` what are the rules for surrender of insurance policy | ವಿಮೆ ಸರಂಡರ್ ನಿಯಮದಲ್ಲಿ ಭಾರೀ ಬದಲಾವಣೆ! | Money9 Kannada

ವಿಮೆ ಸರಂಡರ್ ನಿಯಮದಲ್ಲಿ ಭಾರೀ ಬದಲಾವಣೆ!

ಪಾಲಿಸಿ ಏನಾದ್ರೂ ಸಿಂಗಲ್ ಪ್ರೀಮಿಯಂ ಆಗಿದ್ದರೆ ಆಗ ಅದನ್ನ ಎರಡು ವರ್ಷದ ಬಳಿಕ ಸರಂಡರ್ ಮಾಡಬಹುದು. ಹೊಸ ನಿಯಮಗಳಡಿಯಲ್ಲಿ, ಮೂರನೇ ವರ್ಷದಲ್ಲಿ ಒಟ್ಟು ಪ್ರೀಮಿಯಂ ಮೊತ್ತದ ಶೇಕಡ 75 ರಷ್ಟನ್ನ ರೀಫಂಡ್ ಮಾಡಲಾಗುತ್ತದೆ. ಒಂದು ವೇಳೆ ಪಾಲಿಸಿಯ ಕೊನೆಯ ಎರಡು ವರ್ಷದಲ್ಲಿ ಸರಂಡರ್ ಮಾಡಿದರೆ ಆಗ ಶೇಕಡ 90 ರಷ್ಟು ಹಣ ಸಿಗುತ್ತದೆ.

ವಿಮಾ ನಿಯಂತ್ರಕ ಐಆರ್​ಡಿಎ, ಜೀವ ವಿಮಾ ಪಾಲಿಸಿಗಳ ಸರಂಡರ್ ವ್ಯಾಲ್ಯೂಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಮೆಚ್ಯುರಿಟಿಗೂ ಮೊದಲೇ ವಿಮಾ ಪಾಲಿಸಿಯನ್ನ ಕ್ಲೋಸ್ ಮಾಡಿದರೆ ಅದನ್ನು ಸರಂಡರ್ ಎಂದು ಕರೆಯಲಾಗುತ್ತದೆ. ನೀವು ಪಾಲಿಸಿಯನ್ನು ಸರಂಡರ್ ಮಾಡಿದ್ರೆ, ನೀವು ಪಾವತಿಸಿರುವ ಪ್ರೀಮಿಯಂನ ಒಂದು ಭಾಗ ಸಿಗುತ್ತದೆ. ಇದೇ ಸರಂಡರ್ ವ್ಯಾಲ್ಯೂ. ಏಪ್ರಿಲ್ 1 ರಿಂದ ಈ ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ.

ಹಾಗಾದರೆ ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದ ಹೊಸ ನಿಯಮಗಳೇನು? ಈ ನಿಯಮ ಬದಲಾವಣೆ ಯಾವ ಪರಿಣಾಮ ಬೀರುತ್ತದೆ? ವಿಮಾ ಪಾಲಿಸಿ ಖರೀದಿಸಿದಾಗ, ಯಾವ ಯಾವ ವಿಷಯಗಳನ್ನ ಮನಸ್ಸಿನಲ್ಲಿಟ್ಕೋಬೇಕು? ಇವೆಲ್ಲವನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ವಿಮೆ ಪಡೆದವರು, ಪಾಲಿಸಿಯನ್ನ ಸರಂಡರ್ ಮಾಡಿದರೆ ಅವರು ಪಾವತಿ ಮಾಡಿದ ಪ್ರೀಮಿಯಂ ನ ಬಹುಪಾಲು ಅವರಿಗೆ ವಾಪಸ್ ಸಿಗುವುದಿಲ್ಲ. ಹೀಗಾಗಿ ವಿಮೆ ಪಡೆದವರನ್ನು ಭಾರಿ ಪ್ರಮಾಣದ ನಷ್ಟದಿಂದ ರಕ್ಷಿಸುವುದಕ್ಕೆ ಸಾಂಪ್ರದಾಯಿಕ ಪಾಲಿಸಿಗಳ ಸರಂಡರ್ ವ್ಯಾಲ್ಯೂ ಹೆಚ್ಚು ಮಾಡುವ ಬಗ್ಗೆ ಐ ಆರ್ ಡಿ ಎ ಇತ್ತೀಚೆಗೆ ಪ್ರಸ್ತಾಪ ಮಾಡಿತ್ತು. ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಮೊದಲು, ನಾವು ಸರಂಡರ್ ವ್ಯಾಲ್ಯೂ ಸಂಬಂಧ ಈ ಮೊದಲಿದ್ದ ಹಳೆ ನಿಯಮಗಳ ಬಗ್ಗೆ ನೋಡೋಣ.

