` how successful will sebi s micro sip of rs 250 be | ಹೂಡಿಕೆ ಆರಂಭಿಸಲು ಕೇವಲ 250 ರೂ. ಸಾಕು! | Money9 Kannada

ಹೂಡಿಕೆ ಆರಂಭಿಸಲು ಕೇವಲ 250 ರೂ. ಸಾಕು!

ಅನೇಕ ಫಂಡ್ ಹೌಸ್‌ಗಳು ನೂರು ರೂಪಾಯಿಗಳಿಗೆ ಮೈಕ್ರೋ ಎಸ್‌ಐಪಿ ಫೀಚರ್ ಆಫರ್ ಮಾಡಿವೆ. ಈ ಪೈಕಿ ಐಸಿಐಸಿಐ ಪ್ರುಡೆನ್ಷಿಯಲ್, ಆದಿತ್ಯಾ ಬಿರ್ಲಾ ಸನ್ ಲೈಫ್ ಮತ್ತು ನಿಪ್ಪಾನ್ ಇಂಡಿಯಾ ಸೇರಿವೆ. ಆದಾಗ್ಯೂ, ಮೈಕ್ರೋ ಸಿಪ್ ಮೂಲಕ ಹೂಡಿಕೆ ಸುಲಭ ಏನಲ್ಲ.

ಯಾವುದೇ ಪ್ರಾಡಕ್ಟ್ ಜನಪ್ರಿಯಗೊಳ್ಳಲು ಮಾರ್ಕೆಟಿಂಗ್ ಎನ್ನುವುದು ಅತ್ಯಂತ ಪರಿಣಾಮಕಾರಿ ಸಾಧನ. ಮಾರ್ಕೆಟಿಂಗ್ ಮಾಡೆಲ್ ನಲ್ಲಿ ನಾಲ್ಕು ‘ಪಿ’ ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅವುಗಳೆಂದರೆ – ಪ್ರಾಡಕ್ಟ್, ಪ್ರೈಸ್, ಪ್ಲೇಸ್ ಮತ್ತು ಪ್ರೊಮೋಷನ್. ಅಂದ್ರೆ ಉತ್ಪನ್ನ, ಅದರ ಬೆಲೆ, ಸ್ಥಳ ಮತ್ತು ಉತ್ತೇಜನ ಮುಖ್ಯವಾದವು. ಈ ಬ್ರಾಂಡಿಂಗ್ ಟೆಕ್ನಿಕ್ ಅನ್ನೋದು ಎಫ್ ಎಂ ಸಿ ಜಿ ವಲಯದಲ್ಲಿ ಕ್ರಾಂತಿ ತಂದಿದೆ. ಉದಾಹರಣೆಗೆ, ಎಫ್ ಎಂ ಸಿ ಜಿ ಕಂಪೆನಿಗಳು ತಮ್ಮ ಶಾಂಪೂಗಳನ್ನ ಬಾಟೆಲ್ ಗಳ ಬದಲಿಗೆ ಒಂದು ಅಥವಾ ಎರಡು ರೂಪಾಯಿಗಳ ಸ್ಯಾಷೆಯಲ್ಲಿ ಮಾರಾಟ ಮಾಡುತ್ತಿವೆ. ಇದರಿಂದಾಗಿ ಸಾಮಾನ್ಯ ವ್ಯಕ್ತಿಗಳು ಈ ಉತ್ಪನ್ನವನ್ನ ಖರೀದಿಸೋದು ಸುಲಭ ಆಗಿದೆ, ಕೈಗೆಟಕುವ ಬೆಲೆಯಲ್ಲಿ ಕೂಡ ಸಿಗುತ್ತಿದೆ. ಈಗ ಇದೇ ಫಾರ್ಮುಲಾವನ್ನ ನಾವು ಸಿಪ್ ಗೆ ಅಂದ್ರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಗೂ ಅಪ್ಲೈ ಮಾಡ್ಕೋಬಹುದು ಅಂತಾ ಹೇಳಲಾಗುತ್ತಿದೆ.

