ವಿಮಾನದಲ್ಲಿ ಮಕ್ಕಳ ಜತೆ ಪೋಷಕರು ಇರಬೇಕು.. ಶಾಕ್ ಕೊಟ್ಟ 2 ಬ್ಯಾಂಕ್!

ಒಂದು ತಿಂಗಳಲ್ಲಿ ನೀವು 25,000 ರೂ.ವರೆಗಿನ ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್ ಅನ್ನು ಉಚಿತವಾಗಿ ಮಾಡಬಹುದು. ಇದಾದ ನಂತರ ನೀವು ಪ್ರತಿ ಟ್ರಾನ್ಸಾಕ್ಷನ್‌ಗೆ 10 ರೂಪಾಯಿ ತೆರಬೇಕಾಗುತ್ತದೆ. ಎರಡು ತಿಂಗಳ ಕಾಲ ನಿರಂತರವಾಗಿ ಸ್ಯಾಲರಿ ಖಾತೆಗೆ ಸ್ಯಾಲರಿ ಬರದಿದ್ದರೆ, ಪ್ರತಿ ತಿಂಗಳು 100 ರೂ. ದಂಡ ಕಟ್ಟಬೇಕು. ಇದಲ್ಲದೆ, ಎವರೇಜ್ ಬ್ಯಾಲೆನ್ಸ್ ಅನ್ನು ಇಡದಿದ್ದರೂ ದಂಡ ಕಟ್ಟಬೇಕು.

alternate

SGB premature redemption price ಪ್ರಕಟ
RBI ತನ್ನ ಸಾವರಿನ್ ಗೋಲ್ಡ್ ಬಾಂಡ್‌ನ premature redemption price ಅನ್ನು ಘೋಷಿಸಿದೆ… ಈ redemption ಬೆಲೆಯನ್ನು 2017-18 ರ ಸಿರೀಸ್ 4 ಮತ್ತು 2018-19 ಸಿರೀಸ್‌ 2 ಕಂತುಗಳಿಗೆ ನಿಗದಿ ಆಗಿದೆ. ಭಾರತ ಸರ್ಕಾರ 2017 ಅಕ್ಟೋಬರ್ 06 ಮತ್ತು 2018ಅಕ್ಟೋಬರ್ 08 ರ ಅಧಿಸೂಚನೆಯ ಪ್ರಕಾರ, ಬಾಂಡ್‌ ಇಶ್ಯೂ ಮಾಡಿದ ದಿನಾಂಕದಿಂದ ಐದನೇ ವರ್ಷದ ನಂತರ SGB ಗಳ premature redemption ಗೆ ಅವಕಾಶ ನೀಡುತ್ತದೆ. SGB ​​ redemption price ಕಳೆದ ಮೂರು ದಿನಗಳ 999 ಪ್ಯೂರಿಟಿ ಚಿನ್ನದ ಬೆಲೆಯ ಸರಾಸರಿಯಾಗಿರುತ್ತದೆ. ಏಪ್ರಿಲ್‌ 18, 19, ಮತ್ತು 22 ರಂದು ಮಾರ್ಕೆಟ್‌ ಕ್ಲೋಸಿಂಗ್‌ ಬೆಲೆಯ ಸರಾಸರಿ 7325 ರೂ. ಆಗಿದೆ. ಅಂದರೆ ಹೂಡಿಕೆದಾರರು ಪ್ರತಿ ಯುನಿಟ್‌ಗೆ 7325 ರೂ. ಪಡೆಯುತ್ತಾರೆ.