ಈವರೆಗೆ, ಜೀವ ವಿಮಾ ಕಂಪೆನಿಗಳು ಪಾಲಿಸಿ ಸರಂಡರ್ ಮಾಡುವುದಕ್ಕೆ ಎರಡು ಆಯ್ಕೆಗಳನ್ನ ಕೊಡುತ್ತಿದ್ದವು. ಮೊದಲನೆಯದು ಅಂದರೆ

ಗ್ಯಾರಂಟೀಡ್ ಸರಂಡರ್ ವ್ಯಾಲ್ಯೂ. ಇದರಲ್ಲಿ ನೀವು ಮೂರು ವರ್ಷ ಪೂರ್ಣಗೊಂಡ ಮೇಲೆ ಮಾತ್ರ ಪಾಲಿಸಿಯನ್ನ ಸರಂಡರ್ ಮಾಡಬಹುದು. ಒಂದು ವೇಳೆ ಮೂರು ವರ್ಷಕ್ಕೂ ಮೊದಲೇ ಪಾಲಿಸಿ ಸರಂಡರ್ ಮಾಡಿದರೆ, ಯಾವುದೇ ಹಣ ವಾಪಸ್ ಸಿಗುವುದಿಲ್ಲ. ಇನ್ನು ಎರಡನೇ ಆಯ್ಕೆಯಲ್ಲಿ, ಪಾಲಿಸಿ ಪಡೆದವರಿಗೆ ವಿಶೇಷ ಸರಂಡರ್ ವ್ಯಾಲ್ಯೂ ಸಿಗುತ್ತಿತ್ತು. ಈ ಮೌಲ್ಯವನ್ನ ಬೇಸಿಕ್ ಸಮ್ ಅಷ್ಯೂರ್ಡ್, ಒಟ್ಟು ಬೋನಸ್ ಮತ್ತು ಪಾವತಿ ಮಾಡಿರುವ ಪ್ರೀಮಿಯಂ ಮೊತ್ತದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಒಂದು ವೇಳೆ ಮೂರು ವರ್ಷಗಳವರೆಗೆ ಪ್ರೀಮಿಯಂ ಪಾವತಿ ಮಾಡಿದರೆ ಆಗ ಒಟ್ಟು ಠೇವಣಿ ಮಾಡಿರುವ ಮೊತ್ತದ ಶೇಕಡ 30 ರಷ್ಟನ್ನ ವಾಪಸ್ ಮಾಡಲಾಗುತ್ತಿತ್ತು. ನಾಲ್ಕರಿಂದ ಏಳು ವರ್ಷಗಳ ನಡುವೆ ಪಾಲಿಸಿಯನ್ನ ಸರಂಡರ್ ಮಾಡಿದರೆ ಶೇಕಡ 50 ರಷ್ಟು ಮೊತ್ತ ವಾಪಸ್ ಕೊಡಲಾಗುತ್ತಿತ್ತು.

ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದ ಹಾಗೆ, ವಿಮಾ ಕಂಪನಿಗಳು ಬೇರೆ ಬೇರೆ ನಿಯಮಗಳನ್ನು ಹೊಂದಿವೆ. ಐ ಆರ್ ಡಿ ಎ ಈಗ ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದಂತೆ ನಿಯಮಗಳನ್ನ ಫಿಕ್ಸ್‌ ಮಾಡಿದೆ. ಈಗ ನಿಮಗೆ ಪಾಲಿಸಿ ಸರಂಡರ್ ಮಾಡುವುದರಿಂದ ಗ್ಯಾರಂಟೀಡ್ ರಿಟರ್ನ್ಸ್ ಸಿಗುತ್ತದೆ. ಆದರೆ ಇದರಿಂದ ವಿಮೆ ಪಡೆದವರಿಗೆ ಅಷ್ಟೇನೂ ಅನುಕೂಲ ಆಗಲ್ಲ. ಹೊಸ ವ್ಯವಸ್ಥೆಯಲ್ಲಿ, ಹಳೆಯ ಪಾಲಿಸಿ ಇದ್ದರೆ ಆಗ ಸರಂಡರ್ ವ್ಯಾಲ್ಯೂ ಹೆಚ್ಚು ಸಿಗುತ್ತದೆ.

ಹೊಸ ನಿಯಮಗಳಡಿಯಲ್ಲಿ, ಎರಡನೇ ವರ್ಷದಲ್ಲಿ ಪಾಲಿಸಿ ಸರಂಡರ್ ಮಾಡಿದರೆ, ಒಟ್ಟು ಪ್ರೀಮಿಯಂ ನ ಶೇಕಡ 30 ರಷ್ಟನ್ನ ರೀಫಂಡ್ ಮಾಡಲಾಗುತ್ತದೆ. ಆದ್ರೆ, ನೀವು ಮೊದಲ ಎರಡು ಪ್ರೀಮಿಯಂ ಗಳನ್ನ ಡೆಪಾಸಿಟ್ ಮಾಡಿದ್ರೆ ಮಾತ್ರ ನಿಮಗೆ ಈ ಸರಂಡರ್ ವ್ಯಾಲ್ಯೂ ನ ಲಾಭ ಸಿಗೋದು. ಮೂರನೇ ವರ್ಷದಲ್ಲಿ ಪಾಲಿಸಿ ಸರಂಡರ್ ಮಾಡಿದ್ರೆ, ವಿಮಾ ಕಂಪನಿಯು ಒಟ್ಟು ಮೊತ್ತದ ಶೇಕಡ 35 ರಷ್ಟನ್ನ ಹಿಂದಿರುಗಿಸುತ್ತದೆ.

ನಾಲ್ಕರಿಂದ ಏಳನೇ ವರ್ಷದಲ್ಲಿ ವಿಮಾ ಪಾಲಿಸಿಯನ್ನ ಸರಂಡರ್ ಮಾಡಿದರೆ ಒಟ್ಟು ಪಾವತಿ ಮಾಡಿರೋ ಪ್ರೀಮಿಯಂ ಮೊತ್ತದ ಶೇಕಡ 50 ರಷ್ಟನ್ನ ಪಾಲಿಸಿ‌ ಪಡೆದವರಿಗೆ ಹಿಂದಿರುಗಿಸಲಾಗತ್ತದೆ. ಒಂದು ವೇಳೆ ನೀವೇನಾದರೂ ಪಾಲಿಸಿ ಮೆಚ್ಯೂರ್ ಆಗುವುದಕ್ಕೆ ಎರಡು ವರ್ಷಗಳಿರೋ ಹಾಗೆ, ಪಾಲಿಸಿಯನ್ನ ಸರಂಡರ್ ಮಾಡಿದ್ರೆ, ನಿಮಗೆ ಪಾವತಿ ಮಾಡಿರೋ ಪ್ರೀಮಿಯಂ ಮೊತ್ತದ ಶೇಕಡ 90 ರಷ್ಟು ವಾಪಸ್ ಸಿಗುತ್ತದೆ..

ಪಾಲಿಸಿ ಏನಾದ್ರೂ ಸಿಂಗಲ್ ಪ್ರೀಮಿಯಂ ಆಗಿದ್ದರೆ ಆಗ ಅದನ್ನ ಎರಡು ವರ್ಷದ ಬಳಿಕ ಸರಂಡರ್ ಮಾಡಬಹುದು. ಹೊಸ ನಿಯಮಗಳಡಿಯಲ್ಲಿ, ಮೂರನೇ ವರ್ಷದಲ್ಲಿ ಒಟ್ಟು ಪ್ರೀಮಿಯಂ ಮೊತ್ತದ ಶೇಕಡ 75 ರಷ್ಟನ್ನ ರೀಫಂಡ್ ಮಾಡಲಾಗುತ್ತದೆ. ಒಂದು ವೇಳೆ ಪಾಲಿಸಿಯ ಕೊನೆಯ ಎರಡು ವರ್ಷದಲ್ಲಿ ಸರಂಡರ್ ಮಾಡಿದರೆ ಆಗ ಶೇಕಡ 90 ರಷ್ಟು ಹಣ ಸಿಗುತ್ತದೆ.

