` what should you choose overnight funds or liquid funds for short term | ಕಡಿಮೆ ಅವಧಿಗೆ ಇಷ್ಟೊಂದು ರಿಟರ್ನ್ಸ್ ನೀಡುವ ಅಪ್ಶನ್ ಇನ್ನೊಂದಿಲ್ಲ! | Money9 Kannada

ಕಡಿಮೆ ಅವಧಿಗೆ ಇಷ್ಟೊಂದು ರಿಟರ್ನ್ಸ್ ನೀಡುವ ಅಪ್ಶನ್ ಇನ್ನೊಂದಿಲ್ಲ!

91 ದಿನಗಳ ಮ್ಯಾಚುರಿಟಿ ಇರುವ ಟ್ರೆಷರಿ ಬಿಲ್, ಕಮರ್ಷಿಯಲ್ ಪೇಪರ್, ಸರ್ಟಿಫಿಕೇಟ್, ಡಿಪಾಸಿಟ್ ನಂತಹ ಶಾರ್ಟ್ ಟರ್ಮ್ ಹೂಡಿಕೆಯನ್ನೇ ಲಿಕ್ವಿಡ್ ಫಂಡ್ ಅಂತಾ ಕರೆಯಬಹುದು. ಬ್ಯಾಂಕ್ ಉಳಿತಾಯ ಖಾತೆಗೆ ಹೋಲಿಸಿದರೆ ಇಲ್ಲಿ ಅದಕ್ಕಿಂತ ಉತ್ತಮ ರಿಟರ್ನ್ಸ್ ಸಿಗುತ್ತದೆ. ಲಿಕ್ವಿಡ್ ಫಂಡ್‌ಗಳನ್ನು ಸಾಮಾನ್ಯವಾಗಿ ಒಂದು ದಿನದೊಳಗೆ ರಿಡೀಮ್ ಮಾಡಲಾಗುತ್ತದೆ.

ರೀಮಾ ತನ್ನ ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟುಕೊಂಡಿರುತ್ತಾಳೆ. ಅಗತ್ಯವಿದ್ದಾಗ ತಕ್ಷಣವೇ ಹಣ ಹಿಂಪಡೆಯಲು ಸಾಧ್ಯ ಎನ್ನುವುದು ಅವಳ ಆಲೋಚನೆ. ನೀವೂ ಕೂಡ ರೀಮಾ ಅವರಂತೆ ಯೊಚನೆ ಮಾಡುತ್ತ ಉಳಿತಾಯ ಖಾತೆಯಲ್ಲಿಯೇ ಹಣ ಇಟ್ಟುಕೊಂಡಿದ್ದರೆ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಅಂತಾನೇ ಹೇಳಬಹುದು. ಈ ಹಚ್ಚುವರಿ ಹಣವನ್ನು ಬೇರೆ ಕಡೆ ಹೂಡಿಕೆ ಮಾಡುವ ಮೂಲಕ, ಅಂದರೆ ಹೆಚ್ಚುವರಿ ಹಣವನ್ನು ಲಿಕ್ವಿಡ್ ಅಥವಾ ಓವರ್ ನೈಟ್ ಫಂಡ್ ನಲ್ಲಿ ತೊಡಗಿಸಿಕೊಂಡರೆ ಹೆಚ್ಚಿನ ರಿಟರ್ನ್ಸ್ ಸಹ ಪಡೆದುಕೊಳ್ಳಹುದು.

ಲಿಕ್ವಿಡ್ ಫಂಡ್ ಮತ್ತು ಓವರ್ ನೈಟ್ ಮ್ಯೂಚುವಲ್ ಫಂಡ್ ಗಳು ಡೆಟ್ ಫಂಡ್ ಕೆಟಗರಿಯಲ್ಲಿ ಬರುತ್ತವೆ. ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ಟಾರ್ಗೆಟ್ ಎರಡನ್ನೂ ಪೂರೈಸಿಕೊಳ್ಳಲು ಈ ಫಂಡ್ ನಿಮ್ಮ ನೆರವಿಗೆ ನಿಲ್ಲುತ್ತದೆ. ಮ್ಯಾಚುರಟಿ ಮತ್ತು ರಿಸ್ಕ್ ವಿಚಾರದಲ್ಲಿಯೂ ಈ ಫಂಡ್ ಗಳು ಉಳಿದ ಫಂಡ್ ಗಳಿಗಿಂತ ಭಿನ್ನವಾಗಿವೆ.

