` foreign investment in the banking sector and stock market in india | ಬ್ಯಾಂಕಿಂಗ್​ ವಲಯದ ಷೇರುಗಳಿಗೆ ಇಷ್ಟೊಂದು ಬೇಡಿಕೆ ಏಕೆ ? | Money9 Kannada

ಬ್ಯಾಂಕಿಂಗ್​ ವಲಯದ ಷೇರುಗಳಿಗೆ ಇಷ್ಟೊಂದು ಬೇಡಿಕೆ ಏಕೆ ?

ಈ ಫಂಡ್​ಗಳು ಈಕ್ವಿಟಿ ಫಂಡ್ ವರ್ಗಕ್ಕೆ ಸೇರಿರುವುದರಿಂದ ಇತರ ಈಕ್ವಿಟಿ ಫಂಡ್​ಗಳಂತೆನೇ ಇವುಗಳೂ ತೆರಿಗೆಗೆ ಒಳಪಡುತ್ತೆ. ಒಂದು ವರ್ಷದೊಳಗೆ ಈ ಷೇರುಗಳನ್ನ ರಿಡೀಮ್ ಮಾಡಿದ್ರೆ ಅದು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಆಗುತ್ತೆ. ನಿಮ್ಮ ಆದಾಯ ತೆರಿಗೆಯ ಸ್ಲಾಬ್ ಏನೇ ಇರಲಿ, ಅದರ ಮೇಲೆ ನಿಮಗೆ ಸಿಗೋ ಲಾಭಕ್ಕೆ ಶೇಕಡ 15 ರಷ್ಟು ತೆರಿಗೆ ವಿಧಿಸಲಾಗುತ್ತೆ. ಒಂದು ವರ್ಷದ ಹೋಲ್ಡಿಂಗ್ ಪೀರಿಯಡ್ ನಂತರ ಮಾರಾಟ ಮಾಡೋ ಫಂಡ್​ಗಳು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಇವುಗಳ ಮೇಲಿನ ತೆರಿಗೆ ಶೇಕಡ 20 ರಷ್ಟಿರುತ್ತೆ.

ಸ್ಟಾಕ್ ಮಾರ್ಕೆಟ್ ನಲ್ಲಿ ಅದರಲ್ಲೂ ಈಕ್ವಿಟಿ ಮ್ಯೂಚುಯಲ್ ಫಂಡ್​ಗಳಲ್ಲಿ ವಿದೇಶಿ ಹೂಡಿಕೆದಾರರು ಮತ್ತೆ ಹೂಡಿಕೆ ಮಾಡಲು ಶುರು ಮಾಡುತ್ತಿದ್ದ ಹಾಗೆ ಈ ವಲಯಗಳಲ್ಲಿ ಹೂಡಿಕೆ ಮಾಡಿದ್ದ ಪೋರ್ಟ್ ಫೋಲಿಯೋ ಹೂಡಿಕೆದಾರರು ಮಿಂಚುತ್ತಿದ್ದಾರೆ.. ದೇಶೀಯ ಹೂಡಿಕೆದಾರರ ಆಯ್ಕೆಯಾಗಿದ್ದ ಬ್ಯಾಂಕಿಂಗ್ ಸ್ಟಾಕ್​ಗಳು ಈಗ ವಿದೇಶಿ ಹೂಡಿಕೆದಾರರ ಆಯ್ಕೆಯ ವಲಯ ಕೂಡ ಆಗಿದೆ.. ವ್ಯಾಲ್ಯೂ ರಿಸರ್ಚ್ ಮಾಹಿತಿ ಪ್ರಕಾರ, 2023 ರ ಮೇ 10 ರ ವೇಳೆಗೆ ಈಕ್ವಿಟಿ ವಿಭಾಗದಲ್ಲಿ ಸೆಕ್ಟರಲ್ ಬ್ಯಾಂಕಿಂಗ್ ಫಂಡ್​ಗಳು ಕಳೆದ 1, 3 ಮತ್ತು 5 ವರ್ಷಗಳಲ್ಲಿ ಕ್ರಮವಾಗಿ ಶೇಕಡ 26, 30 ಮತ್ತು 9 ರಷ್ಟು ರಿಟರ್ನ್ ಕೊಟ್ಟಿವೆ.

