` should you stop sip in small and mid cap funds | ಮ್ಯುಚುವಲ್​ ಫಂಡ್​ ಹೂಡಿಕೆಯಲ್ಲಿ ನಿಮಗೆ ಗೊಂದಲ ಇದ್ಯಾ? | Money9 Kannada

ಮ್ಯುಚುವಲ್​ ಫಂಡ್​ ಹೂಡಿಕೆಯಲ್ಲಿ ನಿಮಗೆ ಗೊಂದಲ ಇದ್ಯಾ?

ಮಿಡ್‌ ಕ್ಯಾಪ್‌ - ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಿಗೆ ಹರಿದು ಬರುವ ಹೆಚ್ಚುವರಿ ಹೂಡಿಕೆಗಳ ಮೇಲೆ ಬಹುತೇಕ ಮ್ಯೂಚುಯಲ್‌ ಫಂಡ್‌ ಹೌಸ್‌ ಗಳು ನಿರ್ಬಂಧಗಳನ್ನ ಹೇರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಅಥವಾ ಎಕ್ಸಿಟ್‌ ಲೋಡ್‌ ಹೆಚ್ಚು ಮಾಡಬಹುದು.

ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳಿಗೆ ಸಂಬಂಧಿಸಿದ ಮ್ಯೂಚುಯಲ್‌ ಫಂಡ್‌ ಗಳಿಗೆ ಹೂಡಿಕೆ ಹರಿದುಬರುತ್ತಿರುವ ಬಗ್ಗೆ ಮಾರುಕಟ್ಟೆ ನಿಯಂತ್ರಕ ಸೆಬಿ ಕಳವಳ ವ್ಯಕ್ತಪಡಿಸಿದೆ. ಈ ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಲ್ಲಿ ಹೂಡಿಕೆದಾರರ ಹಿತ ಕಾಪಾಡೋಕೆ ಯಾವ ಕ್ರಮಗಳನ್ನ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ವರದಿ ಕೊಡುವಂತೆ ಮ್ಯೂಚುಯಲ್ ಫಂಡ್‌ ಕಂಪೆನಿಗಳನ್ನ ಸೆಬಿ ಮಾರ್ಚ್‌ ಮೊದಲ ವಾರದಲ್ಲಿಯೇಕೇಳಿದೆ. ಮೂರು ತಿಂಗಳೊಳಗೆ ವರದಿ ಕೊಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಹಾಗಾದರೆ ಸೆಬಿಯ ಈ ಕ್ರಮದಿಂದ ನಮಗೆ ಗೊತ್ತಾಗುವುದೇನು? ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಷೇರುಗಳ ವ್ಯಾಲುವೇಶನ್ ಕಳವಳಕಾರಿ ಆಗಿದ್ಯಾ? ಸೆಬಿ ನಿರ್ಧಾರದಿಂದ ಮಾರುಕಟ್ಟೆ ಆತಂಕಪಡಬೇಕಿದ್ಯಾ? ಪ್ರಸ್ತುತ ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಲ್ಲಿರೋ ಸಿಪ್‌ ಗಳನ್ನ ಹೂಡಿಕೆದಾರರು ಏನ್‌ ಮಾಡಬೇಕು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ.