ಹಾಗಿದ್ದರೆ ಯಾವ ಬಗೆಯ ಹೂಡಿಕೆದಾರರು ಈ ಲಿಕ್ವಿಡ್ ಮತ್ತು ಓವರ್ ನೈಟ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು? ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಫಂಡ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು? ಇದು ಹೆಸರೇ ಸೂಚಿಸುವಂತೆ, ಲಿಕ್ವಿಡ್ ಫಂಡ್‌ಗಳು ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ಸ್ ಮತ್ತು ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಯೋಜನೆ ಲಿಕ್ವಿಡ್ ಮಾದರಿಯಲ್ಲೇ ಇರುತ್ತವೆ ಅಂದರೆ ನಿಮಗೆ ಯಾವಾಗ ಬೇಕೋ ಆವಾಗ ಹಣ ಹಿಂದಕ್ಕೆ ಪಡೆಯಲು ಅವಕಾಶ ಇರುತ್ತದೆ.

91 ದಿನಗಳ ಮ್ಯಾಚುರಿಟಿ ಇರುವ ಟ್ರೆಷರಿ ಬಿಲ್, ಕಮರ್ಷಿಯಲ್ ಪೇಪರ್, ಸರ್ಟಿಫಿಕೇಟ್, ಡಿಪಾಸಿಟ್ ನಂತಹ ಶಾರ್ಟ್ ಟರ್ಮ್ ಹೂಡಿಕೆಯನ್ನೇ ಲಿಕ್ವಿಡ್ ಫಂಡ್ ಅಂತಾ ಕರೆಯಬಹುದು. ಬ್ಯಾಂಕ್ ಉಳಿತಾಯ ಖಾತೆಗೆ ಹೋಲಿಸಿದರೆ ಇಲ್ಲಿ ಅದಕ್ಕಿಂತ ಉತ್ತಮ ರಿಟರ್ನ್ಸ್ ಸಿಗುತ್ತದೆ. ಲಿಕ್ವಿಡ್ ಫಂಡ್‌ಗಳನ್ನು ಸಾಮಾನ್ಯವಾಗಿ ಒಂದು ದಿನದೊಳಗೆ ರಿಡೀಮ್ ಮಾಡಲಾಗುತ್ತದೆ.

ಇನ್ನೊಂದು ಕಡೆ ಓವರ್ ನೈಟ್ ಫಂಡ್ ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ಓವರ್ ನೈಟ್ ಮ್ಯೂಚುವಲ್ ಫಂಡ್ ಗಳು ಡೆಟ್ ಸೆಕ್ಯೂರಿಟಿ ಮೇಲೆ ಹೂಡಿಕೆ ಮಾಡಿರುತ್ತವೆ. ಹೂಡಿಕೆ ಮಾಡಿದ ಮರುದಿನ ಇವು ಮ್ಯಾಚೂರ್ ಆಗುತ್ತವೆ. ಅಂದರೆ ಮರುದಿನವೇ ಅವುಗಳನ್ನು ರಿಡೀಮ್ ಮಾಡಬಹುದು. ಇದೇ ಕಾರಣಕ್ಕೆ ಈ ಮಾದರಿಯ ಮ್ಯೂಚುವಲ್ ಫಂಡ್ ಗಳನ್ನು ಓವರ್ ನೈಟ್ ಫಂಡ್ ಅಂತಾ ಕರೆಯಲಾಗುತ್ತದೆ.

ಹಾಗಿದ್ದರೆ ಈ ಫಂಡ್ ನಲ್ಲಿ ರಿಸ್ಕ್ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಬಡ್ಡಿ ದರಗಳ ಏರಿಕೆ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಓವರ್ ನೈಟ್ ಫಂಡ್ ಗೆ ಹೋಲಿಸಿದರೆ ಲಿಕ್ವಿಡ್ ಫಂಡ್ ಗಳು ಹೆಚ್ಚು ಕ್ರೆಡಿಟ್ ಮತ್ತು ಡೀಫಾಲ್ಟ್ ಅಪಾಯವನ್ನು ಹೊಂದಿವೆ. ಒಂದರ್ಥದಲ್ಲಿ ನಷ್ಟದ ಚಾನ್ಸ್ ಜಾಸ್ತಿ ಅಂತಾನೇ ಹೇಳಬಹುದು. ಏಕೆಂದರೆ ಓವರ್ ನೈಟ್ ಫಂಡ್ ನ ಹೂಡಿಕೆಯನ್ನು ಫಂಡ್ ಮ್ಯಾನೇಜರ್ ಮರುದಿನವೇ ಸೆಲ್ ಮಾಡುವುದರಿಂದ ಡಿಫಾಲ್ಟ್ ರಿಸ್ಕ್ ಕಡಿಮೆ ಇರುತ್ತದೆ.

