` the best time of the year to buy gold | ಚಿನ್ನದ ದರ ಮತ್ತು ಭವಿಷ್ಯ ಇದರಿಂದಾನೇ ಗೊತ್ತಾಗುತ್ತದೆ! | Money9 Kannada

ಚಿನ್ನದ ದರ ಮತ್ತು ಭವಿಷ್ಯ ಇದರಿಂದಾನೇ ಗೊತ್ತಾಗುತ್ತದೆ!

ಚಿನ್ನದ ಬೆಲೆಗಳು ಇತ್ತೀಚೆಗೆ ದಾಖಲೆ ಏರಿಕೆಯ ಮಟ್ಟ ಮುಟ್ಟಿದ್ದವು. ಬಹಳ ದೀರ್ಘಕಾಲದವರೆಗೆ, ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್​ಗಳಿಗೆ ಸುಮಾರು 60,000ದಷ್ಟಿತ್ತು. ಈ ಏರಿದ ಬೆಲೆಗಳ ಕಾರಣದಿಂದ, ದೇಶದಲ್ಲಿ ಚಿನ್ನದ ಬಳಕೆಯಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗಿತ್ತು. ಆದರೆ, ಹೂಡಿಕೆಯ ಉದ್ದೇಶದಿಂದ ಕೊಳ್ಳಲಾಗುವ ಚಿನ್ನಕ್ಕೂ ಸಹ ಬೇಡಿಕೆ ಕಡಿಮೆಯಾಗಿತ್ತು.

ಚಿನ್ನದ ಬೆಲೆಗಳು ಇತ್ತೀಚೆಗೆ ದಾಖಲೆ ಏರಿಕೆಯ ಮಟ್ಟ ಮುಟ್ಟಿದ್ದವು. ಬಹಳ ದೀರ್ಘಕಾಲದವರೆಗೆ, ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್​ಗಳಿಗೆ ಸುಮಾರು 60,000ದಷ್ಟಿತ್ತು. ಈ ಏರಿದ ಬೆಲೆಗಳ ಕಾರಣದಿಂದ, ದೇಶದಲ್ಲಿ ಚಿನ್ನದ ಬಳಕೆಯಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗಿತ್ತು. ಆದರೆ, ಹೂಡಿಕೆಯ ಉದ್ದೇಶದಿಂದ ಕೊಳ್ಳಲಾಗುವ ಚಿನ್ನಕ್ಕೂ ಸಹ ಬೇಡಿಕೆ ಕಡಿಮೆಯಾಗಿತ್ತು. ಮಾರ್ಚ್ ತ್ರೈಮಾಸಿಕ ಅವಧಿಯ ಚಿನ್ನದ ಬಳಕೆಯ ಅಂಕಿ-ಅಂಶಗಳನ್ನೇ ನೋಡಿ, ಕಳೆದ 10 ತ್ರೈಮಾಸಿಕ ಅವಧಿಗಳಲ್ಲೇ ಇದು ಅತ್ಯಂತ ಕಡಿಮೆ ಬಳಕೆಯಾಗಿದೆ. ಮಾರ್ಚ್ ತ್ರೈಮಾಸಿಕ ಅವಧಿಯ ಬಳಕೆಗೆ ಹೋಲಿಸಿದರೆ ಬಳಕೆಯು ಶೇ. 17ರಷ್ಟು ಕಡಿಮೆಯಾಗಿದೆ. ಈ ವರ್ಷದ ಮಾರ್ಚ್ ತ್ರೈಮಾಸಿಕದ ಅವಧಿಯಲ್ಲಿ, ಕೇವಲ 112.5 ಟನ್​ಗಳಷ್ಟು ಚಿನ್ನದ ಬಳಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಈ ಪ್ರಮಾಣವು 135.5 ಟನ್​ಗಳಷ್ಟಿತ್ತು; ಹಾಗೂ ಕಳೆದ ವರ್ಷದ ಡಿಸೆಂಬರ್​ ತ್ರೈಮಾಸಿಕದಲ್ಲಿ, ದೇಶದಲ್ಲಿ, 276 ಟನ್​ಗಳಿಗೂ ಹೆಚ್ಚು ಚಿನ್ನದ ಬಳಕೆಯಾಗಿತ್ತು. 2020ರ ಕೋವಿಡ್-ಪೀಡಿತ ಅವಧಿಯನ್ನು ಬಿಟ್ಟರೆ, 2016ರ ನಂತರ, ಯಾವುದೇ ತ್ರೈಮಾಸಿಕ ಅವಧಿಯಲ್ಲಿ, ದೇಶದಲ್ಲಿ ಇಷ್ಟು ಕಡಿಮೆ ಪ್ರಮಾಣದ ಚಿನ್ನದ ಬಳಕೆ ಕಂಡುಬಂದಿರಲಿಲ್ಲ.

