ಮಹತ್ವದ ವಿಚಾರವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅಲ್ಪಾವಧಿಯ ವ್ಯಾಪಾರ ಸಾಲಗಳ ಸಾಧಕ-ಬಾಧಕಗಳು ಯಾವುವು? ಎನ್ನುವುದನ್ನು ಒಂದೊಂದಾಗಿ ತಿಳಿಸಿಕೊಡುತ್ತೇವೆ.
ಯಾವುದೇ ವಾಣಿಜ್ಯೋದ್ಯಮಿ ವ್ಯವಹಾರವನ್ನು ಪ್ರಾರಂಭಿಸಿದಾಗ, ಅವರಿಗೆ ಬೇಕಾಗಿರುವುದು ನಿರಂತರ ಬಂಡವಾಳ. ವಿವಿಧ ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಹಣವನ್ನು ಸಂಗ್ರಹಿಸಲು ವಾಣಿಜ್ಯೋದ್ಯಮಿಗೆ ಎರಡು ಮೂಲಗಳಿವೆ. ಮೊದಲನೆಯದು ಅವರ ಉಳಿತಾಯದಿಂದ ಮತ್ತು ಇನ್ನೊಂದು ಬಾಹ್ಯ ಮೂಲಗಳು. ಬಂಡವಾಳದ ಅಗತ್ಯಕ್ಕಾಗಿ ಉಳಿತಾಯವನ್ನು ಬಳಸುವುದು ಉತ್ತಮ ಆಯ್ಕೆ ಎಂದಿಗೂ ಅಲ್ಲ. ಆದ್ದರಿಂದ, ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಬಯಸುವ ಉದ್ಯಮಿಗಳು ಹೊರಗಿನಿಂದ ಬಂಡವಾಳ ಸಂಗ್ರಹಣೆಗೆ ಒತ್ತು ನೀಡುತ್ತಾರೆ.
ಬಂಡವಾಳ ಸಂಗ್ರಹಣೆಗೆ ಅಲ್ಪಾವಧಿ ವ್ಯಾಪಾರ ಸಾಲ ಒಂದು ಆಯ್ಕೆ. ಈ ಸಾಲ ಕೆಲವು ಸಾಧಕ-ಬಾಧಕಗಳನ್ನು ಒಳಗೊಂಡಿರುತ್ತವೆ. ಹಾಗಾದರೆ ಲಾಭ ನಷ್ಟಗಳನ್ನು ಒಂದೊಂದಾಗಿ ನೋಡಿಕೊಂಡು ಬರೋಣ.
ಅಲ್ಪಾವಧಿ ಸಾಲದ ಲಾಭಗಳು 1. ತಕ್ಷಣದ ಬಂಡವಾಳ ತ್ವತರಿತವಾಗಿ ಬಂಡವಾಳ ಒದಗಿಸುವುದಕ್ಕೆ ಈ ಸಾಳ ಬೆಸ್ಟ್ ಆಯ್ಕೆ. ಸಾಲದ ಪ್ರಕ್ರಿಯೆ ಸಹ ಅಷ್ಟೆ ತ್ವರಿತವಾಗಿ ಇರುವುದರಿಂದ 48 ಗಂಟೆಗಳ ಒಳಗೆ ಹಣ ದೊರೆಯುತ್ತದೆ.
2. ಯಾವುದೇ ಕ್ರೆಡಿಟ್ ಚೆಕ್ಗಳಿಲ್ಲ ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿರುವರಿಗೆ ಸಾಲ ಸಿಗುವ ಸಾಧ್ಯತೆಗಳು ಕಡಿಮೆಯೇ. ಆದರೆ ಕೆಲವು ಹಣಕಾಸು ಸಂಸ್ಥೆಗಳು ವ್ಯಾಪಕವಾದ ಕ್ರೆಡಿಟ್ ಚೆಕ್ಗಳಿಲ್ಲದೆ ಅಲ್ಪಾವಧಿಯ ಸಾಲ ಒದಗಿಸುತ್ತವೆ. ಅರ್ಜಿದಾರರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಅವರು ತಕ್ಷಣವೇ ಸಾಲದ ಮೊತ್ತ ಪಡೆದುಕೊಳ್ಳುತ್ತಾರೆ.
