎಷ್ಟು ಬೇಕೋ ಅಷ್ಟು ತುರ್ತು ನಿಧಿ ಹೊಂದಿಸಿಕೊಂಡ ಮೇಲೆ, ನೀವು ಹೂಡಿಕೆ ಶುರು ಮಾಡಬಹುದು

ರಾಬಿನ್‌ ಅವರ ಮೊದಲ ಕೆಲಸದ ಮೊದಲ ಸಂಬಳಕ್ಕೆ ಅವರು ಕಾತರದಿಂದ ಕಾಯುತ್ತಿದ್ದರು. ತಮ್ಮ ಮೊದಲ ಸಂಬಳವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದರ ಬಗ್ಗೆ ಅವರಿಗೆ ಅನೇಕ ಆಲೋಚನೆಗಳಿವೆ. ಅವರು ಹೊಸ ಫೋನ್‌ ಖರೀದಿಸಬೇಕು, ಬಟ್ಟೆ ಖರೀದಿ ಮಾಡಬೇಕು. ರಜೆ ತೆಗೆದುಕೊಂಡು ಹೊರಗೆ ಸುತ್ತಾಡಬೇಕು ಅಂತಾ ಬಯಸಿದ್ದಾರೆ. ಈಗಷ್ಟೇ ಕಾಲೇಜು ವಿದ್ಯಾಭ್ಯಾಸ ಮುಗಿಸಿ, ಈಗಷ್ಟೇ ಕೆಲಸಕ್ಕೆ ಸೇರಿರುವ ಬಹುತೇಕರು ಹೀಗೇ ಖರ್ಚು ಮಾಡಬೇಕು ಅಂತಾ ಯೋಚನೆ ಮಾಡಿರುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಜಾಗರೂಕರಾಗಿ ಖರ್ಚು ಮಾಡಬೇಕು ಅದೂ ಸಮಯದ ಮಿತಿಯೊಳಗೆ ಮಾಡಬೇಕು. ನಿಮ್ಮ ಮೊದಲ 5 ರಿಂದ 6 ತಿಂಗಳ ಸಂಬಳವನ್ನು ನೀವು ಇಷ್ಟಪಡುವ ರೀತಿ ಖರ್ಚು ಮಾಡಬಹುದು. ಇದಾದ ಬಳಿಕ, ನಿಯಮಿತವಾಗಿ ಹೂಡಿಕೆ ಮತ್ತು ಉಳಿತಾಯ ಮಾಡೋ ಅಭ್ಯಾಸ ರೂಢಿಸಿಕೊಳ್ಳಬೇಕು. ಇದಕ್ಕೆ ನೀವು, ನಿಮ್ಮ ಸಂಬಳದ ಎಷ್ಟು ಭಾಗವನ್ನ ಉಳಿತಾಯಕ್ಕೆ ಮೀಸಲಿಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

