` know this before you deactivate credit card | ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಇದೆಲ್ಲ ಗೊತ್ತಿರಲಿ! | Money9 Kannada

ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಇದೆಲ್ಲ ಗೊತ್ತಿರಲಿ!

ನೀವು ದೀರ್ಘಕಾಲದವರೆಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಆ ಕ್ರೆಡಿಟ್ ಕಾರ್ಡ್ ಕ್ಲೋಸ್ ವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳಿ.

ಅಮನ್ ತನ್ನ ಕ್ರೆಡಿಟ್ ಕಾರ್ಡ್‌ ಜಾಸ್ತಿ ಬಳಕೆ ಮಾಡುತ್ತಿದ್ದಾರೆ. ಇದರ ಪರಿಣಾಮ ಅವರ ವೆಚ್ಚ ಜಾಸ್ತಿಯಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರು ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಲು ಬಯಸುತ್ತಿದ್ದಾರೆ.. ಆದರೆ ಅವರ ಈ ನಿರ್ಧಾರ ಸರಿಯೇ? ವೆಚ್ಚವನ್ನು ನಿಯಂತ್ರಿಸಲು ಇದೊಂದೇ ಪರಿಹಾರನಾ..? ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೆ ಮುನ್ನ ಯಾವೆಲ್ಲ ವಿವರಗಳನ್ನು ಗಮನಿಸಿಕೊಳ್ಳಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳೋಣ.

ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ ಮತ್ತು ಇತರ ಪ್ರಯೋಜನಗಳಿಂದಾಗಿ ಕ್ರೆಡಿಟ್ ಕಾರ್ಡ್‌ಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚಾಗುತ್ತಿದೆ.. ಈ ಹಿಂದೆ ಕ್ರೆಡಿಟ್ ಕಾರ್ಡ್ ಇದ್ದರೆ ಅದೊಂದು ಪ್ರತಿಷ್ಠೆ ಅಂತಾನೇ ಪರಿಗಣಿಸಲಾಗಿತ್ತು, ಈಗ ಅದನ್ನು ಸುಲಭ ಪಾವತಿಯ ಸಾಧನ ಅಂತ ಪರಿಗಣಿಸಲಾಗುತ್ತಿದೆ. ಇದು ಆನ್‌ಲೈನ್/ಆಫ್‌ಲೈನ್ ಶಾಪಿಂಗ್, ಸುಲಭ ವಹಿವಾಟುಗಳು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕ ಪಾವತಿಗಳಂತಹ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.

ಎಲ್ಲಾ ಪ್ರಯೋಜನಗಳ ಹೊರತಾಗಿಯೂ, ಅಮಾನ್‌ನಂತೆಯೇ, ನೀವು ಕೂಡ ಕೆಲವು ಕಾರಣಗಳಿಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಲು ಬಯಸಬಹುದು. ಇದು ನಿಮ್ಮ ಹೆಚ್ಚುತ್ತಿರುವ ವೆಚ್ಚಗಳನ್ನು ನಿಯಂತ್ರಿಸುವುದು, ಡೆಬಿಟ್ ಕಾರ್ಡ್‌ಗಳು ಮತ್ತು UPI ಅನ್ನು ಮತ್ತೆ ಬಳಸಲು ಆದ್ಯತೆ ನೀಡುವುದು, ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕಗಳನ್ನು ತಪ್ಪಿಸುವುದು ಮತ್ತು ಇತ್ಯಾದಿ. ಹೀಗಾಗಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮೊದಲು, ನೀವು ಕೆಲವು ವಿಷಯಗಳನ್ನು ತಿಳಿದಿರಬೇಕು, ಕಾರ್ಡ್ ಕ್ಲೋಸ್ ಮಾಡುವುದರಿಂದ ನಿಮ್ಮ ಹಣಕಾಸಿನ ಮೇಲೆ ಯಾವುದೆ ಪರಿಣಾಮ ಆಗುವುದಿಲ್ಲ ಎನ್ನುವುದು ಗೊತ್ತಿರಬೇಕು.

ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮೊದಲು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಚ್ಚಿನ ಶುಲ್ಕಗಳು, ಬಡ್ಡಿ ದರಗಳು ಅಥವಾ ಖರ್ಚಿನ ಮಾದರಿಯಲ್ಲಿ ಬದಲಾವಣೆಗಳು ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಲು ನೀವು ಬಯಸುವ ನೈಜ ಕಾರಣಗಳಾಗಿಳಾಗಿದೆಯಾ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಮ್ಮೆ ನೀವು ಕಾರಣವನ್ನು ಅರ್ಥಮಾಡಿಕೊಂಡ ನಂತರವೂ ನಿಮ್ಮ ಕಾರ್ಡ್ ಕ್ಲೋಸ್ ಮಾಡಲು ಬಯಸುತ್ತೀರಿ ಎಂದಾದರೆ ಅದಕ್ಕೆ ಅನುಗುಣವಾಗಿ ಮುಂದುವರಿಯಲು ಒಂದು ಪರಿಶೀಲನಾಪಟ್ಟಿ ಇರುತ್ತದೆ.

