` buying shares of export companies do not forget this logic market outlook in 2025 | ಎಕ್ಸ್ಪೋರ್ಟ್ ಸೆಕ್ಟರ್​ನಲ್ಲಿ ಹೂಡಿಕೆ ಮಾಡ್ಬಹುದಾ? | Money9 Kannada

ಎಕ್ಸ್ಪೋರ್ಟ್ ಸೆಕ್ಟರ್​ನಲ್ಲಿ ಹೂಡಿಕೆ ಮಾಡ್ಬಹುದಾ?

ವ್ಯಾಪಾರ ಮತ್ತು ಅಭಿವೃದ್ಧಿಗಾಗಿ ವಿಶ್ವಸಂಸ್ಥೆ 2023 ರಲ್ಲಿ ಕೊಟ್ಟಿರೋ ಅಂದಾಜಿಗಿಂತ ಈ ಸಂಖ್ಯೆ ಉತ್ತಮವಾಗಿದೆ.. ಭಾರತದಲ್ಲಿ, ಅಕ್ಟೋಬರ್ 2023 ರಿಂದ ಆರಂಭವಾಗುವ ಹಣಕಾಸು ವರ್ಷ 24 ರ ದ್ವಿತೀಯಾರ್ಧದಲ್ಲಿ, ರಫ್ತಿನಲ್ಲಿ ಚೇತರಿಕೆ ಕಂಡುಬಂದಿದೆ..

ಕಳೆದ ವರ್ಷ ಭಾರತೀಯ ಷೇರು ಮಾರುಕಟ್ಟೆಯ ಪರ್ಫಾಮೆನ್ಸ್ ಅತ್ಯುತ್ತಮವಾಗಿತ್ತು. ಹಣಕಾಸು ವರ್ಷ 2023-24 ರಲ್ಲಿ ಸುಮಾರು ಶೇಕಡ 29 ರಷ್ಟು ರಿಟರ್ನ್ಸ್ ಕೊಟ್ಟಿದ್ದು, ವಿಶ್ವದ ಷೇರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುಕಟ್ಟೆಯ ಈ ಸದೃಢ ಪರ್ಫಾಮೆನ್ಸ್ ಗೆ ಸಾಂಸ್ಥಿಕ ಹೂಡಿಕೆದಾರರ ಖರೀದಿ, ಉತ್ತಮ ವಿದೇಶಿ ಸೂಚನೆಗಳು, ಸದೃಢ ಆರ್ಥಿಕ ಸೂಚಕಗಳು ಕಾರಣವಾಗಿವೆ. ಆದರೆ, ಸದೃಢ ಆರ್ಥಿಕ ಪ್ರಗತಿ ಮತ್ತು ಷೇರು ಮಾರುಕಟ್ಟೆಯ ಓಟದ ನಡುವೆ ರಫ್ತು ಆಧಾರಿತ ಕಂಪೆನಿಗಳ ಷೇರುಗಳ ಕಥೆ ಏನು? ಈ ಕಂಪೆನಿಗಳು ಹೇಗೆ ಪರ್ಫಾಮ್ ಮಾಡಿವೆ? ಈ ಷೇರುಗಳಿಗಾಗಿ ಯಾವ ಸ್ಟ್ರ್ಯಾಟೆಜಿ ಇರಬೇಕು? ಇವೆಲ್ಲವನ್ನ ಅರ್ಥ ಮಾಡ್ಕೋಳೋಣ ಬನ್ನಿ..

ಹಣಕಾಸು ವರ್ಷ 2023-24 ರಲ್ಲಿ ಒಟ್ಟಾರೆ ರಫ್ತು ಅಂದಾಜು 790 ಬಿಲಿಯನ್ ಡಾಲರ್ ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 777.6 ಬಿಲಿಯನ್ ಡಾಲರ್ ಗೆ ಹೋಲಿಸಿದರೆ ಸುಮಾರು ಶೇಕಡ 1.5 ರಷ್ಟು ಹೆಚ್ಚಿದೆ. ಆದಾಗ್ಯೂ ಈ ಅಂಕಿಗಳು ಸುಮಾರು 345 ಬಿಲಿಯನ್ ಡಾಲರ್ ಸೇವಾ ರಫ್ತನ್ನೂ ಒಳಗೊಂಡಿದೆ… ದೇಶದ ಒಟ್ಟು ರಫ್ತಿನ ಪೈಕಿ ಸೇವಾ ವಲಯದ ಪಾಲು ಶೇಕಡ 44 ರಷ್ಟು.. ಸೇವಾ ವಲಯ ಹೊರತುಪಡಿಸಿ, ಹಣಕಾಸು ವರ್ಷ 24 ರಲ್ಲಿ 445 ಬಿಲಿಯನ್ ಡಾಲರ್ ರಫ್ತು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 1.3 ರಷ್ಟು ಕಡಿಮೆ ಇದೆ..