ಸಿಪ್ ನಲ್ಲಿ ತಿಂಗಳ ಕನಿಷ್ಠ ಹೂಡಿಕೆ ಮೊತ್ತವನ್ನ 500 ರೂಪಾಯಿಯಿಂದ 250 ರೂಪಾಯಿಗೆ ಇಳಿಕೆ ಮಾಡೋದಕ್ಕೆ ಮಾರುಕಟ್ಟೆ ನಿಯಂತ್ರಕ ಸೆಬಿ ಪರಿಗಣಿಸುತ್ತಿದೆ ಎಂದು ಸೆಬಿ ಮುಖ್ಯಸ್ಥರಾದ ಮಾಧಬಿ ಪುರಿ ಬುಚ್ ಹೇಳಿದಾರೆ. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮ್ಯೂಚುಯಲ್ ಫಂಡ್ ವಲಯ ತಮ್ಮ ಉತ್ಪನ್ನಗಳನ್ನ ಹೇಗೆ ಕೈಗೆಟುವಂತೆ ಮಾಡಿ, ಸಮಾಜದ ಬಹುಸಂಖ್ಯಾತರ ಅಗತ್ಯಗಳನ್ನ ಪೂರೈಸಬಹುದು ಎನ್ನುವುದನ್ನು ಎಫ್ ಎಂ ಸಿ ಜಿ ಕಂಪೆನಿಗಳಿಂದ ಕಲೀಬೇಕು ಎಂದು ಹೇಳಿದ್ದರು. ಮಾಸಿಕ 250 ರೂಪಾಯಿಯ ಸಿಪ್ ಹೇಗೆ ಹೂಡಿಕೆದಾರರು ಮತ್ತು ಮ್ಯೂಚುಯಲ್ ಫಂಡ್ ಕಂಪೆನಿಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಅದಕ್ಕೂ ಮೊದಲು, ಸಿಪ್ ಎಣದರೆ ಏನು? ಎನ್ನುವ ಮಾಹಿತಿ ಪಡೆಯೋಣ.

ಸಿಪ್ ಎನ್ನುವುದು ಮ್ಯೂಚುಯಲ್ ಫಂಡ್ ಹೂಡಿಕೆಯ ಒಂದು ವಿಧಾನ. ಅನೇಕರು, ಸಿಪ್ ಮೂಲಕ ಈಕ್ವಿಟಿ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಪ್ರತಿ ತಿಂಗಳು ಅತ್ಯಲ್ಪ ಹಣ ಹೂಡಿಕೆ ಮಾಡಿದರೂ ಕೂಡ, ಅದು ದೀರ್ಘಾವಧಿಯಲ್ಲಿ ಬೃಹತ್ ಮೊತ್ತವಾಗುತ್ತದೆ. ಸಿಪ್ ವಿನ್ಯಾಸ ಹೇಗಿದೆ ಅಂದರೆ ಷೇರು ಮಾರುಕಟ್ಟೆ ಏರುಗತಿಯಲ್ಲಿರೋವಾಗ ಕಡಿಮೆ ಯೂನಿಟ್ ಗಳನ್ನ ಖರೀದಿಸಬೇಕು, ಹಾಗೇ ಇಳಿಕೆಯ ಹಾದಿಯಲ್ಲಿರೋವಾಗ ಜಾಸ್ತಿ ಯೂನಿಟ್ ಗಳನ್ನು ಖರೀದಿಸಿದರೆ ಲಾಭ ಪಡೆಯಬಹುದು. ಈ ಮೂಲಕ, ನಿಮ್ಮ ಹೂಡಿಕೆಯಿಂದ ಸರಾಸರಿ ಲಾಭ ಗಳಿಸೋಕೆ ಸಿಪ್ ನೆರವಾಗುತ್ತದೆ. ಜೊತೆಗೆ ನಿಮ್ಮ ರಿಟರ್ನ್ಸ್ ಜೊತೆಗೆ ಹೊಂದಿಕೆಯಾಗುತ್ತದೆ. ನೀವು ತಿಂಗಳಿಗೆ 500 ರೂಪಾಯಿಯೊಂದಿಗೆ ಸಿಪ್ ಮುಖಾಂತರ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಶುರು ಮಾಡಬಹುದು.

ಭಾರತೀಯ ಮ್ಯೂಚುಯಲ್ ಫಂಡ್ ಗಳ ಸಂಘ (ಎಎಂಎಫ್‌ಐ) ಪ್ರಕಾರ, ದೇಶದಲ್ಲಿ ಸುಮಾರು 8.2 ಕೋಟಿ ಸಿಪ್ ಖಾತೆಗಳಿವೆ. ಇದರ ಪೋರ್ಟ್ ಫೋಲಿಯೋಗಳ ಮುಖಾಂತರ ಹೂಡಿಕೆದಾರರು ವಿವಿಧ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈಗ, ನಾವು ಮೈಕ್ರೋ ಎಸ್ ಐ ಪಿಪಿ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು.

