ಷೇರು ಮಾರ್ಕೆಟ್ 2023ರಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಈ ಸಮಯದಲ್ಲಿ ಹೂಡಿಕೆದಾರರು ಉತ್ತಮ ಹಣ ಗಳಿಸಿದ್ದಾರೆ. ನಿಫ್ಟಿ ವರ್ಷವಿಡೀ ಸುಮಾರು ಶೇಕಡಾ 20ರಷ್ಟು ಆದಾಯ ನೀಡಿದೆ. ಇದು 2021ರ ಬಳಿಕ ಅತ್ಯಧಿಕವಾಗಿದೆ. 2023ರಂತೆ 2024ರಲ್ಲೂ ಈ ಪ್ರದರ್ಶನ ಮುಂದುವರಿಯುತ್ತಾ? 2024ರಲ್ಲೂ ಶೇಕಡಾ 20ರಷ್ಟು ಆದಾಯವನ್ನು ನಿರೀಕ್ಷಿಸಬಹುದಾ.? 2024ರಲ್ಲಿ ಮಾರುಕಟ್ಟೆಗೆ ವೇಗ ಕೊಡುವ ಅಂಶಗಳು ಯಾವುವು? ಮಾರುಕಟ್ಟೆಯ ದೃಷ್ಟಿಕೋನಗಳೇನು? ಷೇರು ಮಾರುಕಟ್ಟೆಗೆ ಪ್ರವೇಶಿಸಲು ಇದು ಸೂಕ್ತ ಸಮಯವಾ? ಇದೆಲ್ಲದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.
ಕಳೆದ 8 ವರ್ಷಗಳ ಅವಧಿಯಲ್ಲಿ ನಿಫ್ಟಿ ನಿರಂತರವಾಗಿ ಪಾಸಿಟಿವ್ ರಿಟರ್ನ್ಸ್ ನೀಡುತ್ತಾ ಬಂದಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶ ಸಹ 2023ರಲ್ಲಿ ಮಹತ್ವದ ಪಾತ್ರ ವಹಿಸಿದೆ. 5 ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದುಕೊಂಡಿದ್ದು, ನಿರಂತರವಾಗಿ ಮ್ಯೂಚುವಲ್ ಫಂಡ್ಗಳ ಮೇಲೆ ಹೂಡಿಕೆ ಮತ್ತು ಯುನೈಟೆಡ್ ಸ್ಟೇಟ್ಸ್ ನ ಬಡ್ಡಿ ಕಡಿತದ ವಿಚಾರಗಳು ಪರಿಣಾಮ ಬೀರಿದವು. ಇದು ಫಾರಿನ್ ಇನ್ ಸ್ಟಿಟ್ಯೂಶನಲ್ ಇನ್ವೆಸ್ಟರ್ ಭಾರತದ ಮಾರ್ಕೆಟ್ ಕಡೆ ವಾಪಸ್ ಬರಲು ಸಾಧ್ಯವಾಯಿತು. ಇನ್ನೊಂದು ಪ್ರಮುಖ ವಿಚಾರ ಏನೆಂದ್ರೆ 2023ರಲ್ಲಿ ದೊರೆತ ಒಟ್ಟು ರಿಟರ್ನ್ಸ್ನ ಪೈಕಿ ಶೇ. 13 ರಷ್ಟು ರಿಟರ್ನ್ಸ್ ಕೊನೆಯ 2 ತಿಂಗಳಿನಲ್ಲಿ ಬಂದವು. ಡಿಸೆಂಬರ್ ತಿಂಗಳು ಎಲ್ಲ ತಿಂಗಳಿಗಿಂತ ಅತಿ ಹೆಚ್ಚಿನ ರಿಟರ್ನ್ಸ್ ತಂದುಕೊಟ್ಟಿತು.
