` what is value fund meaning benefits and who can invest | ಸ್ಮಾಲ್​ ಕ್ಯಾಪ್​ ಮತ್ತು ವ್ಯಾಲ್ಯೂ ಫಂಡ್ ನಡುವಿನ ವ್ಯತ್ಯಾಸವೇನು? | Money9 Kannada

ಸ್ಮಾಲ್​ ಕ್ಯಾಪ್​ ಮತ್ತು ವ್ಯಾಲ್ಯೂ ಫಂಡ್ ನಡುವಿನ ವ್ಯತ್ಯಾಸವೇನು?

ವ್ಯಾಲ್ಯೂ ರಿಸರ್ಚ್ ಪ್ರಕಾರ, ಸರಾಸರಿಯಲ್ಲಿ, ವ್ಯಾಲ್ಯೂ ಫಂಡ್ ಗಳು ಒಂದು, ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ ಶೇಕಡ 19, 26 ಮತ್ತು 13 ರಷ್ಟು ರಿಟರ್ನ್ಸ್ ಕೊಟ್ಟಿವೆ.

  • team money9
  • Last Updated : August 30, 2023, 14:10 IST

ವ್ಯಾಲ್ಯೂ ಓರಿಯೆಂಟೆಡ್ ಮ್ಯೂಚುವಲ್ ಫಂಡ್​ಗಳು ಜನಪ್ರಿಯವಾಗುತ್ತಿವೆ. ಫಂಡ್ ಮ್ಯಾನೇಜರ್ ಗಳು ಪ್ರಸ್ತುತ ಕಡಿಮೆ ಮೌಲ್ಯ ಇರುವ ಸ್ಟಾಕ್ ಗಳಲ್ಲೂ ಕೂಡ ಹೊಸ ಅವಕಾಶಗಳನ್ನ ಎದುರು ನೋಡುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಅನೇಕ ಹೊಸ ವ್ಯಾಲ್ಯೂ ಮ್ಯೂಚುವಲ್ ಫಂಡ್ ಗಳು ಅಸ್ತಿತ್ವಕ್ಕೆ ಬಂದಿವೆ. ಉದಾಹರಣೆಗೆ ಬರೋಡಾ ಬಿಎನ್​ಪಿ ಪರಿಬಾಸ್ ವ್ಯಾಲ್ಯೂ ಫಂಡ್ ಮತ್ತು ಯುಟಿಐ ನಿಫ್ಟಿ 500 ವ್ಯಾಲ್ಯೂ 50 ಇಂಡೆಕ್ಸ್ ಫಂಡ್. ಮೊದಲಿಗೆ ವ್ಯಾಲ್ಯೂ ಮ್ಯೂಚುವಲ್ ಫಂಡ್ ಎಂದರೇನು? ಯಾರು ಯಾವಾಗ ಹೂಡಿಕೆ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ವ್ಯಾಲ್ಯೂ ಫಂಡ್​ಗಳೆಂದರೇನು?
ವ್ಯಾಲ್ಯೂ ಇನ್ವೆಸ್ಟಿಂಗ್ ಸ್ಟಾಟಜಿಯನ್ನು ಫಂಡ್ ಮ್ಯಾನೇಜರ್ ಬಳಸಿದಾಗ, ಸಾಮಾನ್ಯವಾಗಿ ಕಡಿಮೆ ಮೌಲ್ಯ ಇರೋ ಸ್ಟಾಕ್ ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಆಂತರಿಕ ಮೌಲ್ಯಗಿಂತ ಕಡಿಮೆ ಮೌಲ್ಯದಲ್ಲಿ ವಹಿವಾಟು ಮಾಡುತ್ತಾ ಇರುವ ಸ್ಟಾಕ್ ಮತ್ತು ಯಾವ ಸ್ಟಾಕ್ ಗಳು ತಮ್ಮ ಅಸಲಿ ವಾಲ್ಯೂ ತೋರ್ಪಡಿಸೋದಿಲ್ಲವೋ ಅವುಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕಂಪೆನಿಯ ಆಂತರಿಕ ಮೌಲ್ಯ ಲೆಕ್ಕಾಚಾರ ಮಾಡೋಕೆ ನಿರ್ಣಾಯಕ ಹಣಕಾಸು ಮಾನದಂಡಗಳನ್ನ ನೋಡುತ್ತಾರೆ. ಅಂದರೆ ಬ್ಯಾಲೆನ್ಸ್ ಶೀಟ್, ಪ್ರಾಫಿಟ್ ಅಂಡ್ ಲಾಸ್ ಅಕೌಂಟ್, ಬ್ಯುಸಿನೆಸ್ ಮಾಡೆಲ್, ಮ್ಯಾನೇಜ್ಮೆಂಟ್ ಟೀಮ್ ಮತ್ತು ಕಾಂಪಿಟಿಟರ್ಸ್ ನಡೆಗಲನ್ನು ಗಮನಕ್ಕೆ ತೆಗೆದುಕೊಳ್ಳುತ್ತಾರೆ. ವ್ಯಾಲ್ಯೂ ಫಂಡ್ ಗಳ ಫಂಡ್ ಮ್ಯಾನೇಜರ್, ‘ವಾಲ್ಯೂ’ ಇರೋ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಸೆಬಿ ನಿಯಮದ ಪ್ರಕಾರ ಫಂಡ್ ಮ್ಯಾನೇಜರ್ ಕನಿಷ್ಠ ಶೇ. 65 ರಷ್ಟು ಸ್ಟಾಕ್ ಹೂಡಿಕೆ ಮಾಡಬೇಕು.

