` what are the investment opportunities in sugar stocks | ಶುಗರ್ ಸೆಕ್ಟರ್​ ಮೇಲೆ ಹೂಡಿಕೆಗೆ ಇದು ಸಕಾಲವೆ? | Money9 Kannada

ಶುಗರ್ ಸೆಕ್ಟರ್​ ಮೇಲೆ ಹೂಡಿಕೆಗೆ ಇದು ಸಕಾಲವೆ?

ವಿಶ್ವದಲ್ಲೇ ಸಕ್ಕರೆ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಎರಡನೇ ಅತಿದೊಡ್ಡ ದೇಶ ಬ್ರೆಜಿಲ್. ದೇಶೀಯ ಬಳಕೆ 280 ಲಕ್ಷ ಟನ್ ಇದ್ದು, 50 ಲಕ್ಷ ಟನ್‌ಗಳಷ್ಟು ಸಕ್ಕರೆ ಪ್ರತಿ ವರ್ಷ ಸಂಗ್ರಹವಾಗುತ್ತದೆ. ಈ ವರ್ಷ ಸುಮಾರು 100 ಲಕ್ಷ ಟನ್ ಹೆಚ್ಚುವರಿ ಲಭ್ಯತೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸಕ್ಕರೆ ಲಭ್ಯತೆ ಹೆಚ್ಚಳವಾಗಿರುವುದರಿಂದ, ಎಥನಾಲ್ ಬ್ಲೆಂಡಿಂಗ್ ಬೇಡಿಕೆಯನ್ನು ಸಹಜವಾಗಿಯೇ ಉದ್ಯಮ ಹೆಚ್ಚಳ ಮಾಡಿದೆ.

2023-24 ರ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ ಕಂಡಿದೆ. ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಶನ್ ಐಎಸ್‌ಎಂಎ ಪ್ರಕಾರ, 223 ಲಕ್ಷ ಟನ್ ಸಕ್ಕರೆಯನ್ನು ಫೆಬ್ರವರಿ 15 ರ ವೇಳೆಗೆ ಇಡೀ ದೇಶದಲ್ಲಿ ಉತ್ಪಾದನೆ ಮಾಡಲಾಗಿದೆ. ಈ ವರ್ಷ ಎಥನಾಲ್ ಉತ್ಪಾದನೆಗೆ ಸಂಬಂಧಿಸಿ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದರೂ, ಸಕ್ಕರೆ ಉತ್ಪಾದನೆಯಲ್ಲಿ 2.5 ಪರ್ಸೆಂಟ್‌ ಇಳಿಕೆ ಕಂಡುಬಂದಿದೆ. ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ಉತ್ಪಾದನೆಗೆ ಸಂಬಂಧಿಸಿ ಸಕ್ಕರೆ ವರ್ಷ ಎಂದು ಕರೆಯಲಾಗುತ್ತದೆ.

ಇಡೀ ಸಕ್ಕರೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ 330.5 ಲಕ್ಷ ಟನ್‌ಗಳಿಗೆ ಕುಸಿಯಲಿದೆ. ಅಂದರೆ, 10 ಪರ್ಸೆಂಟ್ ಕುಸಿಯಲಿದೆ ಎಂದು ISMA ಆತಂಕ ವ್ಯಕ್ತಪಡಿಸಿದೆ. ಆದರೆ, ಸೀಸನ್‌ನ ಆರಂಭದಲ್ಲಿನ ಅಂದಾಜು 291.5 ಲಕ್ಷ ಟನ್‌ಗೆ ಹೋಲಿಸಿದರೆ, ಈ ಅಂಕಿ ಸಂಖ್ಯೆ ಉತ್ತಮವೇ ಇದೆ. ಸಕ್ಕರೆ ಉತ್ಪಾದನೆಯಲ್ಲಿ ಕುಂಠಿತವಾದರೆ ಅದರ ಪರಿಣಾಮ ಏನಾಗುತ್ತದೆ? ಎನ್ನುವುದು ಬಹಳ ಮುಖ್ಯ. ಎಥನಾಲ್ ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮ ಏನಿದೆ? ಈ ವಲಯದಲ್ಲಿ ಯಾವ ಸವಾಲುಗಳಿವೆ? ಭವಿಷ್ಯ ಹೇಗಿದೆ? ಈ ವಲಯದಲ್ಲಿ ಹೂಡಿಕೆಗೆ ಅವಕಾಶ ಇದೆಯೇ? ಎಲ್ಲವನ್ನು ತಿಳಿಯೋಣ.