2024 ರಲ್ಲಿ ಮಾರುಕಟ್ಟೆ ಮತ್ತೆ ಶೇಕಡಾ 20ರಷ್ಟು ರಿಟರ್ನ್ ನೀಡುತ್ತಾ? ಮಾರ್ಕೆಟ್ನ ವ್ಯಾಲ್ಯೂವೇಷನ್ ಏನು? ಸದ್ಯ ನಿಫ್ಟಿ ಸುಮಾರು 23ರಷ್ಟು ಪಿಇ ರೇಷ್ಯೋ ಅಂದ್ರೆ ಪ್ರೈಸ್ ಟು ಅರ್ನಿಂಗ್ಸ್ ರೇಷ್ಯೋದಲ್ಲಿ ಟ್ರೇಡಿಂಗ್ ಮಾಡುತ್ತಿದೆ.. ಇದು ಕಳೆದ 10 ವರ್ಷಗಳ ಸರಾಸರಿ ಪಿಇ ಮಲ್ಟಿಪಲ್ಗಿಂತ ಹೆಚ್ಚಾಗಿದೆ.. ಕೋಟಕ್ ಸೆಕ್ಯೂರಿಟಿಸ್ನ ವರದಿಯ ಪ್ರಕಾರ, ನಿಫ್ಟಿಯ ವ್ಯಾಲ್ಯೂವೇಷನ್ ಶೇಕಡಾ 20ರಷ್ಟು ಜಾಸ್ತಿಯಾಗಿದೆ.. ಇದು ಮುಂದಿನ 6ರಿಂದ 9 ತಿಂಗಳುಗಳಲ್ಲಿ ಮಾರುಕಟ್ಟೆ ಬಲವರ್ಧನೆಗೆ ಸಾಕ್ಷಿಯಾಗಬಹುದು.. ಮಾರುಕಟ್ಟೆಯು ಮುಂದಿನ ಕೆಲ ತಿಂಗಳುಗಳ ಕಾಲ ಸದ್ಯದ ಪರಿಸ್ಥಿತಿಯಲ್ಲೇ ಮುಂದುವರಿಯುವ ಸೂಚನೆ ಇದೆ. ಈ ವರ್ಷ ಸಾಂಸ್ಥಿಕ ಹೂಡಿಕೆದಾರರಿಗಿಂತ ಫಂಡಮೆಂಟಲ್ಗಳ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ.
ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳ ಮಾರುಕಟ್ಟೆ ಮೌಲ್ಯಮಾಪನ ದುಬಾರಿಯಾಗಿವೆ ಅನ್ನೋದು ಮಾರುಕಟ್ಟೆ ತಜ್ಞ ಅಂಬರೀಷ್ ಬಾಳಿಗಾರ ಅಭಿಪ್ರಾಯವಾಗಿದೆ.. ಮಾರುಕಟ್ಟೆ ಯಾವಾಗ ಮತ್ತು ಎಷ್ಟು ಗಮನಾರ್ಹ ಬದಲಾವಣೆಯಾಗುತ್ತೆ ಅನ್ನೋದನ್ನ ಊಹಿಸೋದು ಸವಾಲಾಗಿದೆ.. ಆದ್ರೆ ಕಂಪನಿಗಳ ಲಾಭದ ಬೆಳವಣಿಗೆಯನ್ನು ಆಧರಿಸಿ ಮಾರುಕಟ್ಟೆ ಮುಂದೆ ಸಾಗುತ್ತಿದೆ.. ಆದ್ದರಿಂದ ಗಮನಾರ್ಹ ಲಾಭದ ಬಗ್ಗೆ ಕಾಳಜಿ ಇದೆ.. ಮತ್ತು ನಿಫ್ಟಿ 2024ರಲ್ಲಿ 20,000 ಸಾವಿರ ಅಥವಾ ಅದಕ್ಕಿಂತ ಕಡಿಮೆ ಮಟ್ಟವನ್ನು ತಲುಪಬಹುದು..
ಕೊನೆಯದಾಗಿ, ಸದ್ಯದ ಮಾರ್ಕೆಟ್ ವ್ಯಾಲ್ಯೂವೇಷನ್ ಜಾಸ್ತಿಯಿದೆ. ಹಾಗಾದ್ರೆ ಮಾರುಕಟ್ಟೆಗೆ ಪ್ರವೇಶಿಸಲು ಇದು ಸೂಕ್ತ ಸಮಯನಾ..? ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ದಿನನಿತ್ಯದ ಆಟವಲ್ಲ.
