-
ಅದೇ ರೀತಿ, ಹಣಕಾಸು ವರ್ಷ 25 ರಲ್ಲೂ ವ್ಯಾಲ್ಯುಯೇಷನ್ ಉತ್ತಮವಾಗಿದ್ರೆ, ಐಪಿಒಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತವೆ. ಆಗ ಜನರು ಹಣ ಮಾಡಬಹುದು. ಓಲಾ ಎಲೆಕ್ಟ್ರಿಕ್, ಸ್ವಿಗ್ಗಿ ಮತ್ತು ಟಾಟಾ ಪ್ಲೇ ನಲ್ಲಿ ಹೂಡಿಕೆ ಆಸಕ್ತಿದಾಯಕವಾಗಿರುತ್ತದೆ.
-
ಕಳೆದ ವರ್ಷ ಭಾರತೀಯ ಷೇರು ಮಾರುಕಟ್ಟೆಯ ಪರ್ಫಾಮೆನ್ಸ್ ಅತ್ಯುತ್ತಮವಾಗಿತ್ತು. ಹಣಕಾಸು ವರ್ಷ 2023-24 ರಲ್ಲಿ ಸುಮಾರು ಶೇಕಡ 29 ರಷ್ಟು ರಿಟರ್ನ್ಸ್ ಕೊಟ್ಟಿದ್ದು, ವಿಶ್ವದ ಷೇರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುಕಟ್ಟೆಯ ಈ ಸದೃಢ ಪರ್ಫಾಮೆನ್ಸ್ ಗೆ ಸಾಂಸ್ಥಿಕ ಹೂಡಿಕೆದಾರರ ಖರೀದಿ, ಉತ್ತಮ ವಿದೇಶಿ ಸೂಚನೆಗಳು, ಸದೃಢ ಆರ್ಥಿಕ ಸೂಚಕಗಳು ಕಾರಣವಾಗಿವೆ. ಆದರೆ, ಸದೃಢ ಆರ್ಥಿಕ ಪ್ರಗತಿ ಮತ್ತು ಷೇರು ಮಾರುಕಟ್ಟೆಯ ಓಟದ ನಡುವೆ ರಫ್ತು ಆಧಾರಿತ ಕಂಪೆನಿಗಳ ಷೇರುಗಳ ಕಥೆ ಏನು? ಈ ಕಂಪೆನಿಗಳು ಹೇಗೆ ಪರ್ಫಾಮ್ ಮಾಡಿವೆ? ಈ ಷೇರುಗಳಿಗಾಗಿ ಯಾವ ಸ್ಟ್ರ್ಯಾಟೆಜಿ ಇರಬೇಕು? ಇವೆಲ್ಲವನ್ನ ಅರ್ಥ ಮಾಡ್ಕೋಳೋಣ ಬನ್ನಿ..
-
ಇತ್ತೀಚಿನ ವರ್ಷಗಳಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಪ್ರಮುಖ ಕಾರಣ. ಇದಲ್ಲದೆ SEBIಯ ಪ್ರಯತ್ನಗಳು ಮತ್ತು ರಿಸ್ಕ್ ತೆಗೆದುಕೊಳ್ಳುವ ಆಲೋಚನೆಯಲ್ಲಿರು ವ್ಯಕ್ತಿಗಳು, ಮಾರ್ಕೆಟ್ ಕಡೆ ಮುಖ ಮಾಡುತ್ತಿರುವ ಯುವಕರು ಹೆಚ್ಚಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಡಿಮ್ಯಾಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದೆ.
ಹಿಂದೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ವರ್ಷಗಳವರೆಗೆ ಇಡುತ್ತಿದ್ದರು. ಆದರೆ ಈಗ ಅನೇಕರು ತಮ್ಮ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಜನವರಿ 2024 ರ ಹೊತ್ತಿಗೆ ದೇಶದಲ್ಲಿ 14.39 ಕೋಟಿ ಡಿಮ್ಯಾಟ್ ಖಾತೆಗಳಿರುವುದೆ ಇದಕ್ಕೆ ಸಾಕ್ಷಿ.
-
ಕೋವಿಡ್ ಸಾಂಕ್ರಾಮಿಕದ ನಂತರ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಷೇರು ಮಾರುಕಟ್ಟೆ ಕ್ಷಿಪ್ರ ಚೇತರಿಕೆ ಕಂಡಿದೆ. ಹಣಕಾಸು ವರ್ಷ 21 ರಲ್ಲಿ, ದೇಶದ ಪ್ರಮುಖ ಸೂಚ್ಯಂಕ ನಿಫ್ಟಿ ದಾಖಲೆಯ ಶೇಕಡ 71 ರಷ್ಟು ಪ್ರಗತಿ ದಾಖಲಿಸಿತ್ತು. ಹಾಗೇ ಹಣಕಾಸು ವರ್ಷ 22ರಲ್ಲಿ ಶೇಕಡ 19 ರಷ್ಟು ಏರಿಕೆ ಕಂಡಿತು. ಆದಾಗ್ಯೂ, ಸಾಂಕ್ರಾಮಿಕದ ನಂತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲ್ಪಟ್ಟ ವಲಯ ಯಾವುದು ಎಂದರೆ ಅದು ಗ್ರಾಮೀಣ ವಲಯ.
