` what should be your stock market strategy in fmcg sector | ಕೊರೋನಾ ನಂತರ ಬದಲಾವಣೆ ಹಾದಿಯಲ್ಲಿ FMCG ಸೆಕ್ಟರ್​ | Money9 Kannada

ಕೊರೋನಾ ನಂತರ ಬದಲಾವಣೆ ಹಾದಿಯಲ್ಲಿ FMCG ಸೆಕ್ಟರ್​

COVID ಗಿಂತ ಮೊದಲು, FMCG ಕಂಪನಿಗಳು ಹೊಸ ರೀತಿಯ ಉತ್ಪನ್ನಗಳತ್ತ ಜನರನ್ನು ಆಕರ್ಸಿಸಲು ಮಿಡಿಯಂ ಮತ್ತು ಲೋವರ್ ಪ್ರೈಸ್ ವಿಭಾಗದಲ್ಲಿ ವಿವಿಧ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಬಂದಿದ್ದವು. ಪ್ರೀಮಿಯಂ ಪ್ರಾಡಕ್ಟ್ ಗಳು ಮಾಸ್ ಲೇವಲ್ ಪ್ರಾಡಕ್ಟ್ ಗಿಂತ ಹೆಚ್ಚಿನ ಸೇಲ್ ಹೊಂದಿದ್ದರಿಂದ ಈ ಕಂಪನಿಗಳು ತಮ್ಮ ಸ್ಟ್ರಾಟಜಿ ಬದಲಾಯಿಸಿಕೊಂಡವೆ? ಈ ವಿಚಾರ ಸಹ ಮುಖ್ಯವಾಗುತ್ತದೆ.

2023 ರ ನಾಲ್ಕನೇ ತ್ರೈಮಾಸಿಕಕ್ಕೆ ಸಂಬಂಧಿಸಿ ಎಫ್ ಎಂಸಿಜಿ ಅಂದ್ರೆ ಫಾಸ್ಟ್ ಮೂವಿಂಗ್ ಕಸ್ಯೂಮರ್ ಗೂಡ್ಸ್ ಆಗಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲೇಬೇಕು. 2023 ರ ನಾಲ್ಕನೇ ತ್ರೈಮಾಸಿಕಸಲ್ಲಿ ಎಫ್ ಎಂಸಿಜಿಯ ವಾಲ್ಯೂಮ್ ಶೇ. 6.4 ರಷ್ಟು ಏರಿಕೆ ಕಂಡಿದೆ. ಇದರ ಪರಿಣಾಮ ಎಫ್ ಎಂಸಿಜಿ ವ್ಯಾಲ್ಯೂ ಸಹ ಶೇ. 6 ರಷ್ಟು ಹೆಚ್ಚಾಗಿದೆ. ನೀಲ್ಸನ್ ರಿಪೋರ್ಟ್ ಹೇಳಿರುವ ಪ್ರಕಾರ ಈ ಹೆಚ್ಚಳವು ದೇಶದ ಅನೇಕ ಭಾಗಗಳಲ್ಲಿ ಎಫ್ ಎಂಸಿಜಿ ಪ್ರಾಡಕ್ಟ್ ಬಳಕೆಯನ್ನು ಸೂಚಿಸುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ FMCG ಉತ್ಪನ್ನಗಳಿಗೆ ಬಲವಾದ ಬೇಡಿಕೆ ಇದೆ ಎನ್ನುವುದನ್ನು ಇದು ಪ್ರತಿಬಿಂಬಿಸುತ್ತದೆ. ಆದರೆ ಇದೇ ಅವಧಿಯಲ್ಲಿ ಗ್ರಾಮೀಣ ಭಾಗದ ಎಫ್ ಎಂಸಿಜಿ ಬಳಕೆಯಲ್ಲಿ ಕೊಂಚ ಇಳಿಕೆಯಾಗಿರುವುದನ್ನೂ ಕಾಣಬಹುದಾಗಿದೆ. ಹಾಗಿದ್ದರೆ ಮುಂದಿನ ದಿನಗಳಲ್ಲಿ FMCG ಕಂಪನಿಗಳ ಬೆಳವಣಿಗೆ ಹೇಗಿರಲಿದೆ? ಗ್ರಾಮೀಣ ಪ್ರದೇಶಗಳಿಂದ ಬರುತ್ತಿರುವ ಬೇಡಿಕೆಯಲ್ಲಿ ಯಾವ ಬದಲಾವಣೆಯಾಗಲಿದೆ? ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳು ಮುಂದಿನ ದಿನಗಳಲ್ಲಿ ಯಾವ ಸ್ಟ್ರಾಟಜಿ ಅಳವಡಿಸಿಕೊಳ್ಳಬೇಕು. ಎನ್ನುವುದನ್ನು ತಿಳಿದುಕೊಳ್ಳೋಣ.

