` what should be your strategy in shares of two wheeler companies | ಹೂಡಿಕೆಗೆ ಹೊಸ ಅವಕಾಶ ತೆರೆದ ದ್ವಿಚಕ್ರ ವಾಹನ ಸೆಕ್ಟರ್! | Money9 Kannada

ಹೂಡಿಕೆಗೆ ಹೊಸ ಅವಕಾಶ ತೆರೆದ ದ್ವಿಚಕ್ರ ವಾಹನ ಸೆಕ್ಟರ್!

ಕೋವಿಡ್ ನಂತರದ ಅವಧಿಯಲ್ಲಿ, ದ್ವಿ-ಚಕ್ರ ವಾಹನಗಳ ಮಾರಾಟ ಹೆಚ್ಚಾಗಿಸಿದ ಪ್ರಮುಖ ವಲಯ ಅಂದ್ರೆ ಪ್ರೀಮಿಯಂ ಸೆಗ್ಮೆಂಟ್ ಅಂದರೆ 150 ಸಿಸಿ ಹಾಗೂ ಮೇಲ್ಪಟ್ಟ ಬೈಕುಗಳು. ಪ್ರೀಮಿಯಂ ಸೆಗ್ಮೆಂಟ್‌ ಬೈಕ್‌ ಗಳು ಒಟ್ಟು ಮಾರಾಟದ ಶೇಕಡ 18 ರಷ್ಟಿದ್ದು, ಹಣಕಾಸು ವರ್ಷ 23 ರಲ್ಲಿ ಶೇಕಡ 10 ಕ್ಕಿಂತ ಹೆಚ್ಚಿನ ಹೆಚ್ಚಳ ಕಂಡಿದೆ.

ಕೋವಿಡ್ ಸಾಂಕ್ರಾಮಿಕದ ನಂತರ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಷೇರು ಮಾರುಕಟ್ಟೆ ಕ್ಷಿಪ್ರ ಚೇತರಿಕೆ ಕಂಡಿದೆ. ಹಣಕಾಸು ವರ್ಷ 21 ರಲ್ಲಿ, ದೇಶದ ಪ್ರಮುಖ ಸೂಚ್ಯಂಕ ನಿಫ್ಟಿ ದಾಖಲೆಯ ಶೇಕಡ 71 ರಷ್ಟು ಪ್ರಗತಿ ದಾಖಲಿಸಿತ್ತು. ಹಾಗೇ ಹಣಕಾಸು ವರ್ಷ 22ರಲ್ಲಿ ಶೇಕಡ 19 ರಷ್ಟು ಏರಿಕೆ ಕಂಡಿತು. ಆದಾಗ್ಯೂ, ಸಾಂಕ್ರಾಮಿಕದ ನಂತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲ್ಪಟ್ಟ ವಲಯ ಯಾವುದು ಎಂದರೆ ಅದು ಗ್ರಾಮೀಣ ವಲಯ.

ಸಿಮೆಂಟ್, ಪೇಂಟ್, ಎಫ್ ಎಂ ಸಿ ಜಿ, ಪ್ಲಾಸ್ಟಿಕ್ ಮತ್ತು ದ್ವಿಚಕ್ರ ವಾಹನಗಳಿಗೆ ಬಹುಪಾಲು ಬೇಡಿಕೆ ಬಂದಿದ್ದು ಗ್ರಾಮೀಣ ಭಾಗಗಳಿಂದ. ಹಾಗಿದ್ದರೆ ನಾವು ದ್ವಿಚಕ್ರ ವಾಹನ ವಲಯದ ಮಾರಾಟದ ಮೇಲೆ ಗ್ರಾಮೀಣ ಭಾಗದ ಪರಿಣಾಮಗಳನ್ನ ತಿಳಿದುಕೊಳ್ಳೋಣ, ಹಾಗೇ ದ್ವಿ-ಚಕ್ರ ವಾಹನ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡೋವಾಗ ಯಾವ ಹೂಡಿಕೆ ಮಾಡುವ ಮುನ್ನ ಯಾವ ತಂತ್ರಗಾರಿಕೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ.

