` things to consider before investing in overnight funds | ಒಂದೇ ದಿನದಲ್ಲಿ ರಿಟರ್ನ್ಸ್ ತಂದುಕೊಡುವ ಓವರ್ ನೈಟ್​ ಫಂಡ್! | Money9 Kannada

ಒಂದೇ ದಿನದಲ್ಲಿ ರಿಟರ್ನ್ಸ್ ತಂದುಕೊಡುವ ಓವರ್ ನೈಟ್​ ಫಂಡ್!

ಓವರ್‌ನೈಟ್‌ ಫಂಡ್‌ಗಳು ಡೆಟ್ ಮತ್ತು ಮನಿ ಮಾರ್ಕೆಟ್‌ ಓವರ್‌ನೈಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಸೆಕ್ಯುರಿಟಿಗಳು ಮರುದಿನ ಅಂದರೆ ಒಂದು ದಿನದಲ್ಲಿ ಮೆಚ್ಯೂರ್ ಆಗುತ್ತವೆ.

  • Team Money9
  • Last Updated : August 10, 2023, 12:21 IST

ದೈನಂದಿನ ವ್ಯಾಪಾರದ ಹಣವನ್ನೆಲ್ಲ ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳುವುದೋ ಅಥವಾ ಒಂದು ದಿನದ ಮೆಚ್ಯುರಿಟಿ ಇರುವ ಓವರ್‌ನೈಟ್ ಡೆಟ್ ಮ್ಯೂಚುವಲ್‌ ಫಂಡ್‌ನಲ್ಲಿ ಇಡುವುದೋ? ಅಂತ ಅವರಿಗೆ ನಿರ್ಧಾರ ಮಾಡಲು ಆಗುತ್ತಿಲ್ಲ. ಜುಲೈನಲ್ಲಿ, ಅತಿ ಕಡಿಮೆ ವೆಚ್ಚದ ಫಂಡ್‌ಗಳನ್ನು ಪರಿಚಯಿಸುವ ನವಿ ಮ್ಯೂಚುವಲ್ ಫಂಡ್‌, ಓವರ್‌ನೈಟ್ ಮ್ಯೂಚುವಲ್ ಫಂಡ್ ಅನ್ನು ಬಿಡುಗಡೆ ಮಾಡಿದೆ. ಇದು ಒಂದು ಡೆಟ್ ಸ್ಕೀಮ್ ಆಗಿದ್ದು, ಓವರ್‌ನೈಟ್ ಮೆಚ್ಯೂರಿಟಿಯಲ್ಲಿ ಒಂದು ರಾತ್ರಿ ಹೂಡಿಕೆ ಮಾಡುತ್ತದೆ.

ಸ್ಕೀಮ್ ಹೇಗೆ ಕೆಲಸ ಮಾಡುತ್ತದೆ? ಹೂಡಿಕೆ ಮಾಡಿದರೆ ಎಷ್ಟು ಸುರಕ್ಷಿತ ಎನ್ನುವುದನ್ನು ನಾವು ನೋಡೋಣ. ಭಾರತದಲ್ಲಿನ ಮ್ಯೂಚುವಲ್ ಫಂಡ್‌ಗಳ ಅಸೋಸಿಯೇಶನ್‌ (ಎಎಂಎಫ್‌ಐ) ಪ್ರಕಾರ ಎಲ್ಲ ಮ್ಯೂಚುವಲ್ ಫಂಡ್‌ಗಳಿಗಿಂತಲೂ ಹೆಚ್ಚು ಸುರಕ್ಷಿತ ಎಂದು ಓವರ್‌ನೈಟ್ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಲಾಗಿದೆ. ಇವು ಮ್ಯೂಚುವಲ್ ಫಂಡ್‌ಗಳ ಡೆಟ್ ವಿಭಾಗದಲ್ಲಿ ಬರುತ್ತವೆ.

