` how to maximize credit card rewards when buying a car | ಕ್ರೆಡಿಟ್ ಕಾರ್ಡ್ ಬಳಸಿ ಕಾರ್ ಖರೀದಿ ಮಾಡಬಹುದಾ? | Money9 Kannada

ಕ್ರೆಡಿಟ್ ಕಾರ್ಡ್ ಬಳಸಿ ಕಾರ್ ಖರೀದಿ ಮಾಡಬಹುದಾ?

ಇದನ್ನು ತಪ್ಪಿಸಲು ಡೀಲರ್ ಜೊತೆ ಮಾತುಕತೆ ನಡೆಸಿ. ಈ ಶುಲ್ಕವನ್ನು ಶೇಕಡಾ 1 ಕ್ಕಿಂತ ಕಡಿಮೆ ಮಾಡಲು ಹೇಳಿ.. ಅನೇಕ ಬಾರಿ, ಡೀಲರ್​ಗಳು ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಲು ಒಪ್ಪುತ್ತಾರೆ. ಆದ್ದರಿಂದ, 4-5 ಡೀಲರ್‌ಗಳಿಂದ ವಿಚಾರಿಸಿ ಮತ್ತು ಲಭ್ಯವಿರುವ ಉತ್ತಮ ಡೀಲ್ ಅನ್ನು ಆಯ್ಕೆ ಮಾಡಿದ ನಂತರವೇ ನಿಮ್ಮ ಕಾರನ್ನು ಖರೀದಿಸಿ.

ಕ್ರೆಡಿಟ್ ಕಾರ್ಡ್‌ಗಳನ್ನು ಸರಿಯಾಗಿ ಬಳಸಿಕೊಂಡರೆ ಅದು ಉತ್ತಮ ಅಸೆಟ್ ಎಂದು ಸಾಬೀತು ಮಾಡಬಹುದು. ಇದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದು. ನಿರ್ಮಲ್ ಅವರ ಸ್ಟೋರಿಯನ್ನು ನೋಡಿ ಮತ್ತು ಅದರ ಮೂಲಕ ಉಳಿತಾಯದ ಪ್ರಯೋಜನಗಳ ಪಡೆಯುವುದು ಹೇಗೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ಬೆಳಗಾವಿಯಲ್ಲಿ ನೆಲೆಸಿರುವ ನಿರ್ಮಲ್ 12 ಲಕ್ಷ ರೂ ನೀಡಿ ಕಾರು ಖರೀದಿಸಿದ್ದರು. ಇದಕ್ಕಾಗಿ ಅವರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ 7,00,000 ರೂಪಾಯಿಗಳನ್ನು ಮುಂಗಡ ಪಾವತಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಅವರು ಸುಮಾರು 50-60,000 ರೂಪಾಯಿ ಮೌಲ್ಯದ ಏರ್‌ಮೈಲ್‌ಗಳನ್ನು ಪಡೆದರು. ಇದನ್ನು ಅವರು ಪಡೆದ ರಿಯಾಯಿತಿ ಅಂತ ಭಾವಿಸಿದರೆ ಕ್ರೆಡಿಟ್ ಕಾರ್ಡ್​ಗಳು ಉಪಯುಕ್ತ ಎಂದೇ ಹೇಳಬಹುದು.

ನೀವು ಕೂಡ ಕಾರನ್ನು ಖರೀದಿಸಲು ಮತ್ತು ಹೆಚ್ಚಿನ ಕ್ರೆಡಿಟ್ ಮಿತಿಯೊಂದಿಗೆ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ ಇದು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸುವ ಸಮಯ. ನಿಮ್ಮ ಕ್ರೆಡಿಟ್ ಕಾರ್ಡ್ ಪರಿಣಾಮಕಾರಿಯಾಗಿ ಬಳಸುವ ಮೂಲಕ ನೀವು ಕಾರಿನ ಬೆಲೆಯಲ್ಲಿ ಸುಮಾರು ಶೇಕಡಾ 5 ರಿಂದ10 ರಷ್ಟು ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ..