ಈ ಸ್ಕೀಂ ಗಳು ಈಕ್ವಿಟಿ ಮ್ಯೂಚುಯಲ್ ಫಂಡ್​ಗಳಂತೆನೇ ತೆರಿಗೆಗೆ ಒಳಪಡುತ್ತದೆ. ಅಂದರೆ ಒಂದು ವರ್ಷದೊಳಗೆ ರಿಡೀಮ್ ಮಾಡಿದ್ರೆ ಅವುಗಳ ರಿಟರ್ನಸ್ ಮೇಲೆ ಶೇ. 15 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಒಂದು ವರ್ಷದ ನಂತರ ಆದರೆ ಒಂದು ವರ್ಷದಲ್ಲಿ ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಗಳಿಕೆಗೆ ಶೇ. 10 ರಷ್ಟು ದೀರ್ಘಾವಧಿ ಕ್ಯಾಪಿಟಲ್ ಗೇನ್ ತೆರಿಗೆ ಅಂದರೆ ಎಲ್​ಟಿಸಿಜಿ ತೆರಿಗೆ ಪಾವತಿಸಬೇಕಾಗುತ್ತೆ..

ವ್ಯಾಲ್ಯೂ ರಿಸರ್ಚ್ ಪ್ರಕಾರ, ಸರಾಸರಿಯಲ್ಲಿ, ವ್ಯಾಲ್ಯೂ ಫಂಡ್ ಗಳು ಒಂದು, ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ ಶೇಕಡ 19, 26 ಮತ್ತು 13 ರಷ್ಟು ರಿಟರ್ನ್ಸ್ ಕೊಟ್ಟಿವೆ. ಇತರ ಸ್ಕೀಂಗಳಿಗೆ ಹೋಲಿಕೆ ಮಾಡಿದರೆ ಜೆಎಂ ವ್ಯಾಲ್ಯೂ ಫಂಡ್ ಅತಿ ಹೆಚ್ಚು ರಿಟರ್ನ್ಸ್ ಕೊಟ್ಟಿದೆ. ಕಳೆದೊಂದು ವರ್ಷದಲ್ಲಿ ಈ ಸ್ಕೀಂ ಶೇಕಡ 33 ರಷ್ಟು ರಿಟರ್ನ್ಸ್ ಕೊಟ್ಟಿದೆ‌‌. ಕಳೆದ ಮೂರು ವರ್ಷಗಳಲ್ಲಿ ಶೇಕಡ 31 ಹಾಗೂ ಕಳೆದ ಐದು ವರ್ಷಗಳಲ್ಲಿ ಶೇಕಡ 15 ರಷ್ಟು ರಿಟರ್ನ್ಸ್ ಕೊಟ್ಟಿದೆ‌.