ಹಾಗಿದ್ದರೆ ಈ ಬದಲಾವಣೆ ಏನು ಪರಿಣಾಮ ಬೀರುತ್ತದೆ? ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರಾದ ಜಿತೇಂದ್ರ ಸೋಲಂಕಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೊಸ ನಿಯಮಾವಳಿಗಳಡಿ ಗ್ಯಾರಂಟೀಡ್ ಸರಂಡರ್ ವ್ಯಾಲ್ಯೂ ಗೆ ಅವಕಾಶ ಇದೆ. ಆದರೆ ಇದರಿಂದ ಕೂಡ‌ ವಿಮೆ ಪಡೆದವರಿಗೆ ಹೆಚ್ಚಿನ ಅನುಕೂಲ ಆಗಲ್ಲ. ಹೊಸ ನಿಯಮಗಳು, ಹೆಚ್ಚು ಕಡಿಮೆ, ಹಳೆಯ ರೀತಿಯಲ್ಲೇ ಇದೆ. ಮೊದಲ ಪ್ರಸ್ತಾವನೆಯಲ್ಲಿ, ನಿರ್ದಿಷ್ಟ ಸಮಯದ ಬಳಿಕ ಸರಂಡರ್ ಚಾರ್ಜ್ ತೆಗೆದು ಹಾಕಬೇಕಾ? ಎನ್ನುವುದರ ಬಗ್ಗೆ ವಿಮಾ ನಿಯಂತ್ರಕ ಪ್ರಾವಿಷನ್ ಮಾಡಿತ್ತು. ಆದರೆ, ವಿಮಾ ವಲಯದ ಲಾಬಿಯ ಕಾರಣದಿಂದ, ಈ ಪ್ರಸ್ತಾವನೆಯನ್ನ ಹಿಂಪಡೆಯಲಾಯಿತು. ಒಂದು ವೇಳೆ ಈ ಹಳೆಯ ಪ್ರಸ್ತಾವನೆ ಅನುಷ್ಠಾನ ಆಗಿದ್ದಿದ್ರೆ, ನಿರ್ದಿಷ್ಟ ಸಮಯದ ಬಳಿಕ ಪೂರ್ತಿ ಪ್ರೀಮಿಯಂ ಮೊತ್ತವನ್ನ ಸರಂಡರ್ ವ್ಯಾಲ್ಯೂ ಆಗಿ ಪಡೆಯಬಹುದಾಗಿತ್ತು. ಆದರೆ, ಈಗ ಪಾಲಿಸಿ ಮೆಚ್ಯೂರ್ ಆಗಕ್ಕೆ ಇನ್ನೊಂದೇ ವರ್ಷ ಬಾಕಿ ಇದ್ದರೂ ನಾವು ಪ್ರೀಮಿಯಂ ಆಗಿ ಪಾವತಿಸಿದ ಮೊತ್ತದ ಶೇಕಡ 90 ರಷ್ಟನ್ನ ಮಾತ್ರ ರೀಫಂಡ್ ಸಿಗುತ್ತದೆ. ಒಟ್ಟಾರೆಯಾಗಿ, ಐಆರ್​ಡಿಎನ ಹೊಸ ನಿಯಮಗಳಿಂದಾಗಿ, ವಿಮಾ ಕಂಪೆನಿಗಳಿಗೆ ಲಾಭವಾಗಲಿದೆ..

