` should you buy road construction stocks before elections or wait | ಹೆದ್ದಾರಿ ನಿರ್ಮಾಣದ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದೆ? | Money9 Kannada

ಹೆದ್ದಾರಿ ನಿರ್ಮಾಣದ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದೆ?

ಷೇರು ಮಾರುಕಟ್ಟೆ ತಜ್ಞ ಸಂತೋಷ್ ಸಿಂಗ್ ಪ್ರಕಾರ, ಈ ಷೇರುಗಳ ಆರ್ಡರ್ ಬುಕ್ ಬಲವಾಗಿರುವುದೇ ಈ ಕಂಪನಿಗಳ ವ್ಯಾಲ್ಯೂಯೇಶನ್‌ ಕಡಿಮೆ ಇರುವುದಕ್ಕೆ ಕಾರಣ. ಆದಾಗ್ಯೂ, ಈ ಎಲ್ಲ ಕಂಪನಿಗಳೂ ಎಷ್ಟು ಸಾಲದಲ್ಲಿವೆ ಎಂಬುದನ್ನು ನೋಡಬೇಕಾಗಿದೆ. ಈಗ ಅತ್ಯಂತ ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ, ಲೋಕಸಭೆ ಚುನಾವಣೆಗಳಿಗೆ ಮೊದಲು ನೀವು ರಸ್ತೆ ನಿರ್ಮಾಣ ಕಂಪನಿಗಳ ಷೇರುಗಳಿಗೆ ಸಂಬಂಧಿಸಿದ ಸ್ಟ್ರಾಟಜಿಯನ್ನು ಹೇಗೆ ಮಾಡಬಹುದು? ಈ ವಲಯದ ಔಟ್‌ಲುಕ್‌ ಹೇಗಿದೆ? ಈ ವಿಚಾರ ಸಹ ಮುಖ್ಯವಾಗುತ್ತದೆ.

ಈ ವರ್ಷ ಲೋಕಸಭೆ ಚುನಾವಣೆಗೂ ಮೊದಲು ಸರ್ಕಾರವು ಇಡೀ ದೇಶದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಉತ್ತೇಜನ ನೀಡುವ ಗುರಿ ಹಾಕಿಕೊಂಡಿದೆ. ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಪ್ರತಿ ದಿನ 40 ಕಿ,ಮೀ ಉದ್ದದ ರಸ್ತೆ ನಿರ್ಮಾಣ ಗುರಿಯನ್ನು ನಿಗದಿಪಡಿಸಲಾಗಿದೆ. ಆದರೆ, ಸದ್ಯ ಪ್ರತಿ ದಿನ 34 ಕಿ.ಮೀ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿದೆ.

ಕಳೆದ 2-3 ವರ್ಷಗಳಲ್ಲಿ ಸರ್ಕಾರ ತನ್ನ ಹೆದ್ದಾರಿ ನಿರ್ಮಾಣ ಗುರಿಗಳನ್ನು ಪೂರೈಸಲು ಸಾಧ್ಯವಾಗಿದೆಯೇ? FY24 ರ ಮೊದಲ 9 ತಿಂಗಳುಗಳಲ್ಲಿ ಅಂದರೆ ಡಿಸೆಂಬರ್ 2023 ರವರೆಗೆ, ಎಷ್ಟು ಹೆದ್ದಾರಿ ನಿರ್ಮಾಣ ಗುರಿಯನ್ನು ಸರ್ಕಾರ ಪೂರೈಸಲು ಸಾಧ್ಯವಾಗಿದೆ? ಈ ವಲಯಕ್ಕೆ ಸಂಬಂಧಿಸಿದ ಕಂಪನಿಗಳ ವ್ಯಾಲ್ಯುಯೇಶನ್‌ ಹೇಗಿದೆ? ಚುನಾವಣೆಗೆ ಮುನ್ನ ಈ ಷೇರುಗಳಿಗೆ ನೀವು ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿ ಹೇಗೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.