‘PayU’ ಈಗ ಪೇಮೆಂಟ್ ಅಗ್ರಿಗೇಟರ್
ಸುಮಾರು 15 ತಿಂಗಳ ಕಾದು, ಈಗ ಪ್ರೋಸೆಸ್ ಆಧರಿತ ಫಿನ್‌ಟೆಕ್‌ PayU ಗೆ ಪೇಮೆಂಟ್ ಅಗ್ರಿಗೇಟರ್ ಆಗಿ ಕೆಲಸ ಮಾಡಲು, ಹೊಸ ಮರ್ಚೆಂಟ್‌ಗಳನ್ನು ಮತ್ತೊಮ್ಮೆ ಸೇರಿಸಿಕೊಳ್ಳಲು ಆರ್‌ಬಿಐ ಅನುಮತಿ ನೀಡಿದೆ. ಜನವರಿ 2023 ರಲ್ಲಿ ಈ ಸಂಸ್ಥೆಯ ಪೇಮೆಂಟ್ ಅಗ್ರಿಗೇಟರ್ ಅಪ್ಲಿಕೇಶನ್ ಅನ್ನು ವಾಪಸ್ ಮಾಡಿತ್ತು. ಏಕೆಂದರೆ, ಇದರ ಕಾರ್ಪೊರೇಟ್ ಸ್ಟ್ರಕ್ಚರ್ ತುಂಬಾ ಸಂಕೀರ್ಣವಾಗಿತ್ತು. ಅಷ್ಟೇ ಅಲ್ಲ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿತ್ತು. ಹೀಗಾಗಿ, PayU ತನ್ನ ಆನ್‌ಲೈನ್ ಅಗ್ರಿಗೇಶನ್ ಬ್ಯುಸಿನೆಸ್‌ಗೆ ಹೊಸ ಮರ್ಚಂಟ್‌ಗಳನ್ನು ಸೇರಿಸುವುದನ್ನು ನಿಲ್ಲಿಸಬೇಕಾಯಿತು. Paytm, Razorpay ಮತ್ತು Cashfree ಮೇಲೆ ಇದೇ ರೀತಿಯ ನಿಷೇಧವನ್ನು ವಿಧಿಸಲಾಗಿತ್ತು. ಇವುಗಳಲ್ಲಿ Razorpay ಮತ್ತು Cashfree ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನುಮೋದನೆ ಪಡೆದಿವೆ.

12 ವರ್ಷದೊಳಗಿನ ಮಕ್ಕಳಿಗೆ ಫ್ಲೈಟ್‌ನಲ್ಲಿ ಪಕ್ಕದ ಸೀಟ್‌ನಲ್ಲೇ ಇರಬೇಕು ಪೋಷಕರು
ವಿಮಾನ ಪ್ರಯಾಣಿಕರಿಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ… ಇನ್ನು 12 ವರ್ಷದೊಳಗಿನ ಮಕ್ಕಳನ್ನು ಫ್ಲೈಟ್‌ನಲ್ಲಿ ಒಂಟಿಯಾಗಿ ಕೂರಿಸುವಂತಿಲ್ಲ. ಕನಿಷ್ಠ ಒಬ್ಬರು ಪೋಷಕರು ಅವರ ಜೊತೆಗೆ ಕುಳಿತಿರಬೇಕು. ಹೀಗೆಂದು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ DGCA ಸೂಚನೆ ನೀಡಿದೆ. ಈ ಹಿಂದೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವರ ಪೋಷಕರಿಂದ ದೂರದಲ್ಲಿ ಸೀಟ್‌ಗಳನ್ನು ನೀಡಿದ ಹಲವು ಪ್ರಕರಣ ವರದಿಯಾಗಿತ್ತು. ಒಂದೇ PNR ನಲ್ಲಿ ಪ್ರಯಾಣಿಸುವ 12 ವರ್ಷ ವಯಸ್ಸಿನ ಮಕ್ಕಳಿಗೆ ಅವರ ಒಬ್ಬ ಪೋಷಕರ ಜೊತೆಗೆ ಸೀಟ್‌ಗಳನ್ನು ನಿಯೋಜಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೆ, ವಿಮಾನಯಾನ ಕಂಪನಿಗಳಿಗೆ ಕೆಲವು ಹೆಚ್ಚುವರಿ ಸೇವೆಗಳಿಗೆ ಶುಲ್ಕ ವಿಧಿಸಲು ಸಹ DGCA ಅನುಮೋದನೆ ನೀಡಿದೆ. ಇದು Zero Baggage, Preferential Sitting, Meals, Drinks, Musical Instruments ತೆಗೆದುಕೊಂಡು ಹೋಗುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಎರಡು ಬ್ಯಾಂಕ್‌ಗಳ ಸೇವಿಂಗ್ಸ್ ಅಕೌಂಟ್ ಸರ್ವೀಸ್ ಚಾರ್ಜ್‌ ಬದಲಾವಣೆ
ಆಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ತಮ್ಮ ಸೇವಿಂಗ್ಸ್ ಅಕೌಂಟ್‌ಗಳ ಸರ್ವೀಸ್ ಚಾರ್ಜ್‌ ಬದಲಾಯಿಸಲು ನಿರ್ಧರಿಸಿವೆ. ಆಕ್ಸಿಸ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಮತ್ತು ಸ್ಯಾಲರಿ ಅಕೌಂಟ್‌ನ ಮಿನಿಮಮ್ ಆವರೇಜ್ ಬ್ಯಾಲೆನ್ಸ್ ನಿಯಮಗಳನ್ನು ಬದಲಾಯಿಸಿದೆ. ಈ ನಿಯಮಗಳು 1 ಏಪ್ರಿಲ್ 2024 ರಿಂದ ಜಾರಿಗೆ ಬಂದಿವೆ. ಈಗ ಗ್ರಾಹಕರು ತ್ರೈಮಾಸಿಕ ಆಧಾರದ ಮೇಲೆ ಪ್ರಿಯಾರಿಟಿ ಸೇವಿಂಗ್ಸ್ ಅಕೌಂಟ್‌ನಲ್ಲಿ ಸರಾಸರಿ 2 ಲಕ್ಷ ರೂ. ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು. ಇದರ ಹೊರತಾಗಿ, ಪ್ರೈಮ್/ಲಿಬರ್ಟಿ/ಪ್ರೆಸ್ಟೀಜ್ ಮತ್ತು ಪ್ರಿಯಾರಿಟಿ ಸೇವಿಂಗ್ಸ್ ಖಾತೆಗಳಲ್ಲಿ ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್‌ ಮೇಲೆ ಬ್ಯಾಂಕ್ ಫ್ರೀ ಲಿಮಿಟ್‌ ನಿಗದಿಪಡಿಸಿದೆ. ಒಂದು ತಿಂಗಳಲ್ಲಿ ನೀವು 25,000 ರೂ.ವರೆಗಿನ ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್ ಅನ್ನು ಉಚಿತವಾಗಿ ಮಾಡಬಹುದು. ಇದಾದ ನಂತರ ನೀವು ಪ್ರತಿ ಟ್ರಾನ್ಸಾಕ್ಷನ್‌ಗೆ 10 ರೂಪಾಯಿ ತೆರಬೇಕಾಗುತ್ತದೆ. ಎರಡು ತಿಂಗಳ ಕಾಲ ನಿರಂತರವಾಗಿ ಸ್ಯಾಲರಿ ಖಾತೆಗೆ ಸ್ಯಾಲರಿ ಬರದಿದ್ದರೆ, ಪ್ರತಿ ತಿಂಗಳು 100 ರೂ. ದಂಡ ಕಟ್ಟಬೇಕು. ಇದಲ್ಲದೆ, ಎವರೇಜ್ ಬ್ಯಾಲೆನ್ಸ್ ಅನ್ನು ಇಡದಿದ್ದರೂ ದಂಡ ಕಟ್ಟಬೇಕು.

