` what are the options to redeem sovereign gold bond | ಯಾವ ಸಂದರ್ಭದಲ್ಲಿ ಗೋಲ್ಡ್ ಬಾಂಡ್ ಹಿಂಪಡೆಯಬಹುದು..? | Money9 Kannada

ಯಾವ ಸಂದರ್ಭದಲ್ಲಿ ಗೋಲ್ಡ್ ಬಾಂಡ್ ಹಿಂಪಡೆಯಬಹುದು..?

ರಾಯಚೂರಿನ ನಿವಾಸಿ ಮೀರಾ ಅವರು ಐದು ವರ್ಷಗಳ ಹಿಂದೆ ಸಾವರಿನ್ ಗೋಲ್ಡ್ ಬಾಂಡ್ (ಎಸ್ ಜಿ ಬಿ) ನಲ್ಲಿ ಹೂಡಿಕೆ ಮಾಡಿದ್ದರು. ಆದರೆ ಈಗ ಅವರಿಗೆ ಅಗತ್ಯ ಇರುವಾಗ ಅವರು ಆ ಬಾಂಡ್ ಬಳಸಿಕೊಬಹುದಾ?ಎಸ್ ಜಿ ಬಿ ಗಳ ಮಾರಾಟ ಅಥವಾ ರಿಡಮ್ಷನ್ ಗೆ ಇರೋ ಆಯ್ಕೆಗಳೇನು? ಅವರು ಗೊಂದಲದಲ್ಲಿದ್ದಾರೆ. ಮೀರಾ ಅವರಂತೆ ನೀವು ಕೂಡ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಈ ಹೂಡಿಕೆಗಳನ್ನು ನೀವು ಯಾವಾಗ ಮತ್ತು ಹೇಗೆ ರಿಡೀಮ್ ಮಾಡಿಕೊಳ್ಳಬಹುದು ಎನ್ನುವುದನ್ನುತಿಳಿದುಕೊಳ್ಳುವುದು ಮುಖ್ಯ.

  • team money9
  • Last Updated : November 21, 2023, 06:21 IST

ರಾಯಚೂರಿನ ನಿವಾಸಿ ಮೀರಾ ಅವರು ಐದು ವರ್ಷಗಳ ಹಿಂದೆ ಸಾವರಿನ್ ಗೋಲ್ಡ್ ಬಾಂಡ್ (ಎಸ್ ಜಿ ಬಿ) ನಲ್ಲಿ ಹೂಡಿಕೆ ಮಾಡಿದ್ದರು. ಆದರೆ ಈಗ ಅವರಿಗೆ ಅಗತ್ಯ ಇರುವಾಗ ಅವರು ಆ ಬಾಂಡ್ ಬಳಸಿಕೊಬಹುದಾ?ಎಸ್ ಜಿ ಬಿ ಗಳ ಮಾರಾಟ ಅಥವಾ ರಿಡಮ್ಷನ್ ಗೆ ಇರೋ ಆಯ್ಕೆಗಳೇನು? ಅವರು ಗೊಂದಲದಲ್ಲಿದ್ದಾರೆ. ಮೀರಾ ಅವರಂತೆ ನೀವು ಕೂಡ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಈ ಹೂಡಿಕೆಗಳನ್ನು ನೀವು ಯಾವಾಗ ಮತ್ತು ಹೇಗೆ ರಿಡೀಮ್ ಮಾಡಿಕೊಳ್ಳಬಹುದು ಎನ್ನುವುದನ್ನುತಿಳಿದುಕೊಳ್ಳುವುದು ಮುಖ್ಯ. ಎಸ್ ಜಿ ಬಿ ಗಳ ಮೆಚ್ಯುರಿಟಿ ಅವಧಿ ಸಾಮಾನ್ಯವಾಗಿ 8 ವರ್ಷಗಳು. ಆದರೆ ಐದು ವರ್ಷಗಳ ನಂತರ ಅವುಗಳ ಮೆಚ್ಯುರಿಟಿ ಪೂರ್ವ ರಿಡೀಮ್ ಮಾಡಿಕೊಳ್ಳಲು ಅವಕಾಶ ಇದೆ‌. ವಾರ್ಷಿಕ ಶೇಕಡ 2.5 ರಷ್ಟು ಬಡ್ಡಿ ಕೂಡ ಸಿಗುತ್ತದೆ. ಈ ಮೊತ್ತವನ್ನ ಹೂಡಿಕೆದಾರರ ಖಾತೆಗೆ ಅರ್ಧವಾರ್ಷಿಕವಾಗಿ ಜಮೆ ಮಾಡಲಾಗತ್ತದೆ.