ಜುಲೈ 2023 ರಲ್ಲಿ, ಸರ್ಕಾರ FY24 ಹೆದ್ದಾರಿ ನಿರ್ಮಾಣ ಗುರಿಯನ್ನು 12,500 ಕಿಮೀಗಳಿಂದ 13,814 ಕಿಮೀಗಳಿಗೆ ಹೆಚ್ಚಿಸಿತ್ತು. 2023 ರ ಮೇ ಮತ್ತು ಜೂನ್‌ನಲ್ಲಿ ರಸ್ತೆ ನಿರ್ಮಾಣ ಈ ವೇಗ ಪಡೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು 13,814 ಕಿಮೀಗಳಲ್ಲಿ, ಎನ್‌ಎಚ್‌ಎಐ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ತಲಾ 6,000 ಕಿಮೀ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಲಾಯಿತು. ಉಳಿದ 1,500-2,000 ಕಿಮೀಗಳನ್ನು National Highways & Infrastructure Development Corporation ನಿರ್ಮಿಸಲಿದೆ.

ಒಡಿಶಾ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರಸ್ತೆ ನಿರ್ಮಾಣ ಹೆಚ್ಚಿಸುವುದು ಈ ಗುರಿಗಳ ಹಿಂದಿನ ಉದ್ದೇಶವಾಗಿದೆ. ಭೂಸ್ವಾಧೀನ ಮತ್ತು ಪೇಮೆಂಟ್‌ ಸಂಬಂಧಿತ ಸಮಸ್ಯೆಗಳಿಂದಾಗಿ, ಈ ರಾಜ್ಯಗಳಲ್ಲಿ ಕೆಲವು ಹೆದ್ದಾರಿ ಯೋಜನೆಗಳು ಕಳೆದ ವರ್ಷ ಸ್ಥಗಿತಗೊಂಡಿದ್ದವು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿ ಪ್ರಕಾರ, FY24 ರ ಮೊದಲ ತ್ರೈಮಾಸಿಕದಲ್ಲಿ ರಸ್ತೆ ನಿರ್ಮಾಣದ ವೇಗ 9.4% ರಷ್ಟು ಏರಿದೆ. ಏಪ್ರಿಲ್ ಮತ್ತು ಜೂನ್ 2023 ರ ಅವಧಿಯಲ್ಲಿ, ಸುಮಾರು 2,150 ಕಿಮೀ ರಸ್ತೆ ನಿರ್ಮಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 1,966 ಕಿ.ಮೀ ರಸ್ತೆ ನಿರ್ಮಾಣವಾಗಿತ್ತು.

ರಸ್ತೆ ಸಚಿವಾಲಯದ ನಿರೀಕ್ಷೆಗಳ ಹೊರತಾಗಿ, FY24 ರಲ್ಲಿ, ರಸ್ತೆ ನಿರ್ಮಾಣದ ವೇಗ ಕಳೆದ ವರ್ಷಕ್ಕೆ ಹೋಲಿಸಿದರೆ ನಿಧಾನವಾಗಿದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ. ICRA ಸಂಶೋಧನೆಯ ಪ್ರಕಾರ, FY24 ರಲ್ಲಿ, ಸುಮಾರು 9,000 ಕಿಮೀ ಮೌಲ್ಯದ ಯೋಜನೆಗಳನ್ನು ಅಲೊಕೇಟ್ ಮಾಡಲಾಗಿದೆ. ಇದು FY23 ರಲ್ಲಿ ಮಾಡಲಾದ 12,000 ಕಿಮೀಗಳ ಅಲೊಕೇಶನ್‌ಗಿಂತ 25% ಕಡಿಮೆಯಾಗಿದೆ. 2019 ರ ಲೋಕಸಭೆ ಚುನಾವಣೆಗೂ ಮೊದಲು, ಕೇವಲ 5,500 ಕಿಲೋಮೀಟರ್ ರಸ್ತೆ ಯೋಜನೆಗಳನ್ನು ಅಲೊಕೇಟ್ ಮಾಡಲಾಗಿತ್ತು. 2018 ರಲ್ಲಿ 17,000 ಕಿಮೀ ಹೆಚ್ಚು ಅಲೊಕೇಟ್ ಮಾಡಲಾಗಿತ್ತು. FY23 ರಲ್ಲಿ, ಸರ್ಕಾರವು ಸುಮಾರು 10,993 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾಕಿಕೊಂಡಿದ್ದ ಗುರಿ 12,500 ಕಿಮೀ ಆಗಿತ್ತು. FY21 ರಲ್ಲಿ, ಕೊರೊನಾದಿಂದಾಗಿ ಸಮಸ್ಯೆ ಇದ್ದರೂ, ಸರ್ಕಾರ 13,327 ಕಿಮೀ ಹೆದ್ದಾರಿ ನಿರ್ಮಾಣ ಮಾಡಿದೆ. ಇದು ಈವರೆಗಿನ ಅತ್ಯಧಿಕ ಸಾಧನೆಯಾಗಿದೆ. ಇದರ ನಂತರ, ಕಳೆದ 2 ವರ್ಷಗಳಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಿರಂತರವಾಗಿ ತನ್ನ ಗುರಿ ಸಾಧನೆ ಮಾಡಲು ವಿಫಲವಾಗುತ್ತಿದೆ.

