` this mf merger can be profitable for you | ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿ ಸುಮ್ಮನೆ ಕೂರಬೇಡಿ! | Money9 Kannada

ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿ ಸುಮ್ಮನೆ ಕೂರಬೇಡಿ!

ಹಾಗಾದರೆ, ಯಾಕೆ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ವಿಲೀನವಾಗುತ್ತವೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಮ್ಯೂಚುವಲ್ ಫಂಡ್‌ ಹೌಸ್‌ಗಳು ತಮ್ಮ ಮ್ಯೂಚುವಲ್ ಫಂಡ್ ಸ್ಕೀಮ್‌ಗಳನ್ನು ಬೇರೆ ಬೇರೆ ಕಾರಣಗಳಿಗೆ ಮರ್ಜ್ ಮಾಡುತ್ತವೆ.

ನೀವು ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿದ್ದರೆ ಸ್ಕೀಮ್‌ಗೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ ಇಮೇಲ್‌ಗಳು ಅಥವಾ ಎಸ್‌ಎಂಎಸ್ ಗಳನ್ನು ಮ್ಯೂಚುವಲ್ ಫಂಡ್ ಕಂಪನಿಗಳು ಕಳುಹಿಸುತ್ತಿರುತ್ತವೆ. ಮ್ಯೂಚುವಲ್ ಫಂಡ್ ಕಂಪನಿ ಹೊಸ ಸ್ಕೀಮ್ ಬಿಡುಗಡೆ ಮಾಡಿರುವುದು, ಫಂಡ್‌ಗೆ ಸಂಬಂಧಿಸಿದ ರಿಸ್ಕ್‌, ಎಕ್ಸ್‌ಪೆನ್ಸ್‌ ರೇಶಿಯೋಗೆ ಸಂಬಂಧಿಸಿದ ಮಾಹಿತಿ ಅಥವಾ ನಿಯಮಗಳಲ್ಲಿ ಬದಲಾವಣೆ… ಎಲ್ಲ ಮಾಹಿತಿಯನ್ನೂ ಇನ್ವೆಸ್ಟರ್‍‌ಗಳ ಜೊತೆಗೆ ಹಂಚಿಕೊಳ್ಳಲಾಗುತ್ತದೆ.

ನೀವು ಮ್ಯೂಚುವಲ್ ಫಂಡ್ ಇನ್ವೆಸ್ಟರ್ ಆಗಿದ್ದರೆ, ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ. ಕಂಪನಿಗಳು ಕಳುಹಿಸಿದ ಇಮೇಲ್ ಅಥವಾ ಎಸ್‌ಎಂಎಸ್‌ಗಳನ್ನು ಓದಿ. ಅದರಲ್ಲಿ ಇರುವ ಮಾಹಿತಿಯನ್ನು ವಿಶ್ಲೇಷಣೆ ಮಾಡಿ. ಕೆಲವು ಬಾರಿ ನಿಮಗೆ “XYZ AMC ಯು ಸ್ಕೀಮ್‌ XYZ ಮಿಡ್ ಕ್ಯಾಪ್‌ ಫಂಡ್‌ ಅನ್ನು ಸ್ಕೀಮ್ XYZ ಸ್ಮಾಲ್‌ ಕ್ಯಾಪ್ ಫಂಡ್‌ಗೆ ವಿಲೀನ ಮಾಡಲು ಪ್ರಸ್ತಾವನೆಗೆ ಮಂಡಳಿ ಅನುಮೋದನೆ ನೀಡಿದೆ” ಎಂಬ ಇಮೇಲ್ ಬಂದಿರುತ್ತದೆ. ಆಗ ಕೆಲವರು ಆತಂಕಗೊಂಡು ರಿಡೀಮ್ ಮಾಡಲು ಶುರು ಮಾಡಿಬಿಡುತ್ತಾರೆ. ಆದರೆ, ವಿಲೀನದ ಸುದ್ದಿಗೆ ನೀವು ಹೆದರಬೇಕಿಲ್ಲ.