ಯಾವುದೇ ಹೂಡಿಕೆ ಇರಲಿ ಅದರಿಂದ ಸಿಗುವ ರಿಟರ್ನ್ಸ್ ತುಂಬಾ ಮುಖ್ಯವಾಗುತ್ತದೆ. ಓವರ್ ನೈಟ್ ಫಂಡ್ ಗೆ ಹೋಲಿಸಿದರೆ ಲಿಕ್ವಿಡ್ ಫಂಡ್‌ಗಳು ಹೆಚ್ಚಿನ ರಿಟರ್ನ್ಸ್ ನೀಡುತ್ತವೆ. ವಾಲ್ಯೂ ರಿಸರ್ಚ್ ಡೇಟಾ ಹೇಳಿವಂತೆ ಲಿಕ್ವಿಡ್ ಮ್ಯೂಚುಯಲ್ ಫಂಡ್‌ಗಳು ಕಳೆದ ವರ್ಷ ಸರಾಸರಿ 7.05% ರಿಟರ್ನ್ಸ್ ನೀಡಿದ್ದರೆ ಕಳೆದ 3 ವರ್ಷಗಳಲ್ಲಿ 5.18% ಮತ್ತು 5 ವರ್ಷಗಳಲ್ಲಿ 5.02% ಆದಾಯ ನೀಡಿವೆ. ಈ ಅವಧಿಯಲ್ಲಿ ಓವರ್ ನೈಟ್ ಮ್ಯೂಚುವಲ್ ಫಂಡ್ ವಾರ್ಷಿಕ ಸರಾಸರಿ ಆದಾಯವೂ ಕ್ರಮವಾಗಿ 6.69%, 4.99% ಮತ್ತು 4.65% ರಷ್ಟಿದೆ.

ಹಾಗಿದ್ದರೆ ಈ ರೀತಿಯ ಹೂಡಿಕೆ ಮೇಲೆ ಟ್ಯಾಕ್ಸ್ ಲೆಕ್ಕಾಚಾರ ಹೇಗಿರುತ್ತದೆ. ಇವು ಯಾವ ಕ್ಯಾಟಗರಿಯಲ್ಲಿ ಬರುತ್ತವೆ. ಲಿಕ್ವಿಡ್ ಮತ್ತು ಓವರ್ ನೈಟ್ ಫಂಡ್ ಗಳು ಡೆಟ್ ಫಂಡ್ ಅಡಿಯಲ್ಲಿ ಬರುತ್ತವೆ. ಏಪ್ರಿಲ್ 1, 2023 ರಿಂದ ಡೆಟ್ ಫಂಡ್ ನಲ್ಲಿ ಮಾಡಿರುವ ಹೂಡಿಕೆಗೆ ಬಂದಿರುವ ಲಾಭ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಅಂದರೆ ಹೂಡಿಕೆದಾರನ ಒಟ್ಟು ವಾರ್ಷಿಕ ಆದಾಯಕ್ಕೆ ಇದು ಸೇರ್ಪಡೆಯಾಗುತ್ತದೆ. ಇದನ್ನು ಸೇರಿಸಿದ ಮೇಲೆ ನೀವು ಯಾವ ಟ್ಯಾಕ್ಸ್ ಸ್ಲ್ಯಾಬ್ ಗೆ ಒಳಪಡುತ್ತಿರೋ ಅಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಹೂಡಿಕೆ ಎಷ್ಟು ಕಾಲದಿಂದ ಇದೆ ಎನ್ನುವುದು ಇಲ್ಲಿ ಲೆಕ್ಕಾಚಾರಕ್ಕೆ ಬರೋದಿಲ್ಲ.