ಸೆಕ್ಟರಲ್ ಬ್ಯಾಂಕಿಂಗ್ ಫಂಡ್ ಗಳಲ್ಲಿ ಹೆಚ್ಚಿನ ರಿಟರ್ನ್ ಗಮನಿಸಿ, ಹೂಡಿಕೆದಾರರು ಈ ಸ್ಕೀಂಗಳತ್ತ ಆಕರ್ಷಿತರಾಗುತ್ತಿದ್ದಾರೆ.. ಹೀಗಾಗಿ, ಈಗ ಮೊದಲಿಗೆ ಸೆಕ್ಟರಲ್ ಬ್ಯಾಂಕಿಂಗ್ ಮ್ಯೂಚುಯಲ್ ಫಂಡ್ ಅಂದ್ರೇನು ಅಂತಾ ನೋಡೋಣ.. ಸೆಕ್ಟರಲ್ ಬ್ಯಾಂಕ್ ಮ್ಯೂಚುಯಲ್ ಫಂಡ್ ಅಂದ್ರೆ ಭಾರತೀಯ ಬ್ಯಾಂಕ್ ಸ್ಟಾಕ್​ಗಳಲ್ಲಿ ಮೂಲಭೂತವಾಗಿ ಅಸೆಟ್​ಗಳು ಹೂಡಲ್ಪಡುವ ಸೆಕ್ಟರ್ ಫಂಡ್​ಗಳಾಗಿವೆ. ಬ್ಯಾಂಕಿಂಗ್ ವಲಯ ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಈ ಫಂಡ್​ಗಳು ಚೆನ್ನಾಗಿ ಪರ್ಫಾರ್ಮ್ ಮಾಡುವ ನಿರೀಕ್ಷೆ ಇದೆ, ಹಾಗೇ ಬೆಂಚ್ ಮಾರ್ಕ್ ಔಟ್ ಪರ್ಫಾರ್ಮೆನ್ಸ್ ಸಾಧ್ಯತೆನೂ ಇದೆ. ಈ ಫಂಡ್​ಗಳಲ್ಲಿ ಹೂಡಿಕೆ ಮಾಡುವುದರಿಂದ ನೀವು ಉತ್ತಮ ಬ್ಯಾಂಕ್ ಸೆಕ್ಯುರಿಟಿ ಪೋರ್ಟ್ ಫೋಲಿಯೋಗೆ ಎಕ್ಸ್​ಪೋಸ್ ಆಗ್ತೀರ.

ಈಗ ಇವುಗಳ ತೆರಿಗೆ ಹೇಗೆ ಅನ್ನೋದನ್ನು ನೋಡೋಣ. ಈ ಫಂಡ್​ಗಳು ಈಕ್ವಿಟಿ ಫಂಡ್ ವರ್ಗಕ್ಕೆ ಸೇರಿರುವುದರಿಂದ ಇತರ ಈಕ್ವಿಟಿ ಫಂಡ್​ಗಳಂತೆನೇ ಇವುಗಳೂ ತೆರಿಗೆಗೆ ಒಳಪಡುತ್ತೆ. ಒಂದು ವರ್ಷದೊಳಗೆ ಈ ಷೇರುಗಳನ್ನ ರಿಡೀಮ್ ಮಾಡಿದ್ರೆ ಅದು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಆಗುತ್ತೆ. ನಿಮ್ಮ ಆದಾಯ ತೆರಿಗೆಯ ಸ್ಲಾಬ್ ಏನೇ ಇರಲಿ, ಅದರ ಮೇಲೆ ನಿಮಗೆ ಸಿಗೋ ಲಾಭಕ್ಕೆ ಶೇಕಡ 15 ರಷ್ಟು ತೆರಿಗೆ ವಿಧಿಸಲಾಗುತ್ತೆ. ಒಂದು ವರ್ಷದ ಹೋಲ್ಡಿಂಗ್ ಪೀರಿಯಡ್ ನಂತರ ಮಾರಾಟ ಮಾಡೋ ಫಂಡ್​ಗಳು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಇವುಗಳ ಮೇಲಿನ ತೆರಿಗೆ ಶೇಕಡ 20 ರಷ್ಟಿರುತ್ತೆ.