ದೇಶದಲ್ಲಿ ಚಿನ್ನದ ಬಳಕೆಯ ಪ್ರಮಾಣ ಎಷ್ಟೇ ಇದ್ದರೂ, ಅದರಲ್ಲಿ ಶೇ. 60ರಿಂದ ಶೇ. 70ರಷ್ಟನ್ನು ಆಭರಣಗಳಿಗಾಗಿ ಕೊಳ್ಳಲಾಗುತ್ತದೆ. ಚಿನ್ನದ ಬೆಲೆಗಳಲ್ಲಿ ಆಗಿರುವ ಏರಿಕೆಯು, ಆಭರಣಗಳ ಬೇಡಿಕೆಗಳ ಮೇಲೂ ಪ್ರಭಾವ ಬೀರಿದೆ. ಇದರಿಂದಾಗಿ, ಚಿನ್ನದ ಮಾರಾಟದಲ್ಲೂ ಕುಸಿತ ಉಂಟಾಗಿದೆ. ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ, ದೇಶದಲ್ಲಿ, ಅಭರಣಗಳ ತಯಾರಿಕೆಗಾಗಿ ಕೇವಲ 78 ಟನ್​ಗಳಷ್ಟು ಚಿನ್ನದ ಬೇಡಿಕೆ ದಾಖಲಾಗಿತ್ತು. ಕಳೆದ ವರ್ಷದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ, ಈ ಪ್ರಮಾಣವು 94 ಟನ್​ಗಳಷ್ಟಿತ್ತು. ಚಿನ್ನದ ಗಟ್ಟಿಗಳ ಹಾಗೂ ನಾಣ್ಯಗಳ ಬೇಡಿಕೆಗಳಲ್ಲಿಯೂ ಸಹ ಇದೇ ಪರಿಸ್ಥಿತಿ ಕಂಡುಬಂದಿತ್ತು. ಅವುಗಳ ಬೇಡಿಕೆಗಳೂ ಸಹ, ಮಾರ್ಚ್​ ತ್ರೈಮಾಸಿಕ ಅವಧಿಯಲ್ಲಿ, ಶೇ.17ರಷ್ಟು ಕಡಿಮೆಯಾಗಿತ್ತು. ಈ ವರ್ಷದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ, ದೇಶದಲ್ಲಿ, ಚಿನ್ನದ ಗಟ್ಟಿಗಳ ಮತ್ತು ನಾಣ್ಯಗಳ ಬೇಡಿಕೆ ಕೇವಲ 34 ಟನ್​ಗಳಷ್ಟು ಮಾತ್ರ ದಾಖಲಾಗಿತ್ತು. ಆದರೆ, ಕಳೆದ ವರ್ಷದ ಮಾರ್ಚ್​ ತ್ರೈಮಾಸಿಕ ಅವಧಿಯಲ್ಲಿ, ಈ ಪ್ರಮಾಣವು 41 ಟನ್​ಗಳಷ್ಟಿತ್ತು.

Published: May 30, 2023, 11:05 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