ವಿಶ್ವಾದ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಸಾಧಿಸುತ್ತಾ ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿಯೇ ಇದೆ. ಆದರೆ ಈ ಕ್ಷಿಪ್ರ ಓಟ ಸಮಾನವಾಗಿ ಭಾರತದ ಆರ್ಥಿಕತೆಯ ಎಲ್ಲಾ ವಲಯಗಳಲ್ಲಿ, ಅದರಲ್ಲೂ ಗ್ರಾಮೀಣ ಭಾರತದಲ್ಲಿ ಹಂಚಿಕೆಯಾಗಿಲ್ಲ. ಈ ಅಸಮಾನತೆ ಕೋವಿಡ್ ನಿಂದ ಗ್ರಾಮೀಣ ಪ್ರದೇಶಗಳು ಬಾಧಿತವಾದ ಸಂದರ್ಭದಲ್ಲಿ ಉಲ್ಬಣಗೊಂಡಿತು. ನಂತರದ ಹವಾಮಾನ ವೈಪರೀತ್ಯ ಬೇಡಿಕೆ ಮೇಲೆ ಇನ್ನಷ್ಟು ಪರಿಣಾಮ ಬೀರಿತು. ಆದಾಗ್ಯೂ, ಹಣಕಾಸು ವರ್ಷ 2024 ರಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡ 10 ರಷ್ಟು ಏರಿಕೆಯಾಗಿ ಚೇತರಿಕೆ ಕಂಡುಬಂದಿದೆ. ಇದು ಗ್ರಾಮೀಣ ಭಾಗದಲ್ಲಿ ಬೇಡಿಕೆ ಸುಧಾರಣೆ ಸೂಚಕವಾಗಿದೆ. ದ್ವಿ-ಚಕ್ರ ವಾಹನಗಳ ಬೇಡಿಕೆಗೆ ಗ್ರಾಮೀಣ ಪ್ರದೇಶಗಳೇ ಮೂಲ ವಾಹಕಗಳಾಗಿದ್ದು, ಒಟ್ಟು ಮಾರಾಟದ ಶೇಕಡ 50 ರಷ್ಟು ಕೊಡುಗೆ ನೀಡಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಚೇತರಿಕೆಯಿಂದ, ಕೋವಿಡ್ ಪೂರ್ವ ಅವಧಿಯನ್ನು ದ್ವಿ-ಚಕ್ರ ವಾಹನ ಮಾರಾಟ ಹಿಂದಿಕ್ಕಿದ್ದೆ. ಹಣಕಾಸು ವರ್ಷ 24 ರಲ್ಲಿ, ದ್ವಿಚಕ್ರ ವಾಹನಗಳ ಮಾರಾಟ 1.85 ಕೋಟಿ ಯೂನಿಟ್ ಗಳಷ್ಟಾಗಿದ್ದು, ಗ್ರಾಮೀಣ ಬೇಡಿಕೆಯಲ್ಲಿ ಚೇತರಿಕೆಯ ಸೂಚಕವಾಗಿದೆ.