ಆಯ್ದ ಕಿರು ಮತ್ತು ಸುಲಭವಾಗಿ ನಗದೀಕರಿಸಿಕೊಳ್ಳಲು ಸಾಧ್ಯವಾಗದ ಷೇರುಗಳ ಬದಲಿಗೆ ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಲ್ಲಿ ಹೂಡಿಕೆ ಹೆಚ್ಚಾಗುತ್ತಾ ಇರುವುದು ರಿಸ್ಕ್‌ ಹೆಚ್ಚಿಸಿದೆ. ಆದರೆ ಸೆಬಿಯ ಈ ಕಳವಳಕ್ಕೆ ಮುಖ್ಯ ಕಾರಣ ಏನು? ಭಾರತೀಯ ಮ್ಯೂಚುಯಲ್‌ ಫಂಡ್‌ ಗಳ ಸಂಘ –ಎಎಂಎಫ್‌ ಐ ನೀಡಿರುವ ಅಂಕಿಅಂಶಗಳನ್ನ ನೋಡಿದರೆ, ಜನವರಿ ಅಂತ್ಯದ ವೇಳೆಗೆ ಸ್ಮಾಲ್‌ ಕ್ಯಾಪ್‌ ಫಂಡ್‌ ಗಳ ಅಸೆಟ್ಸ್‌ ಅಂಡರ್‌ ಮ್ಯಾನೇಜ್ಮೆಂಟ್‌ (ಎಯುಎಂ) ದಾಖಲೆಯ 2.48 ಲಕ್ಷ ಕೋಟಿ ರೂಪಾಯಿ ಮೊತ್ತ ತಲುಪಿದೆ. ಅಂದರೆ ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 1.31 ಲಕ್ಷ ಕೋಟಿ ರೂಪಾಯಿಯಷ್ಟಿದ್ದು ಈಗ ಶೇಕಡ 89 ರಷ್ಟು ಏರಿಕೆ ಕಂಡಿದೆ. ಈ ಮಧ್ಯೆ, ಮಿಡ್‌ ಕ್ಯಾಪ್‌ ಫಂಡ್‌ ಗಳ ಎಯುಎಂ 1.83 ಲಕ್ಷ ಕೋಟಿ ರೂಪಾಯಿಯಿಂದ ಶೇಕಡ 58 ರಷ್ಟು ಅಂದರೆ 2.90 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಸ್ಯಾಮ್ಕೋ ಮ್ಯೂಚುಯಲ್‌ ಫಂಡ್‌ ನಡೆಸಿರೋ ಅಧ್ಯಯನದ ಪ್ರಕಾರ, 2.48 ಲಕ್ಷ ಕೋಟಿ ರೂಪಾಯಿಯಷ್ಟಿರೋ ಸ್ಮಾಲ್‌ ಕ್ಯಾಪ್‌ ಫಂಡ್‌ ಗಳ ಎಯುಎಂ, ಲಾರ್ಜ್‌ ಕ್ಯಾಪ್‌ ಫಂಡ್‌ ಗಳ ಎಯುಎಂ 2.99 ಲಕ್ಷ ಕೋಟಿ ರೂಪಾಯಿಯ ಶೇಕಡ 83 ರಷ್ಟಿದೆ ಅನ್ನೋದು ಆಶ್ಚರ್ಯಕರ. ಇದು ಆಗಸ್ಟ್‌ 2021 ರಲ್ಲಿ ಕೇವಲ ಶೇಕಡ 44 ರಷ್ಟಿತ್ತು. ಹೀಗೆ ಭಾರಿ ಪ್ರಮಾಣದ ಒಳಹರಿವಿನಿಂದಾಗಿ ಷೇರುಗಳು ಹೊಸ ಎತ್ತರಕ್ಕೆ ಜಿಗಿದರೆ, ಹೂಡಿಕೆದಾರರು ಕೂಡ ಪ್ರತಿಕೂಲ ಪರಿಣಾಮ ಎದುರಿಸೋಕೆ ಸಿದ್ಧರಿರಬೇಕಾಗುತ್ತದೆ. ಸದ್ಯದಲ್ಲೇ ಮಾರುಕಟ್ಟೆ ನಿಧಾನಗತಿಯಲ್ಲಿ ಸಾಗೋ ಯಾವುದೇ ಲಕ್ಷಣಗಳಿಲ್ಲ. ಆದಾಗ್ಯೂ, ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಫಂಡ್‌ ಗಳ ಬೃಹತ್‌ ಪ್ರಮಾಣದ ಹೊರಹರಿವು ನಿಭಾಯಿಸಲು ಮ್ಯೂಚುಯಲ್‌ ಫಂಡ್‌ ಕಂಪೆನಿಗಳು ಸಿದ್ಧರಿರಬೇಕು ಎಂದು ಸೆಬಿ ಬಯಸಿದೆ.. ಇತ್ತೀಚೆಗೆ ಮ್ಯೂಚುಯಲ್‌ ಫಂಡ್‌ ಕಂಪೆನಿಗಳು ದಿನಾಂಕಗಳೆಡೆಗೆ ಅಷ್ಟಾಗಿ ಗಮನಹರಿಸದೇ ಇದ್ದಿದ್ದು, ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಸ್ಕೀಂ ಗಳ ರಿಸ್ಕ್‌ ಮ್ಯಾನೇಜ್ಮೆಂಟ್‌ ಗೆ ಹೆಚ್ಚಿನ ಗಮನ ಕೊಡಬೇಕು ಅಂತಾ ಸೆಬಿ ಒತ್ತಡ ಹಾಕುವಂತೆ ಆಗಿದೆ.