ಈಗ, FY24 ರಲ್ಲಿ ಸರ್ಕಾರ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡೋಣ.
14,000 ಕಿಮೀ ಗುರಿಯಷ್ಟು ರಸ್ತೆ ಯೋಜನೆ ಪೂರ್ತಿ ಮಾಡುವ ಸಾಧ್ಯತೆಗಳು ಕ್ಷೀಣವಾಗಿವೆ ಎಂದು ರಸ್ತೆ ಸಚಿವಾಲಯದ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ ನವೆಂಬರ್ 2023 ರವರೆಗೆ ಕೇವಲ 2,815 ಕಿಮೀ ಹೆದ್ದಾರಿ ಯೋಜನೆಗಳನ್ನು ಮಾತ್ರ ಅಲೊಕೇಟ್ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 5,382 ಕಿ.ಮೀ. ಅಲೊಕೇಟ್ ಆಗಿತ್ತು. ಅಷ್ಟೇ ಅಲ್ಲ, ಅಧಿಕಾರಿಗಳ ಪ್ರಕಾರ, 13,814 ಕಿಲೋಮೀಟರ್‌ಗಳ ಹೆದ್ದಾರಿ ನಿರ್ಮಾಣ ಗುರಿಯನ್ನು ಸಾಧಿಸುವುದು ತುಂಬಾ ಕಷ್ಟ. ಡಿಸೆಂಬರ್ 2023 ರವರೆಗೆ, ಕೇವಲ 6,217 ಕಿಲೋಮೀಟರ್‌ ಹೊಸ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಇಡೀ ಹಣಕಾಸು ವರ್ಷಕ್ಕೆ ಅಲೊಕೇಟ್ ಮಾಡಿದ ಗುರಿಯ ಕೇವಲ 45% ರಷ್ಟು ಪೂರೈಸಿದಂತಾಗಿದೆ.

ರೇಟಿಂಗ್ ಏಜೆನ್ಸಿ ICRA ಪ್ರಕಾರ, ಹೆದ್ದಾರಿಗಳಿಗೆ ಸಂಬಂಧಿಸಿದ ಅಲೊಕೇಶನ್‌ ಸಾಮಾನ್ಯವಾಗಿ ಯಾವುದೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕಡಿಮೆಯಾಗುತ್ತವೆ. ಚುನಾವಣೆಗೂ ಮುನ್ನ ನೀತಿ ಸಂಹಿತೆ ಜಾರಿಯಾದಾಗಲೂ ಇದೇ ಪರಿಸ್ಥಿತಿ ಇರುತ್ತದೆ. ಇಡೀ ಹಣಕಾಸು ವರ್ಷದಲ್ಲಿ ಸುಮಾರು 10,000 ಕಿ.ಮೀ ರಸ್ತೆ ನಿರ್ಮಾಣವಾಗುವ ಅಂದಾಜಿದೆ.