ಈಗಷ್ಟೇ ಕೆಲಸಕ್ಕೆ ಸೇರಿರುವ ಬಹುತೇಕರು, ತಮಗೆ ಏನೂ ಜವಾಬ್ದಾರಿ ಇಲ್ಲದೆ ಇರುವುದರಿಂದ ಯಾಕೆ ಉಳಿತಾಯ ಮಾಡಬೇಕು ಅಂತಾ ಯೋಚನೆ ಮಾಡುತ್ತಾರೆ. ಆದರೆ ಉಳಿತಾಯ ಮಾಡಿದರೆ ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಮಟ್ಟದ ಜೀವನ ನಡೆಸಬಹುದು. ನಿಮ್ಮ ಮಾಸಿಕ ವೇತನದಲ್ಲಿ, ಎಷ್ಟು ಭಾಗವನ್ನ ಉಳಿತಾಯಕ್ಕೆ ಮೀಸಲಿಡಬೇಕು ಎನ್ನುವುದನ್ನು ನಿರ್ಧರಿಸಲು, ಮೊದಲು, ನಿಮ್ಮ ವೇತನವನ್ನ ಮೂರು ಭಾಗಗಳಾಗಿ ವಿಂಗಡಿಸಬೇಕು. ಈ ಮೂರು ವರ್ಗಗಳೆಂದರೆ, ಅಗತ್ಯಗಳು, ಬೇಕುಗಳು ಮತ್ತು ಉಳಿತಾಯಗಳು. ಪರ್ಸನಲ್‌ ಫೈನ್ಯಾನ್ಸ್‌ ನ ಜನಪ್ರಿಯ ನಿಯಮವೇ 50:30:20 ರೂಲ್.‌ ಈ ನಿಯಮ, ನೀವು ನಿಮ್ಮ ಮಾಸಿಕ ಬಜೆಟ್‌ ನಿರ್ವಹಿಸಲು ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮಲ್ಲಿ ನಿಯಮಿತ ಹೂಡಿಕೆ ಅಭ್ಯಾಸವನ್ನ ರೂಢಿಸಿಕೊಳ್ಳುವುದಕ್ಕೂ ಸಹಕರಿಸುತ್ತದೆ. ನಿಮ್ಮ ವೇತನದ ಶೇಕಡ 50 ರಷ್ಟನ್ನ ಅಗತ್ಯ ವೆಚ್ಚಗಳಿಗಾಗಿ ಎತ್ತಿಡಿ.. ಅಂದರೆ ಮನೆ ಬಾಡಿಗೆ, ಮನೆ ಸಾಲದ ಇಎಂಐ, ವಿದ್ಯುತ್‌ ಬಿಲ್‌, ಮೇಂಟೆನೆನ್ಸ್‌ ಬಿಲ್‌, ದಿನಸಿ ಇತ್ಯಾದಿಗಳು ಅಗತ್ಯ ವೆಚ್ಚಗಳು. ಈ ವೆಚ್ಚಗಳು ನಿಮ್ಮ ದೈನಂದಿನ ಜೀವನ ಸಾಗಿಸುವುದಕ್ಕೆ ತುಂಬಾನೇ ಮುಖ್ಯ. ಇದರಲ್ಲಿ ಯಾವುದೇ ಕಡಿತ ಮಾಡೋಕೆ ಸಾಧ್ಯ ಇಲ್ಲ. ಹಾಗೇ ನಿಮ್ಮ ವೇತನದ ಇನ್ನೊಂದು ಭಾಗ, ಅತ್ಯಗತ್ಯ ಅಲ್ಲದೇ ಹೋದರೂ ಬೇಕಾದ ಖರ್ಚುಗಳಿಗೆ ಹೋಗುತ್ತದೆ. ಅಂದರೆ ಈ ವೆಚ್ಚಗಳು ತೀರಾ ಅಗತ್ಯ ಇಲ್ಲದೆ ಹೋದರೂ ನಿಮ್ಮ ಜೀವನ ಶೈಲಿ ನಿರ್ವಹಿಸುವುದಕ್ಕೆ ಅಥವಾ ಮೋಜಿಗೆ ಖರ್ಚು ಮಾಡಲೇಬೇಕಾಗತ್ತದೆ.

ಉದಾಹರಣೆಗೆ, ರೆಸ್ಟೊರೆಂಟ್‌ ನಲ್ಲಿ ಊಟ ಮಾಡುವುದು, ಸಿನಿಮಾ ವೀಕ್ಷಣೆ, ಪ್ರಯಾಣ, ವಾಚ್‌ ಅಥವಾ ಮೊಬೈಲ್‌ ಫೋನ್‌ ನಂತಹ ದುಬಾರಿ ವಸ್ತು ಖರೀದಿ ಅಥವಾ ಜಿಮ್‌, ಯೋಗ ತರಗತಿಗೆ ಸೇರೋದು ಇತ್ಯಾದಿ ಸೇರಿಕೊಳ್ಳುತ್ತವೆ. ತೀರಾ ಅಗತ್ಯ ಇಲ್ಲದೆ ಇದ್ದರೂ ಇವುಗಳಿಗೂ ಖರ್ಚು ಮಾಡಬೇಕಾಗಿ ಬರತ್ತದೆ. ಇಂತಹ ಖರ್ಚುಗಳಿಗಾಗಿ ನಿಮ್ಮ ವೇತನದ ಶೇಕಡ 30 ರಷ್ಟನ್ನ ಮೀಸಲಿಡಬಹುದು. ಆಗ ನೀವು ಬಯಸಿದ ಜೀವನಶೈಲಿಯನ್ನ ಹೊಂದುಚ ಜತೆಗೆ ಹಣಕಾಸು ಶಿಸ್ತನ್ನೂ ಕಾಪಾಡಿಕೊಳ್ಳಬಹುದು. ನಿಮ್ಮ ಹೂಡಿಕೆಗಳು ಮತ್ತು ಉಳಿತಾಯಕ್ಕಾಗಿ ನಿಮ್ಮ ವೇತನದ ಕನಿಷ್ಠ ಶೇಕಡ 20 ರಷ್ಟನ್ನು ಮೀಸಲಿಡಬೇಕು. ಸಾಧ್ಯವಾದರೆ, ನಿಮ್ಮ ಅನಗತ್ಯ ವೆಚ್ಚಗಳನ್ನ ಕಡಿತ ಮಾಡಿ, ನಿಮಗೆ ಬೇಕಾದವುಗಳಿಗೆ ಮಾತ್ರ ಖರ್ಚುಮಾಡಿ ನಿಮ್ಮ ಉಳಿತಾಯದ ಪ್ರಮಾಣವನ್ನು ಶೇಕಡ 30 ಕ್ಕೆ ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ಹಣಕಾಸು ಸ್ಥಿತಿ ಸದೃಢಗೊಳ್ಳುತ್ತದೆ.