ವಿಶ್ವದಲ್ಲೇ ಸಕ್ಕರೆ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಎರಡನೇ ಅತಿದೊಡ್ಡ ದೇಶ ಬ್ರೆಜಿಲ್. ದೇಶೀಯ ಬಳಕೆ 280 ಲಕ್ಷ ಟನ್ ಇದ್ದು, 50 ಲಕ್ಷ ಟನ್‌ಗಳಷ್ಟು ಸಕ್ಕರೆ ಪ್ರತಿ ವರ್ಷ ಸಂಗ್ರಹವಾಗುತ್ತದೆ. ಈ ವರ್ಷ ಸುಮಾರು 100 ಲಕ್ಷ ಟನ್ ಹೆಚ್ಚುವರಿ ಲಭ್ಯತೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸಕ್ಕರೆ ಲಭ್ಯತೆ ಹೆಚ್ಚಳವಾಗಿರುವುದರಿಂದ, ಎಥನಾಲ್ ಬ್ಲೆಂಡಿಂಗ್ ಬೇಡಿಕೆಯನ್ನು ಸಹಜವಾಗಿಯೇ ಉದ್ಯಮ ಹೆಚ್ಚಳ ಮಾಡಿದೆ.

ಭಾರತದಲ್ಲಿ ಪೆಟ್ರೋಲ್‌ ಜೊತೆಗೆ ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆ ಶುರುವಾಗಿದ್ದು 2003 ರಲ್ಲಿ. 2014 ರ ವರೆಗೆ ಈ ಮಿಶ್ರಣಕ್ಕೆ ಸರ್ಕಾರದಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. 2022 ಜೂನ್‌ನಲ್ಲಿ ನಮ್ಮ ದೇಶದಲ್ಲಿ 10% ಮಿಶ್ರಣದ ಗುರಿ ಸಾಧಿಸಲಾಗಿದೆ. ನಂತರ, 20% ಮಿಶ್ರಣದ ಗುರಿ 2025-26 ಕ್ಕೆ ಇತ್ತು. ಅದನ್ನು 2030-31 ಕ್ಕೆ ಮುಂದೂಡಲಾಗಿದೆ.