ಮೊದಲು, ಮ್ಯೂಚುವಲ್ ಫಂಡ್ ಸ್ಕೀಮ್‌ನ ವಿಲೀನ ಎಂದರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಇನ್ವೆಸ್ಟರ್‌ಗಳು ಏನು ಮಾಡಬೇಕು? ಮ್ಯೂಚುವಲ್ ಫಂಡ್‌ಗಳ ವಿಲೀನದ ಅಡಿಯಲ್ಲಿ ಮ್ಯೂಚುವಲ್ ಫಂಡ್ ಸ್ಕೀಮ್‌ ಅನ್ನು ಕಂಪನಿಯ ಈಗಾಗಲೇ ಇರುವ ಇನ್ನೊಂದು ಸ್ಕೀಮ್‌ನಲ್ಲಿ ವಿಲೀನ ಮಾಡಲಾಗುತ್ತದೆ. ಕೆಲವು ಬಾರಿ ಎರಡು ಸ್ಕೀಮ್‌ಗಳನ್ನು ವಿಲೀನ ಮಾಡಿ ಹೊಸ ಸ್ಕೀಮ್‌ ಮಾಡಲಾಗುತ್ತದೆ. ಈ ಸಮಯದಲ್ಲಿ, ಇನ್ವೆಸ್ಟರ್ ಗಮನಿಸಬೇಕಿರುವುದು ಏನೆಂದರೆ ಮರ್ಜ್‌ ಮಾಡಿದಾಗ ಇನ್ವೆಸ್ಟ್‌ಮೆಂಟ್‌ನ ಉದ್ದೇಶ, ಎಕ್ಸ್‌ಪೆನ್ಸ್‌ ರೇಶಿಯೋ, ರಿಸ್ಕ್ ಪ್ರೊಫೈಲ್‌ಗಳು ಮತ್ತು ಮ್ಯೂಚುವಲ್ ಫಂಡ್ ಸ್ಕೀಮ್‌ನ ತೆರಿಗೆ ವಿವರಗಳೂ ಬದಲಾಗುತ್ತವೆ.

ಉದಾಹರಣೆಗೆ, ಇತ್ತೀಚೆಗೆ ಆದಿತ್ಯ ಬಿರ್ಲಾ ಸನ್ ಲೈಫ್‌ ಕ್ರಿಸಿಲ್‌ ಐಬಿಎಕ್ಸ್‌ ಎಎಎ ಮಾರ್ಚ್‌ 2024 ಇಂಡೆಕ್ಸ್ ಅನ್ನು ಆದಿತ್ಯ ಬಿರ್ಲಾ ಸನ್ ಲೈಫ್‌ ಕಾರ್ಪೊರೇಟ್ ಬಾಂಡ್ ಫಂಡ್‌ನಲ್ಲಿ ವಿಲೀನ ಮಾಡಿತು. ಇತ್ತೀಚೆಗೆ ಆದ ಎಲ್ಲ ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ವಿಲೀನವು 2024 ಏಪ್ರಿಲ್ 2 ರಿಂದ ಜಾರಿಗೆ ಬಂದಿವೆ. ಆದರೆ, ವಿಲೀನ ಆದ ನಂತರ, ಈಗಾಗಲೇ ಇರುವ ಸ್ಕೀಮ್‌ಗಳ ಹೆಸರು ಮತ್ತು ಇತರ ವಿವರಗಳು ಬದಲಾಗುತ್ತವೆ. ಆದರೆ, ಯುನಿಟ್ ಹೋಲ್ಡರ್‌ಗಳ ಮೇಲೆ ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

ಹಾಗಾದರೆ, ಯಾಕೆ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ವಿಲೀನವಾಗುತ್ತವೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಮ್ಯೂಚುವಲ್ ಫಂಡ್‌ ಹೌಸ್‌ಗಳು ತಮ್ಮ ಮ್ಯೂಚುವಲ್ ಫಂಡ್ ಸ್ಕೀಮ್‌ಗಳನ್ನು ಬೇರೆ ಬೇರೆ ಕಾರಣಗಳಿಗೆ ಮರ್ಜ್ ಮಾಡುತ್ತವೆ. ಕೆಲವು ಪ್ರಮುಖ ಕಾರಣಗಳೆಂದರೆ, ಮ್ಯಾನೇಜಿಂಗ್‌ ವೆಚ್ಚಗಳನ್ನು ಕಡಿಮೆ ಮಾಡುವುದು, ಸ್ಕೀಮ್ ಸರಳ ಮಾಡುವುದು, ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್ ಸುಧಾರಿಸುವುದು ಮತ್ತು ಸ್ಕೀಮ್‌ ಆಪರೇಶನ್ ಅನ್ನು ಸ್ಟ್ರೀಮ್‌ಲೈನ್ ಮಾಡುವುದು. ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ವಿಲೀನದಿಂದ ಸ್ಕೀಮ್‌ನ ಮೂಲಭೂತ ಫೀಚರ್‌ಗಳಲ್ಲಿ ಬದಲಾವಣೆಯಾಗುತ್ತದೆ. ಪ್ಲಾನ್ ಮರ್ಜ್ ಮಾಡಿದಾಗ ಇನ್ವೆಸ್ಟರ್ ಪೋರ್ಟ್‌ಫೋಲಿಯೋದ ಮೇಲೆ ಪರಿಣಾಮ ಬೀರುತ್ತದೆ.