ಉದಾಹರಣೆಗೆ, ರಾಬಿನ್‌ ಅವರ ವೇತನ 30 ಸಾವಿರ ರೂಪಾಯಿ ಅಂತಿಟ್ಕೋಳೋಣ. ಈ ಪೈಕಿ ಶೇಕಡ 50 ರಷ್ಟು ಅಂದ್ರೆ 15 ಸಾವಿರ ರೂಪಾಯಿ, ಅವರ ಅಗತ್ಯದ ಖರ್ಚುಗಳಿಗಾಗಿ, ಹಾಗೇ ಶೇಕಡ 30 ರಷ್ಟು ಅನಗತ್ಯ ವೆಚ್ಚಗಳಿಗೆ ಅಂದ್ರೆ 9 ಸಾವಿರ ರೂಪಾಯಿ ಅಗತ್ಯವಿದ್ದದಿದ್ದರೂ ಮಾಡಬೇಕಾದ ಖರ್ಚುಗಳಿಗೆ ಮೀಸಲಿಡಬೇಕಾಗತ್ತೆ. ಈಗ ಉಳಿಯೋದು ಶೇಕಡ 20 ರಷ್ಟು ಅಂದ್ರೆ, 6 ಸಾವಿರ ರೂಪಾಯಿ. ಇಷ್ಟು ಮೊತ್ತವನ್ನ ರಾಬಿನ್‌ ಅವರು ಉಳಿತಾಯ ಮಾಡಲೇಬೇಕು. ರಾಬಿನ್‌ ಅವರು ಮಾಡಬೇಕಾದ ಮೊದಲ ಕೆಲಸ ಏನೆಂದರೆ ಅವರು ಮಾಸಿಕ ಉಳಿತಾಯದಿಂದ ಎಮರ್ಜೆನ್ಸಿ ಫಂಡ್‌ ಖಾತೆ ತೆರೆಯಬೇಕು. ಈ ತುರ್ತು ನಿಧಿಯಲ್ಲಿರಬೇಕಾದ ಮೊತ್ತ, ಕನಿಷ್ಠ 3 ರಿಂದ 6 ತಿಂಗಳ ಅಗತ್ಯ ಖರ್ಚುಗಳಿಗೆ ಬೇಕಾಗುವಷ್ಟಿರಬೇಕು. ಒಂದು ವೇಳೆ ಕೆಲಸ ಕಳೆದುಕೊಂಡರೆ, ವೈದ್ಯಕೀಯ ತುರ್ತಿದ್ದರೆ ಅಥವಾ ಇನ್ಯಾವುದಾದರೂ ತುರ್ತು ಖರ್ಚುಗಳು ಎದುರಾದರೆ, ಆಗ ಈ ಎಮರ್ಜೆನ್ಸಿ ಫಂಡ್‌ ಸಹಾಯಕ್ಕೆ ಬರತ್ತದೆ. ನಿಮ್ಮ ಬಳಿ ಎಮರ್ಜೆನ್ಸಿ ಫಂಡ್‌ ಇದ್ರೆ, ನೀವು ನಿಮ್ಮ ಹೂಡಿಕೆಗಳನ್ನು ಮುರಿಯುವ ಅಗತ್ಯ ಬೀಳಲ್ಲ. ಅಥವಾ ಹಣಕಾಸು ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಸಾಲ ಮಾಡುವ ಪರಿಸ್ಥಿತಿ ಉದ್ಭವಿಸಲ್ಲ.