ಓವರ್‌ನೈಟ್‌ ಫಂಡ್‌ಗಳು ಡೆಟ್ ಮತ್ತು ಮನಿ ಮಾರ್ಕೆಟ್‌ ಓವರ್‌ನೈಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಸೆಕ್ಯುರಿಟಿಗಳು ಮರುದಿನ ಅಂದರೆ ಒಂದು ದಿನದಲ್ಲಿ ಮೆಚ್ಯೂರ್ ಆಗುತ್ತವೆ. ಮರುದಿನ ಮೆಚ್ಯೂರ್ ಆಗುವ ಹೊಸ ಸೆಕ್ಯುರಿಟಿಗಳನ್ನು ಖರೀದಿ ಮಾಡಲು ಫಂಡ್ ಮ್ಯಾನೇಜರ್ ಈ ಹಣವನ್ನು ಬಳಸುತ್ತಾರೆ. ಅತ್ಯಧಿಕ ರೇಟಿಂಗ್ ಮತ್ತು ಕನಿಷ್ಠ ಕ್ರೆಡಿಟ್ ರಿಸ್ಕ್‌ ಇರುವ ಫಂಡ್ ಮ್ಯಾನೇಜರ್ ಕೇವಲ ಡೆಟ್ ಸೆಕ್ಯುರಿಟಿಗಳನ್ನು ಖರೀದಿ ಮಾಡುತ್ತಾರೆ

ಓವರ್‌ನೈಟ್ ಮ್ಯೂಚುವಲ್ ಫಂಡ್ ಸೆಕ್ಯುರಿಟಿಗಳು ಮರುದಿನ ಮೆಚ್ಯೂರ್ ಆಗುವುದರಿಂದಾಗಿ, ಇತರ ಡೆಟ್ ಫಂಡ್‌ಗಳಿಗೆ ಇರುವಷ್ಟೇ ಬಡ್ಡಿ ದರ ಅಥವಾ ಡೀಫಾಲ್ಟ್‌ ರಿಸ್ಕ್‌ ಇರುವುದಿಲ್ಲ. ವ್ಯಾಲ್ಯೂ ರಿಸರ್ಚ್‌ ಡೇಟಾ ಪ್ರಕಾರ, 2023 ಜುಲೈ 16 ರ ವೇಳೆಗೆ, ಓವರ್‌ನೈಟ್ ಮ್ಯೂಚುವಲ್ ಫಂಡ್‌ನ ಸರಾಸರಿ ರಿಟರ್ನ್‌ 1 ವರ್ಷಕ್ಕೆ 6.08%, 3 ವರ್ಷಕ್ಕೆ 4.59% ಮತ್ತು 5 ವರ್ಷಕ್ಕೆ 4.59% ಇತ್ತು.

ಹಾಗಾದರೆ ಯಾವ ರೀತಿಯ ಹೂಡಿಕೆದಾರರು ಓವರ್‌ನೈಟ್‌ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು? ಓವರ್‌ನೈಟ್ ಫಂಡ್‌ಗಳು ಸಾಮಾನ್ಯವಾಗಿ ಉದ್ಯಮಿಗಳಿಗೆ ಅಥವಾ ವ್ಯಾಪಾರಿಗಳಿಗೆ ಸೂಕ್ತ. ತಮ್ಮ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಣೆ ಮಾಡುವುದಕ್ಕಾಗಿ ಹೂಡಿಕೆದಾರರಿಗೆ ಒಂದು ತುರ್ತು ನಿಧಿಯನ್ನು ಮಾಡಿಕೊಳ್ಳಲೂ ಇದು ಸೂಕ್ತ. ಈ ಫಂಡ್‌ಗಳು ಅತಿ ಹೆಚ್ಚಿನ ಲಿಕ್ವಿಡಿಟಿ ಕೊಡುತ್ತವೆ.