ಕೋವಿಡ್ ನಂತರದ ಅವಧಿಯಲ್ಲಿ, ದ್ವಿ-ಚಕ್ರ ವಾಹನಗಳ ಮಾರಾಟ ಹೆಚ್ಚಾಗಿಸಿದ ಪ್ರಮುಖ ವಲಯ ಅಂದ್ರೆ ಪ್ರೀಮಿಯಂ ಸೆಗ್ಮೆಂಟ್ ಅಂದರೆ 150 ಸಿಸಿ ಹಾಗೂ ಮೇಲ್ಪಟ್ಟ ಬೈಕುಗಳು. ಪ್ರೀಮಿಯಂ ಸೆಗ್ಮೆಂಟ್‌ ಬೈಕ್‌ ಗಳು ಒಟ್ಟು ಮಾರಾಟದ ಶೇಕಡ 18 ರಷ್ಟಿದ್ದು, ಹಣಕಾಸು ವರ್ಷ 23 ರಲ್ಲಿ ಶೇಕಡ 10 ಕ್ಕಿಂತ ಹೆಚ್ಚಿನ ಹೆಚ್ಚಳ ಕಂಡಿದೆ. ಹಣಕಾಸು ವರ್ಷ 2018 ರಲ್ಲಿ ಒಟ್ಟು ಆಟೊಮೊಬೈಲ್‌ ಮಾರಾಟದಲ್ಲಿ ಇವುಗಳ ಪ್ರಮಾಣ ಕೇವಲ ಶೇಕಡ 14 ರಷ್ಟಿತ್ತು. ಈ ಐದು ವರ್ಷಗಳಲ್ಲಿ, ಎಂಟ್ರಿ ಲೆವಲ್‌ ಅಂದ್ರೆ 76 ರಿಂದ 100 ಸಿಸಿ ವಾಹನಗಳು ಮತ್ತು ಕಮ್ಯೂಟರ್‌ ಬೈಕ್‌ 110 ರಿಂದ 150 ಸಿಸಿ ಬೈಕ್‌ ಗಳ ಮಾರಾಟ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ದ್ಚಿ-ಚಕ್ರ ವಾಹನ ಮಾರುಕಟ್ಟೆ ಹಣಕಾಸು ವರ್ಷ 22 ರಲ್ಲಿ ದಶಕದ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಹಣಕಾಸು ವರ್ಷ 23 ರಲ್ಲಿ ಮಿತ ಚೇತರಿಕೆ ಕಂಡಿದ್ದರೂ ಕೂಡ, ಹಣಕಾಸು ವರ್ಷ 24 ರಲ್ಲಿ ದ್ವಿ ಚಕ್ರ ವಾಹನ ಮಾರಾಟದಲ್ಲಿ ಗಣನೀಯ ಏರಕೆ ಕಂಡುಬಂದಿದೆ. 1.85 ಕೋಟಿ ಯೂನಿಟ್‌ಗಳು ಮಾರಾಟವಾಗಿದ್ದು, ಮಾರಾಟ ಪ್ರಮಾಣ ಸುಮಾರು ಶೇಕಡ 13 ರಷ್ಟು ಏರಿಕೆಯಾಗಿದೆ. ನೀಲ್ಸನ್‌ ನಡೆಸಿರೋ ಸಮೀಕ್ಷೆ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಗ್ರಾಮೀಣ ಭಾಗದ ಬೇಡಿಕೆಯು ನಗರ ಭಾಗದ ಬೇಡಿಕೆಗಿಂತ ಹೆಚ್ಚಾಗಿದೆ.

ಕೋವಿಡ್‌ ನಂತರದ ಕಾಲಘಟ್ಟದಲ್ಲಿ, ಬೇಡಿಕೆ ವಿಧಾನದಲ್ಲಿನ ಈ ಬದಲಾವಣೆಗಳನ್ನ ನೋಡಿದಾಗ, ಉದ್ಭವಿಸೋ ಮುಖ್ಯ ಪ್ರಶ್ನೆ ಅಂದ್ರೆ, ದ್ವಿಚಕ್ರ ವಾಹನ ಕಂಪೆನಿಗಳ ಷೇರುಗಳಿಗೆ ಯಾವ ತಂತ್ರಗಾರಿಕೆ ಅನುಸರಿಸಬೇಕು ಅನ್ನೋದು?

