` central banks are purchasing gold at record highs | ಕೇಂದ್ರಿಯ ಬ್ಯಾಂಕುಗಳ ಭರ್ಜರಿ ಬಂಗಾರ ಖರೀದಿ ಹಿಂದಿನ ರಹಸ್ಯವೇನು? | Money9 Kannada

ಕೇಂದ್ರಿಯ ಬ್ಯಾಂಕುಗಳ ಭರ್ಜರಿ ಬಂಗಾರ ಖರೀದಿ ಹಿಂದಿನ ರಹಸ್ಯವೇನು?

ಚೀನಾ ಮತ್ತು ಪೋಲಂಡ್​ನ ಕೆಲ ಬ್ಯಾಂಕ್​ಗಳು ಚಿನ್ನವನ್ನು ತಮ್ಮ ಮೀಸಲು ಸಂಗ್ರಹಕ್ಕಾಗಿ ಕೊಂಡಿದ್ದವು. ಆದರೆ, ಟರ್ಕಿ ಮತ್ತು ಕಜಕಿಸ್ತಾನ್ ಕೇಂದ್ರೀಯ ಬ್ಯಾಂಕ್​ನ ಮುಂದಾಳತ್ವದಲ್ಲಿ, ಕೇಂದ್ರೀಯ ಬ್ಯಾಂಕ್​ಗಳು ಏಪ್ರಿಲ್ ಅವಧಿಯಲ್ಲಿ, ಚಿನ್ನದ ನಿವ್ವಳ ಮಾರಾಟಗಾರ ಬ್ಯಾಂಕ್​ಗಳಾಗಿದ್ದವು. ಏಪ್ರಿಲ್ ತಿಂಗಳಲ್ಲಿ, ಟರ್ಕಿಯ ಕೇಂದ್ರೀಯ ಬ್ಯಾಂಕ್ 81 ಟನ್ ಹಾಗೂ ಕಜಕಿಸ್ತಾನದ ಕೇಂದ್ರೀಯ ಬ್ಯಾಂಕ್ 13 ಟನ್ ಚಿನ್ನವನ್ನು ಮಾರಿದ್ದವು.

ಕಳೆದ ವರ್ಷದ ಅವಧಿಯಲ್ಲಿ, ಚಿನ್ನದ ಬೆಲೆಗಳಲ್ಲಿ ಬಹಳಷ್ಟು ಏರಿಳಿತಗಳಿದ್ದವು. ಆದರೂ, ವಿಶ್ವದ ಕೇಂದ್ರೀಯ ಬ್ಯಾಂಕ್​ಗಳು ಸತತವಾಗಿ ಪ್ರತಿ ತಿಂಗಳು ಚಿನ್ನವನ್ನು ಕೊಳ್ಳುತ್ತಲೇ ಇದ್ದವು. ಹೀಗೆ ಮಾಡಿ ಅವು ತಮ್ಮ ಚಿನ್ನದ ಮೀಸಲು ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದವು. ಆದಾಗ್ಯೂ, ಏಪ್ರಿಲ್ 2023ರ ಅವಧಿಯಲ್ಲಿ, ಚಿನ್ನದ ಬೆಲೆಯು ಬಹುತೇಕ $2,000ಗೂ ಹೆಚ್ಚಿನ ಮಟ್ಟದಲ್ಲಿ ಸ್ಥಿರವಾಗಿತ್ತು. ಈ ಸಮಯದಲ್ಲಿ, ಕೇಂದ್ರೀಯ ಬ್ಯಾಂಕ್​ಗಳು ತಮ್ಮ ಚಿನ್ನದ ಖರೀದಿಯನ್ನು ಕಡಿಮೆ ಮಾಡಿದ್ದವು ಹಾಗೂ ಮಾರಾಟವನ್ನು ಹೆಚ್ಚಿಸಿದ್ದವು. ಅಂದರೆ, ಬೆಲೆಗಳು ಹೆಚ್ಚಾಗಿದ್ದನ್ನು ಗಮನಿಸಿದ ಕೇಂದ್ರೀಯ ಬ್ಯಾಂಕ್​ಗಳು ತಮ್ಮ ಚಿನ್ನದ ಖರೀದಿಯನ್ನು ಕಡಿತಗೊಳಿಸಿದವು ಹಾಗೂ ಮಾರಾಟವನ್ನು ಹೆಚ್ಚಿಸಿದವು. ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ ಪ್ರಕಾರ, ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್​ಗಳು ಏಪ್ರಿಲ್ ಅವಧಿಯಲ್ಲಿ ಒಟ್ಟು 71 ಟನ್​ಗಳಷ್ಟು ಚಿನ್ನವನ್ನು ಮಾರಿದ್ದವು.

ಚೀನಾ ಮತ್ತು ಪೋಲಂಡ್​ನ ಕೆಲ ಬ್ಯಾಂಕ್​ಗಳು ಚಿನ್ನವನ್ನು ತಮ್ಮ ಮೀಸಲು ಸಂಗ್ರಹಕ್ಕಾಗಿ ಕೊಂಡಿದ್ದವು. ಆದರೆ, ಟರ್ಕಿ ಮತ್ತು ಕಜಕಿಸ್ತಾನ್ ಕೇಂದ್ರೀಯ ಬ್ಯಾಂಕ್​ನ ಮುಂದಾಳತ್ವದಲ್ಲಿ, ಕೇಂದ್ರೀಯ ಬ್ಯಾಂಕ್​ಗಳು ಏಪ್ರಿಲ್ ಅವಧಿಯಲ್ಲಿ, ಚಿನ್ನದ ನಿವ್ವಳ ಮಾರಾಟಗಾರ ಬ್ಯಾಂಕ್​ಗಳಾಗಿದ್ದವು. ಏಪ್ರಿಲ್ ತಿಂಗಳಲ್ಲಿ, ಟರ್ಕಿಯ ಕೇಂದ್ರೀಯ ಬ್ಯಾಂಕ್ 81 ಟನ್ ಹಾಗೂ ಕಜಕಿಸ್ತಾನದ ಕೇಂದ್ರೀಯ ಬ್ಯಾಂಕ್ 13 ಟನ್ ಚಿನ್ನವನ್ನು ಮಾರಿದ್ದವು.