ಭಾರತದ ಆರ್ಥಿಕತೆಯಲ್ಲಿ ನಾಲ್ಕನೇ ದೊಡ್ಡ ವಲಯ ಅಂದ್ರೆ ಅದು FMCG ಸೆಕ್ಟರ್. ಈ ವಲಯದಲ್ಲಿ ಮೂರು ಮುಖ್ಯ ವಿಭಾಗಗಳಿವೆ. ಆಹಾರ ಮತ್ತು ಪಾನೀಯಗಳು ವಲಯ 19% ಪಾಲು ಹೊಂದಿದ್ದರೆ. ಹೆಲ್ತ್ ಕೇರ್ 31% ರಷ್ಟು ಪಾಲು ಹೊಂದಿದೆ. ಇನ್ನು ಹೌಸ್ ಹೋಲ್ಡ್ ಮತ್ತು ಪರ್ಸನಲ್ ಕೇರ್ ವಲಯ 50% ಪಾಲು ಹೊಂದಿದೆ. ಈ ವಲಯಕ್ಕೆ ಶೇ. 55 ರಷ್ಟು ಆದಾಯ ನಗರ ಪ್ರದೇಶಗಳಿಂದಲೇ ಬರುತ್ತಿದೆ ಉಳಿದ ಶೇ. 45 ರಷ್ಟು ಆದಾಯ ಗ್ರಾಮೀಣ ಭಾಗದಿಂದ ಬರುತ್ತಿದೆ. FMCG ಕಂಪನಿಗಳು ಕಮಾಡಿಟಿ ದರ ಇಳಿಕೆ, ಜಿಡಿಪಿ ಬೆಳವಣಿಗೆ ಹೊರತಾಗಿಯೂ ಗ್ರಾಮೀಣ ಪ್ರದೇಶಗಳಿಂದ FMCGಗೆ ಹೆಚ್ಚಿನ ಬೇಡಿಕೆ ಬರುತ್ತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ FMCG ಕಂಪನಿಗಳ ಆದಾಯದ ಬೆಳವಣಿಗೆ ಫೈನಾಶಿಯಲ್ ಇಯರ್ 2024 ರ ಮೂರನೇ ತ್ರೈಮಾಸಿಕದಲ್ಲಿ ನಿಧಾನಗತಿಗೆ ಇಳಿದಿದೆ.