ದೀರ್ಘಾವಧಿ ಹೂಡಿಕೆ ಮಾಡಲು ಮನಿ9ನಲ್ಲಿ ಸಲಹೆ ನೀಡುತ್ತಿರುತ್ತೇವೆ.. ಇದು ಮಾರ್ಕೆಟ್ಗೆ ಪ್ರವೇಶಿಸಲು ಸಕಾಲನಾ..? ಸದ್ಯ 10 ವರ್ಷದ ಸರಾಸರಿ ವ್ಯಾಲ್ಯೂವೇಷನ್ಗಿಂತ ಹೆಚ್ಚಿನ ಟ್ರೇಡಿಂಗ್ ನಡೀತಾ ಇದ್ಯಾ.? ಈ ಪ್ರಶ್ನೆಗಳಿಗೆ ಉತ್ತರಿಸಲು 2024ರ ಮಾರುಕಟ್ಟೆಗೆ ವೇಗ ನೀಡುವ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಂದರೆ ಈ ವರ್ಷ ಮಾರ್ಕೆಟ್ಗೆ ಸಂಬಂಧಿಸಿ ಯಾವೆಲ್ಲಾ ಘಟನೆಗಳು ನಡೆಯಲಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು.
2024 ರಲ್ಲಿ ಮಾರುಕಟ್ಟೆಗೆ 3ರಿಂದ 4 ಮಹತ್ವದ ಘಟನೆಗಳಿವೆ.. ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ, ಯುಎಸ್ ಫೆಡರಲ್ ರಿಸರ್ವ್ ನಿಂದ ಸಂಭಾವ್ಯ ಬಡ್ಡಿದರ ಕಡಿತ, ಹಣದುಬ್ಬರ ಮೇಲೆ ಪರಿಣಾಮ ಬೀರುವ ಕಚ್ಚಾ ತೈಲಗಳ ಬೆಲೆಗಳ ಏರಿಳಿತ, ಆರ್ಥಿಕ ಬೆಳವಣಿಗೆ ಮತ್ತು ಕಾರ್ಪೊರೇಟ್ ಅರ್ನಿಂಗ್ಸ್, ಮತ್ತು 2023ರ ಕೊನೆಯ ಎರಡು ತಿಂಗಳಲ್ಲಿ ಸುಮಾರು 75,000 ಕೋಟಿಯಷ್ಟು ಗಮನಾರ್ಹ ಷೇರು ಹೂಡಿಕೆಯ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಚುಟುವಟಿಕೆ. ವಿದೇಶಿ ಹೂಡಿಕೆದಾರರು ಈ ವರ್ಷ ಖರೀದಿ ಮುಂದುವರಿಸುತ್ತಾರೆಯೇ ಎನ್ನುವ ಪ್ರಶ್ನೆ ಸಹ ಇದೆ.
ಈಗ 2024ರ ಔಟ್ ಲುಕ್ ಕುರಿತು ಮಾತನಾಡೋಣ.. ಮಾರ್ಕೆಟ್ ವ್ಯಾಲುವೇನ್ ಹೈ ಇದ್ದಾಗ ಕೂಡ ನೆಸ್ಲೆ, ಬ್ರಿಟಾನಿಯಾ ಮುಂತಾದ ಆಯ್ದ ಷೇರುಗಳಲ್ಲಿ ಉತ್ತಮ ಆದಾಯದ ನಿರೀಕ್ಷೆ ಇದೆ ಅಂತ ಸ್ಟಾಕ್ ಮಾರ್ಕೆಟ್ ಎಕ್ಸ್ ಪರ್ಟ್ ಸಂತೋಷ್ ಸಿಂಗ್ ರ ಸಲಹೆಯಾಗಿದೆ.. ನಿಫ್ಟಿ ಇಂಡೆಕ್ಸ್ ಗೆ ಸಂಬಂಧಿಸಿ ಹೇಳೋದಾದ್ರೆ 21,500 ಮತ್ತು 20,300 ಈ ರಿಟರ್ನ್ಸ್ ನೀಡೋದ್ರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದಾದ ಬಳಿಕ 21, 600 ಅದರ ಜತೆಗೆ 21,900 ಮತ್ತು 22, 400 ಸಹ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅವರು ಹೇಳುತ್ತಾರೆ.