ಟರ್ಕಿಯನ್ನು ಬಿಟ್ಟರೆ, ಇತರ ದೇಶಗಳ ಕೇಂದ್ರೀಯ ಬ್ಯಾಂಕ್​ಗಳ ಚಿನ್ನ ಕೊಳ್ಳುವ ಮತ್ತು ಮಾರುವ ಪ್ರವೃತ್ತಿಗಳು ಸಾಮಾನ್ಯವಾಗಿದ್ದವು. ಟರ್ಕಿ ಸರ್ಕಾರವು ಚಿನ್ನದ ಆಮದಿನ ಮೇಲೆ ಹೇರಿರುವ ನಿಷೇಧವು ಅದರ ಕೇಂದ್ರೀಯ ಬ್ಯಾಂಕ್​ನ ಗಮನಾರ್ಹ ಚಿನ್ನದ ಮಾರಾಟಕ್ಕೆ ಕಾರಣವಾಗಿದೆ. ಆಮದು ನಿಷೇಧದ ಹೊರತಾಗಿಯೂ, ಅಲ್ಲಿನ ಮಾರುಕಟ್ಟೆಯಲ್ಲಿರುವ ಚಿನ್ನದ ಬೇಡಿಕೆಯನ್ನು ಪರಿಗಣಿಸಿ, ಟರ್ಕಿಯ ಕೇಂದ್ರೀಯ ಬ್ಯಾಂಕ್​ ತನ್ನ ಮೀಸಲು ಸಂಗ್ರಹದಿಂದ ಚಿನ್ನವನ್ನು ಮಾರಬೇಕಾಯ್ತು. ಇದಲ್ಲದೇ, ಕೇಂದ್ರೀಯ ಬ್ಯಾಂಕ್​ಗಳು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಮಾರಲು ಬೇರೆ ಯಾವುದೇ ಪ್ರಮುಖ ಕಾರಣವಿರಲಿಲ್ಲ. ಆದಾಗ್ಯೂ, ಟರ್ಕಿಯ ಕೇಂದ್ರೀಯ ಬ್ಯಾಂಕ್ ಮುಂಬರೋ ತಿಂಗಳುಗಳಲ್ಲಿ ತನ್ನ ಚಿನ್ನದ ಮಾರಾಟವನ್ನು ಹೆಚ್ಚಿಸುತ್ತೋ ಅಥವಾ ಇಲ್ಲವೋ ಅನ್ನೋದನ್ನು ಗಮನಿಸೋದು ಬಹಳ ಮುಖ್ಯವಾಗಿದೆ.

ಮತ್ತೊಂದೆಡೆ, ಜಾಗತಿಕ ಮಟ್ಟದಲ್ಲಿ, ಇತರ ಕೇಂದ್ರೀಯ ಬ್ಯಾಂಕ್​ಗಳ ಚಿನ್ನವನ್ನು ಕೊಳ್ಳೋ ಮತ್ತು ಮಾರೋ ಪ್ರವೃತ್ತಿಗಳಲ್ಲಿ ಮಹತ್ವದ ಬದಲಾವಣೆ ಏನೂ ಆಗಿಲ್ಲ. ಚೀನಾದ ಕೇಂದ್ರೀಯ ಬ್ಯಾಂಕ್ ತನ್ನ ಚಿನ್ನದ ಖರೀದಿಯನ್ನು ಏಪ್ರಿಲ್​ನಲ್ಲಿ ಸತತ ಆರನೇ ತಿಂಗಳು ನಿರಂತರವಾಗಿ ಮುಂದುವರೆಸಿತ್ತು. ಕೇಂದ್ರೀಯ ಬ್ಯಾಂಕ್​ಗಳ ಚಿನ್ನವನ್ನು ಖರೀದಿಸೋ ಈ ಪ್ರವೃತ್ತಿ ಮುಂಬರೋ ತಿಂಗಳುಗಳಲ್ಲೂ ಮುಂದುವರಿಯಬಹುದು ಅನ್ನೋದು ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ ನಂಬಿಕೆಯಾಗಿದೆ.. ಕೇಂದ್ರೀಯ ಬ್ಯಾಂಕ್​ಗಳು 2022ರ ಸಂಪೂರ್ಣ ವರ್ಷದುದ್ದಕ್ಕೂ ಚಿನ್ನದ ನಿವ್ವಳ ಖರೀದಿದಾರರಾಗೇ ಉಳಿದಿದ್ದವು ಮತ್ತು 2023ರಲ್ಲೂ ಸಹ ಅವು ಹಾಗೇ ಉಳಿಯಬಹುದು. ವಿಶ್ವ ಬ್ಯಾಂಕ್​ನ ಎಣಿಕೆ ಸರಿಯಾಗಿದ್ದರೆ, ಇದು ಚಿನ್ನದ ಬೆಲೆಗಳಿಗೆ ಲಾಭದಾಯಕ ಆಗಬಹುದು.

Published: June 17, 2023, 12:58 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