3. ಉತ್ತಮ ನಿಯಂತ್ರಣ ನಿಧಿ ಸಂಗ್ರಹಿಸಲು ವಾಣಿಜ್ಯೋದ್ಯಮಿಗಳಿಗೆ ಎರಡು ಆಯ್ಕೆಗಳಿವೆ. ವಿಸಿ ಫಂಡಿಂಗ್ ಅಥವಾ ವ್ಯಾಪಾರ ಸಾಲಗಳು ಮೊದಲ ಆಯ್ಕೆ. ತಮ್ಮ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಫಂಡ್ ಸಂಗ್ರಹಿಸಬಹುದು. ಆದರೆ ಕಂಪನಿ ಮೇಲಿನ ಹಿಡಿತವನ್ನು ಇದು ಕಡಿಮೆ ಮಾಡಬಹುದು. ಇದಕ್ಕೆ ಬದಲಾಗಿ ಸಣ್ಣ ವ್ಯಾಪಾರದ ಸಾಲ ಪಡೆದುಕೊಂಡರೆ ಕಂಪನಿ ಮೇಲಿನ ಹಿಡಿತ ತಪ್ಪುವುದಿಲ್ಲ. ಆದರೆ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ತುಂಬಬೇಕಾಗುತ್ತದೆ.
4. ಅಲ್ಪಾವಧಿಯ ಹೊಣೆಗಾರಿಕೆ ಅಲ್ಪಾವಧಿಯ ವ್ಯಾಪಾರ ಸಾಲಗಳು ಸಾಲ ಮರುಪಾವತಿಯ ಕಡಿಮೆ ಅವಧಿ ಹೊಂದಿರುತ್ತವೆ. ಇಎಂಐ ಮಾದರಿಯಲ್ಲಿ ಸಾಲವನ್ನು ಮರುಪಾವತಿ ಮಾಡಿಕೊಳ್ಳುತ್ತಾ ಬರಬಹುದು.
ಅಲ್ಪಾವಧಿ ಸಾಲದ ಸವಾಲುಗಳು 1. ಹೆಚ್ಚಿನ EMI ದೀರ್ಘಾವಧಿ ಸಾಲಕ್ಕೆ ಸಾಮಾನ್ಯವಾಗಿ ಬಡ್ಡಿ ದರ ಕಡಿಮೆ ಇದ್ದರೆ ಅಲ್ಪಾವಧಿ ಸಾಲಕ್ಕೆ ಜಾಸ್ತಿ ಇರುತ್ತದೆ. ಹೀಗಾಗಿ, ಅಲ್ಪಾವಧಿಯ ವ್ಯಾಪಾರ ಸಾಲಗಳ EMI ಗಳು ಹೆಚ್ಚಿರುತ್ತವೆ. EMI ಗಳು ಅಸಲು ಮೊತ್ತ ಮತ್ತು ಬಡ್ಡಿಯ ಒಂದು ಭಾಗವನ್ನು ಒಳಗೊಂಡಿರುತ್ತವೆ. ಇದು ಮಾಸಿಕವಾಗಿ ಹೆಚ್ಚಿನ ಮೊತ್ತ ಪಾವತಿ ಮಾಡಬೇಕಾದ ಒತ್ತಡಕ್ಕೆ ನಿಮ್ಮನ್ನು ಸಿಲುಕಿಸಬಹುದು.
1.ಅಧಿಕ-ಬಡ್ಡಿ ದರಗಳು ಮೊದಲೇ ಹೇಳಿದಂತೆ ಅಲ್ಪಾವಧಿ ಸಾಲದ ಬಡ್ಡಿ ದರ ದೀರ್ಘಾವಧಿ ಸಾಲದ ಬಡ್ಡಿ ದರಕ್ಕಿಂತ ಅಧಿಕ. ಈ ಸಾಲ ಮಾಡಿದಾಗ ಹೆಚ್ಚಿನ ಬಡ್ಡಿ ದರ ಪಾವತಿ ಮಾಡಬೇಕಾಗಿರುವುದು ಅನಿವಾರ್ಯ.
2. ಹಣಕಾಸಿನ ಬಾಧ್ಯತೆಗಳು ಅಲ್ಪಾವಧಿಗೆ ವ್ಯಾಪಾರ ಸಾಲಗಳು ಹಣಕಾಸಿನ ಹೊಣೆಗಾರಿಕೆಯನ್ನು ಸೃಷ್ಟಿಸುತ್ತವೆ. ನಿಮ್ಮ ಬಳಿ ಸಾಕಷ್ಟು ನಗದು ಇಲ್ಲವಾದ ಸಂದರ್ಭ ಎದುರಾದರೆ ಪರಿಸ್ತಿತಿ ನಿಭಾಯಿಸುವುದು ಕಷ್ಟvಾಗಬಹುದು.