ಮೊದಲನೆಯದಾಗಿ, ನೀವು ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆದರೆ, ನಿಮ್ಮ ಎಲ್ಲಾ ಪಾಯಿಂಟ್‌ಗಳನ್ನು ನೀವು ರಿಡೀಮ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಕಾರ್ಡ್ ಕ್ಲೋಸ್ ವುದರೊಂದಿಗೆ, ಎಲ್ಲಾ ರಿವಾರ್ಡ್ ಪಾಯಿಂಟ್‌ಗಳು ಸಹ ನಿಷ್ಪ್ರಯೋಜಕವಾಗುತ್ತವೆ. ಎರಡನೆಯದಾಗಿ, ಕಾರ್ಡ್ ಅನ್ನು ಕ್ಲೋಸ್ ವ ಮೊದಲು, ನಿಮ್ಮ ಸಂಪೂರ್ಣ ಬಾಕಿ ಪಾವತಿಸಿ.

ನೀವು ಬಾಕಿಗಳನ್ನು ಪಾವತಿಸದಿದ್ದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಇದನ್ನು ಪಾವತಿ ಡೀಫಾಲ್ಟ್ ಅಥವಾ ತಡವಾದ ಮರುಪಾವತಿ ಎಂದು ಪರಿಗಣಿಸಲಾಗುತ್ತದೆ ಮತ್ತು ನೀವು ಲೇಟ್ ಫೀ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದರ ಹೊರತಾಗಿ, ನೀವು ದೀರ್ಘಕಾಲದವರೆಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಆ ಕ್ರೆಡಿಟ್ ಕಾರ್ಡ್ ಕ್ಲೋಸ್ ವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನೀವು ಯಾವುದೇ ಸ್ವಯಂ-ಡೆಬಿಟ್ ಮಾಡಿದ್ದರೆ, ಕಾರ್ಡ್ ಕ್ಲೋಸ್ ಮಾಡುವ ಮೊದಲು, ಪಾವತಿ ಮೋಡ್ ಬದಲಾಯಿಸಿ. ಅಂದರೆ ವ್ಯಾಪಾರಿ ಪ್ಲಾಟ್‌ಫಾರ್ಮ್‌ನಿಂದ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್ ಅನ್ನು ತೆಗೆದುಹಾಕಿ.

ಇದೆಲ್ಲವನ್ನೂ ಮಾಡಿದ ನಂತರ ನೀವು ಕಾಂಟ್ಯಾಕ್ಟ್ ಸಪೋರ್ಟ್ ನಂಬರ್​ಗೆ ಕರೆ ಮಾಡಿ. ನಿಮ್ಮ ಕ್ರೆಡಿಟ್ ಕಾರ್ಡ್ ಕ್ಲೋಸ್ ಪ್ರಕ್ರಿಯೆ ಪ್ರಾರಂಭಿಸಲು ಬ್ಯಾಂಕ್‌ನ ಗ್ರಾಹಕ ಸೇವಾ ತಂಡಕ್ಕೆ ಹೇಳಿ. ಇಮೇಲ್ ಮೂಲಕ ಔಪಚಾರಿಕವಾಗಿ ಕ್ಲೋಸ್ ಮಾಡುವ ವಿನಂತಿಯನ್ನ ಕಳುಹಿಸಿ.. ನಿಮ್ಮ ಹೆಸರು, ವಿಳಾಸ, ಕ್ರೆಡಿಟ್ ಕಾರ್ಡ್‌ನ ಕೊನೆಯ 4 ಅಂಕಿಗಳನ್ನು ಸೇರಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ ಯಾಕೆ ಕ್ಲೋಸ್ ಮಾಡಲು ನೀವು ಬಯಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಬರೆಯಿರಿ. ಕ್ಲೋಸಿಂಗ್ ಅಕ್ ನಾಲೆಜ್ ಮೆಂಟ್ ಸ್ವೀಕರಿಸಿ. ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚುವಿಕೆ ಅಂದರೆ ಕ್ಲೋಸಿಂಗ್ ನ ಲಿಖಿತ ದೃಢೀಕರಣವನ್ನು ಕೇಳಿ ಪಡೆದುಕೊಳ್ಳಿ. ನಿಮ್ಮ ಹಣಕಾಸಿನ ದಾಖಲೆಗಳಿಗೆ ಈ ದಾಖಲೆಗಳು ಮುಖ್ಯವಾಗಿವೆ. ದೃಢೀಕರಣವನ್ನು ಸ್ವೀಕರಿಸಿದ ನಂತರ, ನಿಮ್ಮ ಕಾರ್ಡ್ ಅನ್ನು ಯಾರೂ ದುರುಪಯೋಗಪಡಿಸಿಕೊಳ್ಳದ ರೀತಿಯಲ್ಲಿ ನಾಶಮಾಡಬೇಕು. ಹೀಗೆ ಮಾಡುವುದರಿಂದ ನೀವು ಸುರಕ್ಷಿತರಾಗಿರುತ್ತೀರಿ.

Published: April 11, 2024, 12:09 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