ಈಗ, ರಸ್ತೆ ನಿರ್ಮಾಣ ವಲಯದಲ್ಲಿನ ಕಂಪನಿಗಳು ಹೇಗೆ ಕಾರ್ಯನಿರ್ವಹಿಸಿವೆ ಮತ್ತು ಅವುಗಳ ವ್ಯಾಲ್ಯುಯೇಶನ್‌ ಹೇಗಿದೆ? ಎನ್ನುವ ವಿಚಾರವನ್ನು ಪರಾಮರ್ಶೆ ಮಾಡೋಣ. ಕಳೆದ 6-12 ತಿಂಗಳುಗಳಲ್ಲಿ, GR Infra ಹೊರತುಪಡಿಸಿ, ಈ ವಲಯದ ಹೆಚ್ಚಿನ ಕಂಪನಿಗಳು ಪಾಸಿಟಿವ್ ರಿಟರ್ನ್ಸ್‌ ನೀಡಿವೆ. ಈ ಕಂಪನಿಯ PE valuation ಅಥವಾ price to earning ಕಡಿಮೆ ಇದೆ. ಸುಮಾರು 80% ರಷ್ಟು ಏರಿಕೆಯಾಗಿದ್ದರೂ, ಒಂದೇ ವರ್ಷದಲ್ಲಿ, ಅಶೋಕ ಬಿಲ್ಡ್‌ಕಾನ್ ಇಡೀ ವಲಯದಲ್ಲಿ ಅಗ್ಗದ ಷೇರು ಆಗಿಯೇ ಮುಂದುವರಿದಿದೆ. ಆದರೆ ದಿಲೀಪ್ ಬಿಲ್ಡ್‌ಕಾನ್ ಅತ್ಯಂತ ದುಬಾರಿಯಾಗಿದೆ.

ಷೇರು ಮಾರುಕಟ್ಟೆ ತಜ್ಞ ಸಂತೋಷ್ ಸಿಂಗ್ ಪ್ರಕಾರ, ಈ ಷೇರುಗಳ ಆರ್ಡರ್ ಬುಕ್ ಬಲವಾಗಿರುವುದೇ ಈ ಕಂಪನಿಗಳ ವ್ಯಾಲ್ಯೂಯೇಶನ್‌ ಕಡಿಮೆ ಇರುವುದಕ್ಕೆ ಕಾರಣ. ಆದಾಗ್ಯೂ, ಈ ಎಲ್ಲ ಕಂಪನಿಗಳೂ ಎಷ್ಟು ಸಾಲದಲ್ಲಿವೆ ಎಂಬುದನ್ನು ನೋಡಬೇಕಾಗಿದೆ. ಈಗ ಅತ್ಯಂತ ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ, ಲೋಕಸಭೆ ಚುನಾವಣೆಗಳಿಗೆ ಮೊದಲು ನೀವು ರಸ್ತೆ ನಿರ್ಮಾಣ ಕಂಪನಿಗಳ ಷೇರುಗಳಿಗೆ ಸಂಬಂಧಿಸಿದ ಸ್ಟ್ರಾಟಜಿಯನ್ನು ಹೇಗೆ ಮಾಡಬಹುದು? ಈ ವಲಯದ ಔಟ್‌ಲುಕ್‌ ಹೇಗಿದೆ? ಈ ವಿಚಾರ ಸಹ ಮುಖ್ಯವಾಗುತ್ತದೆ.

2017 ರಲ್ಲಿ, ಮೋದಿ ಸರ್ಕಾರ ಭಾರತಮಾಲಾ ಕಾರ್ಯಕ್ರಮದ ಮೊದಲ ಹಂತವನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ, ಆರ್ಥಿಕ ಕಾರಿಡಾರ್‌ಗಳು, manufacturing hub ಗಳು, ಗಡಿ ಮತ್ತು ಕರಾವಳಿ ಪ್ರದೇಶಗಳ ಮೂಲಕ ಹಾದು ಹೋಗುವ 34,800 ಕಿಮೀ ಹೆದ್ದಾರಿಗಳನ್ನು 2024 ರವರೆಗೆ ನಿರ್ಮಿಸಲು ಸರ್ಕಾರ ಗುರಿ ಹೊಂದಿತ್ತು. ಆದಾಗ್ಯೂ, ಈ ಯೋಜನೆ ಸಕಾಲಕ್ಕೆ ಮುಗಿಯಲಿಲ್ಲ. 2027-2028 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭಾರತ್‌ಮಾಲಾ ಯೋಜನೆಯಲ್ಲಿ 27,384 ಕಿ.ಮೀ ಉದ್ದದ ಹೊಸ ಹೆದ್ದಾರಿ ನಿರ್ಮಾಣಕ್ಕೆ ಆರ್ಡರ್‌ ಕೊಡಲಾಗಿದೆ. ಈ ಪೈಕಿ 15,045 ಕಿ.ಮೀ. ಮತ್ತು ಸುಮಾರು 8,000 ಕಿಮೀ ಮೌಲ್ಯದ ಯೋಜನೆಗಳಿಗೆ ಇನ್ನೂ ಆರ್ಡರ್‌ ಕೊಟ್ಟಿಲ್ಲ.