ಎಂಎಸ್ ಪಿ ಅಂದ್ರೆ ಬೆಳೆಗೆ ಬೆಂಬಲ ಬೆಲೆ ಮತ್ತು ಇತರೆ ಸರ್ಕಾರಿ ಯೋಜನಗೆಳು , ಲೋಕ ಚುನಾವಣೆಗೂ ಮುನ್ನ ಮಾಡುತ್ತಿರುವ ಹೆಚ್ಚಿನ ವೆಚ್ಚದ ಪರಿಣಾಮ ಗ್ರಾಮೀಣ ಪ್ರದೇಶಲ್ಲಿನ ವೆಚ್ಚವೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಚುನಾವಣೆ ಕಾರಣಕ್ಕೆ ಬೇಡಿಕೆ ಹೆಚ್ಚುತ್ತದೆ ಎನ್ನುವ ಭರವಸೆಯನ್ನು ಈ ಕಂಪನಿಗಳು ಇಟ್ಟುಕೊಂಡಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಆರ್ ಬಿಐ ಮಾರ್ಚ್ ನಲ್ಲಿ ಬಿಡುಗಡೆ ಮಾಡಿರುವ ಬುಲಿಟಿನ್ ನಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಡೊಮೆಸ್ಟಿಕ್  FMCG ಸೆಕ್ಟರ್ ಸ್ಲೋ ಡೌನ್ ಆಗಲಿದೆ ಅಂತಾ ಹೇಳಿದೆ. ಇನ್ನೊಂದುಕಡೆ ಪ್ರೀಮಿಯಂ ಕನ್ಸೂಮರ್ ಬಿಸಿನಸ್ ಗೆ ಹೆಚ್ಚಿನ ಬೇಡಿಕೆ ಉಂಟಾಗಬಹುದು ಅನ್ನೋ ವಿಚಾರವನ್ನು ಹೈಲೈಟ್ ಮಾಡಲಾಗಿದೆ. ಇದರ್ ಅರ್ಥ ಪ್ರೀಮಿಯಂ ಪ್ರಾಡಕ್ಟ್ ಮಾರಾಟ ವಲಯದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಬಹುದು. ಭಾರತದ ಪರ್ ಕೆಪ್ಟಾ ಇನ್ ಕಂ ಅಂದರೆ ತಲಾ ಆದಾಯದಲ್ಲಿಯೂ ಪ್ರಮುಖ ಬದಲಾವಣೆಯಾಗಲಿದೆ ಅಂತ ಆರ್ ಬಿಐ ಬುಲಿಟಿನ್ ಹೇಳಿದೆ. ಹೆಚ್ಚಿನ ಆದಾಯ ಇರುವವರು, ಪ್ರೀಮಿಯಂ ಪ್ರಾಡಕ್ಟ್ ಖರೀದಿ ಮಾಡುವವರು ಇನ್ನೂ ಹೆಚ್ಚಿನ ಖರೀದಿ ಮಾಡಲಿದ್ದಾರೆ. ಇದೇ ಕಾರಣಕ್ಕೆ ಎನ್ನುವಂತೆ FMCG ವಲಯದ ದೊಡ್ಡ ಕಂಪನಿ ಎನಿಸಿಕೊಂಡಿರುವ ಹಿಂದೂಸ್ತಾನ್ ಯೂನಿಲಿವರ್ ಕಳೆದ 2 ವರ್ಷದಲ್ಲಿ ಹೊರತಂದಿರುವ ಪ್ರಾಡಕ್ಟ್ ಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಉತ್ಪನ್ನಗಳು ಪ್ರೀಮಿಯಂ ವಿಭಾಗದಲ್ಲಿವೆ.

COVID ಗಿಂತ ಮೊದಲು, FMCG ಕಂಪನಿಗಳು ಹೊಸ ರೀತಿಯ ಉತ್ಪನ್ನಗಳತ್ತ ಜನರನ್ನು ಆಕರ್ಸಿಸಲು ಮಿಡಿಯಂ ಮತ್ತು ಲೋವರ್ ಪ್ರೈಸ್ ವಿಭಾಗದಲ್ಲಿ ವಿವಿಧ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಬಂದಿದ್ದವು. ಪ್ರೀಮಿಯಂ ಪ್ರಾಡಕ್ಟ್ ಗಳು ಮಾಸ್ ಲೇವಲ್ ಪ್ರಾಡಕ್ಟ್ ಗಿಂತ ಹೆಚ್ಚಿನ ಸೇಲ್ ಹೊಂದಿದ್ದರಿಂದ ಈ ಕಂಪನಿಗಳು ತಮ್ಮ ಸ್ಟ್ರಾಟಜಿ ಬದಲಾಯಿಸಿಕೊಂಡವೆ? ಈ ವಿಚಾರ ಸಹ ಮುಖ್ಯವಾಗುತ್ತದೆ. ಏಕೆಂದರೆ ಈಗ, ನಗರ ಪ್ರದೇಶಗಳಲ್ಲಿ, ಹೆಚ್ಚಿನ ಪ್ರಾಡಕ್ಟ್ ಗಳು ಆನ್‌ಲೈನ್‌ನಲ್ಲಿಯೇ ಮನೆಗೆ ಬರುತ್ತವೆ. ಇದೇ ಕಾರಣ ಎನ್ನುವಂತೆ Zomato ಸಿಇಒ ದೀಪಿಂದರ್ ಗೋಯಲ್ ಇತ್ತೀಚೆಗೆ ಮಾತನಾಡುತ್ತ ಅವರದ್ದೇ ಕಂಪನಿ ಬ್ಲಿಂಕಿಟ್ ತನ್ನ ಮಾತೃ ಕಂಪನಿ ಅಂದ್ರೆ ಝೊಮ್ಯಾಟೋಗಿಂತಲೂ ದೊಡ್ಡದಾಗಲಿದೆ ಅಂದಿದ್ದಾರೆ. ಏಕೆಂದರೆ ಜನರು ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಬಹುದು ಅಥವಾ ಮಾಡದಿರಬಹುದು, ಆದರೆ ಜನ ಖಂಡಿತವಾಗಿಯೂ ಇತರ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿಯೇ ಮಾಡುತ್ತಾರೆ.