ಹಾಗಿದ್ದರೆ ಇಂಥ ಫಂಡ್ ಮೇಲೆ ಹೂಡಿಕೆ ಮಾಡಬಹುದೆ? ಒಂದರಿಂದ ಮೂರು ತಿಂಗಳ ಶಾರ್ಟ್ ಟರ್ಮ್ ಗೆ ಹೂಡಿಕೆ ಮಾಡಲು ಬಯಸುವವರು ಲಿಕ್ವಿಡ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ದೊಡ್ಡ ಮೊತ್ತದ ಬೋನಸ್ ಸಿಕ್ಕರೆ ಅಥವಾ ಹೆಚ್ಚುವರಿ ಹಣ ದೊರೆತರೆ ಅದನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ನಿಮಗೆ ಗೊತ್ತಿಲ್ಲದಿದ್ದರೆ ಈ ಲಿಕ್ವಿಡ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು ಅಂತ ಹಣಕಾಸು ಪರಿಣಿತರು ಸಲಹೆ ನೀಡುತ್ತಾರೆ. ನಿಮ್ಮ ಹೂಡಿಕೆಯ ಅವಧಿ ಒಂದು ವಾರಕ್ಕಿಂತಲೂ ಕಡಿಮೆ ಎಂದಾದರೆ ನಿಮಗೆ ಓವರ್ ನೂಟ್ ಫಂಡ್ ಸೂಕ್ತವಾಗುತ್ತದೆ. ಏಕೆಂದರೆ ಇಲ್ಲಿ ಯಾವುದೆ ಎಕ್ಸಿಟ್ ಲೋಡ್ ಇರೋದಿಲ್ಲ. ಇದರ ಅರ್ಥ ನಿಮ್ಮ ಹೂಡಿಕೆ ರಿಡೀಮ್ ಮಾಡಲು ನೀವು ಯಾವುದೇ ಶುಲ್ಕ ಪಾವತಿಸಬೇಕಾಗುವುದಿಲ್ಲ.

7 ದಿನ ಅಂದರೆ ಒಂದು ವಾರದ ಮಟ್ಟಿಗೆ ಹೂಡಿಕೆ ಮಾಡಲು ಬಯಸುವವರು ಓವರ್ ನೈಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂದು ಫಿನ್‌ವೈಸರ್‌ನ ಸಂಸ್ಥಾಪಕ ಮತ್ತು ಸಿಇಒ ಜಯ್ ಶಾ ಸಲಹೆ ನೀಡುತ್ತಾರೆ. ಹೂಡಿಕೆಯ ದೃಷ್ಟಿಕೋನವು ಒಂದು ವಾರಕ್ಕಿಂತ ಹೆಚ್ಚು ಮತ್ತು ಎರಡು ತಿಂಗಳವರೆಗೆ ಇದ್ದರೆ ನಿಮಗೆ ಲಿಕ್ವಿಡ್ ಫಂಡ್ ಸೂಕ್ತವಾಗುತ್ತದೆ. ಓವರ್ ಫಂಡ್ ನಲ್ಲಿ ಯಾವುದೇ ಎಕ್ಸಿಟ್ ಲೋಡ್ ಇರುವುದಿಲ್ಲ, ಆದರೆ ಲಿಕ್ವಿಡ್ ಫಂಡ್‌ಗಳಲ್ಲಿ 7 ದಿನಗಳ ಎಕ್ಸಿಟ್ ಲೋಡ್ ಇರುತ್ತದೆ.

ರೀಮಾ ಅವರಂತೆ, ಹೆಚ್ಚಿನ ಜನರು ತಮ್ಮ ಹೆಚ್ಚುವರಿ ಹಣವನ್ನು ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಇರಿಸಲು ಬಯಸುತ್ತಾರೆ . ಏಕೆಂದರೆ ಅವರು ಅದನ್ನು ಸುರಕ್ಷಿತ ಆಯ್ಕೆ ಅಂತ ನಂಬಿಕೊಂಡು ಬಂದಿದ್ದಾರೆ. ಯಾವುದೆ ಸಮಯದಲ್ಲಿ ಬೇಕಾದರೂ ಹಣ ಹಿಂಪಡೆಯಬಹುದು ಅನ್ನೋದು ಅವರ ಆಲೋಚನೆ. ಲಿಕ್ವಿಡ್ ಫಂಡ್ ಗಳು ಮತ್ತು ಓವರ್ ನೈಟ್ ಫಂಡ್ ಗಳು ಆಕರ್ಷಕ ಆಪ್ಶನ್ ನೀಡುತ್ತಿವೆ. ಉತ್ತಮ ರಿಟರ್ನ್ಸ್ ಜತೆಗೆ ನೀವು ಹೂಡಿಕೆ ಮಾಡಿದ ಹಣ ಸಹ ಇಲ್ಲಿ ಸುರಕ್ಷಿತವಾಗಿರುತ್ತದೆ. ಓವರ್ ನೈಟ್ ಫಂಡ್ ನಲ್ಲಿ ಯಾವುದೇ ಎಕ್ಸಿಟ್ ಲೋಡ್ ಇಲ್ಲದೆ ಸಹ ನಿಮ್ಮ ಹಣ ಕಾಪಾಡಿಕೊಳ್ಳಬಹುದು

Published: April 16, 2024, 13:29 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