ಈಗ ದೊಡ್ಡ ಪ್ರಶ್ನೆ ಅಂದ್ರೆ, ಸೆಕ್ಟರಲ್ ಬ್ಯಾಂಕಿಂಗ್ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆಯ ರಿಸ್ಕ್​ಗಳೇನು? ಯಾವ ಬಗೆಯ ಹೂಡಿಕೆದಾರರು ಇಂತಹ ಸ್ಕೀಂಗಳಲ್ಲಿ ಹೂಡಿಕೆ ಮಾಡೋದನ್ನು ಪರಿಗಣಿಸಬಹುದು. ಈ ಫಂಡ್​ಗಳು ಒಂದೇ ಒಂದು ಇಂಡಸ್ಟ್ರಿ ಮೇಲೆ ಫೋಕಸ್ ಮಾಡುವುದರಿಂದ ಆ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ರಿಸ್ಕ್​ಗಳು ಈ ಫಂಡ್​ಗಳ ಮೇಲಿರುತ್ತೆ. ದೀರ್ಘಾವಧಿಯಲ್ಲಿ ಸರಾಸರಿಗಿಂತ ಹೆಚ್ಚಿನ ರಿಟರ್ನ್ಸ್ ಪಡೆಯಲು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಇರೋರಿಗೆ ಈ ಸೆಕ್ಟರಲ್ ಬ್ಯಾಂಕ್ ಫಂಡ್​ಗಳು ಹೆಚ್ಚು ಸೂಕ್ತ. ಉತ್ತಮ ರಿಟರ್ನ್ಸ್ ನೀಡಬಲ್ಲ ಸಾಮರ್ಥ್ಯ ಇರೋ ಬ್ಯಾಂಕಿಂಗ್ ಷೇರುಗಳಲ್ಲಿ ಹೂಡಿಕೆ ಮಾಡೋಕೆ ಈ ಫಂಡ್​ಗಳಲ್ಲಿನ ಹೂಡಿಕೆ ಒಂದು ಅವಕಾಶ ಅಂತಾ ಹೇಳಬಹುದು. ರಿಟರ್ನ್ಸ್ ಬಗ್ಗೆ ಮಾತಾಡುವುದಾದರೆ ಎಲ್ಐಸಿ, ಟಾಟಾ, ನಿಪ್ಪಾನ್ ಇಂಡಿಯಾ, ಐಸಿಐಸಿಐ ಪ್ರುಡೆನ್ಶಿಯಲ್, ಐಡಿಬಿಐ ಮತ್ತು ಯುಟಿಐಗಳಂತಹ ಮ್ಯೂಚುವಲ್ ಫಂಡ್​ಗಳು ಒಂದು ವರ್ಷದಲ್ಲಿ ವರ್ಷಕ್ಕೆ ಶೇಕಡ 20 ರಿಂದ 28 ರಷ್ಟು ರಿಟರ್ನ್ಸ್ ಕೊಟ್ಟಿವೆ. ಅದೇ ರೀತಿ, ಈ ಫಂಡ್​ಗಳು ಮೂರಕ್ಕಿಂತ ಹೆಚ್ಚು ವರ್ಷಗಳಲ್ಲಿ ಶೇಕಡಾ 24 ರಿಂದ 36 ರಷ್ಟು ರಿಟರ್ನ್ಸ್ ಕೊಟ್ಟಿವೆ.

ಇನ್ವೆಸ್ಟೋಗ್ರಫಿ ಸಂಸ್ಥಾಪಕರಾದ ಶ್ವೇತಾ ಜೈನ್ ಪ್ರಕಾರ ಸೆಕ್ಟರಲ್ ಮತ್ತು ಥಿಮ್ಯಾಟಿಕ್ ಫಂಡ್​ಗಳು ಕ್ಷಿಪ್ರ ಬದಲಾವಣೆಯಾಗ ಬಲ್ಲದಾಗಿದೆ ಮತ್ತು ಹೆಚ್ಚು ರಿಸ್ಕಿ ಕೂಡ ಆಗಿರುವುದರಿಂದ ಅವು ತುಸು ಟ್ರಿಕಿ ಅಂತಾನೇ ಹೇಳಬಹುದು. ಇತ್ತೀಚಿನ ಪರ್ಫಾರ್ಮೆನ್ಸ್ ಆಸೆ ಹುಟ್ಟಿಸಿದರೂ, ವ್ಯಕ್ತಿಯ ಗುರಿ ಮುಖ್ಯ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಅದರಂತೆ ಹೂಡಿಕೆ ಮಾಡಬೇಕು. ಇಲ್ಲ ಅಂದ್ರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

Published: June 12, 2023, 12:59 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