ಈ ಎಲ್ಲಾ ದೃಷ್ಟಿಯಿಂದ ಯೋಚಿಸಿದಾಗ FMCG ಕಂಪನಿಗಳು ತಮ್ಮ ಮಾಡೆಲ್ ಬದಲಾಯಿಸುತ್ತಿವೆಯೇ? ಗ್ರಾಮೀಣ ಪ್ರದೇಶಗಳಲ್ಲಿ ಬೆಳವಣಿಗೆ ಮತ್ತು ಬೇಡಿಕೆ ಲಿಮಿಟ್ ನಲ್ಲಿಯೇ ಉಳಿಯುತ್ತದೆಯೇ? ಅನ್ನೋದನ್ನು ನೋಡಬೇಕಿದೆ. ಷೇರು ಮಾರುಕಟ್ಟೆ ತಜ್ಞ ಅಂಬರೀಶ್ ಬಾಳಿಗಾ ಹೇಳುವಂತೆ, RBIಯ ಬುಲೆಟಿನ್, ರೂರಲ್ ಹಾಗೂ ಪ್ರೀಮಿಯಂ ಪ್ರಾಡಕ್ಟ್ ಗಳು ಮತ್ತು ಲೋವರ್ ಲೇವಲ್ FMCG ಪ್ರಾಡಕ್ಟ್ ಗಳ ನಡುವಿನ ಅಂತರವನ್ನು ಹೇಳಿದೆ. ಇನ್ನೊಂದು ಕಡೆ ಶ್ರೀಮಂತ ವರ್ಗ ಮತ್ತು ಬಡ ವರ್ಗದ ನಡುವಿನ ಆದಾಯದ ಬೆಳವಣಿಗೆ ನಡುವಿನ ಅಂತರವನ್ನು ಇದು ಹೇಳಿದೆ. FMCG ಕಂಪನಿಗಳು ಈಗಾಗಲೇ ತಮ್ಮ ಮಾರ್ಜಿನ್ ಕಾಪಾಡಿಕೊಳ್ಳಲು ‘ಬ್ರಿಡ್ಜ್ ಪ್ಯಾಕ್’ ಮೊರೆ ಹೋಗಿವೆ. ಅಂದರೆ ಪ್ಯಾಕೇಟ್ ನ ದರ ಮತ್ತು ಕ್ವಾಂಟಿಟಿ, ತೂಕ ಕಡಿಮೆ ಮಾಡಲಾಗುತ್ತಿದೆ. FMCG ಕಂಪನಿಗಳು ನಿರಂತರವಾಗಿ ದೊಡ್ಡ ದೊಡ್ಡ ಪ್ರಾಡಕ್ಟ್ ಗಳನ್ನು ಟಾರ್ಗೆಟ್ ಮಾಡಿಕೊಂಡೇ ಬಂದಿವೆ. ಬೇಡಿಕೆ ಹೆಚ್ಚಿರುವ ಪ್ರಾಡಕ್ಟ್ ಗಳ ಮೇಲೆ ಟಾರ್ಗೆಟ್ ಮಾಡಿಕೊಂಡೇ ಇವೆ. ಮಾರ್ಜಿನ್ ಮೇಲೆ ಇದು ಪ್ರೇಶರ್ ಕ್ರಿಯೇಟ್ ಮಾಡಬಹುದು. ಆದರೆ ಚುನಾವಣೆಯ ಸಂದರ್ಭದ ಖರೀದಿ ಅನ್ನೋ ಭರವಸೆ ಇಟ್ಟುಕೊಂಡಿವೆ. ಇದು ಎಫ್‌ಎಂಸಿಜಿ ವಲಯದ ಮೇಲೆ ಪಾಸಿಟಿವ್ ಪರಿಣಾಮ ಉಂಟುಮಾಡಲಿದೆ. ಈ ವರ್ಷ ಮುಂಗಾರು ಮಳೆ ಸರಿಯಾಗಿ ಆದರೆ ಗ್ರಾಮೀಣ ಪ್ರದೇಶದ ಬೇಡಿಕೆಯಲ್ಲಿಯೂ ಹೆಚ್ಚಳ ಆಗಬಹುದು.