2023 ಡಿಸೆಂಬರ್ 7 ರಂದು ಸಕ್ಕರೆ ಮಿಲ್‌ಗಳಲ್ಲಿ ಎಥನಾಲ್ ಉತ್ಪಾದನೆ ಕಬ್ಬಿನ ರಸವನ್ನು ಬಳಕೆ ಮಾಡುವುದಕ್ಕೆ ನಿಷೇಧ ಹೇರಿದೆ.ಬಿ ಅಥವಾ ಸಿ ಗ್ರೇಡ್ ಕಾಕಂಬಿಯನ್ನು ಬಳಸಿ ಮಾತ್ರವೇ ಎಥನಾಲ್ ಉತ್ಪಾದನೆ ಮಾಡಬೇಕು ಎಂದು ಸೂಚನೆ ನೀಡಿದೆ. ಯಾಕೆಂದರೆ, ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ 11.5 ಪರ್ಸೆಂಟ್ ಇಳಿಕೆಯಾಗುತ್ತದೆ ಎಂಬ ಕಳವಳದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಒಂದು ವೇಳೆ, ಪೂರೈಕೆಯಲ್ಲಿ ಕೊರತೆ ಆದರೆ, ಸಕ್ಕರೆ ಬೆಲೆ ಏರಿಕೆಯಾಗುತ್ತದೆ. ಆದರೆ, ಡಿಸೆಂಬರ್ 15 ರ ವೇಳೆಗೆ, 10 ದಿನಗಳೊಳಗೆ ಸರ್ಕಾರ ತನ್ನ ನಿರ್ಧಾರವನ್ನು ವಾಪಸು ತೆಗೆದುಕೊಂಡಿದೆ. ಎಥನಾಲ್‌ ಉತ್ಪಾದನತೆಗೆ 17 ಲಕ್ಷ ಟನ್ ಕಬ್ಬು ನೀಡುವುದಕ್ಕೆ ಅನುಮತಿ ನೀಡಿದೆ. ಕಳೆದ ವರ್ಷ 31 ಲಕ್ಷ ಟನ್ ಕಬ್ಬನ್ನು ಎಥನಾಲ್ ಉತ್ಪಾದನೆಗೆ ಬಳಸಲು ಅನುಮತಿ ನೀಡಿತ್ತು. ಇಡೀ ಉದ್ಯಮದಲ್ಲಿ ಉದ್ವೇಗ ಮತ್ತು ಗೊಂದಲವನ್ನು ಉಂಟು ಮಾಡುವುದಕ್ಕೆ ಈ ನಿರ್ಧಾರ ಕಾರಣವಾಗಿದೆ. ಯಾಕೆಂದರೆ, ಪ್ರತಿ ಸಕ್ಕರೆ ವರ್ಷ ತಮ್ಮ ಮಿಲ್‌ಗಳಿಂದ ಎಷ್ಟು ಕಬ್ಬನ್ನು ಎಥನಾಲ್ ಉತ್ಪಾದನೆಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಸರ್ಕಾರದ ಸೂಚನೆಯನ್ನು ಪ್ರತಿ ಮಿಲ್‌ಗಳೂ ನಿರೀಕ್ಷಿಸುತ್ತವೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ಸಂಖ್ಯೆ ಅರ್ಧಕ್ಕಿಂತ ಕಡಿಮೆ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 2022-23 ರಲ್ಲಿ 38 ಲಕ್ಷ ಟನ್ ಕಬ್ಬು ಬಳಕೆ ಮಾಡಲಾಗಿತ್ತು. 2021-22 ರಲ್ಲಿ 31 ಲಕ್ಷ ಟನ್ ಕಬ್ಬು ಬಳಕೆಯಾಗಿತ್ತು. ಈ ವರ್ಷ 2024 ಸೆಪ್ಟೆಂಬರ್ ವರೆಗೆ ಅಂದರೆ, 2023-24 ರ ಸಕ್ಕರೆ ವರ್ಷ ಮುಗಿಯುವವರೆಗೆ, 78 ಲಕ್ಷ ಟನ್‌ ಸಕ್ಕರೆ ಸಂಗ್ರಹವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಈ ವರ್ಷದ ಆರಂಭಿಕ ಸಂಗ್ರಹಕ್ಕಿಂತ ಹೆಚ್ಚಿನ ಪ್ರಮಾಣವಾಗಿದೆ. ಹೀಗಾಗಿ, ಹೆಚ್ಚುವರಿ 14 ಲಕ್ಷ ಟನ್ ಕಬ್ಬನ್ನು ಎಥನಾಲ್ ಉತ್ಪಾದನೆಗೆ ಬಳಕೆ ಮಾಡಿದರೂ, ಈ ವರ್ಷದ ಆರಂಭದಲ್ಲಿ ಇದ್ದಿದ್ದಕ್ಕಿಂತ ಕ್ಲೋಸಿಂಗ್ ಬ್ಯಾಲೆನ್ಸ್‌ ಹೆಚ್ಚಿರುತ್ತದೆ.