ವಿಲೀನ, ಅಸೆಟ್ ಅಲೊಕೇಶನ್‌, ಸ್ಕೀಮ್‌ನ ಉದ್ದೇಶಗಳು, ತೆರಿಗೆ ಪರಿಣಾಮ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಹೌಸ್‌ಗಳು ಕೊಡಬೇಕು. ಯಾವುದೇ ಮ್ಯೂಚುವಲ್ ಫಂಡ್ ಕಂಪನಿಯಿಂದ ವಿಲೀನದ ಮೆಸೇಜ್‌ ನಿಮಗೆ ಬಂದರೆ, ಗಾಬರಿಯಾಗಬೇಡಿ. ಮಾರ್ಕೆಟ್ ರೆಗ್ಯುಲೇಟರ್ ಸೆಬಿ ನಿಯಮಗಳ ಪ್ರಕಾರ, ಯಾವುದೇ ಎಕ್ಸಿಟ್ ಲೋಡ್ ಇಲ್ಲದೇ ಎಕ್ಸಿಟ್ ಆಗುವುದಕ್ಕೆ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಹೌಸ್‌ಗಳು ಅವಕಾಶ ಕೊಡಬೇಕು. ಕೆಲವು ಪ್ರಕರಣಗಳಲ್ಲಿ, ಒಂದು ಸ್ಕೀಮ್‌ನಿಂದ ಎಕ್ಸಿಟ್ ಆಗುವ ಶುಲ್ಕ ವಿಧಿಸುತ್ತವೆ. ಇದನ್ನು ಎಕ್ಸಿಟ್ ಲೋಡ್ ಎನ್ನಲಾಗುತ್ತದೆ.

ಸೆಬಿ ನಿಯಮದ ಪ್ರಕಾರ, ಕನಿಷ್ಠ 30 ದಿನದ ಎಕ್ಸಿಟ್ ಲೋಡ್‌ ಇಲ್ಲದ ಅವಧಿಯನ್ನು ಫಂಡ್ ಹೌಸ್‌ಗಳು ಕೊಡುವುದು ಕಡ್ಡಾಯವಾಗಿರುತ್ತದೆ. ಈ ಅವಧಿಯಲ್ಲಿ, ತಮ್ಮ ನಿರ್ಧಾರವನ್ನು ಹೂಡಿಕೆದಾರರು ಮಾಡಬಹುದು. ಈ ಸಮಯದಲ್ಲಿ, ನಿರ್ದಿಷ್ಟ ಸಮಯ ಮಿತಿಯಲ್ಲಿ ಸಮ್ಮತಿಯನ್ನು ನೀಡದೇ ಇರುವವರ ಯುನಿಟ್‌ಗಳು ಆ ದಿನದ ನೆಟ್ ಅಸೆಟ್ ವ್ಯಾಲ್ಯೂಗೆ ರಿಡೀಮ್ ಆಗುತ್ತದೆ. ವಿಲೀನಕ್ಕೆ ಸಮ್ಮತಿ ನೀಡಿದವರಿಗೆ ಸ್ಕೀಮ್‌ನಲ್ಲಿ ಮುಂದುವರಿಯಲು ಅವಕಾಶ ಸಿಗುತ್ತದೆ. ಫಿನ್‌ವೈಸರ್‌ ಸಂಸ್ಥಾಪಕ ಮತ್ತು ಸಿಇಒ ಜೈ ಷಾ ಸಲಹೆಯ ಪ್ರಕಾರ, “ಹೂಡಿಕೆದಾರರು ಕೆಲವು ಬದಲಾವಣೆಯ ಬಗ್ಗೆ ಗಮನ ಹರಿಸಬೇಕು. ಹೊಸ ಸ್ಕೀಮ್‌, ಫೀ ಸ್ಟ್ರಕ್ಚರ್‌ ಮತ್ತು ತೆರಿಗೆ ಬಾಧ್ಯತೆಗಳ ಉದ್ದೇಶಗಳನ್ನು ಗಮನಿಸಬೇಕು. ಅಲ್ಲದೆ, ಫಂಡ್ ಮ್ಯಾನೇಜರ್‌ಗಳ ಟ್ರ್ಯಾಕ್‌ ರೆಕಾರ್ಡ್‌ ಮೇಲೂ ಒಂದು ಗಮನ ಇಟ್ಟಿರಬೇಕು. ವಿಲೀನ ಮಾಡಿದ ಸ್ಕೀಮ್‌ನಲ್ಲಿ ಹೂಡಿಕೆದಾರರು ಹೂಡಿಕೆ ಮಾಡಲು ಬಯಸದೇ ಇದ್ದರೆ, 30 ದಿನಗಳೊಳಗೆ ಅವರು ರಿಡೀಮ್ ಮಾಡಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ಎಕ್ಸಿಟ್ ಲೋಡ್ ಅನ್ವಯ ಆಗುವುದಿಲ್ಲ.

