` what are add on credit cards | ಆಡ್ ಆನ್ ಕ್ರೆಡಿಟ್ ಕಾರ್ಡ್, ಲಾಭ ಮತ್ತು ನಷ್ಟದ ಲೆಕ್ಕಾಚಾರ ಇಲ್ಲಿದೆ! | Money9 Kannada

ಆಡ್ ಆನ್ ಕ್ರೆಡಿಟ್ ಕಾರ್ಡ್, ಲಾಭ ಮತ್ತು ನಷ್ಟದ ಲೆಕ್ಕಾಚಾರ ಇಲ್ಲಿದೆ!

ಹೆಚ್ಚುವರಿ ಕಾರ್ಡ್ ಸಹ ಮುಖ್ಯ ಕಾರ್ಡ್‌ನಂತೆಯೇ ಕ್ರೆಡಿಟ್ ಮಿತಿ ಹೊಂದಿರುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಬ್ಯಾಂಕಿನ ಜಂಟಿ ಖಾತೆಯಂತೆ ಕೆಲಸ ಮಾಡುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಆಡ್-ಆನ್ ಕ್ರೆಡಿಟ್ ಕಾರ್ಡ್ ನಿಮ್ಮ ಹಣಕಾಸಿನ ನಿರ್ವಹಣೆ ಸುಲಭಗೊಳಿಸುತ್ತದೆ. ಮಲ್ಟಿಪಲ್ ಕಾರ್ಡ್ ಅಕೌಂಟ್ ಇಲ್ಲದೆ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವೈಯಕ್ತಿಕ ಖರ್ಚಿಗೆ ಮಿತಿ ಹೊಂದಿಸಲು ಸಹಾಯ ಮಾಡುತ್ತದೆ.

ದೀರ್ಘ ಕಾಲದಿಂದ ಅಭಯ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಅಭಯ್ ಬಳಿ ಮಾತ್ರ ಕ್ರೆಡಿಟ್ ಕಾರ್ಡ್ ಇದೆ. ಅಭಯ್ ಪುತ್ರ ಅಂಕಿತ್ ಈಗಷ್ಟೇ ಕಾಲೇಜಿಗೆ ಹೋಗಲು ಪ್ರಾರಂಭಿಸಿದ್ದಾನೆ. ಈಗ ತನಗೂ ಒಂದು ಕ್ರೆಡಿಟ್ ಕಾರ್ಡ್ ಬೇಕೆಂದು ಪಟ್ಟು ಹಿಡಿದಿದ್ದಾನೆ. ಮಗನಿಗಾಗಿ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಅಭಯ್ ಗೆ ಮನಸಿಲ್ಲ. ಹೊಸದು ಪಡೆದರೆ ಆ ಬಿಲ್ ಗಳನ್ನು ಅಭಯ್ ಅವರೇ ಪಾವತಿ ಮಾಡಬೇಕಿದೆ. ಮಗ ಬೇಕಾಬಿಟ್ಟಿ ಖರ್ಚು ಮಾಡಿದರೆ ಅನ್ನೋ ಆತಂಕ ಸಹ ಅವರನ್ನು ಕಾಡುತ್ತಿದೆ. ಹಾಗಾದರೆ ಈಗ ಅಭಯ್ ಏನ್ಉ ಮಾಡಬಹುದು?

ಇದಕ್ಕೊಂದು ಪರಿಹಾರ ಇದೆ ಅದರ ಹೆಸರು ಆಡ್-ಆನ್ ಕ್ರೆಡಿಟ್ ಕಾರ್ಡ್. ಅರೆ ಇದೇನಿದು ಆಡ್ ಆನ್ ಕ್ರೆಡಿಟ್ ಕಾರ್ಡ್? ಇದು ಇದು ಹೇಗೆ ಕೆಲಸ ಮಾಡುತ್ತದೆ? ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳೋಣ. ಆಡ್-ಆನ್ ಕ್ರೆಡಿಟ್ ಕಾರ್ಡ್ ಅನ್ನು ಪೂರಕ ಕಾರ್ಡ್ ಅಥವಾ ಸೆಕೆಂಡರಿ ಕಾರ್ಡ್ ಎಂದು ಸಹ ಕರೆಯಲಾಗುತ್ತದೆ. ಇದು ವಾಸ್ತವವಾಗಿ ನಿಮ್ಮ ಪ್ರಾಥಮಿಕ ಕ್ರೆಡಿಟ್ ಕಾರ್ಡ್‌ನ ವಿಸ್ತರಣೆ ಎಂದೇ ಹೇಳಬಹುದು. ಅಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಜೊತೆಗೆ ನೀವು ಇನ್ನೊಂದು ಕಾರ್ಡ್ ಅನ್ನು ತೆಗೆದುಕೊಳ್ಳಬಹುದು. ಹೊಸದಾಗಿ ಪಡೆದುಕೊಂಡ ಕಾರ್ಡೇ ಆಡ್-ಆನ್ ಕ್ರೆಡಿಟ್ ಕಾರ್ಡ್. ಮೂಲ ಕಾರ್ಡ್ ಹೊಂದಿರುವ ವ್ಯಕ್ತಿ ತಮ್ಮ ಕ್ರೆಡಿಟ್ ಲೈನ್ ಅಥವಾ ಲಿಮಿಟ್ ನ್ನು ಆಡ್ ಆನ್ ಕಾರ್ಡ್ ಪಡೆದವರ ಜತೆ ಶೇರ್ ಮಾಡಿಕೊಳ್ಳಬಹುದು.