ಇಪಿಸಿ ಅಂದರೆ ಇಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ ಮಾದರಿ ಬದಲಿಗೆ, ಹೈಬ್ರಿಡ್ ಆನ್ಯೂಟಿ ಮಾದರಿಯ ಅಡಿಯಲ್ಲಿ ಹೆಚ್ಚಿನ ಯೋಜನೆಗಳನ್ನು ಅಲೊಕೇಟ್ ಮಾಡಲು ಸರ್ಕಾರ ಯೋಜಿಸುತ್ತಿದೆ. EPC ಮಾಡೆಲ್‌ನಲ್ಲಿ ಸರ್ಕಾರ ಯೋಜನೆಯ 100% ಹಣವನ್ನು ನೀಡುತ್ತದೆ. ಆದರೆ HAM ಮಾದರಿಯಲ್ಲಿ, ಸರ್ಕಾರ ಒಟ್ಟು ಯೋಜನಾ ವೆಚ್ಚದ 40% ಮಾತ್ರ ಭರಿಸುತ್ತದೆ. ಉಳಿದ 60% ಡೆವಲಪರ್ ಭರಿಸುತ್ತಾರೆ. ಸಂತೋಷ್ ಸಿಂಗ್ ಪ್ರಕಾರ, ನೀವು 1.5-2 ವರ್ಷಗಳವರೆಗೆ ಆರ್ಡರ್ ಬುಕ್‌ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ರಸ್ತೆ ವಲಯದಲ್ಲಿ, ಕೆಎನ್‌ಆರ್ ಕನ್‌ಸ್ಟ್ರಕ್ಷನ್ ರೂ. 350-400 ಟಾರ್ಗೆಟ್‌ ಇಟ್ಟುಕೊಂಡು ಖರೀದಿಸಬಹುದು ಮತ್ತು 1-1.5 ವರ್ಷಗಳ ಗುರಿಯಲ್ಲಿ ರೂ 1800 ಟಾರ್ಗೆಟ್‌ಗೆಗೆ ಎಚ್‌ಜಿ ಇನ್‌ಫ್ರಾ ಖರೀದಿಸಬಹುದು ಎಂದು ಅವರು ಹೇಳುತ್ತಾರೆ.

ಒಟ್ಟಾರೆಯಾಗಿ, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವೇಗ ಸ್ವಲ್ಪ ಕುಂಠಿತವಾಗುವುದನ್ನು ನಿರೀಕ್ಷಿಸಬಹುದು. ಈ ವಲಯಗಳ ಷೇರುಗಳಲ್ಲಿ ನೀವು ಕೆಲವು ಏರಿಳಿತಗಳನ್ನು ನಿರೀಕ್ಷಿಸಬಹುದು. ಅಷ್ಟಕ್ಕೂ, ಈ ವಲಯ ಹೆಚ್ಚಿನ ಕಂಪನಿಗಳಲ್ಲಿ ಆರೋಗ್ಯಕರ ವ್ಯಾಲ್ಯುಯೇಶನ್‌ ಇದೆ. ಕೆಲವು ಕಂಪನಿಗಳ ಷೇರುಗಳನ್ನು ದೀರ್ಘಾವಧಿಗೆ ಹೂಡಿಕೆ ಅಪಾರ್ಚುನಿಟಿ ಎಂದು ಪರಿಗಣಿಸಬಹುದು.

Published: April 8, 2024, 15:16 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