ಐಎಸ್ಎಂಎ ಪ್ರಕಾರ, ನಿಷೇಧದ ಪರಿಣಾಮ ಕಡಿಮೆ ಮಾಡಲು, ಮಧ್ಯಮಾವಧಿಯಿಂದ ದೀರ್ಘಾವಧಿ ನಿರ್ಧಾರಗಳನ್ನು ಸರ್ಕಾರ ಮಾಡಬೇಕು. ಉದಾಹರಣೆಗೆ, 30-50 ಲಕ್ಷ ಟನ್‌ ಬಫರ್ ಸ್ಟಾಕ್ ಮಾಡಿಕೊಳ್ಳುವುದು. ಇದರ ಜೊತೆಗೆ, ಸಕ್ಕರೆ ಉತ್ಪಾದನೆ ಹೆಚ್ಚಳ ಮಾಡುವುದು ಮತ್ತು ಈ ವಲಯವನ್ನು ಸ್ಥಿರವಾಗಿಸುವುದಕ್ಕೆ ಹೆಚ್ಚಿನ ಆದ್ಯತೆನೀಡಬೇಕಿದೆ. ಎಥನಾಲ್ ಮಿಶ್ರಣ ಕಾರ್ಯಕ್ರಮದಲ್ಲಿ ಉದ್ಯಮ ಭಾರಿ ಹೂಡಿಕೆ ಮಾಡಿದೆ. ಕ್ರಿಸಿಲ್‌ ಪ್ರಕಾರ, ಎಥನಾಲ್ ಮಾರಾಟ ಆರಂಭವಾಗಿರುವುದರಿಂದ ಸಕ್ಕರೆ ಮಿಲ್‌ಗಳ ಮಾರ್ಜಿನ್‌ನಲ್ಲಿ ಗಮನಾರ್ಹ ಏರಿಕೆಯಾಗಿದೆ. ಸಾಮಾನ್ಯವಾಗಿ ಸಕ್ಕರೆ ಬೆಲೆಯ ಮೇಲೆಯೇ ಈ ಮಿಲ್‌ಗಳ ಲಾಭಾಂಶ ನಿರ್ಧಾರವಾಗುತ್ತಿತ್ತು.

ಸದ್ಯ, 90% ಕ್ಕೂ ಹೆಚ್ಚು ಎಥನಾಲ್‌ ಪೂರೈಕೆ ಡಿಸ್ಟಿಲ್ಲರಿಗಳಿಂದ ಬರುತ್ತದೆ. ಈ ಪೈಕಿ 73% ಸಕ್ಕರೆ ಮಿಲ್‌ಗಳಿಂದ ಮತ್ತು ಉಳಿದವು ಧಾನ್ಯ ಆಧರಿತ ಡಿಸ್ಟಿಲ್ಲರಿಗಳಿಂದ ಬರುತ್ತವೆ. ಸದ್ಯ, ಸಕ್ಕರೆ ಮಿಲ್‌ಗಳ ಎಥನಾಲ್ ಉತ್ಪಾದನೆ ಸಾಮರ್ಥ್ಯ 850 ಕೋಟಿ ಲೀ. ಆಗಿದೆ. ಇದು 2025 ರ ವೇಳೆಗೆ ಸುಮಾರು 1100 ಕೋಟಿ ಲೀ. ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 20% ಮಿಶ್ರಣದ ಗುರಿ ಸಾಧಿಸಲು ಈ ಏರಿಕೆ ಅಗತ್ಯವಿದೆ. ಆದರೆ, ಸರ್ಕಾರ ವಿಧಿಸಿದ ನಿಷೇಧವು ಇದರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನಷ್ಟೇ ನೋಡಬೇಕಿದೆ.

ಅತಿದೊಡ್ಡ ಪ್ರಶ್ನೆಯೇನೆಂದರೆ, ಈ ವಲಯದಲ್ಲಿ ಹೂಡಿಕೆಗೆ ಅವಕಾಶಗಳಿವೆಯೇ? ಇದ್ದರೆ ಎಲ್ಲಿದೆ? ಕಳೆದ ಆರು ತಿಂಗಳಿಂದ ಒಂದು ವರ್ಷದ ಪರ್ಫಾರ್ಮೆನ್ಸ್‌ ನೋಡಿದರೆ, ಬಜಾಜ್‌ ಹಿಂದುಸ್ತಾನ್ ಶುಗರ್ ಅನ್ನು ಹೊರತುಪಡಿಸಿ, ಯಾವ ಶುಗರ್ ಕಂಪನಿಯ ಷೇರುಗಳಲ್ಲೂ ಯಾವುದೇ ಪ್ರಮುಖ ಏರಿಕೆ ಆಗಿಲ್ಲ. ಹಾಗೆಂದ ಮಾತ್ರಕ್ಕೆ ಕಳೆದ ಐದು ವರ್ಷಗಳಲ್ಲಿ ಬಹುತೇಕ ಷೇರುಗಳು ಒಳ್ಳೆಯ ಸಾಧನೆ ಮಾಡಿವೆ.