ಸೆಬಿ ನಿರ್ಧಾರದ ಬಗ್ಗೆ ಮಾರುಕಟ್ಟೆ ಯಾಕೆ ಕಳವಳ ವ್ಯಕ್ತಪಡಿಸಿದೆ ಅನ್ನೋದು ಈಗ ಉದ್ಭವಿಸುವ ಪ್ರಶ್ನೆ? ಹಾಗೇ ಮ್ಯೂಚುಯಲ್‌ ಫಂಡ್‌ ಹೌಸ್‌ ಗಳು ಏನು ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಪ್ರಶ್ನೆ ಕೂಡ ಎದುರಾಗತ್ತದೆ. ಹಣಕಾಸು ವರ್ಷ 24ರ ಮೊದಲ 10 ತಿಂಗಳಲ್ಲಿ ಅಂದರೆ ಏಪ್ರಿಲ್‌ 2023 ರಿಂದ ಜನವರಿ 2024ರವರೆಗೆ ಸ್ಮಾಲ್‌ ಕ್ಯಾಪ್‌ ಸ್ಕೀಂಗಳಿಗೆ 37 ಸಾವಿರದ 360 ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿದೆ.. ಇದು ಇಡೀ ಹಣಕಾಸು ವರ್ಷ 23ರ ಪ್ರಮಾಣಕ್ಕಿಂತ ಶೇಕಡ 92 ಕ್ಕಿಂತ ಹೆಚ್ಚು.. ಹಣಕಾಸು ವರ್ಷ 23ರ ಏಪ್ರಿಲ್‌ ನಿಂದ ಮಾರ್ಚ್‌ ವರೆಗೆ 22 ಸಾವಿರದ 103 ಕೋಟಿ ರೂಪಾಯಿ ಹೂಡಿಕೆ ಆಗಿತ್ತು. ಮಾರುಕಟ್ಟೆ ದರ ಭಾರಿ ಹೆಚ್ಚಾಗಿದ್ದರೂ, ಈ ಹೂಡಿಕೆ ಹೆಚ್ಚಳವು ಸೆಬಿಗೆ ಆತಂಕ ತಂದಿದೆ..

ಮಿಡ್‌ ಕ್ಯಾಪ್‌ – ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಿಗೆ ಹರಿದು ಬರುವ ಹೆಚ್ಚುವರಿ ಹೂಡಿಕೆಗಳ ಮೇಲೆ ಬಹುತೇಕ ಮ್ಯೂಚುಯಲ್‌ ಫಂಡ್‌ ಹೌಸ್‌ ಗಳು ನಿರ್ಬಂಧಗಳನ್ನ ಹೇರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಅಥವಾ ಎಕ್ಸಿಟ್‌ ಲೋಡ್‌ ಹೆಚ್ಚು ಮಾಡಬಹುದು. ಇದರಿಂದಾಗಿ ಹೂಡಿಕೆದಾರರು ಆತುರದಿಂದ ಹಣ ಹಿಂಪಡೆದರೆ ಅದು ದುಬಾರಿಯಾಗಿ ಪರಿಣಮಿಸೋ ಸಾಧ್ಯತೆ ಕೂಡ ಇದೆ.. ಆದಾಗ್ಯೂ, ಸೆಬಿಯ ಈ ಎಚ್ಚರಿಕೆಯಿಂದಾಗಿ ಜನರು ಸ್ವಯಂ ಪ್ರೇರಿತವಾಗಿ ಹೂಡಿಕೆ ನಿಲ್ಲಿಸಬಹುದು ಅಥವಾ ಹೂಡಿಕೆಗಳನ್ನ ಹಿಂಪಡೆಯಬಹುದು ಅನ್ನೋದು ಕೆಲವು ಹಿರಿಯ ಮ್ಯೂಚುಯಲ್‌ ಫಂಡ್‌ ಸಿಬ್ಬಂದಿ ಅಭಿಪ್ರಾಯವಾಗಿದೆ.. ವಾಸ್ತವದಲ್ಲಿ, ತಮ್ಮ ಬ್ಯುಸಿನೆಸ್‌ ಗೆ ತೊಂದರೆಯಾಗುವಂತಹ ಯಾವುದೇ ನಿಯಮಗಳನ್ನ ಸೆಬಿ ಅನುಷ್ಠಾನಕ್ಕೆ ತರೋದನ್ನ ಮ್ಯೂಚುಯಲ್‌ ಫಂಡ್‌ ಸಿಬ್ಬಂದಿ ಬಯಸೋದಿಲ್ಲ.