ಆದಾಗ್ಯೂ, ವ್ಯಾಪಾರ ಮತ್ತು ಅಭಿವೃದ್ಧಿಗಾಗಿ ವಿಶ್ವಸಂಸ್ಥೆ 2023 ರಲ್ಲಿ ಕೊಟ್ಟಿರೋ ಅಂದಾಜಿಗಿಂತ ಈ ಸಂಖ್ಯೆ ಉತ್ತಮವಾಗಿದೆ.. ಭಾರತದಲ್ಲಿ, ಅಕ್ಟೋಬರ್ 2023 ರಿಂದ ಆರಂಭವಾಗುವ ಹಣಕಾಸು ವರ್ಷ 24 ರ ದ್ವಿತೀಯಾರ್ಧದಲ್ಲಿ, ರಫ್ತಿನಲ್ಲಿ ಚೇತರಿಕೆ ಕಂಡುಬಂದಿದೆ.. ಮೊದಲಾರ್ಧದಲ್ಲಿ, ಏಪ್ರಿಲ್ ನಿಂದ ಸೆಪ್ಟೆಂಬರ್2023ರವರೆಗೆ ರಫ್ತು ಪ್ರಮಾಣದಲ್ಲಿ ವರ್ಷಾನು ವರ್ಷದ ಇಳಿಕೆ ಕಂಡುಬಂದಿತ್ತು. ಈ ಸನ್ನಿವೇಶದಲ್ಲಿ, ಭಾರತ ರಫ್ತು ಸಂಬಂಧಿತ ಕಂಪೆನಿಗಳ ಷೇರುಗಳ ಪರ್ಫಾಮೆನ್ಸ್ ಹೇಗಿತ್ತು ಅನ್ನೋದನ್ನ ಮೊದಲು ತಿಳಿದುಕೊಳ್ಳೋಣ. ರಫ್ತು ಸಂಬಂಧಿತ ಷೇರುಗಳನ್ನ ನಾಲ್ಕು ಪ್ರಮುಖ ಕ್ಯಾಟಗರಿ ಅಥವಾ ವಲಯಗಳಲ್ಲಿ ವರ್ಗೀಕರಿಸಬಹುದಾಗಿದೆ.

ಮೊದಲನೆಯದು, ರಫ್ತಿನಿಂದ ಬಹುಪಾಲು ಆದಾಯ ಪಡೆಯುತ್ತಿರುವ ಕಂಪೆನಿಗಳು. ಈ ಪೈಕಿ, ಆರ್ ಐ ಎಲ್ ಮತ್ತು ಗುಜರಾತ್ ಅಂಬುಜಾ ಎಕ್ಸ್ ಪೋರ್ಟ್ಸ್ ಗಳ ಪರ್ಫಾರ್ಮೆನ್ಸ್ ಅತ್ಯುತ್ತಮವಾಗಿದೆ. ಆದಾಗ್ಯೂ, ರಾಜೇಶ್ ಎಕ್ಸ್ಪೋರ್ಟ್ಸ್ ಕಳೆದ 5 ವರ್ಷಗಳಿಂದ ಹೂಡಿಕೆದಾರರಿಗೆ ನಿರಾಶೆ ಮಾಡಿದೆ.

ಇನ್ನು ಎರಡನೇ ವಲಯ ಅಂದ್ರೆ ಜವಳಿ.. ಈ ವಲಯದ ಕಂಪೆನಿಗಳ ಕೇವಲ ಕಳೆದ 5 ವರ್ಷಗಳಲ್ಲಿ ಮಾತ್ರ ಅಲ್ಲ, ಕಳೆದ ವರ್ಷ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡಿವೆ.. ಅದರಲ್ಲೂ, ಗಮನಿಸಬೇಕಾದ ಸಂಗತಿ ಅಂದರೆ ಬಾಂಬೆ ಡೈಯಿಂಗ್ ಷೇರುಗಳು ಹೂಡಿಕೆದಾರರಿಗೆ ಶೇಕಡ 170 ರಷ್ಟು ರಿಟರ್ನ್ಸ್ ಕೊಟ್ಟಿವೆ.