ಆದರೆ ಎಲ್ಲದಕ್ಕಿಂತ ಮುಖ್ಯವಾದ ಪ್ರಶ್ನೆ ಏನೆಂದರೆ ಈ ಬದಲಾವಣೆ ಗಮನಿಸಿಕೊಂಡರೆ FMCG ಕಂಪನಿಗಳು ಈಗ ತಮ್ಮ ಸ್ಟ್ರಾಟಜಿ ಹೇಗೆ ಸಿದ್ಧಪಡಿಸಿಕೊಳ್ಳಬೇಕು? ಎನ್ನುವುದೇ ಆಗಿದೆ. 2024 ರ ಹಣಕಾಸು ವರ್ಷದಲ್ಲಿ ಎಫ್‌ಎಂಸಿಜಿ ವಲಯವು 19% ನಷ್ಟು ಲಾಭ ನೀಡಿದೆ ಎಂದು ಬಾಳಿಗಾ ಹೇಳುತ್ತಾರೆ. ಇದರಲ್ಲಿ ದೊಡ್ಡ ಪಾಲು ಪಾನೀಯ ವಲಯಕ್ಕೆ ಸೇರುತ್ತದೆ. ಮುಂದಿನ ಹಣಕಾಸು ವರ್ಷದಲಲ್ಲಿ ಈ ಸೆಕ್ಟರ್ ಗೆ ಸಂಬಂಧಿಸಿದ ಇತರೆ ಸೆಕ್ಟರ್ ಸ್ಟಾಕ್ ಗಳು ಪರ್ಫಾರ್ಮೆನ್ಸ್ ತೋರುವ ನಿರೀಕ್ಷೆ ಹೆಚ್ಚಿದೆ. ಲಾಂಗ್ ಟರ್ಮ್ ದೃಷ್ಟಿಕೋನದಿಂದ ಹೇಳಬೇಕು ಅಂದ್ರೆ ಪ್ರೀಮಿಯಂ ಪ್ರಾಡೆಕ್ಟ್ ಗಳ ಹೆಚ್ಚಿನ ಬೆಳವಣಿಗೆ ಕಂಪನಿಗಳ ಮಾರ್ಜಿನ್‌ ಸುಧಾರಿಸಬಹುದು. ಲೋವರ್ ಲೇವಲ್ ಪ್ರಾಡಕ್ಟ್ ಮಾರ್ಕೆಟ್ ಬೇಡಿಕೆ ಪಡೆದುಕೊಂಡರೆ ಆದಾಯ ಮತ್ತು ಲಾಭಾಂಶ ಹೆಚ್ಚಾಗಲಿದೆ. ಒಂದು ವರ್ಷದ ದೃಷ್ಟಿಕೋನ ಇಟ್ಟುಕೊಂಡರೆ ಐಟಿಸಿ 525 ರೂಪಾಯಿ, HUL 2850 ರೂಪಾಯಿ ಮತ್ತು ಡಾಬರ್‌ನಲ್ಲಿ 640 ರೂಪಾಯಿ ಟಾರ್ಗೆಟ್ ನಲ್ಲಿ ಹೂಡಿಕೆ ಮಾಡಬಹುದು ಅಂತಾ ಬಾಳಿಗಾ ಹೇಳ್ತಾರೆ.

ಒಟ್ಟಾರೆಯಾಗಿ, ಎಫ್‌ಎಂಸಿಜಿ ಕಂಪನಿಗಳು ಹೆಚ್ಚಿನ ಬೇಡಿಕೆ ಇರುವ ಪ್ರಾಡಕ್ಟ್ ಗಳ ಮೇಲೆ ತಮ್ಮ ಫೋಕಸ್ ಹೆಚ್ಚಿಸಬಹುದು. ಸಾರ್ವತ್ರಿಕ ಚುನಾವಣೆ ಮತ್ತು ಸರಿಯಾದ ಮಾನ್ಸೂನ್‌ ಇದ್ದಲ್ಲಿ ಜನರ ಖರ್ಚು ವೆಚ್ಚ ಹೆಚ್ಚಾಗಲಿದ್ದು ಇದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ ಒಂದು ವರ್ಷದ ಅವಧಿ ಇಟ್ಟುಕೊಂಡು ಕುಸಿದಿರುವ ಸ್ಟಾಕ್ ಮೇಲೂ ಹೂಡಿಕೆ ಮಾಡಬಹುದು.

Published: April 24, 2024, 12:22 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