ಮಂತ್ರಿ ಫಿನ್‌ ಮಾರ್ಟ್‌ ನ ಸಂಸ್ಥಾಪಕರಾದ ಅರುಣ್‌ ಮಂತ್ರಿ ಅವರಿಂದ ಸಲಹೆ ಪಡೆಯೋಣ ಬನ್ನಿ. ಮೂರು ತಿಂಗಳ ಮುನ್ನೋಟದೊಂದಿಗೆ 10 ಸಾವಿರದ 600 ರೂಪಾಯಿ ಟಾರ್ಗೆಟ್‌ ನೊಂದಿಗೆ ಬಜಾಜ್‌ ಆಟೋ ಪರಿಗಣಿಸಬಹುದು. 4 ಸಾವಿರದ 300 ರೂಪಾಯಿ ಟಾರ್ಗೆಟ್‌ ನೊಂದಿಗೆ ಐಚರ್‌ ಮೋಟಾರ್ಸ್‌ ನಲ್ಲಿ ಹೂಡಿಕೆ ಮಾಡಬಹುದು. ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಅನುಕೂಲಕರವಾಗಿ ಕಂಡುಬಂದರೆ, 11 ಸಾವಿರ ರೂಪಾಯಿ ಟಾರ್ಗೆಟ್‌ ನೊಂದಿಗೆ ಬಜಾಜ್‌ ಆಟೋ ಮತ್ತು 4 ಸಾವಿರದ 700 ರೂಪಾಯಿ ಟಾರ್ಗೆಟ್‌ ನೊಂದಿಗೆ ಐಚರ್‌ ಮೋಟಾರ್ಸ್‌ ನಲ್ಲಿ 6 ರಿಂದ 9 ತಿಂಗಳ ದೂರದೃಷ್ಟಿಯೊಂದಿಗೆ ಹೂಡಿಕೆ ಮಾಡಬಹುದು. ದ್ವಿಚಕ್ರ ವಾಹನ ವಲಯದ ಇವಿ ಸೆಗ್ಮೆಂಟ್‌ ನಲ್ಲಿ ಮಾರುಕಟ್ಟೆ ದಿಗ್ಗಜ ಟಿವಿಎಸ್‌ ಮೋಟಾರ್ಸ್‌ ನ ವ್ಯಾಲ್ಯುಯೇಷನ್‌ ಜಾಸ್ತಿ ಇದೆ ಅಂತಾ ಅವರು ಹೇಳುತ್ತಾರೆ.

ಒಟ್ಟಾರೆಯಾಗಿ, ಪ್ಯಾಸೆಂಜರ್‌ ವೆಹಿಕಲ್‌ (ಪಿವಿ) ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗಿಂತ ಮಧ್ಯಮ ಗಾತ್ರದ ಕಾರುಗಳತ್ತ ಒಲವು ಹೆಚ್ಚಾಗಿದೆ. ಟೊಯಾಟೋ-ಮಾರುತಿ, ಟಾಟಾ ಮೋಟಾರ್ಸ್‌ ಮತ್ತು ಹ್ಯುಂಡೈ ಈ ವಲಯದ ಮುಂಚೂಣಿ ನಾಯಕರಾದ್ರೆ, ಹೋಂಡಾ ಕಂಪೆನಿ ಸ್ವಲ್ಪ ಹೆಚ್ಚೇ ಹಿಂದುಳಿದಿದೆ. ಹೀಗಾಗಿ, ದ್ವಿ-ಚಕ್ರ ವಾಹನ ವಲಯ ಸೆಟಲ್‌ ಆಗತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಈ ಕಂಪೆನಿಗಳು ಪ್ರೀಮಿಯಂ ಬೈಕ್‌ ಗಳ ಮೇಲೆ ಫೋಕಸ್‌ ಮಾಡತ್ತಾ ಅಥವಾ ಎಂಟ್ರಿ ಲೆವೆಲ್‌ ವಾಹನಗಳಿಗೆ ಆದ್ಯತೆ ಕೊಡತ್ತಾ ಅನ್ನೋ ಪ್ರಶ್ನೆ ಇರತ್ತೆ? ಹೀಗಾಗಿ, ಈ ವಲಯದ ಆಯ್ದ ಕಂಪೆನಿಗಳಲ್ಲಿ ಅಲ್ಪಾವಧಿ ದೃಷ್ಟಿಕೋನದೊಂದಿಗೆ ಹೂಡಿಕೆ ಮಾಡೋದು ಸೂಕ್ತ. ಮುಂಬರುವ ತ್ರೈಮಾಸಿಕ ಫಲಿತಾಂಶ ಆಧರಿಸಿ ದೀರ್ಘಾವಧಿ ಹೂಡಿಕೆ ಬಗ್ಗೆ ನಿರ್ಧರಿಸಿ.

Published: April 25, 2024, 13:07 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