ಮತ್ತೊಬ್ಬ ಮಾರ್ಕೆಟ್ ಎಕ್ಸ್ ಪರ್ಟ್ ರವಿ ಸಿಂಗ್ ಪ್ರಕಾರ, ಲಾರ್ಜ್ ಕ್ಯಾಪ್ ಮತ್ತು ಐಟಿ ಸ್ಟಾಕ್ ಗಳನ್ನು ಹೊರತುಪಡಿಸಿ, ಆಯ್ದ ಸಣ್ಣ ಮತ್ತು PSU ಷೇರುಗಳಲ್ಲಿ ಶೇಕಡಾ 25ರಷ್ಟು ಆದಾಯದ ನಿರೀಕ್ಷೆ ಇದೆ.. ಮಾರುಕಟ್ಟೆಯು 20,500ರ ಆಸುಪಾಸಿನಲ್ಲಿ ನೆಲೆ ಕಂಡುಕೊಂಡಿದ್ದು, ಇದು ಶೇಕಡಾ 5-10ಕ್ಕಿಂತ ಹೆಚ್ಚಿನ ಕುಸಿತಕ್ಕೆ ಕಾರಣವಾಗಲ್ಲ ಅನ್ನೋದನ್ನ ಸೂಚಿಸುತ್ತೆ.. ಹೀಗಾಗಿ ಶೇಕಡಾ 60ರಷ್ಟು ಹೂಡಿಕೆಯನ್ನು ಈಗಲೇ ಮಾಡಬಹುದು.. ಶೇಕಡಾ 3-5ರಷ್ಟು ಕುಸಿತದಲ್ಲಿ ಶೇಕಡಾ 20ರಷ್ಟು ಮತ್ತು ಮುಂದಿನ ಶೇಕಡಾ 3ರಷ್ಟು ಕುಸಿತದಲ್ಲಿ ಉಳಿದ ಶೇಕಡಾ 20ರಷ್ಟು ಹೂಡಿಕೆ ಮಾಡಬಹುದು ಅಂತ ಅವರು ಹೇಳುತ್ತಾರೆ.
ಒಟ್ಟಾರೆಯಾಗಿ, 2024ನೇ ವರ್ಷವು 2023ರಂತೆ ಮಾರ್ಕೆಟ್ ಗೆ ಅನುಕೂಲಕರವಾಗಿರೋದಿಲ್ಲ ಎಂದೇ ಹೇಳಬೇಕಿದೆ. ಹೆಚ್ಚಿನ ಮಟ್ಟದಲ್ಲಿ ಭಾರೀ ಲಾಭ ತೆಗೆದುಕೊಳ್ಳುವ ಬಗ್ಗೆಯೂ ವಿಶ್ಲೇಷಿಸಲಾಗಿದೆ. ಅದಲ್ಲದೇ ಆಯ್ದ ಷೇರುಗಳಲ್ಲಿ ಉತ್ತಮ ರಿಟರ್ನ್ಸ್ ನ ಸಾಧ್ಯತೆ ಇದೆ.. ಆದ್ದರಿಂದ ಆಯ್ದ ಬ್ಲೂ ಚಿಪ್ ಸ್ಟಾಕ್ ಗಳ ಕುಸಿತದ ವಿರುದ್ಧ ರಕ್ಷಿಸಲು ಮ್ಯೂಚುವಲ್ ಫಂಡ್ ಗಳು ಅಥವಾ ಇಂಡೆಕ್ಸ್ ಫಂಡ್ ಗಳ ಮೂಲಕ ನಿಮ್ಮ ಹೂಡಿಕೆಯ ಕಾರ್ಯತಂತ್ರವನ್ನು ರೂಪಿಸಿಕೊಳ್ಳಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