ಪಡೆದುಕೊಂಡ ಹೆಚ್ಚುವರಿ ಕಾರ್ಡ್ ಸಹ ಮುಖ್ಯ ಕಾರ್ಡ್‌ನಂತೆಯೇ ಕ್ರೆಡಿಟ್ ಮಿತಿ ಹೊಂದಿರುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಬ್ಯಾಂಕಿನ ಜಂಟಿ ಖಾತೆಯಂತೆ ಕೆಲಸ ಮಾಡುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಆಡ್-ಆನ್ ಕ್ರೆಡಿಟ್ ಕಾರ್ಡ್ ನಿಮ್ಮ ಹಣಕಾಸಿನ ನಿರ್ವಹಣೆ ಸುಲಭಗೊಳಿಸುತ್ತದೆ. ಮಲ್ಟಿಪಲ್ ಕಾರ್ಡ್ ಅಕೌಂಟ್ ಇಲ್ಲದೆ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವೈಯಕ್ತಿಕ ಖರ್ಚಿಗೆ ಮಿತಿ ಹೊಂದಿಸಲು ಸಹಾಯ ಮಾಡುತ್ತದೆ.

ಈ ಸೌಲಭ್ಯವು ವಿಶೇಷವಾಗಿ ಪೋಷಕರಿಗೆ ಪ್ರಯೋಜನಕಾರಿಯಾಗಿದೆ. ತಮ್ಮ ಮಕ್ಕಳಿಗೆ ಹಣ ನೀಡಲು ಒಂದು ಕಡೆ ಆಸಕ್ತಿ ಇದ್ದು ಅವರ ವೆಚ್ಚದ ಮೇಲೆ ನಿಯಂತ್ರಣವೂ ಇರಬೇಕು ಎನ್ನುವವರಿಗೆ ಬೆಸ್ಟ್ ಆಪ್ಶನ್. ಅಲ್ಲದೆ ಪ್ರತಿ ಆಡ್-ಆನ್ ಕ್ರೆಡಿಟ್ ಕಾರ್ಡ್‌ನಲ್ಲಿ ಖರ್ಚಿನ ಮಿತಿ ಕಸ್ಟಮೈಸ್ ಮಾಡಬಹುದು . ಅಂದರೆ, ನೀವು ನಿಮ್ಮ ಆಯ್ಕೆಯ ಪ್ರಕಾರ ಅದನ್ನು ಹೊಂದಿಸಬಹುದು. ಇದು ಕುಟುಂಬದ ಯಾವುದೇ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ನೀವು ಪ್ರತಿ ವ್ಯವಹಾರವನ್ನು ಟ್ರ್ಯಾಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಯಾರು ಎಲ್ಲಿ ಮತ್ತು ಯಾವ ವಸ್ತುವಿಗೆ ಎಷ್ಟು ಖರ್ಚು ಮಾಡುತ್ತಿದ್ದಾರೆಂದು ನಿಮಗೆ ತಿಳಿಯುತ್ತದೆ. ಅಲ್ಲದೇ ಆಡ್ ಆನ್ ಕಾರ್ಡ್ ಪಡೆದ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಿಲ್ಡ್ ಮಾಡಲು ಕಾರಣವಾಗುತ್ತದೆ.

ಕಾರ್ಡ್‌ನ ಸರಿಯಾದ ಬಳಕೆ ಮತ್ತು ಸಮಯೋಚಿತ ಪಾವತಿಯು ಪ್ರಾಥಮಿಕ ಮತ್ತು ದ್ವಿತೀಯ ಕಾರ್ಡ್ ಹೊಂದಿರುವವರ ಕ್ರೆಡಿಟ್ ಸ್ಕೋರ್‌ ಪಾಸಿಟಿವ್ ಆಗಲು ಕಾರಣವಾಗುತ್ತದೆ. ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ವಿಶೇಷ ಪ್ರಯೋಜನ ನೀಡುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಇದೊಂದು ಲೈಫ್ ಪೈನ್ ರೀತಿ ಕೆಲಸ ಮಾಡುತ್ತದೆ. ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಅಥವಾ ಎಲ್ಲೋ ಪ್ರಯಾಣಿಸುತ್ತಿದ್ದರೆ ಅಥವಾ ಹಠಾತ್ ಹಣದ ತುರ್ತು ಪರಿಸ್ಥಿತಿ ಎದುರಾದರೆ ಈ ಕಾರ್ಡ್ ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ.

ಹಾಗಿದ್ದರೆ ಈ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಕಾರ್ಡ್ ಪಡೆದುಕೊಳ್ಳುವ ಪ್ರಕ್ರಿಯೆ ತುಂಬಾ ಸರಳಬವಾಗಿದೆ. ಬ್ಯಾಂಕ್‌ನ ವೆಬ್ ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಆಡ್ ಆನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯಲ್ಲಿ ಪ್ರಾಥಮಿಕ ಮತ್ತು ಆಡ್ ಆನ್ ಕಾರ್ಡ್ ಬೇಕಾದವರಿಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಭರ್ತಿ ಮಾಡಬೇಕಿರುತ್ತದೆ. ಎಲ್ಲ ದಾಖಲೆ ಸಬ್ ಮಿಟ್ ಮಾಡಿದ ಮೇಲೆ ಬ್ಯಾಂಕ್ ನಿಂದ ಅಪ್ರೂವಲ್ ಸಿಗುತ್ತದೆ. ಈ ಎಲ್ಲ ಪ್ರಕ್ರಿಯೆ ನಂತರ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ನಿಮ್ಮ ಫ್ಯಾಮಿಲಿ ಸದಸ್ಯರಿಗೆ ಅಗತ್ಯವಿದ್ದರೆ ಈ ರೀತಿ ನೀವು ಆಡ್-ಆನ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು.

Published: April 5, 2024, 15:21 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