ಈ ವ್ಯಾಲ್ಯುಯೇಷನ್‌ ಗಳು ನಿಜಕ್ಕೂ ದುಬಾರಿನಾ? ಮಾರುಕಟ್ಟೆ ಏರಿಳಿತಕ್ಕೆ ಸಮನಾದ ಪರಿಸ್ಥಿತಿ ಇದೆಯಾ? ಸೆಬಿ ನಿರ್ಧಾರದಿಂದ ಭೀತಿಗೊಳಗಾಗಿ ಮಾರಾಟ ಮಾಡೋ ಸಾಧ್ಯತೆ ಇದೆಯಾ? 2023 ರಲ್ಲಿ ಸಕ್ರಿಯ ಈಕ್ವಿಟಿ ಸ್ಕೀಂಗಳಲ್ಲಿ 1.6 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದ್ದು, ಶೇಕಡ 40 ರಷ್ಟು ಅಂದರೆ 64 ಸಾವಿರ ಕೋಟಿ ರೂಪಾಯಿಯಷ್ಟು, ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸ್ಕೀಂಗಳಿಗೆ ಹರಿದು ಬಂದಿದೆ. ಅಷ್ಟೇ ಅಲ್ಲ, 2023 ರಲ್ಲಿ ಲಾರ್ಜ್‌ ಕ್ಯಾಪ್‌ ಸ್ಕೀಂಗಳಿಂದ 2 ಸಾವಿರದ 968 ಕೋಟಿ ರೂಪಾಯಿ ಹಿಂಪಡೆಯಲಾಗಿದೆ.. ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಲ್ಲಿ 41 ಸಾವಿರದ 35 ಕೋಟಿ ರೂಪಾಯಿ ಮತ್ತು ಮಿಡ್‌ ಕ್ಯಾಪ್‌ ಫಂಡ್‌ ಗಳಲ್ಲಿ 22 ಸಾವಿರದ 913 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ..

ಆದಾಗ್ಯೂ, ಸೆಬಿ ನಿರ್ಧಾರದಿಂದಾಗಿ ಷೇರು ಬೆಲೆಗಳ ಮೇಲೆ ಪರಿಣಾಮ ಬೀರುವಂತೆ ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳ ಬಲವಂತದ ಮಾರಾಟ ಇರೋದಿಲ್ಲ ಅನ್ನೋದು ತಜ್ಞರ ನಂಬಿಕೆ…. ಯಾಕೆ ಅಂದ್ರೆ, ಲಿಕ್ವಿಡಿಟಿ ಜೊತೆಗೆ ಸ್ಮಾಲ್‌ ಕ್ಯಾಪ್‌ ಸೆಗ್ಮೆಂಟ್‌ ರಿಸ್ಕ್‌ ಗಳ ಬಗ್ಗೆ ಅನೇಕ ದೊಡ್ಡ ಮ್ಯೂಚುಯಲ್‌ ಫಂಡ್‌ ಹೌಸ್‌ ಗಳಿಗೆ ಗೊತ್ತೇ ಇದೆ.. ಹೀಗಾಗಿ ಮಾರುಕಟ್ಟೆ ಏರಿಳಿತಗಳಿಗೆ ಅಥವಾ ಸ್ಕೀಂ ವಿತ್‌ ಡ್ರಾ ಗಳಿಂದ ಉದ್ಭವಿಸಬಹುದಾದ ಸಂಭಾವ್ಯ ರಿಸ್ಕ್‌ ಗಳನ್ನ ನಿಭಾಯಿಸೋಕೆ ತಮ್ಮದೇ ತಂತ್ರಗಾರಿಕೆಗಳೊಂದಿಗೆ ಮ್ಯೂಚುಯಲ್‌ ಫಂಡ್‌ ಹೌಸ್‌ ಗಳು ಸಿದ್ಧವಾಗಿವೆ..