ತಪ್ಪಾಗಿ ವಿಮೆ ಮಾರಾಟ ಅಂದ್ರೆ ಸುಳ್ಳು ಹೇಳಿ, ಜನರನ್ನ ನಂಬಿಸಿ ಅವರು ವಿಮೆ ಖರೀದಿ ಮಾಡುವಂತೆ ಮಾಡಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಸರ್ಕಾರ ಕೂಡ ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದೆ. 80 ವರ್ಷ ಮೇಲ್ಪಟ್ಟವರಿಗೂ ಜೀವ ವಿಮೆ ಮಾರಾಟ ಮಾಡಿದ ನಿದರ್ಶನಗಳಿವೆ.‌ ಭಾರಿ ಕಮಿಷನ್ ಆಸೆಗೆ‌ ಈ ರೀತಿ ಮಾಡಲಾಗುತ್ತಿದೆ. ಸರಂಡರ್ ಚಾರ್ಜಸ್ ಏನಾದ್ರೂ ಐಆರ್​ಡಿಎಐ ಕಡಿತ ಮಾಡಿದರೆ ವಿನಾ ಕಂಪೆನಿಗಳು ಸಹಜವಾಗಿಯೇ ಏಜೆಂಟರ ಕಮಿಷನ್ ಗೆ ಕತ್ತರಿ ಹಾಕಲಾಗುತ್ತಿತ್ತು. ಇದರಿಂದ ವಿಮೆಯ ಮಾರಾಟದಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತಿತ್ತು. ಸರಂಡರ್ ವ್ಯಾಲ್ಯೂ ಹೆಚ್ಚು ಮಾಡಿರುವುದರಿಂದ ಆಗಬಹುದಾದ ಅನುಕೂಲ ಏನೆಂದರೆ ವಿಮೆಯ ತಪ್ಪು ಮಾರಾಟ ಅಥವಾ ಸುಳ್ಳು ಹೇಳಿ ಪಾಲಿಸಿ ಮಾರಾಡ ಮಾಡುವುದನ್ನು ಕಡಿಮೆ ಮಾಡಬಹುದು. ಈ ವಿಚಾರವಾಗಿ IRDAI ಹಿಂದೆ ಹೆಜ್ಜೆ ಇಟ್ಟರೆ ಆಗ ತಪ್ಪು ಮಾಹಿತಿ ಮಾರಾಟದ ಪ್ರಕರಣಗಳು ಹೆಚ್ಚಾಗುತ್ತದೆ ಇದರ ಪರಿಣಾಮಗಳನ್ನ ವಿಮೆ ಪಡೆದವರೆ ಎದುರಿಸಬೇಕಾಗುತ್ತದೆ. .‌

ಇಂತಹ ಸನ್ನಿವೇಶದಲ್ಲಿ, ಚೆನ್ನಾಗಿ ಯೋಚನೆ ಮಾಡಿ, ನಂತರವಷ್ಟೇ ಜೀವ ವಿಮಾ ಪಾಲಿಸಿ ಖರೀದಿಸಿ. ಯಾವುದೋ ಒತ್ತಡಕ್ಕೆ ಮಣಿದು, ಪಾಲಿಸಿ ಖರೀದಿಸಬೇಡಿ.‌ ಮೆಚ್ಯುರಿಟಿಗೂ ಮೊದಲೇ ನೀವು ವಿಮಾ ಪಾಲಿಸಿಯನ್ನ ಕ್ಲೋಸ್ ಮಾಡಿದ್ರೆ, ನೀವು ನಷ್ಟ ಅನುಭವಿಸಬೇಕಾಗತ್ತದೆ. ನೀವು ಪಾವತಿ ಮಾಡಿರುವ ಮೊತ್ತದ ಅಲ್ಪ ಭಾಗ ಮಾತ್ರ ನಿಮಗೆ ಸಿಗತ್ತೆ. ಪಾಲಿಸಿ ಸರಂಡರ್ ಮಾಡಕ್ಕೂ ಮೊದಲು, ಅದಕ್ಕೆ ಸಂಬಂಧಿಸಿದ ನಿಯಮಗಳನ್ನ ಸಂಪೂರ್ಣವಾಗಿ, ಸರಿಯಾಗಿ ಅರ್ಥ ಮಾಡಿಕೊಳ್ಳಿ.

Published: April 24, 2024, 11:27 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