3. ಅರ್ಹತೆಯ ಮಾನದಂಡ ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ಉದ್ಯಮಿಗಳಿಗೆ ಮಾತ್ರ ಸಾಲದಾತರು ವ್ಯಾಪಾರ ಸಾಲ ನೀಡುತ್ತಾರೆ. ಎಲ ಸಂದರ್ಭ ಸಣ್ಣ ಉದ್ಯಮಿಗೆ ಈ ಅರ್ಹತಾ ಮಾನದಂಡಗಳನ್ನು ಸಾಮಾನ್ಯವಾಗಿ, ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದ ಉದ್ಯಮಿಗಳು ಅರ್ಹತಾ ಮಾನದಂಡಗಳನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗದೆ ಇರಬಹುದು.
IIFL ಫೈನಾನ್ಸ್ನಿಂದ ಅತ್ಯುತ್ತಮ ಅಲ್ಪಾವಧಿ ಬಿಸಿನಸ್ ಲೋನ್
ಭಾರತದ ಪ್ರತಿಷ್ಠಿತ ಸಾಲದಾತ ಕಂಪನಿ IIFL ಫೈನಾನ್ಸ್ ಅತ್ಯುತ್ತಮ ಅಲ್ಪಾವಧಿಯ ವ್ಯಾಪಾರ ಸಾಲ ನೀಡಿಕೊಂಡು ಬಂದಿದೆ. IIFL ಫೈನಾನ್ಸ್ನ ಬಿಸಿನೆಸ್ ಲೋನ್ ಅನ್ನು ಆನ್ಲೈನ್ನಲ್ಲಿ ಶೀಘ್ರವಾಗಿ ಪಡೆದುಕೊಳ್ಳಬಹುದು. ಕನಿಷ್ಠ ದಾಖಲೆಗಳೊಂದಿಗೆ 30 ಲಕ್ಷ ರೂ. ವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಬಡ್ಡಿ ದರ ಸಹ ಆಕರ್ಷಕವಾಗಿದ್ದು ಮರುಪಾವತಿಯ ಸಂಕಷ್ಟ ಎದುರಾಗುವುದಿಲ್ಲ. ಅಲ್ಪಾವಧಿಯ ಬಿಸಿನಸ್ ಲೋನ್ ಪಡೆದುಕೊಳ್ಳಲು https://www.iifl.com ಗೆ ಭೇಟಿ ನೀಡಬಹುದು.
ಕೆಲ ಪ್ರಶ್ನೋತ್ತರಗಳ ಮುಖೇನ ಇದೇ ವಿಚಾರವನ್ನು ಇನ್ನಷ್ಟು ಸರಳವಾಗಿ ಅರ್ಥಮಾಡಿಕೊಳ್ಳಬಹುದು.
1: IIFL ಫೈನಾನ್ಸ್ ಸಾಲ ನೀಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಉತ್ತರ: IIFL ಫೈನಾನ್ಸ್ ನಲ್ಲಿ ಬಿಸಿನೆಸ್ ಲೋನ್ ಅರ್ಜಿ ಸಲ್ಲಿಸಿದರೆ 30 ನಿಮಿಷಗಳಲ್ಲಿ ಅನುಮೋದನೆ ಸಿಗುತ್ತದೆ.
2: IIFL ಫೈನಾನ್ಸ್ನ ವ್ಯಾಪಾರ ಸಾಲದ ಸಾಲದ ಅವಧಿ ಎಷ್ಟು? ಉತ್ತರ: 30 ಲಕ್ಷ ರೂ.ವರೆಗಿನ ವ್ಯಾಪಾರ ಸಾಲದ ಸಾಲದ ಅವಧಿ ಐದು ವರ್ಷಗಳು.
3: IIFL ಫೈನಾನ್ಸ್ನಿಂದ ವ್ಯಾಪಾರ ಸಾಲವನ್ನು ತೆಗೆದುಕೊಳ್ಳಲು ಏನಾದರೂ ದಾಖಲೆ ಅಥವಾ ಕೋಲಾಟರಲ್ ಅಗತ್ಯವಿದೆಯೇ? ಉತ್ತರ: ಇಲ್ಲ, IIFL ಫೈನಾನ್ಸ್ನಿಂದ ವ್ಯಾಪಾರ ಸಾಲವನ್ನು ತೆಗೆದುಕೊಳ್ಳಲು ನೀವು ಯಾವುದೇ ಆಸ್ತಿಯನ್ನು ಅಡವಿಡುವ ಅಗತ್ಯವಿಲ್ಲ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