ಅನೇಕ ಜನರಿಗೆ ವ್ಯಾಲ್ಯೂ ಮತ್ತು ಸ್ಮಾಲ್ ಕ್ಯಾಪ್ ನಡುವಿನ ವ್ಯತ್ಯಾಸ ಸರಳವಾಗಿ ಗೊತ್ತಾಗುವುದಿಲ್ಲ. ತಮ್ಮ ತಮ್ಮ ಆಂತರಿಕ ಮೌಲ್ಯಕ್ಕಿಂತ ಕಡಿಮೆ ಮೊತ್ತದಲ್ಲಿ ಅಂದರೆ ಇನ್​ಸ್ಟ್ರೆಸಿಕ್ ವಾಲ್ಯೂದಲ್ಲಿ ವಹಿವಾಟು ನಡೆಸೋ ಕಂಪೆನಿಗಳಲ್ಲಿ ವ್ಯಾಲ್ಯೂ ಫಂಡ್​ಗಳು ಹೂಡಿಕೆ ಮಾಡುತ್ತವೆ. ಮಾರ್ಕೆಟ್ ಕ್ಯಾಪಿಟಲೈಸೇಷನ್ ಆಧಾರಿತ ಅಗ್ರ 250 ಸ್ಟಾಕ್ ಗಳಲ್ಲಿ ಇರದ ಸಣ್ಣ ಕಂಪನಿಗಳಲ್ಲಿ ಹೂಡಿಕೆಯಾಗೋದು ಈ ಸ್ಮಾಲ್ ಕ್ಯಾಪ್ ಫಂಡ್​ಗಳು. ಸ್ಮಾಲ್-ಕ್ಯಾಪ್ ಫಂಡ್​ಗಳು ‌ರಿಸ್ಕ್ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ.ಆದರೆ, ಒಂದು ವೇಳೆ ಈ ಕಂಪೆನಿಗಳು ಪ್ರಗತಿ ಸಾಧಿಸಿದರೆ, ಈ ಫಂಡ್​ಗಳು ಹೂಡಿಕೆದಾರರಿಗೆ ಉತ್ತಮ ‌ರಿಟರ್ನ್ಸ್ ಕೊಡಬಲ್ಲ ಸಾಮರ್ಥ್ಯ ಹೊಂದಿವೆ.

ನೋಂದಾಯಿತ ಹೂಡಿಕೆದಾರರ ಸಲಹೆಗಾರರ ಸಂಘದ ಸದಸ್ಯರಾದ ಜೈ ಥಾಕರ್ ಹೇಳೋ ಪ್ರಕಾರ, ಭಾರತದಲ್ಲಿ ಸ್ಮಾಲ್ ಕ್ಯಾಪ್ ಫಂಡ್ ಗಳ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ) ವ್ಯಾಲ್ಯೂ, ಓರಿಯೆಂಟೆಡ್ ಫಂಡ್ ಗಳ ಎರಡು ಪಟ್ಟು ಇರಲಿದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳೋ ಹೂಡಿಕೆದಾರರು ಸ್ಮಾಲ್ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಇಂತಹ ಹೂಡಿಕೆದಾರರು ತಮ್ಮ ಪೋರ್ಟ್ ಫೋಲಿಯೋ ಹಂಚಿಕೆಯ ಶೇಕಡ 15-20ರಷ್ಟನ್ನ ಸ್ಮಾಲ್ ಕ್ಯಾಪ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.

ವ್ಯಾಲ್ಯೂ ಫಂಡ್ ಗಳಲ್ಲಿ ಯಾರು ಹೂಡಿಕೆ ಮಾಡಬಹುದು ಅನ್ನೋದನ್ನ ಈಗ ನೋಡೋಣ‌‌. ಮೌಲ್ಯಾಧಾರಿತ ಫಂಡ್ ಅಥವಾ ವ್ಯಾಲ್ಯೂ ಓರಿಯೆಂಟೆಡ್ ಫಂಡ್ ಗಳಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಹೂಡಿಕೆ ಮಾಡಬೇಕು ಅಂತಾ ಹಣಕಾಸು ತಜ್ಞರು ಶಿಫಾರಸ್ಸು ಮಾಡ್ತಾರೆ. ಜೈ ಥಾಕರ್ ಹೇಳೋ ಪ್ರಕಾರ, ವ್ಯಾಲ್ಯೂ ಓರಿಯೆಂಟೆಡ್ ಫಂಡ್ ಗಳು ದೀರ್ಘಾವಧಿಯಲ್ಲಿ ಹೆಚ್ಚಿನ ರಿಟರ್ನ್ಸ್ ಕೊಡಲು ಸಮರ್ಥವಾಗಿವೆ. ವೆಲ್ತ್ ಕಾಂಪೌಂಡಿಂಗ್ ಗೆ ಅಂದ್ರೆ ಸಂಪತ್ತು ಹೆಚ್ಚಿಸಿಕೊಳ್ಳೋಕೆ ವ್ಯಾಲ್ಯೂ ಫಂಡ್ ಗಳು ಪ್ರಮುಖ ಪಾತ್ರವಹಿಸಲಿದೆ.

 

Published: August 30, 2023, 14:10 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