ಮೆಚ್ಯುರಿಟಿಗೂ ಮೊದಲೇ ನೀವು ನಿಮ್ಮ ಎಸ್ ಜಿ ಬಿ ಗಳನ್ನ ರಿಡೀಮ್ ಮಾಡೋಕೆ ಬಯಸಿದರೆ ಇದಕ್ಕಾಗಿ ಆರು ತಿಂಗಳಿಗೊಮ್ಮೆ ಅವಕಾಶ ಕೊಡಲಾಗತ್ತದೆ. ಯಾವ ದಿನಾಂಕದಂದು ಬಡ್ಡಿ ಕ್ರೆಡಿಟ್ ಆಗುತ್ತದೆಯೋ ಆ ದಿನಾಂಕ ಆಧರಿಸಿ ಮೆಚ್ಯುರಿಟಿ ದಿನಾಂಕ ನಿರ್ಧರಿತವಾಗತ್ತದೆ. ಮೆಚ್ಯರಿಟಿಗೂ ಮೊದಲೇ ಈ ಬಾಂಡ್ ಗಳನ್ನ ರಿಡೀಮ್ ಮಾಡಿಕೊಳ್ಳಬೇಕು ಎಂದರೆ ಯಾವ ದಿನಾಂಕದಂದು ಇಂಟರೆಸ್ಟ್ ಕ್ರೆಡಿಟ್ ಆಗುತ್ತದೆಯೋ ಅಂದರೆ ಬಡ್ಡಿ ಜಮೆ ಆಗೋ ದಿನಾಂಕಕ್ಕಿಂತ ಒಂದು ತಿಂಗಳು ಮೊದಲು ಅರ್ಜಿ ಸಲ್ಲಿಸಬೇಕು. ನಿರ್ದಿಷ್ಟ ಸೀರೀಸ್ ನ‌ ಸಾವರಿನ್ ಗೋಲ್ಡ್ ಬಾಂಡ್ ಗಳನ್ನ ನೀವು ಯಾವಾಗ ಅವಧಿ ಪೂರ್ವವಾಗಿ‌ ರಿಡೀಮ್ ಮಾಡಿಕೊಳ್ಳಬಹುದು ಎಂಬ ಪಟ್ಟಿಯನ್ನು ಆರ್ ಬಿ ಐ ಬಿಡುಗಡೆ ಮಾಡುತ್ತದೆ.