ಮಸಾಲೆ ನಿಷೇಧದ ಕುರಿತು ಸಿಂಗಾಪುರ, ಹಾಂಕಾಂಗ್‌ನಿಂದ ವಿವರ ಕೇಳಿದ ಭಾರತ
MDH ಮತ್ತು ಎವರೆಸ್ಟ್ ಮಸಾಲೆಗಳ ಮೇಲೆ ನಿಷೇಧ ಹೇರಿದ ವಿಷಯದಲ್ಲಿ, ಸಿಂಗಾಪುರ ಮತ್ತು ಹಾಂಕಾಂಗ್‌ನ ಫುಡ್ ರೆಗ್ಯುಲೇಟರ್‌ ಇಂದ ಭಾರತ ವಿವರಗಳನ್ನು ಕೇಳಿದೆ. ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಕಳುಹಿಸುವಂತೆ ವಾಣಿಜ್ಯ ಸಚಿವಾಲಯವು ಸಿಂಗಾಪುರ ಮತ್ತು ಹಾಂಕಾಂಗ್ ಭಾರತೀಯ ರಾಯಭಾರ ಕಚೇರಿಗಳಿಗೆ ಸೂಚಿಸಿದೆ. ಇದರ ಜೊತೆಗೆ, ಎಂಡಿಎಚ್ ಮತ್ತು ಎವರೆಸ್ಟ್‌ನಿಂದಲೂ ವಿವರಗಳನ್ನು ಕೇಳಲಾಗಿದೆ. ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು, ‘ಎರಡೂ ಕಂಪನಿಗಳ ಉತ್ಪನ್ನಗಳನ್ನು ತಿರಸ್ಕರಿಸಲು ಕಾರಣಗಳನ್ನು ಕಂಡುಹಿಡಿಯಲಾಗುವುದು ಮತ್ತು ಅವುಗಳನ್ನು ಸರಿಪಡಿಸಲು ಏನು ಮಾಡಬೇಕು ಎಂಬುದರ ಜೊತೆಗೆ ಸಂಬಂಧಿಸಿದ ರಫ್ತುದಾರರ ಕಳವಳವನ್ನೂ ಗಮನಿಸಲಾಗುವುದು’ ಎಂದು ಹೇಳಿದ್ದಾರೆ.