ಇನ್ನು ಮೂರನೇ ಕ್ಯಾಟಗರಿಯಡಿ ರತ್ನಗಳು ಮತ್ತು ಆಭರಣಗಳ ಉದ್ಯಮದ ಕಂಪೆನಿಗಳಿವೆ. ಈ ಕಂಪೆನಿಗಳ ಷೇರುಗಳು ಕೂಡ ಕಳೆದ ವರ್ಷ ಚೆನ್ನಾಗಿ ಪರ್ಫಾರ್ಮ್ ಮಾಡಿವೆ.. ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗೋಲ್ಡ್ ಐ ಯಾಮ್ ಇಂಟರ್ ನ್ಯಾಷನಲ್ ನ ಷೇರುಗಳನ್ನು ಹೊಂದಿದ್ದ ಹೂಡಿಕೆದಾರರಿಗೆ ಶೇಕಡ 1103 ಕ್ಕಿಂತ ಹೆಚ್ಚಿನ ರಿಟರ್ನ್ಸ್ ಸಿಕ್ಕಿದೆ.. ಇದಕ್ಕೆ ಪ್ರಸ್ತುತದ ಹೆಚ್ಚುತ್ತಿರುವ ಬೆಲೆ ಏರಿಕೆ ಕೂಡ ಕಾರಣವಾಗಿದೆ. ಚಿನ್ನದ ಬೆಲೆ ಇದೇ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 3 ರಂದು ಹತ್ತು ಗ್ರಾಂಗೆ 70 ಸಾವಿರ ರೂಪಾಯಿ ಗಡಿ ದಾಟಿದೆ ಎನ್ನುವುದನ್ನು ನಾವು ಇಲ್ಲಿ ಗಮನಿಸಿಕೊಳ್ಳಬೇಕು.

ನಾಲ್ಕನೇ ಕ್ಯಾಟಗರಿಯಡಿ ಆಹಾರ ವಲಯದ ಕಂಪೆನಿಗಳಿವೆ. ಇದರಲ್ಲಿ, ಅಕ್ಕಿ, ರೆಡಿ ಟು ಈಟ್ ಅಥವಾ ಪ್ಯಾಕೇಜ್ಡ್ ಫುಡ್ ಬ್ಯುಸಿನೆಸ್ ಕಂಪೆನಿಗಳಿವೆ. ಕೆ ಆರ್ ಬಿ ಎಲ್, ಹೊರತುಪಡಿಸಿದರೆ, ಇತರ ಕಂಪೆನಿಗಳು ಕಳೆದೊಂದು ವರ್ಷದಲ್ಲಿ, ಹಾಗೇ ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಸ್ವಲ್ಪ ಉತ್ತಮ ರಿಟರ್ನ್ಸ್ ಕೊಟ್ಟಿವೆ.. ಈಗ, ಮುಂದಿನ ವರ್ಷ ಹಣಕಾಸು ವರ್ಷ 2025ರ ಮುನ್ನೋಟ ಎನ್ನುವುದನ್ನು ಈಗ ನೋಡಬೇಕು.

ರಷ್ಯಾ-ಯುಕ್ರೇನ್ ಯುದ್ಧ ಕಳೆದ 2 ವರ್ಷಗಳಿಂದ ನಡೆಯುತ್ತಕಿದ್ದರೆ, ಕಳೆದ 6 ತಿಂಗಳಿಂದ ರೆಡ್ ಸೀ ಬಿಕ್ಕಟ್ಟಿದೆ. ಈ ವರ್ಷ ಕೂಡ ಮಹತ್ವದ ಸವಾಲು ಎದುರಾಗುವ ಅಪಾಯ ಇದೆ. ರೆಡ್ ಸೀ ಬಿಕ್ಕಟ್ಟಿನಿಂದಾಗಿ ಸಾಗಣೆ ದರಗಳು ಹೆಚ್ಚಾಗಿದೆ.. ಹಡಗುಗಳು ತಮ್ಮ ಪ್ರಯಾಣ ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ, ಏಷ್ಯಾ, ವಾಯವ್ಯ ಆಫ್ರಿಕಾ ಮತ್ತು ಯೂರೋಪ್‌ಗಳಲ್ಲಿನ ಕಮಾಡಿಟಿ ಟ್ರೇಡಿಂಗ್‌ ಬದಲಾವಣೆ ಕಾಣಬಹುದಾಗಿದೆ..