ಮೀರಾ ತಮ್ಮ ಚಿನ್ನದ ಹೂಡಿಕೆಗಳನ್ನ ವರ್ಷಕ್ಕೆ ಎರಡು ಬಾರಿ ಬಳಸಿಕೊಳ್ಳಬಹುದು. ಒಂದು ತಿಂಗಳು ಮುಂಚಿತವಾಗಿ ಆರ್ ಬಿ ಐ, ಸಾವರಿನ್ ಗೋಲ್ಡ್ ಬಾಂಡ್ ಗಳ ರಿಡಮ್ಷನ್ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಈಗ ಎಸ್ ಜಿ ಬಿ ರಿಡಮ್ಷನ್ ಪ್ರಕ್ರಿಯೆ ಯನ್ನ ಅರ್ಥ ಮಾಡ್ಕೋಳೋಣ‌. ವಿವಿಧ ಮಾಧ್ಯಮಗಳ ಮೂಲಕ ಪ್ರಿಮೆಚ್ಯೂರ್ ರಿಡಮ್ಷನ್ ಕುರಿತಾದ ವಿವರಗಳನ್ನು ಬಿಡುಗಡೆ ಮಾಡತ್ತದೆ. ಉದಾಹರಣೆಗೆ, ಆರ್ ಬಿ ಐ 2017-18 ನೇ ಸಾಲಿನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗಳ 12 ನೇ ಆವೃತ್ತಿಯನ್ನ ಬಿಡುಗಡೆ ಮಾಡಿತ್ತು. ಇದು ಬಿಡುಗಡೆ ಆದ ದಿನಾಂಕ 2018 ರ ಡಿಸೆಂಬರ್ 18. ಹಾಗಾದ್ರೆ, ಈ ಎಸ್ ಜಿ ಬಿ ಗಳ‌ ಬಡ್ಡಿ ಕ್ರೆಡಿಟ್ ಆಗುವುದು 2023 ರ ಡಿಸೆಂಬರ್ 18. ಈ ಬಾಂಡ್ ಗಳನ್ನ ರಿಡೀಮ್ ಮಾಡಕ್ಕೆ ನೀವು ಈ ದಿನಾಂಕಕ್ಕಿಂತ ಒಂದು ತಿಂಗಳು ಮೊದಲು ಅರ್ಜಿ ಸಲ್ಲಿಸಬೇಕು. 2023ರ ನವೆಂಬರ್ 18 ರಿಂದ ಡಿಸೆಂಬರ್ 8 ರವರೆಗೆ ಈ ಬಾಂಡ್ ಗಳ ಪ್ರಿ ಮೆಚ್ಯೂರ್‌ ರಿಡಮ್ಷನ್ ಗೆ ವಿಂಡೋ ತೆರೆದಿರುತ್ತದೆ. ನೀವು ನಿಮ್ಮ ಎಸ್ ಜಿ ಬಿ ಗಳನ್ನ ಅವಧಿಪೂರ್ವವಾಗಿ ರಿಡೀಮ್ ಮಾಡಬೇಕು ಅಂತಿದ್ದರೆ ಬಡ್ಡಿ ಜಮಾ ಆಗುವ ಒಂದು ತಿಂಗಳು ಮೊದಲೇ ನೀವು ಬ್ಯಾಂಕ್, ಅಂಚೆ ಕಚೇರಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಅಥವಾ ಥರ್ಡ್ ಪಾರ್ಟಿ ಏಜೆಂಟರಿಗೆ ತಿಳಿಸಬೇಕು. ಬಡ್ಡಿ ಕ್ರೆಡಿಟ್ ಆಗೋಕೆ ಒಂದು ದಿನದ ಹಿಂದಿನವರೆಗೂ ಸಲ್ಲಿಕೆ ಆಗೋ ಪ್ರಿಮೆಚ್ಯೂರ್ ರಿಡಮ್ಷನ್ ಅರ್ಜಿಗಳನ್ನು ಪರಿಗಣಿಸಲಾಗತ್ತದೆ. ಹೀಗೆ ನೀವು ಅರ್ಜಿ ಸಲ್ಲಿಸಿದ ಮೇಲೆ, ಮೆಚ್ಯುರಿಟಿ ಮೇಲಿನ ಮೊತ್ತದ ಜೊತೆಗೆ ಬಡ್ಡಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಒಂದು ವೇಳೆ ನೀವು 8 ವರ್ಷಗಳ ಪೂರ್ಣಾವಧಿಗೆ ಎಸ್ ಜಿ ಬಿ ಗಳನ್ನ ಹೊಂದಿದ್ದರೆ, ಮೆಚ್ಯುರಿಟಿ ಮೊತ್ತ ನಿಮ್ಮ‌ ಖಾತೆಗೆ ಆಟೋಮ್ಯಾಟಿಕ್ ಆಗಿ ಜಮಾ ಆಗುತ್ತದೆ. ನೀವು ಅದಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.

ಎಸ್ ಜಿ ಬಿ ಗಳು ಸ್ಟಾಕ್ ಎಕ್ಸ್ಚೇಂಜ್ ನಲ್ಲೂ ಲಿಸ್ಟ್ ಆಗಿವೆ. ಇಲ್ಲೂ ಕೂಡ ನೀವು ಈ ಬಾಂಡ್ ಗಳನ್ನ ಖರೀದಿಸಬಹುದು. ಹಾಗೇ ನಿಮ್ಮಿಷ್ಟ ಬಂದಾಗ ಮಾರಾಟ ಮಾಡಬಹುದು. ಆದ್ರೆ ಎಸ್ ಜಿ ಬಿ ಗಳನ್ನ ನೀವು ಡಿಮ್ಯಾಟ್ ರೂಪದಲ್ಲಿ ಹೊಂದಿರಬೇಕು ಅಷ್ಟೇ. ನೀವು ನಿಮ್ಮ ಎಸ್ ಜಿ ಬಿ ಗಳನ್ನ ನೀವು ಖಾತೆ ಹೊಂದಿರುವ ಯಾವುದೇ ಬ್ರೋಕಿಂಗ್ ಫರ್ಮ್ ಮೂಲಕ ಮಾರಾಟ ಮಾಡಬಹುದು‌‌. ನೀವು ಅದನ್ನು ಮಾರಾಟ ಮಾಡಿದ ಮೇಲೆ, ಬಾಂಡ್ ಮೊತ್ತ ನಿಮ್ಮ ಖಾತೆಗೆ ಜಮೆ ಆಗತ್ತೆ.