ಸೆಬಿಯ ನಿರ್ಧಾರವನ್ನ ಕೆಲವು ಮ್ಯೂಚುಯಲ್‌ ಫಂಡ್‌ ಸಿಬ್ಬಂದಿ ವಿವಾದಾತ್ಮಕವಾಗಿ ವಿಶ್ಲೇಷಿಸುತ್ತ ಬಂದಿದ್ದಾರೆ. ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ಶೇಕಡ 35 ರಷ್ಟು ಹೂಡಿಕೆ ಸಾಧ್ಯತೆಯಿದ್ದರೆ ಅದು ಲಿಕ್ವಿಡಿಟಿ ಕವರ್‌ ಮಾಡೋಕೆ ಮಹತ್ವದ ಪ್ರಮಾಣ ಎನ್ನುವುದು ಅವರ ವಾದವಾಗಿದೆ. ಆದಾಗ್ಯೂ, ಈ ಕ್ಯಾಟಗರಿಯಲ್ಲಿನ ಅನೇಕ ಸ್ಕೀಂ ಗಳು ತಮ್ಮ ಮಿತಿಗಳನ್ನ ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಯಾಕೆಂದರೆ ಸ್ಮಾಲ್‌ ಕ್ಯಾಪ್‌ ಷೇರುಗಳ ಎಕ್ಸ್‌ ಪೋಷರ್‌ ಕಡಿಮೆಯಾದರೆ ಅದು ಸ್ಕೀಂನ ಪರ್ಫಾರ್ಮೆನ್ಸ್‌ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಳವಳವನ್ನು ಫಂಡ್‌ ಮ್ಯಾನೇಜರ್‌ ಹೊಂದಿದ್ದಾರೆ. ಈಗ ಉದ್ಭವಿಸೋ ಮುಖ್ಯ ಪ್ರಶ್ನೆ ಏನೆಂದರೆ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸ್ಕೀಂ ಗಳಲ್ಲಿ ಎಸ್‌ಐಪಿ ಹೂಡಿಕೆಗಳನ್ನ ನಿಲ್ಲಿಸಬೇಕಾ ಅಥವಾ ಅದರಲ್ಲಿ ಏನಾದರೂ ಮಾರ್ಪಾಡುಗಳನ್ನ ಮಾಡಬೇಕಾ ಎನ್ನುವುದೇ ಆಗಿದೆ.

ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ ಗಳಲ್ಲಿ ಕ್ಷಿಪ್ರ ಹೂಡಿಕೆ ಏರಿಕೆ ಬಗ್ಗೆ ಸೆಬಿ ಕಳವಳ ವ್ಯಕ್ತಪಡಿಸಿದೆ. ಅದು ಹೂಡಿಕೆದಾರರ ಹಿತ ಕಾಪಾಡೋಕೆ ಬಯಸಿದೆ. ಈ ಕ್ಯಾಟಗರಿಯಲ್ಲಿ ಪ್ರಮುಖ ಪಾಲು ಮಾರಾಟವಾದರೂ ಹೆಚ್ಚಿನ ರಿಸ್ಕ್‌ ಇಲ್ಲ ಎನ್ನುವ ಖಾತರಿಯನ್ನು ಮ್ಯೂಚುಯಲ್‌ ಫಂಡ್‌ ಹೌಸ್‌ ಗಳಿಗೆ ಕೊಡಲಾಗುತ್ತಿದೆ. ಒಂದು ವೇಳೆ ತುರ್ತು ಪರಿಸ್ಥಿತಿ ಉದ್ಭವಿಸಿದರೆ ಅದನ್ನು ನಿಭಾಯಿಸುವುದಕ್ಕೆ ಮ್ಯೂಚುಯಲ್‌ ಫಂಡ್‌ ಗಳು ತಂತ್ರಗಾರಿಕೆ ಸಿದ್ಧಪಡಿಸಿವೆ. ಆದಾಗ್ಯೂ, ಈ ಕ್ಯಾಟಗರಿಯಡಿ ಹೂಡಿಕೆ ಮಾಡುವಾಗ ಸ್ವಲ್ಪ ಹೆಚ್ಚಿನ ಜಾಗ್ರತೆ ವಹಿಸಲೇಬೇಕು. ಹಾಗೇ ಪೋರ್ಟ್‌ ಫೋಲಿಯೋ ಪರಾಮರ್ಶೆ ಮಾಡಬೇಕು.

Published: April 1, 2024, 13:12 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