ಕಾರು ಖರೀದಿಸುವುದು ದೊಡ್ಡ ವಿಷಯ. ನಿಮ್ಮ ಉಳಿತಾಯದ ಗಮನಾರ್ಹ ಭಾಗವನ್ನು ನೀವು ಡೌನ್ ಪೇಮೆಂಟ್‌ಗೆ ಹಾಕುತ್ತೀರಿ ಮತ್ತು ಉಳಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳುತ್ತೀರಿ. ಈ ಸನ್ನಿವೇಶದಲ್ಲಿ, ನೀವು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಉತ್ತಮ ವ್ಯವಹಾರವನ್ನು ಪಡೆಯಬಹುದು.

ಉದಾಹರಣೆಗೆ, ನೀವು 15 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಲು ಬಯಸುತ್ತೀರಿ ಎಂದು ಭಾವಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನೀವು ರೂ 10 ಲಕ್ಷ ಡೌನ್ ಪೇಮೆಂಟ್ ಮಾಡಿ. ಅದರಿಂದ ನೀವು ಶೇಕಡಾ 5ರಷ್ಟು ರಿವಾರ್ಡ್ ರಿಟರ್ನ್ ದರವನ್ನು ವಾಪಸ್ ಪಡೆದರೂ ನೀವು 50,000 ರೂಪಾಯಿ ಉಳಿಸಿದ್ದೀರಿ ಎಂದು ಅರ್ಥ. ಮತ್ತೊಂದೆಡೆ, ನೀವು ನೇರವಾಗಿ ಡೆಬಿಟ್ ಕಾರ್ಡ್ ಬಳಸಿ ಈ ಪಾವತಿಯನ್ನು ಮಾಡಿದರೆ, ಇಂತಹ ಯಾವುದೇ ರಿವಾರ್ಡ್ ಪಡೆಯೋದಿಲ್ಲ. ಆದ್ದರಿಂದ, ಕ್ರೆಡಿಟ್ ಕಾರ್ಡ್‌ಗಳು ನಿಮಗೆ ಹೆಚ್ಚು ಉಳಿಸಲು ಹೇಗೆ ಸಹಾಯ ಮಾಡುತ್ತವೆ. ನಿಯಮಿತ ಪ್ರತಿಫಲಗಳು ಮತ್ತು ಮೈಲಿಗಲ್ಲು ಪ್ರಯೋಜನಗಳ ಹೊರತಾಗಿ, ನಿಮ್ಮ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ಸಹ ನೀವು ಮನ್ನಾ ಮಾಡಬಹುದು. ನೀವು ವಾರ್ಷಿಕವಾಗಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುತ್ತವೆ. ಕಾರು ಖರೀದಿಸುವುದರಿಂದ ನೀವು ಖಂಡಿತವಾಗಿಯೂ ಈ ಮಿತಿಯನ್ನು ಮೀರುತ್ತೀರಿ ಎಂದರ್ಥ, ನಿಮ್ಮ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ಸಾವಿರಾರು ಏರ್ ಮೈಲ್‌ಗಳ ರೂಪದಲ್ಲಿ ಬರುವ ಮೈಲಿಗಲ್ಲುಗಳನ್ನು ಗಳಿಸುವುದರಿಂದ ನೀವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ಅಲ್ಲದೇ ಕ್ರೆಡಿಟ್ ಕಾರ್ಡ್ ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗಳನ್ನು ಮಾಡಲು ಕಾರ್ ಡೀಲರ್‌ಗಳು ನಿಮಗೆ ಹೆಚ್ಚುವರಿ ಶೇಕಡಾ 1 ರಿಂದ 2ರಷ್ಟು ಹೆಚ್ಚುವರಿ ಶುಲ್ಕ ವಿಧಿಸಬಹುದು. ಈ ಶುಲ್ಕಗಳನ್ನು ಸೇರಿಸುವ ಮೂಲಕ, ಡೀಲರ್ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಥವಾ MDR ನ ಹೊರೆಯನ್ನು ಗ್ರಾಹಕರ ಮೇಲೆ ವಿಧಿಸಲಾಗುತ್ತೆ.. ಇದು ನೆಟ್ ರಿವಾರ್ಡ್ ರಿಟರ್ನ್ಸ್ ಮೇಲೆ ಪರಿಣಾಮ ಬೀರಲ್ಲ ಬದಲಾಗಿ ನಿಮ್ಮ ಕಾರಿನ ಒಟ್ಟು ವೆಚ್ಚವನ್ನು ಹೆಚ್ಚಿಸುತ್ತದೆ.