ಆದಾಗ್ಯೂ, ಹಣದುಬ್ಬರ ಇಳಿಕೆ ಮತ್ತು ಜಾಗತಿಕ ಬಡ್ಡಿ ದರ ಕಡಿತಗಳು ರಫ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದಾಗಿದೆ. ಇಂತಹ ಸನ್ನಿವೇಶದಲ್ಲಿ ರಫ್ತು ಆಧಾರಿತ ಕಂಪೆನಿಗಳ ಷೇರುಗಳಿಗಾಗಿ ಹೇಗೆ ಸ್ಟ್ರಾಟೆಜಿ ರೂಪಿಸಬೇಕು ಅನ್ನೋದರ ಬಗ್ಗೆ ತಿಳಿಯಬೇಕಾದ್ದು ತುಂಬಾನೇ ಮುಖ್ಯ. ರಫ್ತು ಸಂಬಂಧಿತ ಕಂಪೆನಿಗಳಲ್ಲಿ 6-12 ತಿಂಗಳ ಮುನ್ನೋಟದೊಂದಿಗೆ ಜವಳಿ ವಲಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶ ಇದೆ ಅನ್ನೋದು ಮಾರುಕಟ್ಟೆ ತಜ್ಞರಾದ ಸಂತೋಷ್‌ ಸಿಂಗ್‌ ಅವರ ಅಭಿಪ್ರಾಯ.

ಜವಳಿ ವಲಯದಲ್ಲಿ, ವೆಲ್‌ ಸ್ಪನ್‌ ಇಂಡಿಯಾ ಕಂಪೆನಿಯ ಷೇರುಗಳನ್ನ 200 ರೂಪಾಯಿ ಟಾರ್ಗೆಟ್‌ ನೊಂದಿಗೆ, 60 ರಿಂದ 65 ರೂಪಾಯಿ ಟಾರ್ಗೆಟ್‌ ನೊಂದಿಗೆ ಟ್ರೈಡೆಂಟ್‌ ಕಂಪೆನಿ ಷೇರುಗಳನ್ನ ಖರೀದಿಸಬಹುದು.. ಅಲ್ಲದೇ, ವೆಲ್ ಸ್ಪನ್‌ ಕಾರ್ಪ್‌ ನ ಆದಾಯದ ಬಹುತೇಕ ಭಾಗ ರಫ್ತಿನಿಂದ ಸಿಗುತ್ತಿದ್ದು, ಈ ಷೇರುಗಳಲ್ಲಿ ಶೇಕಡ 25 ರಿಂದ 30 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಅಕ್ಕಿ ಉದ್ಯಮದ ಕಂಪೆನಿಗಳಲ್ಲಿ, ಕೆ ಆರ್‌ ಬಿ ಎಲ್ ನ ಬೆಲೆ ಉತ್ತಮವಾಗಿ ತೋರುತ್ತಿದೆ. ಇದರಲ್ಲಿ ಶೇಕಡ 30 ರಿಂದ 40 ರಷ್ಟು ಏರಿಕೆಯೊಂದಿಗೆ ಹೂಡಿಕೆಯನ್ನ ಮಾಡಬಹುದಾಗಿದೆ.

ಒಟ್ಟಾರೆಯಾಗಿ, ಹಣಕಾಸು ವರ್ಷ 25 ರಲ್ಲಿ ರಫ್ತು ವಲಯದಲ್ಲಿ ಸುಧಾರಣೆಗೆ ಹಣದುಬ್ಬರ ಇಳಿಕೆ ಮತ್ತು ಬಡ್ಡಿ ದರ ಇಳಿಕೆ ಪ್ರಮುಖವಾಗಲಿದೆ. ಅಲ್ಲದೇ, ಭೌಗೋಳಿಕ-ರಾಜಕೀಯ ಅಪಾಯಗಳೂ ದೂರವಾಗಬೇಕಿದೆ… ಇಂತಹ ಸನ್ನಿವೇಶದಲ್ಲಿ, ಅಪಾಯಗಳು ದೂರವಾಗುವವರೆಗೆ, ರಫ್ತು ಆಧಾರಿತ ಕಂಪೆನಿಗಳ ಬಗ್ಗೆ ಜಾಗರೂಕರಾಗಿರಬೇಕು.. ಹೂಡಿಕೆ ಸಲಹೆಗಾರರ ಶಿಫಾರಸ್ಸಿನ ಆಧಾರದ ಮೇಲೆ ಆಯ್ದ ಷೇರುಗಳಲ್ಲಿ ಹೂಡಿಕೆ ಮಾಡೋದು ಉತ್ತಮ.

Published: April 25, 2024, 13:17 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