ಮುಂಬೈ-ದೆಹಲಿ ಆಪಲ್ ಸ್ಟೋರ್‌ಗಳು ವರ್ಲ್ಡ್‌ವೈಡ್ ಟಾಟ್ ಪರ್ಫಾರ್ಮಿಂಗ್‌ ಔಟ್‌ಲೆಟ್‌ಗಳು
ಭಾರತದಲ್ಲಿ ಆಪಲ್‌ನ ಎರಡು ಅಧಿಕೃತ ಸ್ಟೋರ್‌ಗಳು, ಮುಂಬೈ ಮತ್ತು ದೆಹಲಿಯಲ್ಲಿವೆ. ಕಂಪನಿ ವಿಶ್ವದಲ್ಲಿ ಹೊಂದಿರುವ ಎಲ್ಲ ಸ್ಟೋರ್‌ಗಳ ಪೈಕಿ ಈ ಸ್ಟೋರ್‌ಗಳು ಅತ್ಯುತ್ತಮ ಪರ್ಫಾರ್ಮೆನ್ಸ್‌ ನೀಡಿವೆ. ವರದಿಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಆಪಲ್‌ನ ಮುಂಬೈ ಮತ್ತು ದೆಹಲಿ ಸ್ಟೋರ್‌ಗಳು 190-210 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿವೆ. ಈ ಮೂಲಕ, ಮುಂಬೈ ಮತ್ತು ದೆಹಲಿ ಔಟ್‌ಲೆಟ್‌ಗಳು ವಿಶ್ವಾದ್ಯಂತ ಕಂಪನಿಯ ಟಾಪ್ ಪರ್ಫಾರ್ಮಿಂಗ್‌ ರಿಟೇಲ್‌ ಸ್ಟೋರ್‌ಗಳಾಗಿವೆ. ಮುಂಬೈ-ದೆಹಲಿ ಸ್ಟೋರ್ ಸ್ಥಿರವಾಗಿ ₹16-17 ಕೋಟಿ ಮಾಸಿಕ ಸರಾಸರಿ ಮಾರಾಟ ದಾಖಲಿಸಿದೆ. ಆದರೆ, ಮುಂಬೈ ಸ್ಟೋರ್ ದೊಡ್ಡದಾಗಿದೆ. ಹೀಗಾಗಿ, ಲಾಭದ ವಿಷಯದಲ್ಲಿ ದೆಹಲಿ ಸ್ಟೋರ್‌ಗಿಂತ ಸ್ವಲ್ಪ ಹೆಚ್ಚಾಗಿದೆ. ಈಗ ಕಂಪನಿ ಭಾರತದಲ್ಲಿ ಇನ್ನೂ ಮೂರು ಹೊಸ ಅಫೀಶಿಯಲ್ ಸ್ಟೋರ್ ತೆರೆಯಲು ಸ್ಥಳ ಹುಡುಕುತ್ತಿದೆ. ಪುಣೆ, ಬೆಂಗಳೂರು ಮತ್ತು ನೋಯ್ಡಾ, NCR ನಲ್ಲಿ ಸ್ಟೋರ್ ತೆರೆಯಲಾಗುತ್ತಿದೆ. ಈ ಮೂರು ಮಳಿಗೆಗಳನ್ನು ದೊಡ್ಡ ಮಾಲ್‌ಗಳಲ್ಲಿ ತೆರೆಯಲಾಗುತ್ತದೆ.

Published: April 24, 2024, 19:36 IST

ವಿಮಾನದಲ್ಲಿ ಮಕ್ಕಳ ಜತೆ ಪೋಷಕರು ಇರಬೇಕು.. ಶಾಕ್ ಕೊಟ್ಟ 2 ಬ್ಯಾಂಕ್!