HOME » Breaking Briefs
ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮ್ಯಾಜಿಕ್ ಮಾಡಿಕೊಂಡಿರುವ ಮಸ್ಕ್ ನಂತರ ಟ್ವಿಟರ್ ಖರೀದಿ ಮಾಡಿ ಹೊಸ ಸಾಹಸ ಮಾಡಿದರು. ಇವಿ ವಾಹನ ಜಗತ್ತಿನಲ್ಲಿ ಮಸ್ಕ್ ಭಾರತ ಭೇಟಿಯ ನಂತ ಒಂದಿಷ್ಟು ಮಹತ್ವದ ಬದಲಾವಣೆಗಳಾಗಿವೆ ಎಂದು ಹೇಳಲಾಗುತ್ತಿದೆ.
ಯಾವ ರೀತಿಯಲ್ಲಿ, ಯಾವ ಗಾತ್ರದಲ್ಲಿ ಪತಂಜಲಿಯ ಜಾಹೀರಾತು ಮುದ್ರಣ ಮಾಡಿದ್ದಿರೋ ಅದೇ ಗಾತ್ರದಲ್ಲಿ ಕ್ಷಮೆ ಕೇಳಬೇಕು ಎಂದು ಕೋರ್ಟ್ ತಿಳಿಸಿತು. ಈಗ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಣ್ಣ ಗಾತ್ರದ ಕ್ಷಮಾಪಣೆ ಯಾವುದಕ್ಕೂ ಸಾಲದು ಎಂದು ಕೋರ್ಟ್ ಹೇಳಿತು.
ಇಪಿಎಫ್ಒ ಸದಸ್ಯರು ಈಗ ತಮ್ಮ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಚಿಕಿತ್ಸೆಗೆ ಅಂತ ಪಿಎಫ್ ಖಾತೆಯಿಂದ 1 ಲಕ್ಷ ರೂ. ಹಣ ತೆಗೆಯಬಹುದು.
ಎಲೋನ್ ಮಸ್ಕ್ ಅವರು ಭಾನುವಾರದಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡುವ ನಿರೀಕ್ಷೆ ಇದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ದೊಡ್ಡ ಮಟ್ಟದ ಹೂಡಿಕೆ ಒಡಂಬಡಿಕೆ ನಡೆಯುವ ನಿರೀಕ್ಷೆ ಇದೆ
ಏಪ್ರಿಲ್ 3ರಿಂದ 5ರವರೆಗೆ ನಡೆದ ಐಪಿಒ ಸಬ್ ಸ್ಕ್ರಿಪ್ಶನ್ ವೇಳೆ 570 ರೂ ಬೆಲೆಗೆ ಷೇರು ವಿತರಿಸಲಾಗಿತ್ತು. ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಭಾರ್ತಿ ಹೆಕ್ಸಾಕಾಮ್ ಬರೋಬ್ಬರಿ 755 ರೂಗೆ ಲಿಸ್ಟ್ ಆಗಿದೆ.
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಷೇರು ಬೆಲೆ 2008ರ ಜನವರಿ ತಿಂಗಳಲ್ಲಿ 2,514 ರೂಗಳ ಗರಿಷ್ಠ ಮಟ್ಟದಲ್ಲಿತ್ತು. ಈಗ ಅದು 227.60 ರೂಗೆ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಷೇರುಬೆಲೆ ಸ್ಥಿರವಾಗಿ ಏರತೊಡಗಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪು ರಿಲಾಯನ್ಸ್ ಇನ್ಫ್ರಾ ಷೇರಿಗೆ ಇನ್ನಷ್ಟು ಹಿನ್ನಡೆ ತರುವ ಸಾಧ್ಯತೆ ಇದೆ.
ಈ ಒಪ್ಪಂದದ ಭಾಗವಾಗಿ, BLR ವಿಮಾನ ನಿಲ್ದಾಣದಲ್ಲಿ ಎಂಆರ್ಒ (MRO) ಸೌಲಭ್ಯಗಳನ್ನು ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಏರ್ ಇಂಡಿಯಾದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಸಿಡಿಎಂ ಬಳಕೆಯನ್ನು ಜನಪ್ರಿಯಗೊಳಿಸಲು ಆರ್ಬಿಐ ಹೊಸ ವ್ಯವಸ್ಥೆ ಜಾರಿ ಮಾಡಲಿದೆ. ಬ್ಯಾಂಕ್ ಕಚೇರಿಗಳಲ್ಲಿ ನೀವು ಕ್ಯಾಷ್ ಡೆಪಾಸಿಟ್ ಮೆಷಿನ್ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ಎಟಿಎಂ ಸೆಂಟರ್ಗಳಲ್ಲೂ ಸಿಡಿಎಂಗಳಿರುತ್ತವೆ. ಇದರಿಂದ ಬ್ಯಾಂಕುಗಳಲ್ಲಿ ಸರದಿಯಲ್ಲಿ ನಿಂತು ಕ್ಯಾಷ್ ಡೆಪಾಸಿಟ್ ಮಾಡುವಾಗ ಆಗುತ್ತಿದ್ದ ಟೈಮ್ ವೇಸ್ಟ್ ಸಿಡಿಎಂ ಮೂಲಕ ತಪ್ಪಿಸಬಹುದು.
ವಿವಿಧ ಆರ್ಥಿಕ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಆರ್ಬಿಐ ಈ ಬಾರಿಯೂ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರುವ ಸಾಧ್ಯತೆ ಹೋಗಬಹುದು ಎಂದು ನಿರೀಕ್ಷಿಸಿದ್ದವು. ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಸೇರಿ ಪಾಲ್ಗೊಂಡಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದ್ದರು ಎನ್ನಲಾಗಿದೆ.
ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್ಗಳ ಸಾಲಿನಲ್ಲಿದ್ದ ಬೈಜು ರವೀಂದ್ರನ್ ಇವತ್ತು ಹೊಂದಿರುವ ಆಸ್ತಿ ಮೌಲ್ಯ ಶೂನ್ಯ. ಫೋರ್ಬ್ಸ್ 2024 ಇಂಡೆಕ್ಸ್ನಲ್ಲಿ ಬೈಜು ರವೀಂದ್ರನ್ ಆಸ್ತಿ ಮೌಲ್ಯ ಸೊನ್ನೆ ಎಂದು ಹೇಳಲಾಗಿದೆ.