-
2023-24 ರ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ ಕಂಡಿದೆ. ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಶನ್ ಐಎಸ್ಎಂಎ ಪ್ರಕಾರ, 223 ಲಕ್ಷ ಟನ್ ಸಕ್ಕರೆಯನ್ನು ಫೆಬ್ರವರಿ 15 ರ ವೇಳೆಗೆ ಇಡೀ ದೇಶದಲ್ಲಿ ಉತ್ಪಾದನೆ ಮಾಡಲಾಗಿದೆ. ಈ ವರ್ಷ ಎಥನಾಲ್ ಉತ್ಪಾದನೆಗೆ ಸಂಬಂಧಿಸಿ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದರೂ, ಸಕ್ಕರೆ ಉತ್ಪಾದನೆಯಲ್ಲಿ 2.5 ಪರ್ಸೆಂಟ್ ಇಳಿಕೆ ಕಂಡುಬಂದಿದೆ. ಅಕ್ಟೋಬರ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯನ್ನು ಉತ್ಪಾದನೆಗೆ ಸಂಬಂಧಿಸಿ ಸಕ್ಕರೆ ವರ್ಷ ಎಂದು ಕರೆಯಲಾಗುತ್ತದೆ.
-
2023 ರ ನಾಲ್ಕನೇ ತ್ರೈಮಾಸಿಕಕ್ಕೆ ಸಂಬಂಧಿಸಿ ಎಫ್ ಎಂಸಿಜಿ ಅಂದ್ರೆ ಫಾಸ್ಟ್ ಮೂವಿಂಗ್ ಕಸ್ಯೂಮರ್ ಗೂಡ್ಸ್ ಆಗಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲೇಬೇಕು. 2023 ರ ನಾಲ್ಕನೇ ತ್ರೈಮಾಸಿಕಸಲ್ಲಿ ಎಫ್ ಎಂಸಿಜಿಯ ವಾಲ್ಯೂಮ್ ಶೇ. 6.4 ರಷ್ಟು ಏರಿಕೆ ಕಂಡಿದೆ. ಇದರ ಪರಿಣಾಮ ಎಫ್ ಎಂಸಿಜಿ ವ್ಯಾಲ್ಯೂ ಸಹ ಶೇ. 6 ರಷ್ಟು ಹೆಚ್ಚಾಗಿದೆ. ನೀಲ್ಸನ್ ರಿಪೋರ್ಟ್ ಹೇಳಿರುವ ಪ್ರಕಾರ ಈ ಹೆಚ್ಚಳವು ದೇಶದ ಅನೇಕ ಭಾಗಗಳಲ್ಲಿ ಎಫ್ ಎಂಸಿಜಿ ಪ್ರಾಡಕ್ಟ್ ಬಳಕೆಯನ್ನು ಸೂಚಿಸುತ್ತದೆ.
-
ದೇಶದಲ್ಲಿ ಅತಿ ಹೆಚ್ಚು ಟ್ರ್ಯಾಕ್ಟರ್ ಮಾರಾಟ ಕಂಪನಿ ಎಂ&ಎಂ. ನಾಲ್ಕನೇ ತ್ರೈಮಾಸಿಕ ಅಂದರೆ ಪ್ರಸ್ತುತ ತ್ರೈಮಾಸಿಕದಲ್ಲಿ ಸೇಲ್ಸ್ 10% ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದೆ. ಹೀಗಾಗಿ, 2024 ರ ಇಡೀ ವಿತ್ತವರ್ಷದಲ್ಲಿ 5% ಇಳಿಕೆಯಾಗುವ ಸಾಧ್ಯತೆಯಿದೆ.
-
ಅಧಿಕ ವ್ಯಾಲ್ಯೂಯೇಶನ್ ಮತ್ತು ಬಡ್ಡಿ ದರ ಹೆಚ್ಚಳದಿಂದಾಗಿ, ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ದೇಶದಿಂದ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಗಳು ತಮ್ಮ ಹೂಡಿಕೆಗಳನ್ನು ವಿತ್ಡ್ರಾ ಮಾಡಿಕೊಂಡಿದ್ದರು.
-
ಕೋರ್ ಪ್ರಾಡಕ್ಟ್ ಅಂದ್ರೆ ಮೂಲ ಉತ್ಪನ್ನಗಳಲ್ಲಿ ತನ್ನ ಸದೃಢ ಅಸ್ತಿತ್ವ ಇನ್ನಷ್ಟು ಬಲಪಡಿಸುವುದಕ್ಕೆ ಕಂಪೆನಿ ಪ್ರಯತ್ನ ಮಾಡಿಕೊಂಡು ಬಂದಿದೆ. ಇದಕ್ಕಾಗಿ, ಕಂಪೆನಿಯು ಪರಿಸರ ಸ್ನೇಹಿ ಎಂಜಿನ್ ಆಯ್ಕೆಗಳಾದ ಸಿ ಎನ್ ಜಿ ಮತ್ತು ಹೈಡ್ರೋಜನ್ ನಂತಹ ಸಲ್ಯೂಷನ್ ಗಳನ್ನ ಅಭಿವೃದ್ಧಿ ಪಡಿಸೋಕೆ ಕಂಪೆನಿ ಗಮನಹರಿಸುತ್ತಿದೆ.
-
ವ್ಯಾಪಾರ ಮತ್ತು ಅಭಿವೃದ್ಧಿಗಾಗಿ ವಿಶ್ವಸಂಸ್ಥೆ 2023 ರಲ್ಲಿ ಕೊಟ್ಟಿರೋ ಅಂದಾಜಿಗಿಂತ ಈ ಸಂಖ್ಯೆ ಉತ್ತಮವಾಗಿದೆ.. ಭಾರತದಲ್ಲಿ, ಅಕ್ಟೋಬರ್ 2023 ರಿಂದ ಆರಂಭವಾಗುವ ಹಣಕಾಸು ವರ್ಷ 24 ರ ದ್ವಿತೀಯಾರ್ಧದಲ್ಲಿ, ರಫ್ತಿನಲ್ಲಿ ಚೇತರಿಕೆ ಕಂಡುಬಂದಿದೆ..