ಹಾಗಿದ್ದರೆ ಮರ್ಜರ್ ಸಮಯದಲ್ಲಿ ಹೂಡಿಕೆದಾರರು ಏನು ಮಾಡಬೇಕು? ನೋಟಿಸ್‌ನಲ್ಲಿ ಇರುವ ವಿಲೀನದ ಮಾಹಿತಿಯನ್ನು ಗಮನವಿಟ್ಟು ಓದಿಕೊಳ್ಳಬೇಕು. ತೆರಿಗೆ ಬಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಬೇಕು. ಇದು ನಿಮ್ಮ ಪೋರ್ಟ್‌ಫೋಲಿಯೋದ ಮೇಲೆ ಪರಿಣಾಮ ಬೀರಬಹುದು. ಎಕ್ಸ್‌ಪೆನ್ಸ್‌ ರೇಶಿಯೋ ನೋಡಿ. ಇದು ಇನ್ವೆಸ್ಟ್‌ಮೆಂಟ್‌ನ ವೆಚ್ಚ ಆಗಿರುತ್ತದೆ. ಫಂಡ್ ಹೌಸ್‌ನ ಹೊಸ ಪ್ರಕಟಣೆಯ ಬಗ್ಗೆ ಅಪ್‌ಡೇಟ್ ಇರಲಿ. ಫಂಡ್ ಮ್ಯಾನೇಜರ್‌ ಟ್ರ್ಯಾಕ್‌ ರೆಕಾರ್ಡ್‌ ಮೇಲೂ ಒಂದು ಗಮನ ಇಟ್ಟಿರಬೇಕು. ಹೊಸ ಸ್ಕೀಮ್‌ನ ಉದ್ದೇಶಗಳು ನಿಮ್ಮ ಹಣಕಾಸು ಗುರಿಗಳಿಗೆ ಅನುಗುಣವಾಗಿದೆಯೇ ಎಂದು ಕಂಡುಕೊಳ್ಳಿ.

ಆದರೆ, ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದರಲ್ಲಿ ಮಾರ್ಕೆಟ್ ರಿಸ್ಕ್‌ ಕೂಡಾ ಇರುತ್ತದೆ. ಮ್ಯೂಚುವಲ್ ಫಂಡ್ ಸ್ಕೀಮ್‌ನ ವಿಲೀನದ ವಿಷಯದಲ್ಲಿ ಹೂಡಿಕೆದಾರರು ಒಂದು ಕಣ್ಣಿಟ್ಟಿರಬೇಕು. ಯಾಕೆಂದರೆ, ತಮ್ಮ ಹೂಡಿಕೆ ನಿರ್ಧಾರ ಮಾಡುವುದಕ್ಕೆ ಹೂಡಿಕೆದಾರರಿಗೆ ಕೇವಲ 30 ದಿನಗಳು ಇರುತ್ತವೆ. ಮ್ಯೂಚುವಲ್ ಫಂಡ್ ಸ್ಕೀಮ್‌ನ ವಿಲೀನ ಆದ ನಂತರದಲ್ಲಿ ತಮ್ಮ ಯುನಿಟ್‌ಗಳನ್ನು ಮಾರಾಟ ಮಾಡಿಕೊಳ್ಳಬೇಕು ಎಂದು ಹೂಡಿಕೆದಾರರು ನಿರ್ಧಾರ ಮಾಡಿದರೆ, ಅದಕ್ಕೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್‌ ತೆರಬೇಕಾಗಬಹುದು.

ಆದರೆ, ಬಹುತೇಕ ಪ್ರಕರಣಗಳಲ್ಲಿ ಚಿಂತೆ ಮಾಡುವ ಅಗತ್ಯ ಇರುವುದಿಲ್ಲ. ಸ್ವಲ್ಪ ಸಂಶೋಧನೆ ಮತ್ತು ವಿಶ್ಲೇಷಣೆ ಮಾಡಿಕೊಂಡು, ತಮ್ಮ ಲಾಭ ಮತ್ತು ನಷ್ಟವನ್ನು ಹೂಡಿಕೆದಾರರು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಮ್ಯೂಚುವಲ್ ಫಂಡ್ ಸ್ಕೀಮ್‌ನ ವಿಲೀನವನ್ನು ಅರ್ಥ ಮಾಡಿಕೊಳ್ಳುವಲ್ಲಿ ಯಾವುದೇ ಗೊಂದಲ ಅಥವಾ ಅನಿಶ್ಚಿತತೆ ಇದ್ದರೆ, ಹಣಕಾಸು ಸಲಹೆಗಾರರ ಸಹಾಯ ಪಡೆಯಿರಿ.

Published: April 12, 2024, 10:28 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