ಉಳಿತಾಯ ಮಾಡಿದರೆ ಅಥವಾ ಹೂಡಿಕೆ ಮಾಡುತ್ತಾ ಇದ್ದರೆ ನಿಮಗೆ ಹಣದ ಕೊರೆತೆ ಎದುರಾಗಲ್ಲ. ನಿಮಗೆ ಅಗತ್ಯ ಇದ್ದರೆ, ನಿಮ್ಮ ಮಾಸಿಕ ಉಳಿತಾಯವನ್ನ ಸಂಪೂರ್ಣವಾಗಿ ಎಮರ್ಜೆನ್ಸಿ ಫಂಡ್‌ ಗೆ ಮೀಸಲಿಡಬಹದು. ನಿಮ್ಮ ಎಮರ್ಜೆನ್ಸಿ ಫಂಡ್‌ ನ ಟಾರ್ಗೆಟ್‌ ಪೂರ್ಣಗೊಂಡ ಮೇಲೆ ಅಂದರೆ ನಿಮಗೆ ಎಷ್ಟು ಬೇಕೋ ಅಷ್ಟು ತುರ್ತು ನಿಧಿ ಹೊಂದಿಸಿಕೊಂಡ ಮೇಲೆ, ನೀವು ಹೂಡಿಕೆ ಶುರು ಮಾಡಬಹುದು. ಇಲ್ಲವಾದಲ್ಲಿ, ನೀವು ಉಳಿತಾಯ ಮಾಡುತ್ತಾ ಹಾಗೇ ಒಂದಿಷ್ಟು ಭಾಗವನ್ನ ಹೂಡಿಕೆ ಕೂಡ ಮಾಡಬಹುದು. ಉದಾಹರಣೆಗೆ, ನಿಮ್ಮ ಉಳಿತಾಯದ ಶೇಕಡ 20 ರಷ್ಟರಲ್ಲಿ ಅರ್ಧದಷ್ಟನ್ನು ಅಂದ್ರೆ ಶೇಕಡ 10 ರಷ್ಟನ್ನ ತುರ್ತು ನಿಧಿಗೆ ಹಾಗೇ ಇನ್ನು ಶೇಕಡ 10 ರಷ್ಟನ್ನ ಹೂಡಿಕೆಗೆ ಮೀಸಲಿಡಬಹುದು.

ಆದಾಗ್ಯೂ, ಹೂಡಿಕೆಗೂ ಮೊದಲು ನಿಮ್ಮನ್ನು ನೀವು ಕೆಲವು ಪ್ರಶ್ನೆಗಳನ್ನ ಕೇಳಿಕೊಳ್ಳಿ. ಮೊದಲಿಗೆ, ನಿಮ್ಮ ಹೂಡಿಕೆ ಗುರಿ ಅಥವಾ ಉದ್ದೇಶ ಏನು? ಅಂದ್ರೆ ವಿದ್ಯಾಭ್ಯಾಸ, ಮನೆ ಖರೀದಿ, ಕಾರು ಖರೀದಿ, ಮದುವೆ, ನಿವೃತ್ತಿಗೆ ಯೋಜನೆ ಹೀಗೆ ಯಾವ ಗುರಿ ಈಡೇರಿಕಗೆ ಹೂಡಿಕೆ ಮಾಡ್ತಾ ಇದೀರಾ ಅನ್ನೋದನ್ನ ಮನಸ್ಸಿನಲ್ಲಿಟ್ಟುಕೊಳ್ಳಿ. ಎರಡನೆಯದಾಗಿ, ನೀವು ಎಷ್ಟು ಅವಧಿಗೆ ಹೂಡಿಕೆ ಮಾಡೋಕೆ ಬಯಸ್ತೀರಾ? ಇನ್ನು ಮೂರನೆಯದು, ನಿಮ್ಮ ಹೂಡಿಕೆ ಅವಧಿ ಮುಗಿಯೋ ವೇಳೆಗೆ ನಿಮ್ಮ ಕೈಯಲ್ಲಿ ಎಷ್ಟು ಹಣ ಇರಬೇಕು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಆಗ ನೀವು ಪ್ರತಿ ತಿಂಗಳು ಎಷ್ಟು ಮೊತ್ತವನ್ನ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.. ಉದಾಹರಣೆಗೆ, ನೀವು ದೀರ್ಘಾವಧಿ ಗುರಿ ಈಡೇರಿಕೆಗೆ ಹೂಡಿಕೆ ಮಾಡೋದಾದಾರೆ ಅಂದ್ರೆ 5 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಅವಧಿಗೆ ಹೂಡಿಕೆ ಮಾಡುವುದಾದರೆ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಗಳು ಉತ್ತಮ ಆಯ್ಕೆ. ಮತ್ತೊಂದೆಡೆ, ಅಲ್ಪಾವಧಿಗೆ ಹೂಡಿಕೆ ಮಾಡಬೇಕು ಅಂತಿದ್ದರೆ, ಅಂದರೆ 1 ರಿಂದ 3 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು ಎಂದಾದರೆ ಡೆಟ್‌ ಮ್ಯೂಚುಯಲ್‌ ಫಂಡ್‌ ನಲ್ಲಿ ನೀವು ಎಸ್​ ಐಪಿ ಆರಂಭಿಸಬಹುದು..