ನಾವು ಇಂತಹ ಫಂಡ್‌ಗಳನ್ನು ಚಾಲ್ತಿ ಮತ್ತು ಉಳಿತಾಯ ಖಾತೆಗಳ ಜೊತೆಗೆ ಹೋಲಿಕೆ ಮಾಡಿದರೆ, ಚಾಲ್ತಿ ಖಾತೆಯಾಗಿದ್ದರೆ ಬ್ಯಾಲೆನ್ಸ್‌ನಲ್ಲಿ ಯಾವುದೇ ಬಡ್ಡಿ ಸಿಗುವುದಿಲ್ಲ. ಇನ್ನು ಉಳಿತಾಯ ಖಾತೆಯಲ್ಲಿ ಬಡ್ಡಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ ಮತ್ತು ಇದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಈ ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಆದರೆ, ಓವರ್‌ನೈಟ್‌ ಮ್ಯೂಚುವಲ್ ಫಂಡ್‌ನಲ್ಲಿ ರಿಡೆಂಪ್ಷನ್ ಮಾಡಿದಾಗ ರಿಟರ್ನ್‌ ಸಿಗುತ್ತದೆ. ಹೂಡಿಕೆದಾರರು ಬೇಕು ಎಂದರೆ ಪ್ರತಿ ದಿನವೂ ರಿಟರ್ನ್ ಸಿಗುತ್ತದೆ.

ಎಪ್ಸಿಲಾನ್ ಮನಿ ಮಾರ್ಟ್‌ನ ಪ್ರಾಡಕ್ಟ್‌ಗಳು ಮತ್ತು ಪ್ರೊಪೊಸಿಶನ್‌ನ ಮುಖ್ಯಸ್ಥ ನಿತಿನ್ ರಾವ್ ಹೇಳುವಂತೆ ಯಾವುದೇ ಪ್ರಾಡಕ್ಟ್‌ನಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರರು ತಮ್ಮ ಅಗತ್ಯಗಳನ್ನು ನೋಡಿಕೊಳ್ಳಬೇಕು. ಚಾಲ್ತಿ ಬ್ಯಾಂಕ್‌ ಖಾತೆಗೆ ಪರ್ಯಾಯ ಎಂದು ಓವರ್‌ನೈಟ್ ಫಂಡ್‌ಗಳನ್ನು ಪರಿಗಣಿಸಲಾಗುತ್ತದೆ. ಆದರೆ, ಇದರಲ್ಲಿ ರಿಟರ್ನ್ ಗ್ಯಾರಂಟಿ ಇಲ್ಲ ಎಂಬುದನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು. ಸಣ್ಣ ಪ್ರಮಾಣದ ರಿಸ್ಕ್ ಇದ್ದೇ ಇರುತ್ತದೆ.

ಒಂದೇ ದಿನ ಹೋಲ್ಡಿಂಗ್ ಪೀರಿಯಡ್ ಹೊಂದಿರುವ ಓವರ್‌ನೈಟ್ ಫಂಡ್‌ಗಳು ಒಂದು ವಾರ ಅಥವಾ ಅದಕ್ಕೂ ಕಡಿಮೆ ಅವಧಿಗೆ ಹೂಡಿಕೆ ಮಾಡುವವರಿಗೆ ಅತ್ಯಂತ ಸೂಕ್ತ ಎಂದು ಮನಿ9 ಕನ್ನಡ ಸಲಹೆ ಮಾಡುತ್ತದೆ. ನಿಮ್ಮ ಲಾಭಗಳನ್ನು ಹೆಚ್ಚಿಸುವುದಕ್ಕೆ ಓವರ್‌ನೈಟ್ ಫಂಡ್‌ಗಳು ಇರುವುದಲ್ಲ. ಹೂಡಿಕೆದಾರರಿಗೆ ತಮ್ಮ ಗುರಿಗಳು ಅಥವಾ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಸ್ಪಷ್ಟವಿಲ್ಲದಿದ್ದರೆ ಹಣಕಾಸು ಸಲಹೆಗಾರರ ನೆರವು ಪೆಡೆದುಕೊಳ್ಳುವುದು ಒಳಿತು.

Published: August 10, 2023, 12:21 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