ಕಿರು ಹೂಡಿಕೆದಾರರನ್ನ ಆಕರ್ಷಿಸುವುದಕ್ಕೆ ಮ್ಯೂಚುಯಲ್ ಫಂಡ್ ಇಂಡಸ್ಟ್ರಿ ಈಗ 100 ರೂಪಾಯಿಯೊಂದಿಗೆ ಸಿಪ್ ಆರಂಭಿಸಿದೆ. ಗ್ರಾಮೀಣ ಜನರು, ಕಡಿಮೆ ಆದಾಯ ಇರುವವರು, ವಿದ್ಯಾರ್ಥಿಗಳು, ಅಷ್ಟೇ ಏಕೆ ಮಕ್ಕಳು ಕೂಡ ಈ ಮೈಕ್ರೋ ಸಿಪ್ ನಿಂದ ಲಾಭ ಪಡೆಯಬಹುದು. ಪ್ರತಿ ತಿಂಗಳು ನೂರರಿಂದ ಐದು ನೂರು ರೂಪಾಯಿ ಉಳಿತಾಯ ಮಾಡುತ್ತಾ ದೀರ್ಘಾವಧಿಯಲ್ಲಿ ಯಾರು ಬೇಕಾದರೂ ಸಾಕಷ್ಟು ಹಣ ಕ್ರೋಢೀಕರಿಸಿಕೊಳ್ಳಬಹುದು. ಈ ಕಿರು ಉಳಿತಾಯ ನಿಮ್ಮ ಜೇಬಿಗೇನೂ ಹೊರೆ ಆಗಲ್ಲ ಅಥವಾ ಬಜೆಟ್ ಗೇನೂ ಅಡ್ಡಿಯಾಗಲ್ಲ.

ಈ ನಿಟ್ಟಿನಲ್ಲಿ, ಮೈಕ್ರೋ ಎಸ್‌ಐಪಿ ಕಿರು ಹೂಡಿಕೆದಾರರಿಗೆ ಉತ್ತಮ ಆಯ್ಕೆ. ಅನೇಕ ಫಂಡ್ ಹೌಸ್‌ಗಳು ನೂರು ರೂಪಾಯಿಗಳಿಗೆ ಮೈಕ್ರೋ ಎಸ್‌ಐಪಿ ಫೀಚರ್ ಆಫರ್ ಮಾಡಿವೆ. ಈ ಪೈಕಿ ಐಸಿಐಸಿಐ ಪ್ರುಡೆನ್ಷಿಯಲ್, ಆದಿತ್ಯಾ ಬಿರ್ಲಾ ಸನ್ ಲೈಫ್ ಮತ್ತು ನಿಪ್ಪಾನ್ ಇಂಡಿಯಾ ಸೇರಿವೆ. ಆದಾಗ್ಯೂ, ಮೈಕ್ರೋ ಸಿಪ್ ಮೂಲಕ ಹೂಡಿಕೆ ಸುಲಭ ಏನಲ್ಲ.

ಹಣಕಾಸು ತಜ್ಞರ ಪ್ರಕಾರ, ಮೈಕ್ರೋ ಸಿಪ್ ಶುರು ಮಾಡೋಕೆ ಹೆಚ್ಚು ಖರ್ಚಾಗುತ್ತದೆ. ಇದಕ್ಕಿರುವ ಅತಿ ದೊಡ್ಡ ಅಡ್ಡಿ ಅಂದರೆ ಡಿಜಿಟಲ್ ಕೆವೈಸಿಯ ಖರ್ಚುಗಳು. ಮನಿ ಫ್ರಂಟ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಆದ ಮೋಹಿತ್ ಗಂಗ್ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ. ಹೂಡಿಕೆಗೆ, ವಹಿವಾಟಿಗೆ ಹೆಚ್ಚಿನ ಗ್ರಾಹಕರನ್ನ ಆಕರ್ಷಿಸುವುದು ಮತ್ತು ಮೈಕ್ರೋ ಸಿಪ್‌ಗಳ ನಿರ್ವಹಣೆಗೆ ಮಹತ್ವದ ಸವಾಲಾಗಿದೆ. ಇಂತಹ ಸನ್ನಿವೇಶದಲ್ಲಿ, ಎಎಂಸಿಗಳ ಪೇ ಬ್ಯಾಕ್ ಪೀರಿಯಡ್, ಅಂದ್ರೆ, ಅದು ಆದಾಯ ತರೋ ಕಾಲ ಸ್ವಲ್ಪ ದೂರಾನೇ ಇರುತ್ತದೆ. ಎಎಂಸಿ ಗಳಿಗೆ ಇಂತಹ ಸನ್ನಿವೇಶದಲ್ಲಿ ಮೈಕ್ರೋ ಸಿಪ್‌ಗಳು ವಾಸ್ತವದಲ್ಲಿ ಸೂಕ್ತವಾಗಲ್ಲ. ವೆಚ್ಚದ ವಿಚಾರವಾಗಿ ಮಧ್ಯ ನೆಲೆ ಏನಾದರೂ ಸಿಕ್ಕಿದರೆ, ಆಗ ಎಎಂಸಿಗಳು ದೊಡ್ಡ ಪ್ರಮಾಣದಲ್ಲಿ ಮೈಕ್ರೋ ಸಿಪ್‌ಗಳನ್ನ ಆರಂಭಿಸಬಹುದು.