ಸ್ಟಾಕ್ ಮಾರ್ಕೆಟ್ ಪರಿಣಿತ ರವಿ ಸಿಂಗ್‌ ಪ್ರಕಾರ, ಸಕ್ಕರೆ ವರ್ಷದ ಕೊನೆಯಲ್ಲಿ ಉತ್ಪಾದನೆ ದೊಡ್ಡ ಮೊತ್ತದಲ್ಲಿ ಹೆಚ್ಚಳ ಆಗಿದ್ದರೂ, ಸಕ್ಕರೆ ಬೆಲೆಯಲ್ಲಿ ಪ್ರತಿ ಕಿಲೋಗೆ 2-4 ರೂ.ಗಿಂತ ಹೆಚ್ಚು ವ್ಯತ್ಯಾಸ ಆಗಿಲ್ಲ. ಈ ವಲಯದಲ್ಲಿ ಕಂಪನಿಗಳ ಷೇರುಗಳಲ್ಲಿ ಭಾರಿ ಏರಿಕೆ ಅಥವಾ ಇಳಿಕೆಯ ನಿರೀಕ್ಷೆಯೂ ಕಡಿಮೆ ಇದೆ. 6-9 ತಿಂಗಳ ಗುರಿಯಲ್ಲಿ, ಬಜಾಜ್ ಹಿಂದುಸ್ತಾನ್‌ನಲ್ಲಿ 50 ರೂ. ಶ್ರೀ ರೇಣುಕಾ ಶುಗರ್ಸ್‌ನಲ್ಲಿ 60, ಮಗಧ್‌ ಶುಗರ್‌ನಲ್ಲಿ 700 ರೂ. ದಾಲ್ಮಿಯಾ ಭಾರತ್ ಶುಗರ್‌ನಲ್ಲಿ 500 ರೂ. ಟಾರ್ಗೆಟ್‌ನಲ್ಲಿ ಖರೀದಿ ಮಾಡಬಹುದು. ಎಥನಾಲ್ ಮಿಶ್ರಣದಲ್ಲಿ ಸರ್ಕಾರ ಹೆಚ್ಚಿನ ಗಮನಹರಿಸಿದ್ದು, ಶುಗರ್ ಮಿಲ್‌ಗಳ ಮಾರ್ಜಿನ್‌ನಲ್ಲಿ ಸುಧಾರಣೆಯಾಗಿದೆ ಮತ್ತು ಭವಿಷ್ಯದಲ್ಲಿ ಎಥನಾಲ್ ಪ್ರೊಡಕ್ಷನ್‌ನಲ್ಲಿ ಗಮನಾರ್ಹ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಕೆಲವು ಶುಗರ್ ಕಂಪನಿಗಳು ಗಮನಾರ್ಹವಾಗಿ ಏರಿಕೆ ಕಾಣುವ ನಿರೀಕ್ಷೆಯಿದೆ. ಆದ್ದರಿಂದ, ಮಧ್ಯಮದಿಂದ ದೀರ್ಘಕಾಲದ ದೃಷ್ಟಿಕೋನ ಇಟ್ಟುಕೊಂಡು ಆಯ್ದ ಕಂಪನಿಗಳನ್ನು ಪೋರ್ಟ್‌ಫೋಲಿಯೋಗೆ ಸೇರಿಸಿಕೊಳ್ಳಬಹುದು.

Published: April 24, 2024, 12:49 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