ಈ ಬಾಂಡ್ ಗಳು ಹೇಗೆ ತೆರಿಗೆಗೆ ಒಳಪಡತ್ತವೆ ಎನ್ನುವುದನ್ನು ತಿಳಿಯುವುದು ಅಷ್ಟೇ ಮುಖ್ಯ. ಗೋಲ್ಡ್ ಬಾಂಡ್ ಗಳನ್ನ ಎಂಟು ವರ್ಷದ ಬಳಿಕ ಅಂದರೆ ಮೆಚ್ಯುರಿಟಿ ಆದಾಗ ರಿಡೀಮ್ ಮಾಡಿದರೆ ಆಗ ಸಿಗೋ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಆರ್ ಬಿ ಐ ಮೂಲಕ ಎಸ್ ಜಿ ಬಿ ಗಳನ್ನ ಪ್ರಿಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಂಡಿದ್ದರೆ ಆಗ ಕೂಡ ಪ್ರಾಫಿಟ್ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಆದಾಗ್ಯೂ, ಷೇರು ವಿನಿಮಯ ಕೇಂದ್ರಗಳ ಮೂಲಕ ನೀವು ಈ ಬಾಂಡ್ ಗಳನ್ನ ಮಾರಾಟ ಮಾಡಿದರೆ ಆಗ ಸಸಿಗುವ ನಿಮ್ಮ ಗಳಿಕೆ ಮೇಲೆ ಕ್ಯಾಪಿಟಲ್ ಗೇನ್ ತೆರಿಗೆ ವಿಧಿಸಲಾಗತ್ತದೆ.

ತೆರಿಗೆ ಮತ್ತು ಹೂಡಿಕೆ ತಜ್ಞರಾದ ಬಲವಂತ್ ಜೈನ್ ಅವರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ. ನೀವು ಎಸ್ ಜಿ ಬಿಗಳನ್ನ ಖರೀದಿಸಿದ ಒಂದು ವರ್ಷದೊಳಗೆ ಮಾರಾಟ ಮಾಡಿದರೆ ಆಗ ಸಿಗುವ ರಿಟರ್ನ್ ಗಳು ಅಲ್ಪಾವಧಿ ಕ್ಯಾಪಿಟಲ್ ಗೇನ್ ತೆರಿಗೆಗೆ ಒಳಪಡತ್ತವೆ. ಈ ಲಾಭವನ್ನ‌ ನಿಮ್ಮ ‌ಆದಾಯಕ್ಕೆ ಸೇರಿಸಲಾಗತ್ತದೆ. ಈ ನಿಮ್ಮ ಒಟ್ಟು ಆದಾಯದ ಮೇಲೆ ನಿಮ್ಮ ತೆರಿಗೆ ಲೆಕ್ಕಮಾಡಲಾಗತ್ತದೆ. ನೀವು ಒಂದು ವರ್ಷದ ನಂತರ ಎಸ್ ಜಿ ಬಿ ಗಳನ್ನ ಮಾರಾಟ ಮಾಡಿದರೆ ಅದನ್ನು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಅಡಿ ಸೇರಿಸಲಾಗುತ್ತದೆ. ಅಂದ್ರೆ ಇಂಡೆಕ್ಸೇಷನ್ ಸೌಲಭ್ಯ ಇಲ್ಲದೆ ಶೇಕಡ 10 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇಂಡೆಕ್ಸೇಷನ್ ಸೌಲಭ್ಯ ಆಯ್ಕೆ ಮಾಡಿಕೊಂಡರೆ ನೀವು ಶೇಕಡ 20 ರಷ್ಟು ತೆರಿಗೆ ಪಾವತಿಸಬೇಕಾಗತ್ತದೆ. ಹೂಡಿಕೆದಾರರಿಗೆ ಸಿಗೋ ಅರ್ಧವಾರ್ಷಿಕ ಬಡ್ಡಿ ಹೂಡಿಕೆದಾರರ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಲಾಗತ್ತದೆ. ಆನಂತರ ಹೂಡಿಕೆದಾರರಿಗೆ ಅನ್ವಯವಾಗೋ ಟ್ಯಾಕ್ಸ್ ಸ್ಲಾಬ್ ನಂತೆ ತೆರಿಗೆ ವಿಧಿಸಲಾಗತ್ತದೆ‌.

ಹೀಗೆ ಮೀರಾ ಅವರು ತಮ್ಮ ಅಗತ್ಯಕ್ಕನುಗುಣವಾಗಿ ಸಾವರಿನ್ ಗೋಲ್ಡ್ ಬಾಂಡ್ ಗಳನ್ನ ಮಾರಾಟ ಮಾಡಬಹುದು. ಅವರು ಆರ್ ಬಿ ಐ ಮೂಲಕ ಈ ಬಾಂಡ್ ಗಳನ್ನ ರಿಡೀಮ್ ಮಾಡಿಕೊಂಡರೆ ಅದರ ಗಳಿಕೆ ಮೇಲೆ ಯಾವುದೇ ತೆರಿಗೆ ಕಟ್ಟುವ ಹಾಗೆ ಇಲ್ಲ.

Published: November 21, 2023, 06:21 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