ಈ ಉಪಕ್ರಮ ಸಣ್ಣ ಪಟ್ಟಣ, ನಗರ ಮತ್ತು ಹಳ್ಳಿಗಳಲ್ಲಿನ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲಿದೆ. ಈ ಮೂಲಕ ಸಮಾಜದಲ್ಲಿ ಹಣಕಾಸು ಉಳಿಕೆ ಗಣನೀಯವಾಗಿ ಹೆಚ್ಚಿಸೋಕೆ ನೆರವಾಗತ್ತದೆ. ಆದಾಗ್ಯೂ, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಮೈಕ್ರೋ ಸಿಪ್ ಗಳ ವೆಚ್ಚ ಕಡಿಮೆ ಮಾಡುವುದಕ್ಕೆ ನಿಯಂತ್ರಕಗಳು ಮತ್ತು ಎಎಂಸಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಹೂಡಿಕೆದಾರರು ಹೆಚ್ಚಿನ ವೆಚ್ಚದ ಅನುಪಾತದ ಹೊರೆ ಭರಿಸುವ ಹಾಗಾಗಬಾರದು. ಮೈಕ್ರೊ ಸಿಪ್ ಗಳಲ್ಲಿ ಕಾರ್ಯನಿರ್ವಹಣಾ ವೆಚ್ಚ ಮತ್ತು ನಿಯಂತ್ರಕ ವೆಚ್ಚಗಳನ್ನ ಕಡಿಮೆ ಮಾಡಿದರೆ ಇದು ಸಾಧ್ಯ ಆಗಬಹುದು ಅನ್ನೋದು ಮೋಹಿತ್ ಗಂಗ್ ಅವರ ಅಭಿಪ್ರಾಯ. ವೆಚ್ಚ ಕಡಿಮೆ ಮಾಡುವ ಅಗತ್ಯ ಇದೆ. ‌ಕೊನೆಯದಾಗಿ, ಎಎಂಸಿಗಳು ಈ ಹೂಡಿಕೆ ಮೇಲೆ ಹೆಚ್ಚಿನ ಶುಲ್ಕ ವಿಧಿಸಬಹುದು.

ಭಾರತೀಯ ಮ್ಯೂಚುಯಲ್‌ ‌ಫಂಡ್ ವಲಯದ ಗಾತ್ರ 50 ಲಕ್ಷ ಕೋಟಿ ಗಡಿಯನ್ನು ದಾಟಿದೆ. ಆದಾಗ್ಯೂ, ಇದು ಜಿಡಿಪಿ ರೇಷ್ಯೋದ ಶೇಕಡ 15.8 ರಷ್ಟಿದೆ. ಇದು ಜಾಗತಿಕ ಸರಾಸರಿಯ ಶೇಕಡ 74 ಕ್ಕಿಂತ ಕಡಿಮೆ ಇದೆ. ಈ ಸಂಖ್ಯೆಯು ದೇಶದಲ್ಲಿ ಮ್ಯೂಚುಯಲ್‌ ಫಂಡ್‌ ವಲಯ ಇನ್ನೂ ಸಾಕಷ್ಟು ಸಾಧಿಸಬೇಕಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಒಂದು ವೇಳೆ ಮೈಕ್ರೋ ಸಿಪ್ ಗಳು ಯಶಸ್ವಿಯಾದರೆ ಇದು ಹೆಚ್ಚು ಜನರು ಹೂಡಿಕೆ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ಜತೆಗೆ ಮ್ಯೂಚುವಲ್ ಫಂಡ್ ವಲಯದ ಬೆಳವಣಿಗೆಗೂ ನೆರವಾಗಲಿದೆ

Published: April 22, 2024, 14:48 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