ಹೂಡಿಕೆ ಮಾಡುವುದಕ್ಕೂ ಮೊದಲು ಹಣಕಾಸು ಸಮಾಲೋಚಕರನ್ನ ಸಂಪರ್ಕಿಸಿ. ಅನೇಕ ಯುವಜನತೆ, ಉಳಿತಾಯ ಮತ್ತು ಹೂಡಿಕೆ ಎರಡನ್ನೂ ಒಂದೇ ಅಂತಾ ಭಾವಿಸಿದ್ದಾರೆ. ಉಳಿತಾಯ ಅಥವಾ ಸೇವಿಂಗ್ಸ್‌ ಅಂದ್ರೆ, ನೀವು ಕಾಲಕ್ರಮೇಣ ಅಲ್ಪ ಮೊತ್ತ ಕೂಡಿಡುತ್ತಾ ಹೋಗಿ, ಬೃಹತ್‌ ಮೊತ್ತ ಪೇರಿಸೋದು. ಹೀಗೆ ಮಾಡಿದರೆ, ಅಲ್ಪಾವಧಿಯಲ್ಲಿ ವೈದ್ಯಕೀಯ ಚಿಕಿತ್ಸೆ, ಮನೆ ಅಥವಾ ವಾಹನ ನಿರ್ವಹಣೆಯಂತಹ ತುರ್ತು ಅಗತ್ಯಗಳಿಗೆ ಹಣಕ್ಕಾಗಿ ಪರದಾಡುವುದು ತಪ್ಪುತ್ತದೆ. ಅಂದರೆ, ನಿಮ್ಮ ಉಳಿತಾಯದ ಹಣ ಸುಲಭವಾಗಿ ಬಳಕೆಗೆ ದೊರೆತರೆ ಅಥವಾ ಲಿಕ್ವಿಡ್‌ ಆಗಿದ್ರೆ, ಅದು ಸೇವಿಂಗ್ಸ್. ನಗದು ರೂಪದಲ್ಲಿ ನಿಮ್ಮ ಬಳಿ ಇರೋ ಹಣ ಅಥವಾ ಉಳಿತಾಯ ಖಾತೆಯಲ್ಲಿ ಇರುವ ಹಣವೇ ಸೇವಿಂಗ್ಸ್‌ ಅಂತಾ ಹೇಳಬಹುದು..

ಕಾಲಕ್ರಮೇಣ ಹೂಡಿಕೆಯಲ್ಲಿ ಏರಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಹಣಕಾಸು ಲಾಭ ಗಳಿಸೋಕೆ ನಿಮ್ಮ ಹಣವನ್ನ ಯಾವುದಾದರೂ ಅಸೆಟ್‌ ನಲ್ಲಿ ಹಾಕಿದರೆ ಅದು ಹೂಡಿಕೆ. ರಿಟರ್ನ್ಸ್‌ ಗಳಿಸೋದೇ ಹೂಡಿಕೆಯ ಗುರಿ. ಹೀಗೆ ನಿಮ್ಮ ಹಣವನ್ನ ನಿಶ್ಚಿತ ಗಳಿಕೆ ಇಲ್ಲದ ಮ್ಯೂಚುಯಲ್‌ ಫಂಡ್‌, ಷೇರುಗಳು, ಆಸ್ತಿ ಮತ್ತು ಚಿನ್ನ ಮೊದಲಾದವುಳಲ್ಲಿ ಹಾಕಿದರೆ, ಅದುವೇ ಇನ್ವೆಸ್ಟ್‌ ಮೆಂಟ್‌ ಅಥವಾ ಹೂಡಿಕೆ. ಇದರ ಮೇಲೆ ಸಿಗೋ ರಿಟರ್ನ್ಸ್‌ ಸಂಪೂರ್ಣವಾಗಿ ಕಂಪೆನಿಯ ಪರ್ಫಾರ್ಮೆನ್ಸ್‌ ಅಥವಾ ಮಾರುಕಟ್ಟೆ ಸ್ಥಿತಿಗತಿ ಆಧರಿಸಿರುತ್ತದೆ ಎನ್ನುವುದು ನಿಮ್ಮ ನೆನಪಿನಲ್ಲಿ ಇರಬೇಕು.

Published: April 19, 2024, 15:00 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