ಇದನ್ನು ತಪ್ಪಿಸಲು ಡೀಲರ್ ಜೊತೆ ಮಾತುಕತೆ ನಡೆಸಿ. ಈ ಶುಲ್ಕವನ್ನು ಶೇಕಡಾ 1 ಕ್ಕಿಂತ ಕಡಿಮೆ ಮಾಡಲು ಹೇಳಿ.. ಅನೇಕ ಬಾರಿ, ಡೀಲರ್​ಗಳು ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಲು ಒಪ್ಪುತ್ತಾರೆ. ಆದ್ದರಿಂದ, 4-5 ಡೀಲರ್‌ಗಳಿಂದ ವಿಚಾರಿಸಿ ಮತ್ತು ಲಭ್ಯವಿರುವ ಉತ್ತಮ ಡೀಲ್ ಅನ್ನು ಆಯ್ಕೆ ಮಾಡಿದ ನಂತರವೇ ನಿಮ್ಮ ಕಾರನ್ನು ಖರೀದಿಸಿ. ಇನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ, ಬಿಲ್ಲಿಂಗ್ ಸೈಕಲ್‌ನಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸಲು ನೀವು ಸಾಕಷ್ಟು ಹಣವನ್ನು ಹೊಂದಿರುವಾಗ ಮಾತ್ರ ನೀವು ಕಾರನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ ಬಳಸಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಕಾರ್ ಫೈನಾನ್ಸಿಂಗ್‌ನೊಂದಿಗೆ ಇದನ್ನು ಗೊಂದಲಗೊಳಿಸಬೇಡಿ. ಕ್ರೆಡಿಟ್ ಕಾರ್ಡ್ ಸಾಲಗಳ ಮೇಲೆ ನೀವು ಶೇಕಡಾ 15- 25 ನಷ್ಟು ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ.. ಇದು ಸಾಮಾನ್ಯ ವಾಹನ ಸಾಲದ ಬಡ್ಡಿ ದರಗಳಿಗಿಂತ ಹೆಚ್ಚಿರುತ್ತದೆ.

ನೀವು ಕಾರನ್ನು ಖರೀದಿಸಿದಾಗ, ಆ ತಿಂಗಳಿಗೆ ನಿಮ್ಮ ಕ್ರೆಡಿಟ್ ಮಿತಿಯ ಹೆಚ್ಚಿನ ಭಾಗವನ್ನು ನೀವು ಅನಿವಾರ್ಯವಾಗಿ ಖರ್ಚು ಮಾಡುತ್ತೀರಿ. ಇದು ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ಅನುಪಾತವನ್ನು (CUR) ಹೆಚ್ಚಿಸಬಹುದು, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನಿಮ್ಮ ಡೌನ್ ಪೇಮೆಂಟ್ ಮಾಡುವಾಗ ನಿಮ್ಮ ಕ್ರೆಡಿಟ್ ಮಿತಿಯನ್ನು ನೆನಪಿನಲ್ಲಿಡಿ ಮತ್ತು ಅದಕ್ಕೆ ಅನುಗುಣವಾಗಿ ಮುಂದುವರಿಯಿರಿ. ಈ ರೀತಿಯಲ್ಲಿ, ನೀವು ಕಾರು ಖರೀದಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪರಿಣಾಮಕಾರಿಯಾಗಿ ಬಳಸಬಹುದು. ಆದರೆ ಅದಕ್ಕೂ ಮೊದಲು, ಈ ಸೌಲಭ್ಯದ ಎಲ್ಲಾ ಸಾಧಕ-ಬಾಧಕಗಳನ್ನು ನಿರ್ಣಯಿಸಲು, ನಿಮಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಅವಶ್ಯಕ.

Published: May 6, 2024, 13:15 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